ಬೆಂಗಳೂರು; ಅರಸು ಅಸೋಸಿಯೇಷನ್ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಭಾಗಿಯಾಗಿದ್ದರು.ಬೆಂಗಳೂರು ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ಕಾರ್ಯಕ್ರಮ ನಡೆಯಿತು. ಉಡುಪಿ ಜಿಲ್ಲಾ ಪ್ರವಾಸ ಮುಗಿಸಿ ನೇರವಾಗಿ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆಶಿ ಹಾಜರಾದ್ರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇದು ಪವಿತ್ರವಾದ ಕಾರ್ಯಕ್ರಮ. ಮನುಷ್ಯ ಯಾರು, ಯಾವತ್ತು ಸಾಹುಕಾರ ಆಗ್ತಾನೆ, ಬಡವನಾಗ್ತಾರೆ ಅಂತ ಹೇಳೋಕೆ ಆಗಲ್ಲ. ಬಡವರು ಸಾಹುಕಾರ, ಸಾಹುಕಾರರು ಬಡವರಾಗ್ತಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಜಯವಾಗಲಿ ಅಂತ ರಂಭಾಪುರಿ ಶ್ರೀಗಳು ಹೇಳ್ತಾರೆ. ಎಲ್ಲ ಧರ್ಮಗಳಿಗೂ ಒಳ್ಳೆಯದಾಗಲಿ. ಮಹಾರಾಜರು ಯಾವ ಮಾರ್ಗ, ಧರ್ಮದಲ್ಲಿ ನಡೆಯಬೇಕು, ಉಳಿಸಿಕೊಳ್ಳಬೇಕು ಅಂತ ಹೇಳಿಲ್ಲ. ಧರ್ಮ ಯಾವುದಾದ್ರೂ ತತ್ವ ಒಂದೇ. ಪೂಜೆ ಯಾವುದಾದ್ರೂ ಭಕ್ತಿ ಒಂದೇ, ದೇವನೊಬ್ಬ, ನಾಮ ಹಲವು. ಹುಟ್ಟುವಾಗ ಯಾರೂ ಅರ್ಜಿ ಹಾಕಿಕೊಳ್ಳಲಿಲ್ಲ. ಯಾವ ಧರ್ಮಕ್ಕೆ ಸೇರಬೇಕು ಅಂತ ಕೇಳಿಕೊಂಡು ಬಂದಿಲ್ಲ ಎಂದರು.
ಇಡೀ ದೇಶಕ್ಕೆ IISC ಮಾದರಿ. ಕಣ್ಣಂಬಾಡಿ ಕಟ್ಟಿ, ವಾಣಿ ವಿಲಾಸ ಗಮನಿಸಿದ್ದೇವೆ. ಬೆಂಗಳೂರು ನಗರದಲ್ಲಿ ಐಟಿಬಿಟಿ ಬೆಳೆದಿದೆ. ಇಸ್ರೋ, HAL ಸ್ಥಾಪನೆ ಆಗಿದೆ. ಇಂಜಿನಿಯರ್ಸ್, ಡಾ.ರಾಧಾಕೃಷ್ಣಾ ನಡೆಸಿದ ಪಾಠವನ್ನ ಹಳೇ ಮೈಸೂರು ಸಂಸ್ಥಾನ ದೊಡ್ಡ ಅಡಿಪಾಯ ಹಾಕಿಕೊಟ್ಟಿದೆ. ಗಿಡ ನೆಟ್ಟಿ ಆಗಿದೆ, ಗಿಡ ಮರ ಆಗಿದೆ. ಈಗ ಹಣ್ಣು ತಿನ್ನುವ ಕಾಲ. ನೀವೀಗ ಅರ್ಜಿ ಕೊಟ್ರಿ, ಶಕ್ತಿ ತುಂಬಿಬೇಕು ಅಂತ ಕೇಳಿದ್ರಿ. ನಿಮ್ಮ ಆತ್ಮದೈರ್ಯ ಯಾವುದೇ ಕಾರಣಕ್ಕೂ ಕುಂದಬಾರದು. ನಾನು ನಿಮ್ಮ ಮನೆತನ ಹತ್ತಿರದಿಂದ ನೋಡಿದ್ದೇನೆ. ಸ್ವಾಭಿಮಾನ ಕಳೆದುಕೊಂಡು ನೀವು ಭಿಕ್ಷೆ ಬೇಡೋಕೆ ಹೋಗಬಾರದು. ಇಂದಿರಾಗಾಂಧಿ ಉಳುವವನಿಗೆ ಭೂಮಿಯ ಒಡೆತನ ಕೊಡ್ಬೇಕು ಅಂತ ಲಕ್ಷಾಂತರ ಜನರಿಗೆ ಅಂತ ದಿಟ್ಟ ತೀರ್ಮಾನ ಶಾಶ್ವಾತವಾಗಿದೆ. ಯಾವತ್ತೂ ಧರ್ಮದಿಂದಲೇ ಶಾಂತಿ, ಧರ್ಮವೇ ನೆಮ್ಮದಿ, ಸುಖ, ಅದೇ ಆಧಾರ. ಧರ್ಮದಲ್ಲಿ ರಾಜಕಾರಣ ಇರಬೇಕು. ರಾಜಕಾರಣದಲ್ಲಿ ಧರ್ಮ ಇರಬಾರದು. ನಮ್ಮ ಸ್ನೇಹಿತರಿಗೂ ಅದೇ ಹೇಳ್ತೇನೆ ಎಂದು ಹೇಳಿದರು.
ಧರ್ಮ, ಪೂಜೆ,ಭಕ್ತಿ ಪ್ರದರ್ಶಕ್ಕೆ ಅಲ್ಲ. ಇದೆಲ್ಲ ಆತ್ಮ ವಿಶ್ವಾಸಕ್ಕೆ ಹುಟ್ಟಿಸಿದ ದಾರಿಗಳು. ದೇವರಾಜು ಅರಸುಗೆ ಸಮಾಜ, ಜಾತಿ ಇತ್ತಾ?. ಅವರಿಗೆ ಇದ್ದದ್ದು ನಾಯಕತ್ವದ ಗುಣ. ಅವರು ರಾಜ್ಯವನ್ನ ಆಳಿದಾಗ ನಾನು ಹಿಂದುಳಿದವನು ಅಂತ ಭಾವಿಸಿಲ್ಲ. ಎಲ್ಲರನ್ನ ಬೆಳೆಸಿ ಅಡಿಪಾಯ ಹಾಕಿಕೊಟ್ಟರು. ಆ ವರ್ಚಸ್ಸು ಎಲ್ಲರಿಗೂ ಇರಬೇಕು. ನಾನು ಏನಾದ್ರೂ ಹೇಳಿದ್ರೆ ಕಾಂಟ್ರೋವರ್ಸಿ ಆಗುತ್ತೆ. ಭಗವಂತ ಕಣ್ಣು ಬಿಡ್ತಾನೆ. ಮರಕ್ಕೆ ಬೇರು ಮುಖ್ಯ, ಮನುಷ್ಯನಿಗೆ ನಂಬಿಕೆ ಮುಖ್ಯ ಎಂದು ತಿಳಿಸಿದರು.
ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲ ಆಗಲ್ಲ. ಎಷ್ಟೇ ಆಸ್ತಿ, ಅಂತಸ್ತು ಬಿದ್ರೂ ಸರಳತೆ ಬೇಕು. ಆ ಸಂಪ್ರದಾಯ ಅರಸು ಮನೆತನ ಬೆಳೆಸುಕೊಂಡು ಬಂದಿದೆ. ಹೃದಯ ಶ್ರೀಮಂತಿಕೆ ಕಾಣಬೇಕು. ಅತ್ಯುತ್ತಮ ಆಸ್ತಿ ಅಂದ್ರೆ ಅನುಭವ, ಕಷ್ಟ, ಸುಖ. ಆತ್ಮ ವಿಶ್ವಾಸ ಕಳೆದುಕೊಳ್ಳುವುದು ಬೇಡ ರಾಜಕಾರಣದಲ್ಲಿ ಯಾರೇ ಇದ್ದರೂ ಮತ್ತೊಬ್ಬರಿಗೆ ಅನ್ಯಾಯ ಆಗದ ರೀತಿ ಬದುಕಿದ್ರೆ ಅದೇ ಆಸ್ತಿ. ರಾಜಕೀಯದಲ್ಲಿ ಅವಕಾಶ ಕೊಟ್ಟಾಗ, ದೇವರು ಪೆನ್ನು, ಪೇಪರ್ 10 ಜನಕ್ಕೆ ಸಹಾಯ ಮಾಡ್ಬೇಕು. ತೊಂದರೆ ಮಾಡಿ ಕೂರುವುದಲ್ಲ. ಮಹಾರಾಜ ಕುಟುಂಬ, ಅರಸು ತೊಂದರೆ ಮಾಡಿಲ್ಲ. ಜಾಗದ ವಿಚಾರವಾಗಿ ನೀವು ಬೇಡಿಕೆ ಇಟ್ಟಿದ್ದೀರಿ. ಸೂರಜ್ ಜೊತೆಗೆ ಬನ್ನಿ ನನ್ನಿಂದ ಆಗುವ ಸಹಾಯ ಮಾಡ್ತೇನೆ. ನೀವು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು ಎಂದು ಡಿವಿಜಿ ಗುಂಡಪ್ಪನವರ ಸಾಲುಗಳನ್ನ ಮೆಲುಕು ಹಾಕಿದರು.
ನೂರು ಹುಲ್ಲು ಸೇರಿಸಿದ್ರೆ ಹಗ್ಗ ಆಗುತ್ತೆ. ಆಗ ಆನೆಯನ್ನೇ ಹಿಡಿಯಬಹುದು. ಹುಲ್ಲಿಗೆ ಹಗಣಿ ಸೇರಿಸಿದ್ರೆ ಪಿಳ್ಳಾರತಿ ಆಗುತ್ತೆ. ನಾನು ನಿಮ್ಮೊಂದಿಗೆ ಇದ್ದೇನೆ ಎಂದರು. ಇದೇ ವೇಳೆ ಡಿಕೆಶಿ ಬಿಜೆಪಿ ಬರಬೇಕಿತ್ತು, ಆದ್ರೆ ಅವರೊಂದಿಗೆ ಶಾಸಕರಿಲ್ಲ ಎಂಬ ಯತ್ನಾಳ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಆ ಕಸ, ಸಗಣಿ ಮೇಲೆ ಕಲ್ಲು ಹಾಕೋಕೆ ನನಗೆ ಇಷ್ಟ ಇಲ್ಲ ಎಂದರು.











