ಮನೆ Latest News ಡಿ.ಕೆ. ಶಿವಕುಮಾರ್ ಪಾಪ ಇನ್ನೂ ಏನೇನು ತ್ಯಾಗ ಮಾಡಬೇಕೋ ಗೊತ್ತಿಲ್ಲ; ವಿಪಕ್ಷ ನಾಯಕ ಆರ್...

ಡಿ.ಕೆ. ಶಿವಕುಮಾರ್ ಪಾಪ ಇನ್ನೂ ಏನೇನು ತ್ಯಾಗ ಮಾಡಬೇಕೋ ಗೊತ್ತಿಲ್ಲ; ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ

0

ಬೆಂಗಳೂರು: ಡಿ.ಕೆ. ಶಿವಕುಮಾರ್ ಪಾಪ ಇನ್ನೂ ಏನೇನು ತ್ಯಾಗ ಮಾಡಬೇಕೋ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಪಾಪ ಇನ್ನೂ ಏನೇನು ತ್ಯಾಗ ಮಾಡಬೇಕೋ ಗೊತ್ತಿಲ್ಲ. ನನಗೆ ಡಿ.ಕೆ. ಶಿವಕುಮಾರ್ ಮೇಲೆ ಅನುಕಂಪ ಇದೆ. ಅವರ ಐದು ಗ್ಯಾರಂಟಿ ತರಹ ಅಧಿಕಾರ ಹಸ್ತಾಂತರ ಕೂಡಾ ಒಂದು ಗ್ಯಾರಂಟಿ. ಅದು ಏನಾಯಿತು ಅಂತ ಜನಕ್ಕೆ ಡಿ.ಕೆ. ಶಿವಕುಮಾರ್ ಹೇಳಲಿ. ಗಿಣಿ ಶಾಸ್ತ್ರ ಕೇಳಿ ಅಂದರು ಮೊನ್ನೆ ಡಿ.ಕೆ. ಶಿವಕುಮಾರ್. ಗಿಣಿ ಶಾಸ್ತ್ರ ಕೇಳಲು ಯಾಕಪ್ಪ ಹೋಗಿದ್ದೆ ದೆಹಲಿಗೆ?.ಕ್ರಾಂತಿ ಇಲ್ಲಾಂದ್ರೆ ಯಾಕೆ ಹೋಗುತ್ತೀರಾ ದೆಹಲಿಗೆ?. ಅಣ್ತಮ್ಮಾಸ್ ಯಾಕೆ ಹೋಗಿದ್ರಿ ದೆಹಲಿಗೆ?. ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ, ತಿಥಿ ಆಗಬೇಕಿದೆ ಅಷ್ಟೇ. ತಿಥಿಗೆ ಜನ ಕಾಯುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಇವತ್ತು ಖುಷಿ ಪಡುವವರು ಖುಷಿ ಪಡಲಿ, ದು:ಖ ಪಡುವವರು ದು:ಖ ಪಡಲಿ ಅಂದಿದ್ದಾರೆ . ಡಿ.ಕೆ. ಶಿವಕುಮಾರ್ ಗೆ ಇಷ್ಟು ವೈರಾಗ್ಯ ಬೇಡ. ಇಷ್ಟು ಬೇಗ ವೈರಾಗ್ಯ ಬೇಡಪ್ಪ, ನಿನಗೆ ಇನ್ನೂ ವಯಸ್ಸಿದೆ. ಸಿದ್ದರಾಮಯ್ಯರನ್ನು ಡಿ.ಕೆ. ಶಿವಕುಮಾರ್ ಈಸಿಯಾಗಿ ತೆಗೆದುಕೊಂಡಿದ್ದರು. ಟೇಕನ್ ಫಾರ್ ಗ್ರ್ಯಾಂಟೆಡ್ ತರಹ ಅಂದುಕೊಂಡಿದ್ದರು. ಆದರೆ ಸಿದ್ದರಾಮಯ್ಯ ಅಷ್ಟು ಬೇಗ ಸೀಟು ಬಿಟ್ಟು ಕೊಡುವವರಲ್ಲ. ಸೀಟು ಉಳಿಸಿಕೊಳ್ಳಲು ಸಿದ್ದರಾಮಯ್ಯ ದಾಳ, ತಾಳ ಎಲ್ಲಾ ಹಾಕಿ ಬಂದಿದ್ದಾರೆ ಎಂದಿದ್ದಾರೆ.ಡಿ.ಕೆ. ಶಿವಕುಮಾರ್ ಗೆ ಈಗ ಟೈಮ್ ಸರಿಯಿಲ್ಲ. ಜಾತಕ ನೋಡಿಕೊಂಡು ಗಿಣಿ ಶಾಸ್ತ್ರ ಕೇಳಿಕೊಂಡು ಡಿ.ಕೆ. ಶಿವಕುಮಾರ್ ಮುಂದುವರೆಯಲಿ. ಗಿಣಿ ಶಾಸ್ತ್ರ ಕೇಳಬೇಕಾದವನು ನೀನಪ್ಪ ಡಿ.ಕೆ. ಶಿವಕುಮಾರ್.ಒಳ್ಳೆಯ ಶಾಸ್ತ್ರ ಕೇಳಿ ಒಳ್ಳೆಯ ಬಾಣ ಬಿಡು ಎಂದು ಅವರು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಕ್ಕೆ ಟೆಂಡರ್ ಕರೆದಿದ್ದಾರೆ. ಕಸ ಗುಡಿಸುವ ಯಂತ್ರಗಳಲ್ಲೂ ಲೂಟಿ ಹೊಡೆಯುವ ತಂತ್ರ ಮಾಡಿದ್ದಾರೆ. 613 ಕೋಟಿ ರೂ. ತೆರಿಗೆದಾರರ ಹಣ. ಇವರು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ, ಪಾಲಿಕೆ ನಿರ್ವಹಣೆ ಮಾಡಲಿದೆ. ಬಾಡಿಗೆ ಪಡೆಯುವ ಬದಲು, ಸ್ವಂತಕ್ಕೆ ಖರೀದಿ ಮಾಡಿದರೆ 350 ಕೋಟಿಗೆ ಮುಗಿಯುತ್ತದೆ. ಬಾಡಿಗೆಗೆ ಸರಿಯಲ್ಲ ಎಂದು ತಜ್ಞರ ಸಮಿತಿ ಸ್ಪಷ್ಟವಾಗಿ ಹೇಳಿದೆ.ಆ ವರದಿಯನ್ನು ಮೂಲೆಗೆ ಹಾಕಿದ್ದಾರೆ.ಕಸ ಗುಡಿಸುವುದನ್ನೂ 30 ವರ್ಷಕ್ಕೆ ಕೊಡುತ್ತಿದ್ದಾರೆ. ಟೆಂಡರ್ ಪಡೆದವನು ಇವರ ಮನೆ ಕಸ ಹೊಡೆದುಕೊಂಡು ಇರಬೇಕು. ಮುಂದಿನ ಆರು ಅವಧಿ ಸೇರಿ ಇವರು ಟೆಂಡರ್ ಕೊಡುತ್ತಿದ್ದಾರೆ. ಟೆಂಡರ್ ಕರೆಯುವ ಮೊದಲು ಕಸ ಹಾಕುವ ಜಾಗ ಗುರುತಿಸಿ. ಕಸ ತೆಗೆಯಲು ಲಾರಿ ಇಲ್ಲ, ಹಾಕಲು ಜಾಗ ಇಲ್ಲ. ಇದೊಂದು ಲೂಟಿ ಸ್ಕೀಮ್. ಕ್ಯಾಬಿನೆಟ್ ಗೆ ತಂದು ಆಗಲೇ ಸರ್ಕಾರದ ಆದೇಶ ಹೊರಡಿಸಿದ್ದಾರೆ.ಕಸದ ಟ್ಯಾಕ್ಸ್, ನೀರಿನ ಟ್ಯಾಕ್ಸ್ ಆಯಿತು, ಈಗ ಲೂಟಿ ಟ್ಯಾಕ್ಸ್ ಬಂದಿದೆ ಎಂದು ಹೇಳಿದ್ದಾರೆ.ಬಾಡಿಗೆಗೆ ಪಡೆದರೆ ಕಮೀಷನ್ ಹೆಚ್ಚು ಸಿಗುತ್ತೆದೆ ಅಂತ ಸ್ಕೀಂ ಹಾಕಿದ್ದಾರೆ. 30 ವರ್ಷಕ್ಕೆ ಆಂಧ್ರಪ್ರದೇಶದ ಕಂಪೆನಿಗೆ‌ ಬೆಂಗಳೂರಿನ ಕಸ ಗುಡಿಸಲು ಟೆಂಡರ್ ಕೊಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ನಿತ್ಯ ಸಂಗ್ರಹ ಆಗುವ ಕಸವನ್ನೇ ಸರಿಯಾಗಿ ವಿಲೇವಾರಿ ಮಾಡಲ್ಲ. ಈ ಯಂತ್ರಗಳನ್ನು ಬಾಡಿಗೆಗೆ ಪಡೆದು ಲೂಟಿಗಿಳಿದಿದ್ದಾರೆ ಎಂದಿದ್ದಾರೆ.

ಬೆಂಗಳೂರಿನಲ್ಲಿ 7 ಕೋಟಿ ರೂ. ಎಟಿಎಂ ಹಣ ಲೂಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಜೈಲಿನಲ್ಲಿ ಇರುವವರಿಗೆ ಮೊಬೈಲ್ ಕೊಟ್ಟವರು ಇವರಿಗೂ ವ್ಯವಸ್ಥೆ ಮಾಡಿ ಕೊಟ್ಟಿರಬಹುದು.ಬೆಂಗಳೂರಿನಲ್ಲಿ ಪಾರ್ಕ್ ಮಾಡಿದ ವಾಹನ ರಸ್ತೆಗೆ ತೆಗೆಯುವುದಕ್ಕೇ ಸಮಯ ಬೇಕು. ಅಂತಹದ್ದರಲ್ಲಿ ಲೂಟಿ ಮಾಡಿಕೊಂಡು ಹೋಗಿದ್ದಾರೆ ಅಂದರೆ ಸರ್ಕಾರ ಸತ್ತೋಗಿದೆ. ಗೃಹ ಸಚಿವರು ಟ್ರಾನ್ಸ್‌ಫರ್ ಮಾಡಿಸುವುದರಲ್ಲಿ ಬ್ಯುಸಿ ಆಗಿದ್ದಾರೆ. ಬ್ರಾಂಡ್ ಬೆಂಗಳೂರು ಎನ್ನುವುದರ ಭಾಗ ಇದು. ಬ್ಯಾಂಕ್ ಹಣಕ್ಕೆ ಸೇಫ್ಟಿ ಇಲ್ಲ ಅಂದರೆ ಜನರ ಹಣಕ್ಕೆ ಸೇಫ್ಟಿ ಇದ್ಯಾ?. ಈ ಸರ್ಕಾರದಲ್ಲಿ ದರೋಡೆ ನಡೆದರೆ ಅದರಲ್ಲಿ ಆಶ್ಚರ್ಯ ಏನು? ಎಂದು ಪ್ರಶ್ನಿಸಿದ್ದಾರೆ.