ಮನೆ Latest News ಜಯನಗರ ಕ್ಷೇತ್ರದಲ್ಲಿ ಅನುದಾನದ ಕೊರತೆಯಿಂದಾಗ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಜಯನಗರ ಕ್ಷೇತ್ರದ ನಾಗರೀಕ ಸಂಘ ಸಂಸ್ಥೆಗಳ...

ಜಯನಗರ ಕ್ಷೇತ್ರದಲ್ಲಿ ಅನುದಾನದ ಕೊರತೆಯಿಂದಾಗ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಜಯನಗರ ಕ್ಷೇತ್ರದ ನಾಗರೀಕ ಸಂಘ ಸಂಸ್ಥೆಗಳ ಒಕ್ಕೂಟದಿಂದ ಸಭೆಯಲ್ಲಿ ನಟಿ ತಾರಾ ಅನುರಾಧ ಹೇಳಿಕೆ

0

ಬೆಂಗಳೂರು;  ಜಯನಗರ ಕ್ಷೇತ್ರದಲ್ಲಿ ಅನುದಾನದ ಕೊರತೆಯಿಂದಾಗ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಜಯನಗರ  ಕ್ಷೇತ್ರದ ನಾಗರೀಕ ಸಂಘ ಸಂಸ್ಥೆಗಳ ಒಕ್ಕೂಟದಿಂದ ಸಭೆಯಲ್ಲಿ ನಟಿ ತಾರಾ ಅನುರಾಧ ಹೇಳಿದ್ದಾರೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ತೆರಿಗೆ ನಮ್ಮ ಹಕ್ಕು ಕೇಳೋಕೆ ಚೆನ್ನಾಗಿದೆ. ಕಷ್ಟ ಪಟ್ಟು ದುಡಿದ‌ ಹಣವನ್ನ ಸರ್ಕಾರಕ್ಕೆ ನೀಡುತ್ತಿದ್ದೇವೆ. ನಮ್ಮ ಹಣಕ್ಕೆ ನಾವು ಲೆಕ್ಕ ಹಾಕುತ್ತೇವೆ. ಇದೇ ರೀತಿ ನಾವು ತೆರಿಗೆ ಕಟ್ಟುತ್ತೇವೆ . ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯ ದ ಮೂಲಕವೂ ನಾವು ಲಾಭ ಪಡೆಯುತ್ತೇವೆ. ಆದ್ರೆ ಅದು ನಮ್ಮ ತೆರಿಗೆ‌ ಹಣದಿಂದ ಅಭಿವೃದ್ಧಿ ಆಗಬೇಕು.ಮೂಲ ಸೌಕರ್ಯ ವನ್ನು ನಮ್ಮ ತೆರಿಗೆ ಹಣದಿಂದ ಆಗುತ್ತದೆ. ಅದರ ಅನುಕೂಲ ಆಗುತ್ತಿದ್ಯಾ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಕುಟುಂಬ ಕೂಡ ಸಾರ್ವಜನಿಕ ಜೀವನದಲ್ಲಿದೆ. ನಾವು ನಮ್ಮ ಸೇವಕರನ್ನು ಆರಿಸುತ್ತೇವೆ. ರಾಮಮೂರ್ತಿ ಅವರು ನಮ್ಮ ಕ್ಷೇತ್ರದ ಶಾಸಕರು. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಾರೆ. ಆದ್ರೆ ಡಿಸಿಎಂ ಡಿಕೆ ಶಿವಕುಮಾರ್ ಅಣ್ಣ ನೀರಿನ ಬಿಲ್ ಜಾಸ್ತಿ ಮಾಡಿಲ್ಲ ಎನ್ನುತ್ತಿದ್ದಾರೆ ಜಯನಗರ ಕ್ಷೇತ್ರಕ್ಕೆ ಶಕ್ತಿ ಇದೆ. ಎಲ್ಲಾ ಧರ್ಮದ ಎಲ್ಲ ಜನರೂ ಕೂಡ ಇದ್ದಾರೆ. ಅಭಿವೃದ್ಧಿ ಕೆಲಸ ಆಗಬೇಕು. ನಮ್ಮ ತೆರಿಗೆ ಹಣಕ್ಕೆ ಏನು ಕೆಲಸ ಆಗುತ್ತಿದೆ ಅನ್ನೋ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ಜಯನಗರ ಕ್ಷೇತ್ರದಲ್ಲಿ ಅನುದಾನದ ಕೊರತೆಯಿಂದಾಗ ಅಭಿವೃದ್ಧಿ ಸ್ಥಗಿತ ವಾಗಿದೆ. ಇಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಚಲಾಯಿಸಲು ಒಕ್ಕೂಟ ಮಾಡಿದ್ದಾರೆ. ರಾಮಮೂರ್ತಿ ಅವರ ಅಳಲು ಸರ್ಕಾರ ಕೇಳಬೇಕು. ಯಾಕಂದ್ರೆ ನಮ್ಮ ಕ್ಷೇತ್ರದಿಂದ ಹೆಚ್ಚು ತೆರಿಗೆ ಸರ್ಕಾರಕ್ಕೆ ಹೋಗುತ್ತಿದೆ. ಹಾಗಾಗಿ ಅಭಿವೃದ್ಧಿ ಕೆಲಸಗಳನ್ನ ಮಾಡಿ , ಆ ನಿಟ್ಟಿನಲ್ಲಿ ಅನುದಾನ ನೀಡಿ ಎಂದು ಮನವಿ ಸಲ್ಲಿಸುತ್ತೇವೆ. ಇವತ್ತು ನಾವು ನಿರ್ಣಯ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಈ ಒಕ್ಕೂಟದಿಂದ ನಮಗೆ ನ್ಯಾಯ ಸಿಗಬೇಕುಬೆಂಗಳೂರಿನ ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರ; ಜಯನಗರ ಕ್ಷೇತ್ರದ ನಾಗರೀಕ ಸಂಘ ಸಂಸ್ಥೆಗಳ ಒಕ್ಕೂಟದಿಂದ ಸಭೆ

ಬೆಂಗಳೂರಿನ ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರಕ್ಕೆ ಸಂಬಂಧಪಟ್ಟಂತೆ ಜಯನಗರ ಕ್ಷೇತ್ರದ ನಾಗರೀಕ ಸಂಘ ಸಂಸ್ಥೆಗಳ ಒಕ್ಕೂಟದಿಂದ ಸಭೆ ನಡೆಯಿತು. ಜಯನಗರದ ಜೆಸಿಸಿಎ ಕ್ಲಬ್ ನಲ್ಲಿ  ಜಯನಗರ ಶಾಸಕ ಸಿ ಕೆ ರಾಮಮೂರ್ತಿ ನೇತೃತ್ವದಲ್ಲಿ ಸಭೆ ನಡೆಯಿತು.  ಸಭೆಯಲ್ಲಿ ಕ್ಷೇತ್ರದ ಮುಖಂಡರು, ಸಂಘ ಸಂಸ್ಥೆಗಳ ಅಧ್ಯಕ್ಷರು, ನಟಿ ತಾರಾ ಅನುರಾಧ ಭಾಗಿಯಾಗಿದ್ದರು.ನಮ್ಮ ತೆರಿಗೆ ನಮ್ಮ ಹಕ್ಕು ಹೆಸರಿನಡಿ ಸಭೆ ಆಯೋಜನೆ ಮಾಡಲಾಗಿತ್ತು.

ಇನ್ನು ಸಭೆಯನ್ನು  ಉದ್ದೇಶಿಸಿ ಮಾತನಾಡಿದ ಶಾಸಕ ಸಿ ಕೆ ರಾಮಮೂರ್ತಿ  ನಮ್ಮ ಕ್ಷೇತ್ರದ ಜನ ಯಾಕೆ ಹೋರಾಟ ಮಾಡುತ್ತಿಲ್ಲ ಎಂದು ಕೇಳಿದ್ದಾರೆ. ಎಲ್ಲಾ ಕಡೆ ಪ್ರಶ್ನೆ ಎತ್ತುತ್ತಿದ್ದಾರೆ, ಸಪೋರ್ಟ್ ಮಾಡುತ್ತಿದ್ದಾರೆ. ನಾವು ರಸ್ತೆಗೆ ಇಳಿಯುವ ಹೋರಾಟ ಮಾಡುತ್ತಿಲ್ಲ. ಆದ್ರೆ ನಮ್ಮ ನೋವು ತೋಡಿಕೊಳ್ಳುತ್ತಿದ್ದೇವೆ. ಕ್ಷೇತ್ರದ ಜನರ ಸಮಸ್ಯೆ ಕುರಿತು ಇಲ್ಲಿ ನಾವು ಸೇರಿದ್ದೇವೆ. ಜನ ಕೂಡ ಅವರ ಸಮಸ್ಯೆ ಹೇಳುತ್ತಾರೆ. ಅದೇ ರೀತಿ ನಾನು ಕೂಡ ನನ್ನ ಸಮಸ್ಯೆ ಹೇಳುತ್ತೇನೆ ಎಂದರು.

62 ಅಸೋಸಿಯೇಷನ್ ಸೇರಿ ಎಲ್ಲರೂ ಸಭೆ ಮಾಡಿದ್ದೇವೆ. ನಾವು ನಿರ್ಣಯ ತೆಗೆದುಕೊಂಡಿದ್ದೇವೆ. ಹಕ್ಕೋತ್ತಾಯ ಮಾಡುತ್ತೇವೆ.  ನಮ್ಮ ಉದ್ದೇಶ, ಸರ್ವರಿಗೆ ಸಮಪಾಲು ಅದರಂತೆ ಜಯನಗರ ಕ್ಕೆ ೧೦ ಕೋಟಿ ಅನುದಾನ ಬಿಡುಗಡೆ ಮಾಡಬೇಕು. ನಾವು ಮನವಿ ಮಾಡುತ್ತೇವೆ. ಇದು ಮೊದಲನೇ ಹಂತದ ಹೋರಾಟ. ನಾವು ಮನವಿ ಸಲ್ಲಿಸುತ್ತೇವೆ, ಅವರು ಏನ್ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ನೋಡಬೇಕು. ಡಿಸಿಎಂ ಡಿಕೆ ಶಿವಕುಮಾರ್ ಅವರುಗೆ ನಾನು ವೈಯಕ್ತಿಕ ವಾಗಿ ಮನವಿ ಮಾಡುತ್ತೇವೆ. ಅವರು ಸೀನಿಯರ್ ಇದ್ದಾರೆ. ಅಭಿವೃದ್ಧಿ ಆಗಬೇಕು, ಆದ್ರೆ ಎಲ್ಲರಿಗೂ ಅನುದಾನ ಕೊಟ್ಟು ನಮಗೆ ಮಾತ್ರ ಕೊಟ್ಟುಲ್ಲ ಅಂದ್ರೆ ಹೇಗೆ?. ಬ್ರ್ಯಾಂಡ್ ಬೆಂಗಳೂರು ಹೇಗಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಕ್ಷೇತ್ರದಲ್ಲಿ ಹಾಳಾದ ರಸ್ತೆ ಇದೆ, 4ನೇ ಬಡಾವಣೆ ಕಾಂಪ್ಲೆಕ್ಸ್ ಸ್ಥಿತಿ ಹೇಗಿದೆ? ನಾನು ವೈಯಕ್ತಿಕ ವಾಗಿ ನಿಮಗೆ ಏನೂ ಕೂಡ ಮಾತಾಡಿಲ್ಲ. ನಾನು ಮಾತನಾಡಿದ್ದು ಏನೂ ಇಲ್ಲ. ನಾನು ಜಯನಗರಕ್ಕೆ ನಿಮ್ಮನ್ನು ಕರೆದರೂ ನೀವು ಬಂದಿಲ್ಲ. ಹಾಗಾಗಿ ಯಾರನ್ನ ಕೇಳಬೇಕು. ನೀವು ಬೆಂಗಳೂರು ನಗರಾಭಿವೃದ್ಧಿ ಸಚಿವರು ಅದಕ್ಕೆ ಕೇಳಿದ್ದು. ಕ್ಷೇತ್ರದಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದರು.

1೦ ಕೋಟಿ ಅನುದಾನವನ್ನ ತಕ್ಷಣವೇ ಬಿಡುಗಡೆ ಮಾಡಬೇಕು. ನಾನು ಅವರನ್ನ ಭೇಟಿ ಮಾಡುತ್ತೇನೆ. ಅವರು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಇದ್ದಾರೆ. ಎಲ್ಲ ಒಕ್ಕೂಟ ಸೇರಿ ಭೇಟಿ ಮಾಡಿ ಮನವಿ ಮಾಡುತ್ತೇವೆ. ಮತ್ತೊಂದು ಸಭೆ ಕರೆಯುತ್ತೇವೆ. ಮತದಾರರ ಮುಂದೆ ನಾನು ತಲೆಬಾಗಬೇಕು. ಡಿಕೆ ಶಿವಕುಮಾರ್ ಅವರು ನಮಗೆ ತಗ್ಗಿ ಬಗ್ಗಿ ಇರಬೇಕು ಎಂದಿದ್ದಾರೆ. ನಾವು ಅದೇ ರೀತಿ ನಡೆದುಕೊಳ್ಳುತ್ತೇವೆ. ನಾನು ಯಾರಿಗೆ ತಗ್ಗಿ ಬಗ್ಗಿ ನಡೀಬೇಕು ಎಂದು ಹೇಳಿದ್ದೇವೆ. ಅವರ ಮುಂದೆಯೂ ಹಾಗೇ ಇರುತ್ತೇವೆ ಎಂದಿದ್ದಾರೆ. ಡಿಸಿಎಂ ಅವರು ದೊಡ್ಡವರು ನಾವು ಚಿಕ್ಕವರು. ಹೀಗಾಗಿ ಅವರು ನಮಗೆ ಅನುದಾನ ನೀಡಲಿ ಎಂದು ಮನವಿ ಮಾಡುತ್ತೇವೆ ಎಂದರು.