ಬೆಂಗಳೂರು; ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅದನ್ನು ವಿರೋಧ ಪಕ್ಷದವರು ಚರ್ಚೆ ಮಾಡಬೇಕು ಎಂದಿದ್ದಾರೆ.
ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡೋದನ್ನು ಬಿಟ್ಟು ವಕ್ಫ್ ಮೂಡಾ ಅಂತ ಹೇಳಿ ನಮ್ಮ ಸಿಎಂ ಮೇಲೆ ಆರೋಪ ಹೊರಿಸೋಕೆ ನೋಡ್ತಿದ್ದಾರೆ. ವಕ್ಫ್ ವಿಚಾರದಲ್ಲಿ ಚುನಾವಣೆಗಾಗಿ ಕೋಮು ವಿಚಾರ ಚರ್ಚೆಗೆ ತಂದ್ರು. ಆದ್ರೆ ಬೈ ಎಲೆಕ್ಷನ್ ನಲ್ಲಿ ಮುಸ್ಲಿಂ ಸಮುದಾಯದ ಯೂಸೂಪ್ ಪಠಾಣ್ ಮಾಜಿ ಸಿಎಂ ಮಗನನ್ನ ಸೋಲಿಸಿದ್ರು. ಅಲ್ಲಿ ಎಲ್ಲಾ ಸಮುದಾಯದ ಮತಗಳು ನಮ್ಮ ಪಕ್ಷಕ್ಕೆ ಬಂದಿವೆ. ಇದ್ರಿಂದ ಉಪ ಚುನಾವಣೆಯಲ್ಲಿ ಕೋಮು ವಿಚಾರ ವರ್ಕೌಟ್ ಆಗಿಲ್ಲ ಅನ್ನೋ ಟೆನ್ಶನ್ ನಲ್ಲಿ ಅಶೋಕ್ ವಿಜಯೇಂದ್ರ ಇದ್ದಾರೆ .ಈಗ ಮೂಡ ಅಂತ ಹೇಳ್ತಿದ್ದಾರೆ ಅದನ್ನ ಮಾಡಿರೋದೆ ಬಿಜೆಪಿ ಅಧಿಕಾರದಲ್ಲಿ. 50:50 ಅನುಪಾತ ತಂದಿದ್ದೆ ಅವರು.. ಅದರ ಬಗ್ಗೆ ತನಿಖೆಯಾಗಲಿ .ತಪ್ಪಿಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಸೋಮವಾರದಿಂದ ಉತ್ತರ ಕರ್ನಾಟಕ ಭಾಗದ ಚರ್ಚೆ ಬರಲಿದೆ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಬೆಳಗಾವಿ; ಸೋಮವಾರದಿಂದ ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ಬರಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ನಮ್ಮ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಉಪನಾಯಕ ಬೆಲ್ಲದ್ ಸೇರಿ ಹಲವರು ಚರ್ಚೆ ಮಾಡ್ತಾರೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ಶಾಸಕರ ಜೊತೆ ಸಭೆ ಮಾಡಿದ್ದೇನೆ.ಅವರಿಗೆಲ್ಲಾ ದಾಖಲೆ ನೀಡದ್ದು, ಕಾಂಗ್ರೆಸ್ ಸರ್ಕಾರ ಉ.ಕ ಭಾಗಕ್ಕೆ ಏನು ಕೊಟ್ಟಿದೆ ಅಂತ ಸವಿಸ್ತಾರವಾಗಿ ಚರ್ಚೆ ಮಾಡ್ತಾರೆ.
ಜಸ್ಟಿಸ್ ಕುನ್ಹಾ ವರದಿ ಆಧಾರದ ಮೇಲೆ ಹಲವಾರು ರೀತಿಯ ಕ್ರಮ ಆಗೋದು ಅನಿವಾರ್ಯ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಕೋವಿಡ್ ಕುರಿತು ಕುನ್ಹಾ ವರದಿ ಅನ್ವಯ ಎಫ್ ಐಆರ್ ದಾಖಲು ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ದೊಡ್ಡ ಭ್ರಷ್ಟಾಚಾರ ಆಗಿದರ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ.ಕೆಲವು ಕಡೆ ಅನಾವಶ್ಯಕ ವಾಗಿ ಬೆಲೆ ಹೆಚ್ಚು ಕೊಟ್ಟ ಖರೀದಿ ಮಾಡಿದ್ದಾರೆ. ಬೋಗಸ್ ಕಂಪನಿಗೆ ಆರ್ಡರ್ ಕೊಟ್ಟಿದ್ದಾರೆ. ಹೀಗಾಗಿ ಕಾನೂನಿನ ಪ್ರಕಾರ ಏನೂ ಕ್ರಮ ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳಬೇಕು. ಒಂದೊಂದು ಪ್ರಕರಣ ಒಂದೊಂದು ರೀತಿ ಇದೆ. ಈಗ ಎಫ್ ಐ ಆರ್ ದಾಖಲಾಗಿದೆ. ಕೂಡಲೇ ಎಫ್ ಐಆರ್ ದಾಖಲು ಮಾಡೋದಿದೆ, ಇನ್ನೂ ಕೆಲವು ತನಿಖೆ ಮಾಡಲು ಇದೆ. ಸಾವಿರಾರು ಪುಟಗಳ ವರದಿ ಇದೆ.ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಬೇಕು ಹೀಗಾಗಿ ಎಫ್ ಐಆರ್ ದಾಖಲಾಗಿದೆ ಎಂದಿದ್ದಾರೆ.
ಇನ್ನು ಎಸ್ ಐಟಿ ತನಿಖೆ ಆಗುತ್ತಾ ಎಂಬ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಎಸ್ ಐಟಿ ರಚಿಸಬೇಕು ಅಂತಾ ಇದೆ.ಇದರ ಕುರಿತು ಹಿಂದೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಿತ್ತು. ಈಗ ಎಫ್ ಐಆರ್ ಆಗಿದೆ, ನಂತರ ಹೋಮ್ ಡಿಪಾರ್ಟ್ಮೆಂಟ್ ತೀರ್ಮಾನ ಆಗಬೇಕು.ಹಲವಾರು ಎಫ್ ಐಆರ್ ರಿಜಿಸ್ಟರ್ ಆಗೋಕೆ ತಯಾರಾಗುತ್ತದೆ.ಎಲ್ಲಾ ಸೇರಿಸಿ ತನಿಖೆ ಮಾಡೋದಕ್ಕೆ ಸಹಾಯ ವಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಆಹಾರ ಸುರಕ್ಷಿತೆ ಗುಣಮಟ್ಟ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆ ವಿಲೀನ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ತೀರ್ಮಾನ ತೆಗೆದುಕೊಂಡು, ಆಡಳಿತಾತ್ಮಕ ಜವಾಬ್ದಾರಿ ನೀಡಿದ್ವಿ.ಈಗ ಆದೇಶ ಹೊರಡಿಸಿದ್ದೇವೆ.ಎರಡೂ ನಿಭಾಯಿಸುವ ಅಧಿಕಾರಿಗಳು ಇರಬೇಕು ಅನ್ನೋದು ನಮ್ಮ ಪ್ರಯತ್ನ.ಔಷಧಿ ನಿಯಂತ್ರಣ ಇಲಾಖೆಯಲ್ಲಿ ಪಾರದರ್ಶಕ ವಾಗಿ ಇರಬೇಕು. ಉತ್ತಮ ದರ್ಜೇಗೆ ಏರಿಸಬೇಕಾಗಿದೆ.ಗುಣಮಟ್ಟ, ತಪಾಸಣೆ, ಪರಿವೀಕ್ಷಣೆ ಸೇರಿ ಎಲ್ಲಾ ಪ್ರಯೋಜನೆ ರೀತಿಯಲ್ಲಿ ಆಗಬೇಕು, ಇದು ಮುಖ್ಯ. ಅನೇಕ ಕಂಪ್ಲೆಂಟ್ ಇದೆ, ಹೀಗಾಗಿ ಎರಡೂ ಇಲಾಖೆಯನ್ನ ಜೋಡಿಸಿ, ಆಯುಕ್ತರನ್ನ ನೇಮಕ ಮಾಡಬೇಕು.ಪಾರದರ್ಶಕ ವಾಗಿ ಆಗಬೇಕು ಎಂಬ ಸುಧಾರಣೆ ಯಿಂದ ಇದನ್ನ ಮಾಡಿದ್ದೀವಿ ಎಂದಿದ್ದಾರೆ.











