ಮನೆ Latest News ಡಿಕೆಶಿಗೆ ನ್ಯಾಚುರಲ್ ಯೋಗ ಇಲ್ಲ , ಸಿಝೇರಿಯನ್ ಆಗಬೇಕು; ಡಿ ಕೆ ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ...

ಡಿಕೆಶಿಗೆ ನ್ಯಾಚುರಲ್ ಯೋಗ ಇಲ್ಲ , ಸಿಝೇರಿಯನ್ ಆಗಬೇಕು; ಡಿ ಕೆ ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದ ಆರ್ ಅಶೋಕ್

0

ಬೆಂಗಳೂರು:  ಡಿಕೆಶಿಗೆ ನ್ಯಾಚುರಲ್ ಯೋಗ ಇಲ್ಲ , ಸಿಝೇರಿಯನ್ ಆಗಬೇಕು ಎಂದು ಡಿ ಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ಅಶೋಕ್ ಬಳಿ ಜ್ಯೋತಿಷ್ಯ ಕೇಳ್ತಿನಿ ಅನ್ನೋ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ವಿಧಾನಸಭೆಯಲ್ಲೇ ಡಿಕೆಶಿಗೆ ಭವಿಷ್ಯ ಹೇಳಿದ್ದೇನೆ. ಅಧಿಕಾರ ಸುಲಭದಲ್ಲಿ ಯಾವುದು ಸಿಗಲ್ಲ. ಯೋಗದಲ್ಲಿ ಗುರು,ಶುಕ್ರ ಶನಿ ಫಲ ಹಾಗೆ ಕೊಡಲ್ಲ.ಒದ್ದು ಕಿತ್ಕೋಬೇಕು ಅಂತಾ ನಾನು ಭವಿಷ್ಯ ಹೇಳ್ತಿದ್ದೆ. ಡಿಕೆಶಿಗೆ ನ್ಯಾಚುರಲ್ ಯೋಗ ಇಲ್ಲ , ಸಿಝೇರಿಯನ್ ಆಗಬೇಕು. ಈಗಾಗಲೇ ಪೂಜೆ ಪುನಸ್ಕಾರ ಶುರು ಮಾಡಿದ್ದಾರೆ. ಬಾಗಿಲು ಒಂದು ತೆರೆಯಬೇಕು ಅಷ್ಟೇ. ಒಟ್ಟಿನಲ್ಲಿ ಸಿಝೇರಿಯನ್ ಆಗುತ್ತೆ, ನಾರ್ಮಲ್ ಡಿಲಿವರಿ ಅಲ್ಲ ಎಂದಿದ್ದಾರೆ,

ಹೊಸಬಾಳೆ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿಗೆ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ನವರು ಆಕಾಶ ಬಿದ್ದವರಂತೆ ಆಡುತ್ತಿದ್ದಾರೆ. ಖಾಲಿ ಸಂವಿಧಾನ ಇಟ್ಕೋಂಡಿದಾರಾ..? ಇಲ್ಲ‌ ಓದಿದ್ದಾರಾ..? ಮನುಸ್ಮೃತಿಗೆ ಹೇರಲು ಸಿದ್ದತೆ ಎಂದು ಸಿಎಂ ಹೇಳಿದ್ದಾರೆ. ಅವನ್ಯಾವನು ಮನು ನನಗೆ ಗೊತ್ತಿಲ್ಲ. ನಮಗೆ ಯಾವ ಮನು ಸ್ಮೃತಿ ಗೊತ್ತಿಲ್ಲ, ನಾನು ಓದಿಲ್ಲ. ನನಗೆ ಗೊತ್ತಿರುವುದು ಆರ್ ಎಸ್ ಎಸ್ ಮಾತ್ರ. ಇವರ ಬೇಳೆ ಬೇಯಿಸಿಕೊಳ್ಳೊಕೆ ಮನು ಅಂತಾ ಹೇಳ್ತಿದ್ದಾರೆ. ಜಾತ್ಯಾತೀತ ಪದ ತೆಗೆಯಬೇಕು ಎಂದು ಹೇಳಿದ್ದಾರೆ.ಅಂಬೇಡ್ಕರ್ ಬರೆದ ಪುಸ್ತಕದಲ್ಲಿ ಜಾತ್ಯಾತೀತ , ಸಮಾಜವಾದ ಎಲ್ಲಿದೆ..?. ಖರ್ಗೆ ,ಮರಿ ಖರ್ಗೆಯವ್ರು ಮೂಲ‌ಸಂವಿಧಾನದಲ್ಲಿ ಎಲ್ಲಿದೆ ಎಂದು ತೋರಿಸಲಿ. ಜಾತ್ಯಾತೀತ ಪದ ಯಾವ ಪೇಜ್ ನಲ್ಲಿದೆ ಹುಡುಕಿಕೊಡಿ.ನಾನು ಒಬ್ಬ ಒಕ್ಕಲಿಗ, ನಾನು ಹಿಂದೂ ಜಾತಿ ಸಮೀಕ್ಷೆ ನಡೆಸಿ ಎನ್ನುವ ನೀವೆ ಕಳ್ಳರು . ಜಾತಿ ಸಮೀಕ್ಷೆ ಬೇಕು ಎನ್ನುವವರು ನೀವೇ.. ಜಾತ್ಯಾತೀತ ಪದ ಸಂವಿಧಾನದಲ್ಲಿ ಸೇರಿಸಿದವರು ನೀವೆ. ಇಂದಿರಾಗಾಂಧಿ ಮಹಾತಾಯಿ ತಿದ್ದುಪಡಿ ತಂದು ಈ ಪದ ಸೇರಿಸಲಾಗಿದೆ.ಅಂಬೇಡ್ಕರ್ ಮೂಲ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ ನವರು 68 ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ, ಬಿಜೆಪಿಯವ್ರು ಕೇವಲ 14 ಬಾರಿ‌ ತಿದ್ದುಪಡಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜಣ್ಣ ಕ್ಕಿಂತ ಮೊದಲೆ ಕ್ರಾಂತಿ‌ಬಗ್ಗೆ ನಾನು ಹೇಳಿದ್ದೆ. ಈಗ ಪೋಸ್ಟರ್ ಗಳನ್ನು ಅಂಟಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕ್ಷಿಪ್ರ ಕ್ರಾಂತಿ ಶತಸಿದ್ಧ. ಗೃಹ ಸಚಿವರು ಡಿಸಿಎಂರನ್ನು ಯಾಕೆ ಭೇಟಿ ಮಾಡಬೇಕು. ಅಂತಹ ತುರ್ತು ಏನಾಗಿತ್ತು..? ಕಡಿಮೆ ಮಟ್ಟದಲ್ಲಿ ಕ್ರಾಂತಿ ಆಗಲಿದೆ  ಎಂದು ಸತೀಶ್ ಜಾರಕಿಹೊಳಿ  ಹೇಳಿದ್ದಾರೆ. ತೀವ್ರತೆ ಎಂತೂ ಇದೆ ಎಂದು ಒಪ್ಪಿಕೊಂಡಗಾಯ್ತಲ್ಲ.ಇದನ್ನು ಡಿಕೆಶಿ ಕೂಡ ನಿರಾಕರಿಸುತ್ತಿಲ್ಲ. ನಾನೇನು ಹೊಸದಾಗಿ ಹೇಳಿಲ್ಲ.. ಎರಡು ವರ್ಷಗಳಿಂದ ನಡೆಯುತ್ತಿರುವ ವಿಚಾರ ಎಂದಿದ್ದಾರೆ.

ಕರ್ನಾಟಕದ‌ ಸರಕಾರ ದಿವಾಳಿಯಾಗಿದೆ. ಕಸಗುಡಿಸುವರಿಗೆ 6 ತಿಂಗಳಿಂದ ಹಣ ಕೊಟ್ಟಿಲ್ಲ. ನಮ್ಮ‌ ಕ್ಲಿನಿಕ್ ನ ಸಿಬ್ಬಂದಿಗೆ ವೇತನ ಕೊಟ್ಟಿಲ್ಲ. ಸರಕಾರ ಪಾಪರ್ ಆಗಿರುವುದು ಗ್ಯಾರಂಟಿ. ಇನ್ನಷ್ಟು ತೆರಿಗೆ ಹೇರಲು ಸಿದ್ಧತೆ ನಡೆದಿದೆ. ರಾಜ್ಯದ ಜನತೆಗೆ ಮಾರಿಹಬ್ಬ ಕಾದಿದೆ. ರಾಜ್ಯದಲ್ಲಿ ಇನ್ನು ಯಾರ ಮನೆ ಕಟ್ಟೊಕೆ ಹೋಗಬೇಕಿ ಮನವಿ ಮಾಡ್ತಿನಿ. ನಿಮಗೆ ಕರೆಂಟ್ ಸಿಗಲ್ಲ.. ಕಪ್ಪ ಕಾಣಿಕೆ ಇಲ್ಲದೆ ಮನೆ ಕಟ್ಟಲು ಸಾಧ್ಯವಿಲ್ಲ. ಸರಕಾರಕ್ಕೆ ವಿಶೇಷ ದಕ್ಷಣೆ ನೀಡಿ ಮನೆ ಕಟ್ಟಬೇಕಾಗುತ್ತೆ ಎಂದರು.

ದ್ವೇಷ ಭಾಷಣಕ್ಕೆ ಕಾನೂನು ತರುವ ವಿಚಾರದ ಬಗ್ಗೆ ಮಾತನಾಡಿ ಗೃಹ ಸಚಿವಾಲಯ ಕಾಂಗ್ರೆಸ್ ಸಚಿವಾಲಯವಾಗಿದೆ. ಪತ್ರಕರ್ತರನ್ನು ಜೈಲಿಗೆ ಕಳುಹಿಸಲಿದ್ದಾರೆ. ಇಂದಿರಾಗಾಂಧಿ ರೀತಿ ಜೈಲಿಗೆ ಕಳುಹಿಸಲಿದ್ದಾರೆ. ಇದು ಕರಾಳ ಕಾನೂನು ಜಾರಿಗೆ ತರಲು ಹೋರಟಿದ್ದಾರೆ ಎಂದ ಅವರು ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿ ನಾನು ಕಳೆದ ಮೂರು ತಿಂಗಳಿಂದ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನ ಭೇಟಿಯಾಗಿ ವರದಿ ನೀಡಿದ್ದೆ. ಕಾಂಗ್ರೆಸ್ ಆಡಳಿತ, ಸಮಸ್ಯೆ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ವರದಿ ಕೊಡಬೇಕು. ಅದು ರೂಟೀನ್. ಮತ್ತೆ ಮೂರು ತಿಂಗಳ ಬಳಿಕ ಬರಲು ಹೇಳಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಚರ್ಚೆ ಇಲ್ಲ. ಈಗ ರಾಜ್ಯಾಧ್ಯಕ್ಷರ ಚುನಾವಣೆ ಇದೆ. ಅದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ. ಅನೇಕ ರಾಜ್ಯದ ಅಧ್ಯಕ್ಷರ ಚುನಾವಣೆ ಇದೆ. ಅದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮದೊಂದೇ ರಾಜ್ಯದ ರಾಜ್ಯಾಧ್ಯಕ್ಷರ ಬಾಕಿ ಇಲ್ಲ.ಕೇಂದ್ರದ ನಾಯಕರು ಸಮಯ ನಿಗದಿ ಮಾಡ್ತಾರೆ. ಅದು ಬಿಟ್ಟು ಬೇರೆ ಚರ್ಚೆ ಇಲ್ಲ ಎಂದಿದ್ದಾರೆ,