ಮನೆ Latest News ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್ ಗೆ ಡಿಸಿಎಂ ಡಿ ಕೆ ಶಿವಕುಮಾರ್ 15 ದಿನಗಳ ಗಡುವು

ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್ ಗೆ ಡಿಸಿಎಂ ಡಿ ಕೆ ಶಿವಕುಮಾರ್ 15 ದಿನಗಳ ಗಡುವು

0

ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವೊಂದು ರಸ್ತೆಗಳು ಇವು ರಸ್ತೆಯೋ ಅಲ್ಲ ಗುಂಡಿಯೋ ಎಂಬಷ್ಟು ಮಟ್ಟಿಗೆ ಗುಂಡಿಗಳಿಂದ ತುಂಬಿ ಹೋಗಿವೆ. ಇದೀಗ ಇಂತಹ  ಗುಂಡಿಗಳಿಗೆ ಮುಕ್ತಿ ನೀಡುವ ಸಲುವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದಾರೆ. ಬಿಬಿಎಂಪಿ ವ್ಯಾಪ್ತಿಯ ರಸ್ತೆಗುಂಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು  ಡಿಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ರಸ್ತೆಗುಂಡಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ.ಈ ಬಗ್ಗೆ ತುರ್ತು ಗಮನ ಹರಿಸಬೇಕು. ಈಗಾಗಲೇ ರಸ್ತೆ ಗುಂಡಿ ಗಮನ ಎನ್ನುವ ಆಪ್ ಮೂಲಕ, ಸಾರ್ವಜನಿಕರು ರಸ್ತೆ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ.ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ.ಮಳೆಗಾಲದ ಕಾರಣಕ್ಕೂ ರಸ್ತೆ ಗುಂಡಿಗಳು ಬೀಳುತ್ತಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಆದ್ಯ ಗಮನ ಹರಿಸಬೇಕು ಎಂದಿದ್ದಾರೆ.

ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನೀಡಿರುವ 15 ದಿನಗಳ ನಂತರ,ಇಡೀ ಬೆಂಗಳೂರು ನಗರವನ್ನು ತಾವೇ ಸ್ವತಃ ನಾನೇ  ಪ್ರದಕ್ಷಿಣೆ ಹಾಕುತ್ತೇನೆ. ನಗರದ ಪ್ರತಿ ರಸ್ತೆಗಳನ್ನು ಪರಿಶೀಲನೆ ಮಾಡುತ್ತೇನೆ.ಅಷ್ಟ್ರಲ್ಲಿ ಕೆಲಸ ಮುಗಿಸಿರಬೇಕು ಎಂದು ಬಿಬಿಎಂಪಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೇ ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು; ಬೇಕರಿ – ಕಾಂಡಿಮೆಂಟ್ಸ್‌ ಗಳಲ್ಲಿ  ಸಿಗರೇಟ್ ಮಾರಾಟಕ್ಕೆ ಬಿಬಿಎಂಪಿ ಕೊಕ್; ಸಿಗರೇಟ್ , ಗುಟ್ಕಾ, ತಂಬಾಕು ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯಗೊಳಿಸಲು ಬಿಬಿಎಂಪಿ ಸಿದ್ದತೆ

ಬೆಂಗಳೂರು; ಬೇಕರಿ – ಕಾಂಡಿಮೆಂಟ್ಸ್‌ ಗಳಲ್ಲಿ  ಸಿಗರೇಟ್ ಮಾರಾಟಕ್ಕೆ ಬಿಬಿಎಂಪಿ ಕೋಕ್ ನೀಡಿದೆ. ಸಿಗರೇಟ್ , ಗುಟ್ಕಾ, ತಂಬಾಕು ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯಗೊಳಿಸಲು ಬಿಬಿಎಂಪಿ ಸಿದ್ದತೆ ಮಾಡುತ್ತಿದೆ ಎನ್ನಲಾಗಿದೆ.

ಇನ್ಮೇಲೆ ಲೈಸೆನ್ಸ್ ಇಲ್ಲದೇ ಅನಧಿಕೃತಾಗಿ ಕೋಕ್; ಸಿಗರೇಟ್ , ಗುಟ್ಕಾ, ತಂಬಾಕು ಮಾರಾಟ ಮಾಡಿದ್ರೆ ಅಂತಹವರಿಗೆ ಐನೂರು ರೂಪಾಯಿ ದಂಡ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಸೆಪ್ಟೆಂಬರ್ ವೇಳೆಗೆ ಲೈಸೆನ್ಸ್  ಕಡ್ಡಾಯದ ಬಗ್ಗೆ ಅಧಿಕೃತ ಆದೇಶ ಹೊರಡಿಸಲು ಬಿಬಿಎಂಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಲೇಸೆನ್ಸ್ ಪಡೆಯಲು ಮಾರಾಟಗಾರರಿಗೆ 500 ರು. ಶುಲ್ಕ ಫಿಕ್ಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅಲ್ಲದೇ ರಾಜ್ಯ ಸರ್ಕಾರದ  2022ರ ಆದೇಶದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಿದೆ ಎನ್ನಲಾಗಿದ್ದು, ಅದಕ್ಕಾಗಿ ಈ ರೀತಿ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.ಈಗಾಗ್ಲೇ ಬಿಬಿಎಂಪಿ ಸುಮಾರು 49 ಸಾವಿರ ವ್ಯಾಪಾರಿಗಳಿಗೆ ಉದ್ದಿಮೆ ಪರವನಾಗಿ ನೀಡಿದೆ. ಪ್ರತ್ಯೇಕವಾಗಿ ತುಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಗುಟ್ಕಾ ಮಾರಾಟಗಾರರಿಗೆ ಪರವಾನಗಿ ನೀಡಲು‌ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

ಪ್ರತಿ ವರ್ಷ 500 ರೂಪಾಯಿ, ಪರವಾನಗಿ ಶುಲ್ಕ ವಿಧಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.ಬಿಬಿಎಂಪಿ ಸಮೀಕ್ಷೆ ಪ್ರಕಾರ ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ 150 ರಿಂದ 160 ತಂಬಾಕು ವ್ಯಾಪಾರಿಗಳಿದ್ದು,ಒಟ್ಟು ಬೆಂಗಳೂರಿನಲ್ಲಿ 40 ಸಾವಿರ ವ್ಯಾಪಾರಿಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಲೈಸೆನ್ಸ್ ಪಡೆಯಲು ಇರುವ ನಿಯಮಗಳು ಇಂತಿವೆ

*ಬೀದಿ ವ್ಯಾಪಾರಿಗಳಿಗೆ ಸಿಗೋದಿಲ್ಲ ಲೈಸನ್ಸ್

*ತಂಬಾಕು ಮಾರಾಟ ಪರವಾನಗಿಯನ್ನು ಪಡೆಯುವುದಕ್ಕೆ 100 ರಿಂದ 150 ಚದರಡಿ ಸ್ಥಿರ ಮಳಿಗೆ ಹೊಂದಿರಬೇಕು

*ಜಾಗದ ಮಾಲೀಕರ ಹೆಸರಿನಲ್ಲಿ ಪರವಾನಗಿ ಪಡೆಯಬೇಕು.

* ಪಾದಾಚಾರಿ ಮಾರ್ಗಗಳ ಮೇಲೆ ವ್ಯಾಪಾರ ನಡೆಸುತ್ತಿರುವವರಿಗೆ ಪರವಾನಗಿ ನೀಡುವುದಿಲ್ಲ

* ಗುಟ್ಕಾ ಮಾರಾಟಕ್ಕೂ ಈ ನಿಯಮ ಅನ್ವಯವಾಗಲಿದೆ.

*ಬಿಬಿಎಂಪಿಯ ಅನುಮತಿ ಇಲ್ಲದೇ ಬೀಡಿ, ಸಿಗರೇಟ್, ಗುಟ್ಕಾ ಮಾರಾಟ ಮಾಡಿದರೆ ಅವರಿಗೆ ಮೊದಲ ಬಾರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

*ಇದನ್ನು  ಪುನರಾವರ್ತನೆ ಮಾಡಿದರೆ ದಿನಕ್ಕೆ 100 ರು. ನಂತೆ ದಂಡ ಹೆಚ್ಚಾಗುತ್ತಾ ಹೋಗುತ್ತದೆ.

* ಜೊತೆಗೆ ಉದ್ದಿಮೆ ಪರವಾನಗಿ ರದ್ದುಪಡಿಸುವ ಸಾಧ್ಯತೆಯಿದೆ.

* ಸೆಪ್ಟೆಂಬ‌ರ್ ಮೊದಲ ವಾರದಲ್ಲಿ ಆನ್ ಲೈನ್ ನಲ್ಲಿ ಅರ್ಜಿ ದಾಖಲಿಸಬಹುದು

* ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ  ಪರವಾನಗಿ ಪಡೆಯುವುದಕ್ಕೆ  ಸೂಚನೆ

*ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ  ಕಾಲಾವಕಾಶ

*ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ

*ಬೇಕರಿ-ಕಾಂಡಿಮೆಂಟ್ ನಲ್ಲಿ ಸಿಗರೇಟು ಮಾರಾಟ ನಿಷೇಧ

* ಕೋಟ್ಟಾ ಕಾಯ್ದೆ-2003ರ ಅಡಿಯಲ್ಲಿ ಬೇಕರಿ ಮತ್ತು ಕಾಂಡಿಮೆಂಟ್ಸ್ ನಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶವಿಲ್ಲ

* ಹೀಗಾಗಿ, ಅವರಿಗೆ ಪರವಾನಗಿ ನೀಡುವುದಿಲ್ಲ.

* ಪಾನ್ ಶಾಪ್ ಹಾಗೂ 30 ಆಸನಕ್ಕಿಂತ ಹೆಚ್ಚಿಸುವ ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಮಾತ್ರ ಲೈಸೆನ್ಸ್

*ಹೋಟೆಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ನಿಗಡಿ ಪಡಿಸಿದರೆ ಮಾತ್ರ ಲೈಸೆನ್ಸ್ ಸಿಗಲಿದೆ