ಮನೆ Latest News ಬೆಂಗಳೂರಿನಲ್ಲಿ ಮಗುವಿನಲ್ಲಿ ಹೆಚ್ಎಂಪಿವಿ ಪತ್ತೆ ; ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದ ಆರೋಗ್ಯ ಸಚಿವ...

ಬೆಂಗಳೂರಿನಲ್ಲಿ ಮಗುವಿನಲ್ಲಿ ಹೆಚ್ಎಂಪಿವಿ ಪತ್ತೆ ; ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

0

ಬೆಂಗಳೂರಿನಲ್ಲಿ ಮಗುವಿನಲ್ಲಿ ಹೆಚ್ಎಂಪಿವಿ ಪತ್ತೆಯಾಗಿದ್ದು ಯಾರೂ ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಈ ವೈರಸ್ ಹೊಸದೇನಲ್ಲ. ಈ ವೈರಸ್ ನಿಂದ ಉಸಿರಾಟದ ಸಮಸ್ಯೆ ಸಾಧ್ಯತೆ ಇದೆ. ಆ ಮಗು ಎಲ್ಲೂ ಓಡಾಡಿಲ್ಲ. ಇಮ್ಯೂನಿಟಿ ಕಡಿಮೆ ಇರುವ ಮಕ್ಕಳಿಗೆ ಬರುತ್ತದೆ. ಚೈ‌ನಾ ವೇರಿಯಂಟ್ ಗೂ ಇದಕ್ಕೂ ಸಂಬಂಧ ಇಲ್ಲ. ಮ್ಯೂಟೇಷನ್ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ಕ್ರಮದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಇದು ಬಹಳ ವರ್ಷಗಳಿಂದ ಇದೆ. ಗಾಬರಿ ಪಡುವ ಅವಶ್ಯಕತೆ ಇಲ್ಲ.ಜನ ಭಯ ಪಡುವ ಅವಶ್ಯಕತೆ ಇಲ್ಲ.ಕೇಂದ್ರ, ಐಸಿಎಂಆರ್ ಅಭಿಪ್ರಾಯ ಪಡೆದು ಕ್ರಮದ ಬಗ್ಗೆ ಚಿಂತನೆ ಮಾಡುತ್ತೇವೆ. ಸ್ಯಾಂಪಲ್ ಪುಣೆ ಲ್ಯಾಬ್ ಗೆ ಕಳುಹಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಸಹಜ ಎಚ್ಚರಿಕೆ ಬೇಕಿದೆ. ಇದು ಹಳೆಯ ವೈರಸ್. 2001 ರಲ್ಲಿ ಮೊದಲ ಬಾರಿಗೆ ಪತ್ತೆ ಹಚ್ಚಲಾಗಿದೆ. ನಮ್ಮಲ್ಲೂ ಈ ವೈರಸ್ ಇದೆ. ಇಮ್ಯೂನಿಟಿ ಕಡಿಮೆ ಇರುವ ಮಕ್ಕಳಿಗೆ ತಗಲುವ ಸಾಧ್ಯತೆ ಇದೆ ಎಂದಿದ್ದಾರೆ.

ಕೇವಲ 1% ತೀವ್ರತೆ ಇರುವ ಬಗ್ಗೆ ಮಾಹಿತಿ ಇದೆ. ಐಸಿಎಂಆರ್, ಕೇಂದ್ರದಿಂದ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲಾ ಕಡೆ ಟೆಸ್ಟ್ ಮಾಡಿದರೂ ಮಕ್ಕಳು, ವಯಸ್ಸಾದವರಲ್ಲೂ ಸಿಗಬಹುದು. ಎಚ್ಚರಿಕೆ ವಹಿಸಬೇಕಿದೆ. ಮಾರ್ಗಸೂಚಿ ಈಗಾಗಲೇ ನೀಡಿದ್ದೇವೆ ಎಂದ ಅವರು  ಪರ್ಸೆಂಟೇಜ್ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ ಬಗ್ಗೆ ಇದೇ ವೇಳೆ ಪ್ರತಿಕ್ರಿಯಿಸಿ ಕುಮಾರಸ್ವಾಮಿ ಆರೋಪದ ಜೊತೆ ಆಧಾರ ಇಟ್ಟರೆ ಒಳ್ಳೆಯದು. ಸರ್ಕಾರ ಒಳ್ಳೆಯ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಸೋತ ನಿರಾಸದಾಯಕ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಪ್ರಧಾನಿಗಳು ಅವರಿಗೆ ಒಳ್ಳೆಯ ಅವಕಾಶ ಕೊಟ್ಟಿದ್ದಾರೆ. ನಮ್ಮಲ್ಲಿ ಬರುವ ಬಂಡವಾಳಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಈ ಬಗ್ಗೆ ಕುಮಾರಸ್ವಾಮಿ ಅವರು ಸ್ಪಷ್ಟನೆ ಕೊಡಲಿ ಎಂದಿದ್ದಾರೆ

ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ ಎಂಬ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಡೆಯೂ ಗಮನ ಕೊಟ್ಟಿದ್ದೇವೆ. ಹಾಗೇ ನೋಡುವುದಾದರೆ ಎಲ್ಲಾ ಶಾಸಕರಿಗಿಂತ ಹೆಚ್ಚು ಅನುದಾನ ಅವರೇ ತೆಗೆದುಕೊಂಡಿದ್ದಾರೆ. ಅನುದಾನ ತೆಗೆದುಕೊಂಡು ಹೀಗೆ ಮಾತನಾಡುವುದು ಸರಿಯಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಎಲ್ಲರ ವೈಯಕ್ತಿಕ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದು ತಿಳಿಸಿದ್ರು.

ನಾಳೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ ನಾವು ಮಾತುಕತೆಗೆ ಸಿದ್ದ ಇದ್ದೇವೆ. ಆಶಾ ಕಾರ್ಯಕರ್ತೆಯರು ಬಂದರೆ ಮಾತುಕತೆ ಮಾಡುತ್ತೇವೆ. ಪ್ರತಿಭಟನೆ ಎಲ್ಲರ ಹಕ್ಕು. ಹಾಗಂತ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು. ಅವರ ಕೆಲಸದ ಜೊತೆಗೆ ಬೇಡಿಕೆ ಇಡಲಿ. ಅವರು ಹಿಂದೆಯಿಂದಲೂ ಬೇಡಿಕೆ ಇಟ್ಟಿದ್ದಾರೆ. ಅದೆಲ್ಲವನ್ನೂ ಸರ್ಕಾರ ಪರಿಶೀಲನೆ ಮಾಡುತ್ತಿದೆ. ಸರ್ಕಾರದ ಮಟ್ಟದಲ್ಲಿ ಆಗುವಂತಹ ಕೆಲಸ ಇದ್ದರೆ ಆಗುತ್ತದೆ ಎಂದಿದ್ದಾರೆ.