ಬೆಂಗಳೂರು; ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್ ನಮಗೆ ಅನುಮಾನ ಇರೋದು ದ್ರಾವಣದ ಮೇಲೆ ಎಂದಿದ್ದಾರೆ.
ಸಿಎಂ ಜೊತೆ ನಾವು ಚರ್ಚೆ ಮಾಡಿದ್ದೇವೆ. ನಮಗೆ ಅನುಮಾನ ಇರೋದು ದ್ರಾವಣದ ಮೇಲೆ. ಅದರ ಲ್ಯಾಬ್ ವರದಿ ಬರಬೇಕಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ೨೬೦೦ ಸರ್ಜರಿ ಆಗಿತ್ತು. ಸಿಜೇರಿಯನ್ ಗಳಲ್ಲಿ ಯಾರು ತೀರಿರಲಿಲ್ಲ. ದ್ರಾವಣ ಗುಣಮಟ್ಟದ ಬಗ್ಗೆ ಕಳಿಸಿದ್ದೇವೆ. ವರದಿ ಬರಲು ಎಂಟು ಒಂಭತ್ತು ದಿನಗಳ ಆಗಬಹುದು. ವರದಿ ಬಂದ ನಂತರ ಕ್ರಮ ತೆಗೆದುಕೊಳ್ತೇವೆ. ನಾವು ಮೊದಲು ಅವರನ್ನ ಬ್ಲಾಕ್ ಗೆ ಹಾಕಿದ್ದೆವು. ಅವರು ನ್ಯಾಯಾಲಯದ ಮೊರೆ ಹೋಗ್ತಾರೆ. ಸೆಂಟ್ರಲ್ ಲ್ಯಾಬ್ ನಲ್ಲಿ ಅದು ಕರೆಕ್ಟ್ ಇದೆ ಅಂತ ಬರುತ್ತೆ. ಎನ್ ಇಎ ಲ್ಯಾಬ್ ನಲ್ಲಿ ಉಪಯೋಗ ಮಾಡಬಹುದು ಅಂತಿದೆ. ಡ್ರಗ್ ಕಂಟ್ರೋಲ್ ೯೨ ಬ್ಯಾಚ್ ಪರೀಕ್ಷೆ ಮಾಡಿತ್ತು. ೨೨ ಬ್ಯಾಚ್ ಗಳ ಬಗ್ಗೆ ವರದಿ ಸರಿಯಾಗಿ ಬರಲಿಲ್ಲ. ಬಳ್ಳಾರಿ ಬ್ಯಾಚ್ ವರದಿ ಪರೀಕ್ಷೆಗೆ ಹೋಗಿದೆ. ಹಿಂದೆ ಸಂಶಯ ಬಂದಾಗ ಪರೀಕ್ಷೆಗೆ ಕಳಿಸಿದ್ದೆವು ಎಂದಿದ್ದಾರೆ.
ಡಾಕ್ಟರ್ ಎಲ್ಲರೂ ಸರಿಯಾಗಿ ಕೆಲಸ ಮಾಡಿದ್ದಾರೆ. ಐವಿ ದ್ರಾವಣದ ಮೇಲೆ ಸಂಶಯ ಬಂದಿದೆ. ಈಗ ಎಕ್ಸ್ ಫರ್ಟ್ ಕಮಿಟಿ ಮಾಡಿದ್ದೇವೆ. ಅವರು ಎಲ್ಲವನ್ನೂ ಪರಿಶೀಲನೆ ಮಾಡ್ತಾರೆ. ದಾವಣಗೆರೆ,ಪಾವಗಡದ ಐವಿ ದ್ರಾವಣ ಪರೀಕ್ಷೆಯಾಗಿತ್ತು. ಇದರಿಂದ ಸಮಸ್ಯೆ ಇಲ್ಲ ಆಗ ಬಂದಿತ್ತು. ಈಗ ೨೨ ಕ್ವಾಲಿಟಿ ಇಲ್ಲ ಅಂತ ಆರೋಪ ಬಂದಿದೆ. ನಾವು ಇದರ ಆಧಾರದ ಮೇಲೆ ಪ್ರಾಸಿಕ್ಯೂಟ್ ಮಾಡಬಹುದಿತ್ತು. ಕೆಎಸ್ ಸಿ ಲ್ಯಾಬ್ ನಲ್ಲೂ ಪರೀಕ್ಷೆಯಾಗಿದೆ. ಕುಟುಂಬಸ್ಥರ ಪರಿಹಾರ ಸರ್ಕಾರ ಘೋಷಿಸಿದೆ.ಯಾವ ಕಾರಣಕ್ಕೆ ಆಗಿದೆ ಅನ್ನೋದು ಇನ್ನು ಗೊತ್ತಿಲ್ಲ. ನಮಗೆ ಐವಿ ದ್ರಾವಣದ ಮೇಲೆ ಸಂಶಯವಿದೆ. ನಾಲ್ವರಲ್ಲಿ ಇಬ್ಬರು ಪ್ರಥಮ ಬಾಣಂತಿಯರು. ಅವರ ಆರೋಗ್ಯವೂ ಉತ್ತಮವಿತ್ತು. ಅವರ ಮರಣ ನಮಗೆ ನೋವಿನ ಸಂಗತಿ ಎಂದಿದ್ದಾರೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ಸಭೆ
ಬೆಂಗಳೂರು; ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ಆರಂಭದಲ್ಲೇ ಏರು ಧ್ವನಿಯಲ್ಲಿ ಅಧಿಕಾರಿಯೊಬ್ಬರಿಗೆ ಸಿಎಂ ಪ್ರಶ್ನೆ ಮಾಡಿದ್ದಾರೆ. ಏನಪ್ಪಾ ಕೆಲಸ ಮಾಡಲು ಆಗಲ್ವಾ ಎಂದು ಗರಂ ಆಗಿಯೇ ಪ್ರಶ್ನೆ ಮಾಡಿದ ಸಿಎಂ ಪ್ರಶ್ನಿಸಿದ್ದಾರೆ.
ಸಿಎಂ ನೇತೃತ್ವದ ಸಭೆಗೂ ಮುನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ ಸಿಜೆರಿಯೇನ್ ಆಪರೇಷನ್ ಮಾಡುವಾಗ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ ಸಿಜೆರಿಯೇನ್ ಆಪರೇಷನ್ ವೇಳೆ ಸಾವನ್ನಪ್ಪಿದ ಉದಾಹರಣೆ ಇಲ್ಲ. ಲಿಂಗರ್ ಲ್ಯಾಕ್ಟೇಟ್ ಸರಬರಾಜು ಮಾಡಿರೋದು ಪಶ್ಚಿಮ ಬಂಗಾಳದ ಫರ್ಮಾಸಿಟಿಕಲ್‌ನವರು. ಬಳ್ಳಾರಿ ಜಿಲ್ಲಾ ಔಷಧಿ ನಿಯಂತ್ರಕನನ್ನು ಸಸ್ಪೆಂಡ್ ಮಾಡಲಾಗಿದೆ. ಪಶ್ಚಿಮ ಬಂಗಾಳದ ಕಂಪನಿ ಬ್ಲಾಕ್‌ಲಿಸ್ಟ್‌ಗೆ ಹಾಕಿದ್ದೇವೆ. ಮೃತ ಕುಟುಂಬಗಳಿಗೆ ಸರ್ಕಾರದಿಂದ ಎರಡು ಲಕ್ಷ ಪರಿಹಾರ ಹಾಗೂ ಕಂಪನಿಯಿಂದಲೂ ಪರಿಹಾರ ನೀಡಲಾಗುವುದು. ಆಸ್ಪತ್ರೆ ಎಂಡಿಗೆ ನೋಟೀಸ್ ಕೊಡಲು ಸೂಚನೆ ಕೊಟ್ಟಿದ್ದೇನೆ ಎಂದ್ರು.
ಈಗ ಸರಬರಾಜಾಗಿರುವ ಔಷಧಿಗಳನ್ನು ವಿತ್‌ಡ್ರಾ ಮಾಡುತ್ತೇವೆ. ಚೆನ್ನೈ ಮಾದರಿಯಲ್ಲಿ ಮೆಡಿಕಲ್ ಸ್ಟ್ರಕ್ಚರ್ ಜಾರಿಗೆ ಸೂಚನೆ ನೀಡಿದ್ದೇವೆ. ಬಳ್ಳಾರಿಯಲ್ಲಿರುವ ಸರ್ಜನ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆಪರೇಷನ್ ಮಾಡಿರುವ ವೈದ್ಯರ ತಪ್ಪಿಲ್ಲ ಅಂತ ಪ್ರಾಥಮಿಕ ಮಾಹಿತಿ ವರದಿ ಇದೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದೇನೆ. ನಾಲ್ಕು ಮಂದಿ ಬಾಣಂತಿಯರು ಸಾವನ್ನಪ್ಪಿದ್ದರು. ನಾವು ಎಕ್ಸ್ ಫರ್ಟ್ ಕಮಿಟಿ ಮಾಡಿದ್ದೆವು. ರಾಜೀವ್,ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿ ಕಮಿಟಿ ಮಾಡಿದ್ದೆವು.
ವಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆ ಮಾಡಲಾಗಿದೆ. ಅದನ್ನ ಸಪ್ಲೈ ಮಾಡಿದ್ದವರು ಪಶ್ಚಿಮಬಂಗ ಫಾರ್ಮಾಸುಟಿಕಲ್ಸ್ ನವರು. ಡ್ರಗ್ ಕಂಟ್ರೋಲರ್ ಸಪ್ಲೈ ಮಾಡ್ತಾರೆ. ಕೂಡಲೇ ಡ್ರಗ್ಸ್ ಕಂಟ್ರೋಲರ್ ಸಸ್ಪೆಂಡ್ ಗೆ ಸೂಚನೆ ಕೊಡಲಾಗಿದೆ. ಸಾವನ್ನಪ್ಪಿದ್ದವರಿಗೆ ಪರಿಹಾರ ಕೊಡ್ತೇವೆ. ತಲಾ ೨ ಲಕ್ಷ ಪರಿಹಾರ ಕೊಡ್ತೇವೆ. ಆ ಕಂಪನಿಗಳಿಂದಲೂ ಪರಿಹಾರ ಕೊಡಿಸ್ತೇವೆ. ಕರ್ನಾಟಕ ಮೆಡಿಕಲ್‌ಸಪ್ಲೈಗೆ ನವರಿಗೆ ನೊಟೀಸ್ ಕೊಡೋಕೆ ಹೇಳಿದ್ದೇನೆ. ೧೯೨ ಕಂಪನಿಗಳು ಸಪ್ಲೈ ಮಾಡುತ್ತೇವೆ. ಡ್ರಗ್ಸ್ ಕಂಟ್ರೋಲ್ ಬೋರ್ಡ್ ಸ್ಟ್ರಕ್ಚರ್ ಮಾಡುವಂತೆ ಹೇಳಿದ್ದೇನೆ. ಒಂದು ಕಮಿಟಿಯನ್ನ ರಚನೆ ಮಾಡ್ತೇವೆ. ಬಳ್ಳಾರಿ ಜಿಲ್ಲಾ ಸರ್ಜನ್ ಗೆ ಎಚ್ಚರಿಕೆ ಕೊಟ್ಟಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ರವಾನಿಸಿದ್ದೇವೆ. ಸರ್ಜರಿ ಮಾಡಿದ್ದ ವೈದ್ಯರ ತಪ್ಪಿಲ್ಲ ಅಂತ ಬಂದಿದೆ. ಅವರಿಗೂ ಈ ರೀತಿ ಆಗದಂತೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದರು,