ಮನೆ Latest News ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದೆ: ಬೆಂಗಳೂರಿನಲ್ಲಿ ಮೈಸೂರು ಸಂಸದ ಯದವೀರ...

ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದೆ: ಬೆಂಗಳೂರಿನಲ್ಲಿ ಮೈಸೂರು ಸಂಸದ ಯದವೀರ ಒಡೆಯರ್ ಹೇಳಿಕೆ

0

ಬೆಂಗಳೂರು; ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದೆ ಎಂದು ಬೆಂಗಳೂರಿನಲ್ಲಿ ಮೈಸೂರು- ಕೊಡಗು ಸಂಸದ ಯದವೀರ ಒಡೆಯರ್ ಹೇಳಿದ್ದಾರೆ.

ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ವಾಪಸ್ ವಿಚಾರದ ಬಗ್ಗೆ ಮಾತನಾಡಿದ ಅವರು  ಪ್ರಾಧಿಕಾರ ರಚನೆ ಬಗ್ಗೆ ವಿರೋಧ ಮಾಡಿದ್ದೇವೆ‌. ಧಾರ್ಮಿಕ ಭಾವನೆಗೆ ಇದು ಧಕ್ಕೆ ತರಲಿದೆ. ನಮ್ಮ ತಂದೆ ಇದ್ದಾಗಿನಿಂದಲೂ ಇದಕ್ಕೆ ವಿರೋಧವಿದೆ.ಈಗ ನಮ್ಮ‌ ತಾಯಿ ಹೋರಾಟ ಮಾಡುತ್ತಿದ್ದಾರೆ. ಇದು ಸರಿ ಇಲ್ಲ ಅಂತ ನಾವು ಮೊದಲಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ರಾಜ್ಯಪಾಲರು ಏನು ಕೇಳಿದ್ದಾರೆ ಎಂಬುದು ನಮ್ಮ‌ ಗಮನದಲ್ಲಿಲ್ಲ. ಕಾನೂನು ಹೋರಾಟ ನಡೆಯುತ್ತಿದೆ.ಆ ಜಾಗ ದೇವಸ್ಥಾನ ಶಕ್ತಿ ಇರುವ ಸ್ಥಳ. ತಾಯಿ ಚಾಮುಂಡೇಶ್ವರಿ ಜೊತೆಗೆ ಎಲ್ಲವೂ ಇರಬೇಕು ಎನ್ನುವುದು ನಮ್ಮ ಭಾವನೆ.ರಾಜ್ಯಪಾಲರು ಏನು ಮಾಡುತ್ತಾರೆ ನೋಡೋಣ ಎಂದಿದ್ದಾರೆ.

ಇದೇ ವೇಳೆ ಚಾಮರಾಜ ಕ್ಷೇತ್ರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಶಾಸಕ ನಾಗೇಂದ್ರ ನಡುವೆ ಟಿಕೆಟ್ ಫೈಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ ಪಕ್ಷ ಏನು ನಿರ್ಧಾರ ಮಾಡಲಿದೆಯೋ ಅದಕ್ಕೆ ನನ್ನ ಬೆಂಬಲ ಇದೆ. ನನ್ನದೇ ಉದಾಹರಣೆ ತೆಗೆದುಕೊಳ್ಳಿ. ನನ್ನ ಆಯ್ಕೆ ಪಕ್ಷದಿಂದ ಆಗಿದ್ದು. ಪಕ್ಷ ಅಭ್ಯರ್ಥಿ ಆಯ್ಕೆ ಮಾಡಲಿದೆ. ನಾವು ಪಕ್ಷ ಆಯ್ಕೆ ಮಾಡುವವರಿಗೆ ಬೆಂಬಲ ನೀಡುತ್ತೆವೆ ಎಂದಿದ್ದಾರೆ.