ಮನೆ Latest News ಹಿಂದೂ ಧರ್ಮದ ಆಸ್ತಿ ಅಲ್ಲ ಎಂಬ ಹೇಳಿಕೆಗೆ ಡಿ ಕೆ ಶಿವಕುಮಾರ್ ಸ್ಪಷ್ಟನೆ

ಹಿಂದೂ ಧರ್ಮದ ಆಸ್ತಿ ಅಲ್ಲ ಎಂಬ ಹೇಳಿಕೆಗೆ ಡಿ ಕೆ ಶಿವಕುಮಾರ್ ಸ್ಪಷ್ಟನೆ

0

ಬೆಂಗಳೂರು; ಹಿಂದೂ ಧರ್ಮದ ಆಸ್ತಿ ಅಲ್ಲ ಎಂಬ ಹೇಳಿಕೆಗೆ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಹಿಂದಿನ ರಾಜ ವಂಶಸ್ಥರು ನಮ್ಮ ಸರ್ಕಾರ, ನಾಡ ದೇವತೆ ಎಂದು ಬರೆದಿದ್ದಾರೆ. ಈಗ ಇದು ಸರ್ಕಾರದ ಆಸ್ತಿ. ಎಲ್ಲೂ ಕೂಡ ಇದು ಹಿಂದೂಗಳಿಗೆ ಮಾತ್ರ ಬಿಡಬೇಕು ಅಂತೇನಿಲ್ಲ.  ಎಲ್ಲಿಯೂ ಹೇಳಿಲ್ಲ ಎಲ್ಲರಿಗೂ ಆಶೀರ್ವಾದ ಮಾಡಬೇಕು ಎನ್ನಬಹುದು. ಈಗ ವಿದೇಶದಿಂದ ಹಲವರು ಬರ್ತಿದ್ದಾರೆ. ರಾಜರು ಕೂಡ ವಿದೇಶದಿಂದ ಕರೆಸುತ್ತಿದ್ದಾರೆ. ದಸರಾ ನಮ್ಮ ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಮಾಡೋ ಹಬ್ಬ. ಚರ್ಚಿಗೆ ಹೋಗಲ್ವ, ಮಸೀದಿಗೆ ಹೋಗಲ್ವ ಅವರು

ಯದುವೀರ ಅವರು ಪಾಪ ಬಿಜೆಪಿಗೆ ಸೇರಿ ಬಿಟ್ಟಿದ್ದಾರೆ. ಹಿಸ್ಟರಿ ಮರೆತು ಬಿಟ್ಟಿದ್ದಾರೆ. ನಾನು ಚಾಮುಂಡಿ ದೇವರ ಮೇಲೆ ನಂಬಿಕೆ‌ ಇಟ್ಟಿದ್ದೇನೆ. ನಾನು ಸಿಎಂ ಹೋಗಿ ೨೦೦೦ ಇಟ್ಟು ಬೇಡಿಕೊಂಡಿದ್ದೇವೆ. ಈಗ ಪ್ರತಿ ಮಹಿಳೆಗೂ ೨೦೦೦ ಕೊಡ್ತಿದ್ದೇವೆ. ಜಾತಿಯಲ್ಲಿ ಬಾವುಟದಲ್ಲಿ ಎಲ್ಲಿಯೂ ಮಾತನಾಡಬಾರದು. ಬ್ಯಾರಿಗಳು ಎಷ್ಟು ಚೆಂದಾಗಿ ಮಾತನಾಡ್ತಾರೆ ಎಂದಿದ್ದಾರೆ.

ನಾಡದೇವತೆ ಅಂತಾ‌ ಕರೆದಿದ್ದೇವೆ. ಈಗ ಸರ್ಕಾರದ ಆಸ್ತಿ. ಚಾಮುಂಡೇಶ್ವರಿ ‌ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವ ದೇವಿ. ಬೌದ್ಧ ಧರ್ಮದವರು‌ ಬರೋದು‌ ಬೇಡ್ವಾ? ಮುಸಲ್ಮಾನರು ಬರೋದು‌ಬೇಡ್ವಾ. ಕರ್ನಾಟಕದ‌ ದೇವತೆ ಎಂದು  ನಾವು ಅಂದ್ಕೊಂಡಿದೇವೆ. ವಿದೇಶದಿಂದಲೂ ಗಣ್ಯರು‌ ಬಂದು ಪ್ರಾರ್ಥನೆ ಮಾಡ್ತಾರೆ.  ಶೋಭಾ ಕರಂದ್ಲಾಜೆ ಅವರನ್ನೂ ಆಹ್ವಾನ ಮಾಡಿದ್ದೇವೆ. ಬೆಟ್ಟ‌ ಹತ್ತೋಕೆ ಬಿಡಬಾರದು ಅಂದ್ರೆ‌ ಹೇಗೆ?.ನಮ್ಮನ್ನ ಚರ್ಚ್ ಗೆ ಬಿಡಲ್ವಾ?

ನಮ್ಮನ್ನ ಯಾರನ್ನಾದರೂ ಬರಬೇಡಿ ಅಂದಿದ್ದಾರಾ? ನಮ್ಮ ಮನೆಯಾದರೆ ಅದು ವೈಯಕ್ತಿಕ ಸ್ವತ್ತು. ಮಕ್ಕಾ,‌ ಮದೀನಾ ಬಿಟ್ಟು ಬೇರೆಲ್ಲೂ ಅವರು ಯಾರು ನಮ್ಮನ್ನ ಬರಬೇಡಿ ಎಂದಿಲ್ಲ. ನಾವು ಬಿಜೆಪಿ ಅವರಿಗಿಂತಲೂ ಹೆಚ್ಚು ಹಿಂದೂಗಳು

ಈ ದೇಶದಲ್ಲಿ ಇರೋರನ್ನ ಓಡಿಸೋಕೆ ಆಗಿಬಿಡುತ್ತಾ? ಎಂದು ಪ್ರಶ್ನಿಸಿದ್ದಾರೆ.

 

ಫೇಕ್ ಲೆಟರ್ ನಲ್ಲಿ ಜೆಡಿಎಸ್ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಜೆಡಿಎಸ್ ಯಾವಾಗಲೂ ಫೇಕ್.. ಬೇಕಿದ್ದರೆ ಟೀಕೆ‌ ಮಾಡಲಿ, ಅವರ ದೊಡ್ಡ ದೊಡ್ಡ ಲೀಡರ್ ಗಳಿಗೇ ಹೆದರಲಿಲ್ಲ ನಾನು ಎಂದಿದ್ದಾರೆ.