ಬೆಂಗಳೂರು; ತಮ್ಮ ಮೇಸೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಮುನಿರತ್ನ ಅವರು ಪ್ರತಿಕ್ರಿಯಿಸಿದ್ದಾರೆ.ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಘಟನೆ ನಡೆದಾಗ ಸಿಟಿ ರವಿ ದೂರವಾಣಿ ಕರೆ ಮಾಡಿ ವಿಚಾರಿಸಿದ್ರು. ನಿಮ್ಮ ಜೊತೆ ನಾವಿದ್ದೇವೆ ಎಂದಿದ್ರು. ನಿಮ್ಮಜೊತೆ ಪಕ್ಷ ಇದೆ, ನಾವಿದ್ದೇವೆ ಎಂದಿದ್ರು. ಎಲ್ಲಾ ವಿಷಯವನ್ನ ದೆಹಲಿಗೆ ತಲುಪಿಸಿದ್ದೇನೆ ಎಂದಿದ್ರು.. ಒಬ್ಬ ಶಾಸಕನ ಹಕ್ಕನ್ನ ಕಸಿಯಲಾಗ್ತಿದೆ. ಕ್ಷೇತ್ರಕ್ಕೆ ಹೋಗಬಾರದು ಎಂದು ಹೀಗೆ ಮಾಡ್ತಿದ್ದಾರೆ.ಡಿ ಕೆ ಶಿವಕುಮಾರ್ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಅವರಿಗೆ ಕ್ಷೇತ್ರಕ್ಕೆ ಹೋಗಲು ಅವಕಾಶ ಇದೆ. ಆದರೆ ನಾನು ಕ್ಷೇತ್ರಕ್ಕೆ ಹೋಗದಂತೆ ತಡೆಯುತ್ತಿದ್ದಾರೆ. ಶಾಸಕರಾಗಲೇ ಬೇಕು ಎಂದ್ಕೊಂಡಿರೋ ಕುಸುಮಾಗೆ ಒಂದು ಮಾತ್ ಹೇಳ್ತೇನೆ. ವಿದ್ಯಾವಂತರಿದ್ದೀರೆಂದು ಹೇಳ್ಕೊಂಡಿದ್ದೀರಿ. ಆದರೆ ಇಂತದಕ್ಕೆಲ್ಲ ಪ್ರಚೋದನೆ ಕೊಡಬೇಡಿ. ನಮ್ ಕ್ಷೇತ್ರಕ್ಕೆ ಒಳ್ಳೆದಾಗಲು ನೋಡಿಕೊಳ್ಳಿ. ನಿಮ್ಮ ಮಾತನ್ನ ಎಲ್ಲರೂ ಕೇಳ್ತಾರೆ. ವರ್ಗಾವಣೆ ಲೆಟರ್ ಕೂಡ ನೀವು ಕೋಡ್ತೀರಿ. ಡಿ ಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ನಿಮ್ ಮಾತ್ ಕೇಳ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ.ಅದನ್ನ ಬಿಟ್ಟು ಮುನಿರತ್ನ ಮೇಲೆ ದಾಳಿ ಮಾಡಲು, ಚಪ್ಪಲಿ ಹಾರ ಹಾಕೋದಕ್ಕೆ, ಪೋಸ್ಟರ್ ಹರಿಯೋದಕ್ಕೆ ಪ್ರೋತ್ಸಾಹ ಕೊಡಬೇಡಿ ಎಂದಿದ್ದಾರೆ.
ಕಾಲ ಭೈರವೇಶ್ವರನ ಸನ್ನಿಧಿಗೆ ಬನ್ನಿ ಪ್ರಮಾಣ ಮಾಡೋಣ. ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸ್ತೇನೆ. ತಿದ್ದಿಕೊಳ್ತೀರಾ ಎಂದು ಭಾವಿಸ್ತೇನೆ .ಕ್ಷೇತ್ರದ ಜನ ಅಪ್ಪ ಮಗಳು ತೊಂದರೆ ಕೊಡ್ತಿದ್ದಾರೆ ಎಂದು ಮಾತಾಡ್ತಿದ್ದಾರೆ. ಇದು ನಿಮಗೂ ಶೋಭೆ ತರೋದಿಲ್ಲ. ಹತ್ತ ವರ್ಷಮುಂದಿದ್ದ ಕ್ಷೇತ್ರ ಹತ್ತು ವರ್ಷ ಹಿಂದಕ್ಕೆ ಹೋಗ್ತಿದೆ. ಅಭಿವೃದ್ಧಿ ಕೆಲಸಗಳೆಲ್ಲ ನಿಂತಿದೆ ಯಾರಿಂದ ಎನ್ನೋದು ಗೊತ್ತಿದೆ. ರೇಪ್ ಕೇಸ್ ಹಾಕಿರೋದು ಅವರಿಗೆ ಗೊತ್ತಿಲ್ಲ ಎಂದು ಹೇಳಲಿ. ಕಾಲ ಬೈರೇಶ್ವರನಲ್ಲಿ ಪ್ರಮಾಣ ಮಾಡಲಿ . ರೇಪ್ ಕೇಸ್ ಕೊಟ್ಟ ಹೆಣ್ಣು ಮಗಳು ಅವರಿಗೆ ಗೊತ್ತಿಲ್ಲ ಎಂದು ಹೇಳಲಿ ನೋಡೋಣ. ನನಗೂ ಹೆಣ್ಣು ಮಕ್ಕಳಿದ್ದಾರೆ, 15 ವರ್ಷದ ಮೊಮ್ಮೊಗಳಿದ್ದಾಳೆ . ಈ ರೀತಿಯ ಸುಳ್ಳು ರೇಪ್ ಕೇಸ್ ಕೊಟ್ಟರೆ ಹೇಗೆ .ಈ ವಿಚಾರವನ್ನ ಕೇಂದ್ರದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಪ್ರಹ್ಲಾದ್ ಜೋಷಿ,ಶೋಭಾ ಕರಂದ್ಲಾಜೆ ,ಸಂತೋಷ್ ಜೀ,ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ವಿರೋಧ ಪಕ್ಷದ ನಾಯಕರು ಆರ್ ಅಶೋಕ್ ಘಟನೆ ಖಂಡಿಸಿದ್ದಾರೆ. ಅವರಿಗೂ ನಾನು ಧನ್ಯವಾದ ತಿಳಿಸ್ತೇನೆ. ನಾನು ಪಕ್ಷದ ಜೊತೆ ಇದ್ದೇನೆ.ಪಕ್ಷ ನನ್ನ ಜೊತೆ ಇದೆ ಎಂದಿದ್ದಾರೆ.
ಶಾಸಕ ಮುನಿರತ್ನ ಅವರನ್ನು ಭೇಟಿ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ
ಬೆಂಗಳೂರು: ಶಾಸಕ ಮುನಿರತ್ನ ಅವರನ್ನು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಭೇಟಿ ಮಾಡಿದ್ದಾರೆ. ವೈಯಾಲಿಕಾವಲ್ ನಲ್ಲಿರೋ ಶಾಸಕ ಮುನಿರತ್ನ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಮುನಿರತ್ನ ಅವರು ನಮ್ಮ ಪಕ್ಷದ ಶಾಸಕರು. ಅವರ ಮೇಲೆ ನಡೆದ ಹಲ್ಲೆ ದುರದೃಷ್ಟಕರ. ಪ್ರಜಾಪ್ರಭುತ್ವದಲ್ಲಿ ಆಯ್ಕೆ ಯಾಗಿದ್ದ ಶಾಸಕ, ಮಂತ್ರಿಯಾಗಿದ್ದಂತವರು.ಅವರು ಮೇಲೆ ಹಲ್ಲೆ ದುರದೃಷ್ಟಕರ. ಅದು ಎಂತಹ ಸಂದರ್ಭದಲ್ಲಿ ಹಲ್ಲೆಯಾಗಿದೆ ನೋಡಿ.ಗಾಂಧಿಗಿರಿ ನೆನೆಸುಕೊಳ್ಳೊವಾಗ ಕರ್ನಾಟಕದಲ್ಲಿ ಗೂಂಡಾಗಿರಿ ನಡೀತಿದೆ. ಗಾಂಧಿ ರಾಜ್ಯಮಾಡ್ತೇವೆ ಎನ್ನುತ್ತಾರೆ. ಆದರೆ ಗೂಂಡಾರಾಜ್ಯ ಮಾಡ್ತಿದ್ದಾರೆ. ನನ್ನ ಮೇಲೆ ಮತ್ತು ಇವರ ಮೇಲೆ ನಡೆದ ಹಲ್ಲೆ ತಾಜಾ ಉದಾಹರಣೆ . ನನ್ನ ಕೇಸ್‌ನಲ್ಲಿ ಈಗ ಕೇಸ್ ಮಾಡಿದ್ದೇ ತಪ್ಪು ಎನ್ನುತ್ತಾರೆ . ಹಾಗಾದ್ರೆ ನನ್ನ ಬಂದಿಸಿರೋದು ಯಾವ ಕಾರಣಕ್ಕೆ . ಪರಮಾಧಿಕಾರ ಇರೋದು ಸಭಾಪತಿಗಳಿಗೆ. ಸಭಾಪತಿ ರೂಲಿಂಗ್ ಕೊಟ್ಟ ಮೇಲೆಯೂ ಕೇಸ್ ಮಾಡಿದ್ರು. ನೋಟಿಸ್ ಕೊಟ್ಟಿಲ್ಲ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಮೂಲಭೂತ ಹಕ್ಕನ್ನ ಸಂವಿಧಾನ ಕೊಟ್ಟಿದೆ. ಅದನ್ನ ಇವರು ಕಸಿದುಕೊಂಡರು. ಮಾನವ ಹಕ್ಕುಗಳ ಆಯೋಗದ ನಿಯಮವನ್ನು ಮೀರಿದರು. ನಾನು ಹೋರಾಟದ ಹಿನ್ನೆಲೆಯಿಂದ ಬಂದವನು. ಬೆನ್ನು ತೋರಿಸಿ ಓಡೋದು ಇಲ್ಲ. ಕೆಟ್ಟದನ್ನ ಮಾಡಿದ್ದೇ ಇಲ್ಲ ಮಾಡೋದು ಇಲ್ಲ. ಬಹಳ ದಿನ ಗೂಂಡಾಗರಿ ನಡೆಯಲ್ಲ ನೋಡೊಣ. ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿ ಅಧಿಕಾರ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದರು ಆಮೇಲೆ ಏನಾಯ್ತು ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಟ ಇದು ಜಾಸ್ತಿ ದಿನ ನಡೆಯಲ್ಲ. ಮುನಿರತ್ನ ಅವರನ್ನ ಮಾತನಾಡಿಸಲು ಬಂದಿದ್ದೇನೆ. ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಂಡಿರುವದು ಅಂಗೈ ಹುಣ್ಣಾಗಿದೆ ಎಂಬಂತೆ ಕಾಣಿಸುತ್ತದೆ. ನನ್ನ ವಿಚಾರದಲ್ಲಿ ಮೂರು ಆಯಾಮದಲ್ಲಿ ನೋಡಬೇಕು. ಆರ್ಟಿಕಲ್ 194 ಪ್ರಕಾರ ಪರಮಾಧಿಕಾರವನ್ನ ಸಭಾಪತಿಗಳಿಗೆ ಕೊಡಲಾಗಿದೆ. ಸಭಾಪತಿಗಳ ನಿರ್ಣಯವನ್ನ ಅವರಿಗೆ ಬಿಟ್ಟಿದ್ದು. ಆದರೆ ಈ ಸರ್ಕಾರ ಕಾನೂನು ದುರ್ಬಳಕೆ ಮಾಡಿದ್ದಾರೆ. ನನಗೆ ನೋಟಿಸ್ ಕೊಟ್ಟಿರಲಿಲ್ಲ ಅಲ್ಲದೆ ಬಂಧನ ಮಾಡಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಬಂಧನದ ನಂತರ ಮೂಲಭೂತ ಹಕ್ಕನ್ನು ಉಲ್ಲಂಘನೆ ಮಾಡಿದ್ರು. ನನ್ನ ಜೀವನದಲ್ಲಿ ಹೋರಾಟದ ಮೂಲಕ ಬಂದವನು ಬೆನ್ನು ತೋರಿಸಿ ಓಡಿಹೋದವನಲ್ಲ. ಗೂಂಡಾಗಿರಿ ಬಹಳ ದಿನ ನಡೆಯುವುದಿಲ್ಲ ಎಂದರು.
ಇದೇ ವೇಳೆ ಮನ ಮೋಹನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದರು. ದೇಶದಲ್ಲಿ ಅರ್ಥ ಸಚಿವರಾಗಿದ್ದ ಹಿರಿಯ ಮುತ್ಸದ್ದಿ ರಾಜಕಾರಣಿ ಎಂದರೆ ತಪ್ಪಾಗುತ್ತೆ.ಅರ್ಥಶಾಸ್ತ್ರಜ್ಞರಾದ ಮಾಜಿ ಪ್ರಧಾನಿ ಮನಮೋಹನ್‌ರ ನಮ್ಮನ್ನ ಅಗಲಿದ್ದಾರೆ. ದೇಶದ ಆರ್ಥಿಕ ಸ್ಥಿತಿಯನ್ನ ಹಳಿಗೆ ತರಲು ಕಾರಣೀಕಕರ್ತರು. ರಷ್ಯಾ ಮಾದರಿಯ ಅರ್ಥವ್ಯವಸ್ಥೆಯನ್ನ ನಾವು ಅಳವಡಿಕೊಂಡಿದ್ದೆವು. ಅದರಿಂದ ವಿಫಲರಾಗ್ತಿದ್ದೇವೆ ಎನ್ನೋದು ಗೊತ್ತಾದಾಗ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ತಂದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.