ಮನೆ Latest News ಸ್ಪಾ ವ್ಯವಸ್ಥಾಪಕನಿಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ; ತಲೆಮರೆಸಿಕೊಂಡಿದ್ದ ದಿವ್ಯಾ ವಸಂತ ಅರೆಸ್ಟ್

ಸ್ಪಾ ವ್ಯವಸ್ಥಾಪಕನಿಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ; ತಲೆಮರೆಸಿಕೊಂಡಿದ್ದ ದಿವ್ಯಾ ವಸಂತ ಅರೆಸ್ಟ್

0

ಬೆಂಗಳೂರು; ಸ್ಪಾ ವ್ಯವಸ್ಥಾಪಕನಿಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಟಿವಿ ನಿರೂಪಕಿ ದಿವ್ಯಾ ವಸಂತಳನ್ನು ಜೀವನ್ ಭೀಮಾ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಿವ್ಯಾ ವಸಂತಳಾನ್ನು ಪೊಲೀಸರು ಕೇರಳದಲ್ಲಿ  ಅರೆಸ್ಟ್ ಮಾಡಿದ್ದಾರೆ.

ಪ್ರಕರಣದಲ್ಲಿ ದಿವ್ಯ ಸಹೋದರ ಸಂದೇಶ, ಆಕೆಯ ಆಪ್ತ ಪೆಂಕಟೇಶ್ ಅರೆಸ್ಟ್ ಆಗುತ್ತಿದ್ದಂತೆ ದಿವ್ಯಾ ಎಸ್ಕೇಪ್ ಆಗಿದ್ದಳು. ಕಳೆದ ಒಂದು ವಾರದಿಂದ ಕೇರಳ, ತಮಿಳುನಾಡು ಅಂತಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ ಆಕೆಯನ್ನು ಕೊನೆಗೂ ಜೀವನ್ ಭೀಮಾ ನಗರ ಪೊಲೀಸರು ಕೇರಳದಲ್ಲಿ ಅರೆಸ್ಟ್ ಮಾಡಿದ್ದಾರೆ.

ಆರಂಭದಲ್ಲಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ ವಸಂತ ಬಳಿಕ ಅಲ್ಲಿಂದ ಕೇರಳಕ್ಕೆ ತೆರಳಿದ್ದಳು. ಇದೀಗ ಅಲ್ಲೇ ಆಕೆಯನ್ನು ಪೊಲೀಸರ ಬಂಧಿಸಿದ್ದು, ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ;

ಸುಲಭವಾಗಿ ದುಡ್ಡು ಮಾಡಿ ಐಷಾರಾಮಿ ಜೀವನ ನಡೆಸೋ ದುರಾಸೆಗೆ ಬಿದ್ದ ದಿವ್ಯಾ ವಸಂತ ತನ್ನದೇ ಆದ ಗ್ಯಾಂಗ್ ಒಂದನ್ನು ಕಟ್ಟಿಕೊಂಡಿದ್ದಳು. ಆಕೆಯ ಆಪ್ತ, ಖಾಸಗಿ ವಾಹಿನಿಯ ಸಿಇಓ ವೆಂಕಟೇಶ್ ಈ ಗ್ಯಾಂಗ್ ನ ಕಿಂಗ್ ಪಿನ್. ಈ ಖತರ್ನಾಕ್ ಗ್ಯಾಂಗ್, ಹನಿಟ್ರ್ಯಾಫ್ ಮಾಡೋದು, ಬ್ಲ್ಯಾಕ್ ಮೇಲ್ ಮಾಡೋದನ್ನೇ ತಮ್ಮ ಕಾಯಕ ಮಾಡಿಕೊಂಡಿತ್ತು. ಅದರಂತೆ ಸ್ಪಾ ಮಾಲೀಕರು, ವೈದ್ಯರು, ದೊಡ್ಡ ದೊಡ್ಡ ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿತ್ತು.ಅದಕ್ಕಾಗಿ ವಾಟ್ಸಾಪ್ನಲ್ಲಿ  ಸ್ಪೈ ರಿಸರ್ಚ್ ಅಂತಾ ಗ್ರೂಪ್ ಬೇರೆ ಮಾಡ್ಕೊಂಡಿದ್ರು. ಈ ಗ್ರೂಪ್ನಲ್ಲಿ ದಿವ್ಯಾ ವಸಂತ, ಆಕೆಯ ಸಹೋದರ ಸಂದೇಶ್, ಸ್ನೇಹಿತರಾದ  ಸಚಿನ್, ಆಕಾಶ್ ಹಾಗೂ ಖಾಸಗಿ ಸುದ್ದಿ ವಾಹಿನಿಯ ವೆಂಕಟೇಶ್ ಇತರರು.  ಇದ್ದರು. ಈ ಗ್ರೂಫ್ ನಲ್ಲಿ ಯಾರ ಜೊತೆ ಹಣ ಇದೆ, ಯಾರಿಗೆ ಬೆದರಿಕೆ ಹಾಕಬಹುದು, ಹನಿಟ್ರ್ಯಾಪ್ ಮಾಡಬಹುದು ಹೀಗೆ ಪ್ಲ್ಯಾನ್ ಮಾಡುತ್ತಿದ್ದರು.

ಅದರಂತೆ ವೆಂಕಟೇಶ್‌ ಹಾಗೂ ದಿವ್ಯಾ ಗ್ಯಾಂಗ್  ಇಂದಿರಾನಗರದ ಶ್ರೀ ಸ್ಪಾ ಆ್ಯಂಡ್ ಬ್ಯೂಟಿ ಪಾರ್ಲ‌ರ್ ನ ಟಾರ್ಗೆಟ್ ಮಾಡಿತ್ತು. ಅದಕ್ಕಾಗಿ ಪ್ಲ್ಯಾನ್ ರೂಪಿಸಿದ ಖತರ್ನಾಕ್ ಗ್ಯಾಂಗ್ ಈಶಾನ್ಯ ಭಾರತದ ಹುಡುಗಿಯೊಬ್ಬಳನ್ನ, ಬುಕ್ ಮಾಡಿಕೊಂಡು ಅದೇ ಸ್ಪಾ ನಲ್ಲಿ ಕೆಲಸಕ್ಕೆ ಸೇರಿಸುತ್ತೆ. ಅದಾದ  ಬಳಿಕ ತಾವು ಮೊದಲೇ ಪ್ಲಾನ್ ಮಾಡಿಕೊಂಡಂತೆ ದಿವ್ಯಾ ಸಹೋದರ ಸಂದೇಶ್, ಜೂನ್ 26ರಂದು ಆ ಸ್ಪಾಗೆ ಮಸಾಜ್ ಮಾಡಿಸಿಕೊಳ್ಳಲು ಹೋಗಿದ್ದಾನೆ. ತನಗೆ ಈಶಾನ್ಯ ಭಾರತದ ಅದೇ ಹುಡುಗಿ ಬೇಕು ಅಂತಾ ಹೇಳಿ ಆಕೆಯನ್ನ ಕರೆಸಿಕೊಂಡು ಸುಮಾರು 90 ನಿಮಿಷ ಮಸಾಜ್ ಮಾಡಿಸಿಕೊಳ್ಳುತ್ತಾನೆ. ಅಲ್ಲದೇ ಇದೇ ವೇಳೆ ಪ್ಲ್ಯಾನಿನಂತೆ ಇಬ್ಬರು ಅಶ್ಲೀಲವಾಗಿ ವೀಡಿಯೋ ಮಾಡಿಕೊಂಡಿದ್ದಾರೆ.

ಅದೇ ವೀಡಿಯೋವನ್ನು ಇಟ್ಟುಕೊಂಡು ವೆಂಕಟೇಶ್  ಸ್ಪಾದ ಮ್ಯಾನೇಜರ್ ಗೆ ಕರೆ ಮಾಡಿ ನಿಮ್ಮಲ್ಲಿ ವೇಶ್ಯವಾಟಿಕೆ ನಡೀತಿದೆ, ಇದನ್ನ ಹೊರಗಡೆ ಬರಬಾರದು ಅಂದ್ರೆ 15 ಲಕ್ಷ ನೀಡ್ಬೇಕಪು ಅಂತಾ ಬೇಡಿಕೆ ಇಟ್ಟಿದ್ದಾನೆ. ಆದ್ರೆ ಆತ ಒಪ್ಪಿಲ್ಲ. ನಮ್ಮಲ್ಲಿ ಆ ರೀತಿಯ ಯಾವುದೇ ಅಸಹ್ಯ ಕೆಲಸಗಳು ನಡೆಯಲ್ಲ ಎಂದಿದ್ದಾನೆ. ಆಗ ದಿವ್ಯ ಸಹೋದರ ಸಂದೇಶ್ ಹಾಗೂ ಈಶಾನ್ಯ ಭಾರತದ ಹುಡುಗಿಯ ವಿಡಿಯೋ ತೋರಿಸಿ ಇದೇನು ಅಂತಾ ಕೇಳಿದೆ .ವಿಡಿಯೋ ನೋಡಿ ಗಾಬರಿಯಾಗಿದ್ದಾನೆ ಆತ. ಅಲ್ಲದೇ  ಹುಡುಗಿಯೂ ನಾಪತ್ತೆಯಾಗಿರೋದನ್ನ ನೋಡಿ, ಇದು ಈ ಗ್ಯಾಂಗೇ ಉದ್ದೇಶಪೂರ್ವಕವಾಗಿ ಮಾಡಿರೋ ಕೃತ್ಯ ಅಂತಾ ಗೊತ್ತಾಗಿದೆ. ಬಳಿಕ ದೂರು ನೀಡಿದ್ದಾನೆ. ಅದರಂತೆ ಪ್ರಕರಣ ದಾಖಲಿಸಿಕೊಂಡು ಜೀವನ್ ಭೀಮಾ ನಗರ ಪೊಲೀಸರು ಆರೋಪಿಗಳಾದ ವೆಂಕಟೇಶ್, ಸಂದೇಶ್ ಹಾಗೂ ಆಕಾಶ್ ನನ್ನು ಬಂಧಿಸಿದ್ದಾರೆ. ಇತ್ತ ಸಹೋದರ ಅರೆಸ್ಟ್ ಆಗುತ್ತಿದ್ದಂತೆ ದಿವ್ಯಾ ಎಸ್ಕೇಪ್ ಆಗಿದ್ದಳು. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.