ಮನೆ Latest News ದಲಿತ ನಾಯಕರ ಡಿನ್ನರ್ ಮೀಟಿಂಗ್ ರದ್ದು ವಿಚಾರದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

ದಲಿತ ನಾಯಕರ ಡಿನ್ನರ್ ಮೀಟಿಂಗ್ ರದ್ದು ವಿಚಾರದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು?

0

ಬೆಂಗಳೂರು; ದಲಿತ ನಾಯಕರ ಡಿನ್ನರ್ ಮೀಟಿಂಗ್ ರದ್ದು ವಿಚಾರದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಮಾತನಾಡಿದ್ರು.ಅದರ ಬಗ್ಗೆ ಪರಮೇಶ್ವರ್ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಡಿನ್ನರ್ ಗೆ ಸೇರಬಾರದು ಅಂತೇನಿಲ್ಲ. ಅದು ದೊಡ್ಡ ವಿಷಯವೇನು ಅಲ್ಲ. ಡಿನ್ನರ್ ಮೀಟಿಂಗ್ ಬದಲಿಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬಹುದು ಎಂಬ ಹೆಚ್‌‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅವರ ಪಕ್ಷದ ಬಗ್ಗೆ ಅವರು ಮಾತಾಡಲಿ. ನಮ್ಮ ಪಕ್ಷದವರು‌ ಡಿನ್ನರ್ ಸೇರಿದ್ದಾರೆ ಸೇರುತ್ತಲೇ ಇರತ್ತಾರೆ. ಕೆಲವು ಚರ್ಚೆಗೆ ಬರುತ್ತೆ ಕೆಲವು ಬರೊಲ್ಲ. ನಾವ್ಯಾರು ಡಿನ್ನರ್ ಮಾಡೋದೆ ಇಲ್ವಾ ?. ಡಿನ್ನರ್, ಟೂರ್ ಇದೆಲ್ಲ ಮಾಮೂಲಿ.ರಾಜಕೀಯ ಅನ್ನೋದು ಸಾಮಾಜಿಕ ಚಟುವಟಿಕೆ. ಸೇರೋದು, ಮಾತಾಡೋದು ಇದ್ದೇ ಇರುತ್ತೆ. ಎಲ್ಲ ರಾಜಕೀಯ ಪಕ್ಷದಲ್ಲಿ ಅವರದೇ ಆದೆ ಪ್ರಯತ್ನ ಮಾಡ್ತಾ ಇರ್ತಾರೆ. ಆರೋಗ್ಯಕರ ಸ್ಪರ್ಧೆ ಇದ್ರೆ ತಪ್ಪಿಲ್ಲ ಎಂದಿದ್ದಾರೆ.

ಅಧಿಕಾರ ಹಂಚಿಕೆ ಇಲ್ಲ ಎಂಬ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅವರ ಬಳಿ ಮಾಹಿತಿ ಇರಬಹುದು.ನಮ್ಮ ಪಕ್ಷದಲ್ಲಿ ಕೇಂದ್ರ ಹೈಕಮಾಂಡ್ ಇದೆ ಅವರು ತೀರ್ಮಾನ ಮಾಡ್ತಾರೆ. ಒಬ್ಬರು ಮುಖ್ಯಮಂತ್ರಿ ಇದ್ದಾಗ ಮತ್ತೊಬ್ಬ ಮುಖ್ಯಮಂತ್ರಿ ಬಗ್ಗೆ ಮಾತನಾಡುವ ಪ್ರಶ್ನೆಯೇ ಇಲ್ಲ. ಮುಂದೆ ಆ ಸಂದರ್ಭ ಬಂದರೆ ಹೈಕಮಾಂಡ್ ಇರುತ್ತೆ. ರಾಜಣ್ಣ ಅವರು ಹೇಳಿದ್ದಕ್ಕೆ ನಾವು ಉತ್ತರ ಕೊಡೋಕೆ ಆಗೊಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.ಬದಲಾವಣೆ ಆಗುವ ವೇಳೆ ಅವರು ಇರಲೇಬೇಕು ಅಂತ ಹೇಳ್ಲ. ಹೈಕಮಾಂಡ್ ನಾಯಕರು ಕೂತು ತೀರ್ಮಾನ ಮಾಡ್ತಾರೆ. ಖರ್ಗೆ, ಸುರ್ಜೇವಾಲರು ತೀರ್ಮಾನ ಅಂತಿಮ.ಮಾಡಬೇಕಾದ ಸಂದರ್ಭದಲ್ಲಿ ಮಾಡ್ತಾರೆ. ಬದಲಾವಣೆ ಮಾಡಿದ್ರೆ ತಪ್ಪಾಗುವುದಿಲ್ಲ. ಬದಲಾವಣೆ ಮಾಡಿಲ್ಲ ಅಂದ್ರೂ ತಪ್ಪಾಗುವುದೂ ಇಲ್ಲ ಎಂದು ತಿಳಿಸಿದ್ರು.

ಸಚಿವ ಸಂಪುಟ ಪುನರ್ ರಚನೆ ವಿಚಾರದ ಬಗ್ಗೆ ರಿಯ್ಯಾಕ್ಟ್ ಮಾಡಿದ ಅವರು ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಗೊತ್ತಿಲ್ಲ ಎಂದರು. 60% ಭ್ರಷ್ಟಾಚಾರದ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ವಿಚಾರದ ಬಗ್ಗೆ ಮಾತನಾಡಿ ನಾವು ಆರೋಪ ಮಾಡಿದಾಗ ಗುತ್ತುಗೆದಾರರು ಮುಂದೆ ಬಂದಿದ್ದರು. ದಾಖಲೆ ಇದ್ದರೆ ಕೊಡಲಿ, ದಾಖಲೆ ಇಟ್ಟು ಮಾತಾಡಲಿ. ಭ್ರಷ್ಟಾಚಾರದ ಆರೋಪ ಮಾಡೋಕೆ ಈಗ ಚುನಾವಣೆ ಇಲ್ಲ. ಯಾವ ಗುತ್ತಿಗೆದಾರರ, ಯಾವ ಕೆಲಸ ಆಧಾರ ಕೊಡಲಿ. ಈಗ ಕುಮಾರಸ್ವಾಮಿ ವಿರುದ್ದವೂ ನಾನು ಆರೋಪ ಮಾಡಬಹುದಲ್ಲ. ಕೇಂದ್ರ‌ ಸಚಿವ ಕುಮಾರಸ್ವಾಮಿ ಅಲ್ಲಿ 60% ಭ್ರಷ್ಟಾಚಾರ ಮಾಡ್ತಿದ್ದಾರೆ ಅಂತ ನಾನೂ ಆರೋಪ ಮಾಡಬಹುದು. ಹೀಗೆ ಹೇಳಬೇಕು ಅಂದ್ರೆ ನಮಗೂ ದಾಖಲೆ ಬೇಕು. ಅವರು ಹೇಳಿದ ಕೂಡಲೇ ನಾವು ದೂರು ಕೊಡೊಲ್ಲ, ಜನರಿಗೆ ಗೊತ್ತಿದೆ.ದೇಶದಲ್ಲಿ ಭ್ರಷ್ಟಾಚಾರ ದೊಡ್ಡ ಸಮಸ್ಯೆ ಇದೆ. ಇದರ ಮೇಲೆ ಕ್ರಮ ಆಗಬೇಕು. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಯ್ತು. ಹಣ ವಾಪಾಸ್ ತೆಗೆದುಕೊಳ್ಳಲು ಕ್ರಮ ಆಯ್ತು.ಭ್ರಷ್ಟಾಚಾರ ರಹಿತವಾದ ವ್ಯವಸ್ಥೆ ದೇಶದಲ್ಲಿ ಇದೆ ಅಂತ ಹೇಳೋಕೆ ಆಗುತ್ತಾ?. ಭ್ರಷ್ಟಾಚಾರ ಆಗುವುದನ್ನ ತಡೆಯಬೇಕು, ಕ್ರಮ‌ತೆಗೆದುಕೊಳ್ಳಬೇಕು ಎಂದರು.