ಬೆಂಗಳೂರು; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಿಧ ನಾಯಕರು ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಮಾತನಾಡಿರುವ ಡಾ ಜಿ ಪರಮೇಶ್ವರ್ ರಾಜಭವನವನ್ನು ಒಂದು ರೀತಿಯಲ್ಲಿ ದುರುಪಯೋಗ ಮಾಡಿಕೊಳ್ತಿದ್ದಾರೆ.ಕಾನೂನು ಹೋರಾಟ ಹಾಗೂ ರಾಜಕೀಯ ಹೋರಾಟ ಎರಡನ್ನೂ ನಾವು ಮಾಡಬೇಕಿದೆ.ಕಾರ್ಯಕರ್ತರ ಮುಖಂಡರೂ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಬಂದಿದೆ.ಪಕ್ಷದ ಕಾರ್ಯಕರ್ತರು ಶಾಂತಿಯಿಂದ ಹೋರಾಟ ಮಾಡಬೇಕಿದೆ.ನಾವೇನೂ ಕಲ್ಲು ಹೊಡೆಯಬೇಕಿಲ್ಲ.ಲೋಕಾಯುಕ್ತಕ್ಕೇ ಕೊಡಬೇಕಾಗುತ್ತದೆ ಎಂದಿದ್ದಾರೆ.
ಇನ್ನು ಮಾತನಾಡಿದ ಅವರು ಕಾನೂನು ಹೋರಾಟಕ್ಕೆ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಬರ್ತಾರೆ.ಅವರು ನಮ್ಮ ಪಕ್ಷದ ಹಿರಿಯರು, ಕಾನೂನು ಹೋರಾಟಗಾರರು.ಇನ್ನೂ ಅವಶ್ಯಕತೆ ಬಿದ್ರೆ, ಸೀನಿಯರ್ ಕೌನ್ಸಿಲ್ ಅವರನ್ನೂ ಕರೆ ತರ್ತೀವಿ.ಅವರ ಮೂಲಕ ವಾದ ಮಾಡಿಸುತ್ತೇವೆ ಎಂದಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ ನಾಳೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದೇವೆ.ಇದು ಪ್ರಜಾಪ್ರಭುತ್ವದ ಕಗ್ಗೊಲೆ.ಇಲ್ಲ ಸಲ್ಲದ ಆರೋಪ ಮಾಡಲು ಹೊರಟಿದ್ದಾರೆ.ಹಾಗಾಗಿ ಮುಖಂಡರಿಗೆ ಕರೆ ಕೊಟ್ಟಿದ್ದಾರೆ.ಶಾಂತಿಯುತ ಪ್ರತಿಭಟನೆ ಇದು.ಕೆಲ ಕಿಡಿಗೇಡಿಗಳು ಕಲ್ಲೊಡೆಯೋ ಕೆಲಸ ಮಾಡ್ತಾರೆ.ಹಾಗಾಗಿ ಸ್ವಲ್ಪ ಹುಷಾರಾಗಿ ಪ್ರತಿಭಟನೆ ಮಾಡಿ ಅಂತ ಹೇಳಿದ್ದೇನೆ.ಗಾಂಧಿ ತತ್ವ ನಮ್ಮದು, ಈ ದೇಶಕ್ಕೆ ಒಂದು ಸಂದೇಶ ಕೊಡಬೇಕು. ಎಐಸಿಸಿ ಪ್ರತಿಭಟನೆ ಗೊತ್ತಿಲ್ಲ.ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ವರದಿ ಕೊಡಬೇಕು ಹಾಗಾಗಿ ಭೇಟಿ ಮಾಡಿದ್ದೆ ಅಷ್ಟೆ ಎಂದಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ ರಾಜ್ಯದ ರಾಜಕಾರಣದ ಇತಿಹಾಸದಲ್ಲಿ ನಿನ್ನೆ ಕರಾಳ ದಿನ .ಕಳೆದ ೧೦ ವರ್ಷದ ಬಿಜೆಪಿ ಆಡಳಿತ ದಲ್ಲಿ ನಾನಾ ರೀತಿ ದುರ್ಬಳಕೆ ಆಗುತ್ತಿದೆ.ವಿಪಕ್ಷ ಗಳ ಮೇಲೆ ದಬ್ಬಾಳಿಕೆಯ ಕಾರ್ಯಾಚರಣೆ ಆಗುತ್ತಿದೆ.ರಾಜ್ಯಪಾಲರ ಕಚೇರಿ ಕೂಡ ಬಿಜೆಪಿಯ ಕಚೇರಿಯಾಗಿದೆ.ರಾಜ್ಯಪಾಲರ ಪ್ರಾಸಿಕ್ಯುಷನ್ ನಲ್ಲಿಯೇ ಹಲವಾರು ಲೋಪಗಳಿವೆ ದೋಷಗಳಿವೆ.ಕ್ಯಾಬಿನೆಟ್ ನಿಂದ ಹೋದ ನಿರ್ಣಯಕ್ಕೆ ನಮಗೆ ರಾಜ್ಯಪಾಲರ ಕಡೆಯಿಂದ ಕೇವಲ ಎರಡು ಪತ್ರದ ಉತ್ತರ ಬಂದಿದೆ.ಸಿದ್ದರಾಮಯ್ಯ ಮೇಲೆ ಎಳ್ಳಷ್ಟೂ ಆಪಾದನೆ ಕಂಡು ಬರುತ್ತಿಲ್ಲ.ಕಳೆದ ಸರ್ಕಾರದಲ್ಲಿ ಪಿಎಸ್ಐ ಹಗರಣದಲ್ಲಿ ಬಿಜೆಪಿಯವರೇ ಆಯೋಗ ಮಾಡ್ತಾರೆ. ರಾಜ್ಯಪಾಲರು ಪ್ರಾಸಿಕ್ಯುಷನ್ ಗೆ ತಮ್ಮ ಬಳಿ ಸೂಕ್ತ ಸಾಕ್ಷಿ ದಾಖಲೆ ಇದೆ ಎಂದು ಹೇಳಿದ್ದಾರೆ.ಯಾರು ದಾಖಲೆ ಒದಗಿಸಿರುವುದು ಎಂಬುದನ್ನು ರಾಜ್ಯಪಾಲರು ಸ್ಪಷ್ಟಪಡಿಸುತ್ತಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕ ಎ ಮಂಜು ಮಾತನಾಡಿ ಸಿಎಂ ಬೇರೆಯವರ ನೈತಿಕತೆ ಬಗ್ಗೆ ಮಾತಾಡ್ತಾರೆ.ಈಗ ಅವರೇ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕು.ಕುಮಾರಸ್ವಾಮಿ ವಿರುದ್ಧ ಪ್ರಸಿಕ್ಯೂಶನ್ ಅನುಮತಿ ಕೊಡದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಅವರ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಇದೆ ಹಾಗಾಗಿ ಕೊಟ್ಟಿಲ್ಲ.ಯಡಿಯೂರಪ್ಪ ಅವರ ವಿರುದ್ದ ಪ್ರಾಸಿಕ್ಯುಷನ್ ಕೊಟ್ಟಾಗ ಯಾರ ಸರ್ಕಾರ ಇತ್ತು.ಅವಾಗ ಅನುಮತಿ ಕೊಟ್ಟಿರಲಿಲ್ವಾ?ಯಡಿಯೂರಪ್ಪ ಅವರ ಚೆಕ್ ಪ್ರಕರಣದ ಹಾಗೆ ಇವರದ್ದು ೧೪ ಸೈಟ್ ಗಳನ್ನ ಪಡೆದಿದ್ದು ಕಣ್ಮುಂದೆ ಇದೆ.೬೨ ಕೋಟಿಯನ್ನ ಇವರೇ ಕೇಳಿದ್ದಾರೆ.ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು.ಸರ್ಕಾರವನ್ನ ಅಸ್ಥಿರ ಮಾಡುವಂತಹ ಪ್ರಶ್ನೇಯೇ ಇಲ್ಲಾ.ಕುಮಾರಸ್ವಾಮಿ ಅವರು ಕೂಡ ಆ ರೀತಿ ಮಾಡುವ ಅಗತ್ಯವಿಲ್ಲ,ಎಲ್ಲಾ ಅವರ ಭ್ರಮೆ ಎಂದಿದ್ದಾರೆ.
ಪ್ರಿಯಾಂಕ ಖರ್ಗೆ ಮಾತನಾಡಿ ಬಿಜೆಪಿ ರಾಜ್ಯ ಕಚೇರಿ ಮಲ್ಲೇಶ್ವರಂ ನಲ್ಲಿ ಇಲ್ಲ.ರಾಜಭವನಕ್ಕೆ ಶಿಫ್ಟ್ ಆಗಿದೆ.ಬಿಜೆಪಿ ಅವರು ಎಲ್ಲಲ್ಲಿ ಅಸಮರ್ಥರಿದ್ದಾರೋ ಎಲ್ಲೆಲ್ಲಿ ನೆಲಕಚ್ಚಿದ್ದಾರೋ ಅಲ್ಲಿ ರಾಜಭವನವನ್ನ ಬಳಸಿಕೊಳ್ತಾ ಇದ್ದಾರೆ.ಕಾಂಗ್ರೆಸ್ ನವರು ಬಿಜೆಪಿ ಗೆ ಹೋಗಲು ರೆಡಿ ಇದ್ದಾರೆ ಅಂತ ಬಿಜೆಪಿಯವರು ಹೇಳಿ ಒಂದು ವರ್ಷ ಆಯ್ತು.ಇದು ಆಗಲಿಲ್ಲ ನಂತರ ಐಟಿ ಬಿಟ್ರು.೭೦ ಜನ ರೆಡಿ ಇದ್ದಾರೆ ಬಾಂಬೆ ಲಿ ಮೀಟಿಂಗ್ ಮಾಡಿದ್ರು ಅಂತ ಹೇಳಿದ್ರು.ಈಗ ಈಡಿ ಯಿಂದ ಬೆದರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಈ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಅವರು ಅಡ್ವೋಕೇಟ್ ಕೆಲಸ ಮಾಡಿದ್ರೊ ಮಾಡಲ್ಲಿವೊ ಕೇಳೊಕೆ ಬಯಸ್ತಿನಿ.ನನ್ನ ಮೇಲೆ ಪ್ರಾಸಿಕ್ಯುಷನ್ ಅವಶ್ಯಕತೆ ಏನಿದೆ?ಈ ಡ್ರಾಮ ಎಷ್ಟು ದಿನದಿಂದ ಮಾಡ್ತಿದ್ದಿರಾ..? ೨೦೧೧ ರ ಬಿಜೆಪಿ ಸರ್ಕಾರ ಆಡಳಿತದಲ್ಲಿ ಏನಿದ್ರು,ನಾನು ಮೈಸೂರು ಸಭೆಯಲ್ಲೂ ಹೇಳಿದ್ದಿನಿ.ಬಿಜೆಪಿ ಮತ್ತು ನಮ್ಮ ಸಂಘರ್ಷದ ಅವತ್ತಿನ ದಿನ ಏನಿದೆ.೭೯ ಶಾಸಕರನ್ನಿಟ್ಟುಕೊಂಡಿದ್ದ ವಿರೋಧ ಪಕ್ಷದ ನಾಯಕನಿಗೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡೋದಕ್ಕೆ ಸಾಧ್ಯವಾಗಿಲ್ಲ.ಅವತ್ತು ದಿನ ಬೆಳಗ್ಗೆ ಎದ್ರೆ ಕಾಯೋರು ಕುಮಾರಸ್ವಾಮಿ ಇವತ್ತು ಏನು ದಾಖಲೆ ಬಿಡುಗಡೆ ಮಾಡ್ತಾರೆ ಅಂತಾ? ಈ ರಾಜ್ಯದ ಸಂಪತನ್ನ ಉಳಿಸಿಕೊಳ್ಳಬೇಕೆಂದು ಅವತ್ತಿನ ನನ್ನ ರಾಜ್ಯದ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ೨೨ ಶಾಸಕರನ್ನ ಇಟ್ಟುಕೊಂಡು ಜೆಡಿಎಸ್ ಹೋರಾಟ ಮಾಡ್ತು. ಅದರ ಪ್ರತಿಫಲ ನನಗೆ ದೊರಕಿದ್ದು.ಅವತ್ತಿನ ಸರ್ಕಾರದಲ್ಲಿ ನಾಲ್ಕು ಕೇಸ್ ಗಳನ್ನ ನನ್ನ ಮೇಲೆ ದಾಖಲಿಸಿದ್ರು ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ಅವರನ್ನು ಸಿ.ಎಂ. ಇಬ್ರಾಹಿಂ ಭೇಟಿ ಮಾಡಿದ್ರು. ಬಳಿಕ ಮಾತನಾಡಿದ ಅವರು ಭಾರತ ಸರ್ಕಾರ ಕರ್ನಾಟಕದ ಜನರ ಸ್ವಾಭಿಮಾನ ಕೆಣಕಿದೆ.ಸುಪ್ರೀಂ ಕೋರ್ಟ್ ತೀರ್ಪನ್ನ ರಾಜ್ಯಪಾಲರು ಉಲ್ಲಂಘಿಸಿದ್ದಾರೆ.ಕುಮಾರಸ್ವಾಮಿ, ಯಡಿಯೂರಪ್ಪ ಮೇಲೆ ಪ್ರಕರಣಗಳು ಇವೆ.ಅವರ ಮೇಲೆ ಪ್ರಾಸಿಕ್ಯೂಷನ್ ಗೆ ಏಕೆ ಅನುಮತಿ ಕೊಟ್ಟಿಲ್ಲ.ಯಾವುದೇ ಲೆಕ್ಕಕ್ಕೆ ಬಾರದ ಮನುಷ್ಯ, ಸಾಮಾನ್ಯ ಮನುಷ್ಯನ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೇನೆ.ಅವರು ಟಗರು, ಧೈರ್ಯ ಹೇಳಿದ್ದೇನೆ.ಅವರು ಜೊತೆಯಲ್ಲಿ ನಾನು ಇರಲಿಲ್ಲ, ಈಗ ಅವರ ಜೊತೆಯಲ್ಲಿ ಇರ್ತೀನಿ.ರಾಜ್ಯಪಾಲರು ಇವರ ಮನೆ ಕ್ಲರ್ಕಾ ?ಅಮಿತ್ ಷಾ ಮನೆ ಮುಂದೆ ಹೋಗಿ ಅಪ್ಪ-ಮಗ ಏಕೆ ಕುಳಿತಿದ್ರು?ಕುಮಾರಸ್ವಾಮಿ ಸುಪ್ರೀಂಕೋರ್ಟ್ ಗೆ ಹೋಗಿ ಅಂತಾರೆ.ಈಗಲೂ ಅಬ್ರಾಹಂಗೆ ರಾಜ್ಯಪಾಲರು ಹಂಗೆ ಹೇಳಬೇಕಿತ್ತು.ಕುಮಾರಸ್ವಾಮಿ ಅವರದ್ದು ದಿನಾ ತೆಗೆದು ಇಡ್ತೀನಿ.ನಾನು ಹಳೆ ಭೂ ಕೈಲಾಸ ನಾಟಕ ಬರೆದವನು, ಎಲ್ಲ ಗೊತ್ತಿದೆ.ಬಸ್ ಸ್ಟ್ಯಾಂಡ್ ಬಸವಿಯರು ಪತಿವ್ರತೆ ಪಾಠ ಹೇಳುವಂಗೆ ಆಗಿದೆ ಎಂದಿದ್ದಾರೆ.