ಬೆಂಗಳೂರು; ಮಾಗಡಿ ರಸ್ತೆಯಲ್ಲಿರುವ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರದ ಜಮೀನನ್ನು ಡಿಸಿಎಂ ಡಿಕೆ ಶಿವಕುಮಾರ್ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಜೂನ್ 27ರಂದು ಮಾಡಲು ತೀರ್ಮಾನ ಮಾಡಿದ್ದೇವೆ. 5 ಎಕರೆ ಜಮೀನನ್ನ ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರ ಮಂಜೂರು ಮಾಡಿದೆ. ಆ ಜಾಗದಲ್ಲಿ ಎಕ್ಸಿಬಿಷನ್ ಸೆಂಟರ್ ಮಾಡಬೇಕು ಎನ್ನೋದಿದೆ. ಸಮಾಜ ಕಲ್ಯಾಣ ಇಲಾಖೆಯ ಜಾಗ ಎಕ್ಸ್ಚೇಂಜ್ ಮಾಡಿ ಪಡೆದಿದ್ದೇವೆ. ಕ್ರಿಶ್ಚಿಯನ್ ಇನ್ಸ್ಟಿಟ್ಯೂಟ್ದು 5 ಎಕರೆ ತೆಗೆದುಕೊಂಡಿದ್ದೇವೆ. ಕಾರ್ಯಕ್ರಮಕ್ಕೆ ಬರೋರಿಗೆ ದೂರ ಎಂದರೆ ಬೆಂಗಳೂರು ಬೆಳೆದಿದೆ ಈ ಸ್ಥಳ ದೂರ ಏನಾಗಲ್ಲ.ಬೆಂಗಳೂರು ಸಿಟಿಲಿ ಎಲ್ಲಿ ಜಾಗ ಕೊಡಿಸ್ತೀರಾ. ಕಬ್ಬನ್ ಪಾರ್ಕ್ ಬಿಡಲ್ಲ, ಗಾಲ್ಫ್ ಗ್ರೌಂಡ್ ಬಿಡಲ್ಲ. ಮಂತ್ರಿಗಳಿಗೆ ಮನೆಯಿಲ್ಲ, ಜಡ್ಜ್ ಗಳಿಗೆ ಜಾಗವಿಲ್ಲ.ಹೈಕೋರ್ಟ್ ವಿಸ್ತಾರ ಮಾಡಬೇಕು ಅದಕ್ಕೂ ಜಾಗವಿಲ್ಲ ಎಂದು ತಿಳಿಸಿದರು.
ನಟ ಕಮಲ್ ಹಾಸನ್ ವಿಚಾರದ ಬಗ್ಗೆ ಮಾತನಾಡಿದ ಅವರು ಕೋರ್ಟ್ ಹೇಳಿದೆಯಲ್ಲ ಕೋರ್ಟ್ಗೆ ಅವರು ಗೌರವ ಕೊಡ್ತಾರೆ. ಪ್ರತಿಭಟನೆ ಮಾಡಲಿ ಪ್ರಜಾಪ್ರಭುತ್ವದಲ್ಲಿ ಹಕ್ಕಿದೆ. ಯಾರೂ ಕಾನೂನೂ ಕೈಗೆತ್ತಿಕೊಳ್ಳಬಾರದು. ಬೆಂಗಳೂರಿಗೆ ಬಹಳ ಗೌರವದಿಂದ ಎಲ್ಲರನ್ನ ತೆಗೆದುಕೊಂಡು ಹೋಗ್ತಿದೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.
ಇನ್ನು ಸ್ಕೈಡೆಕ್ ನಿರ್ಮಿಸಲಿರುವ ಜಮೀನನ್ನು ಡಿಸಿಎಂ ಡಿ.ಕೆ ಶಿವಕುಮಾರ್ ವೀಕ್ಷಿಸಿದರು. ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಸ್ಕೈಡೆಕ್ ನಿರ್ಮಾಣವಾಗಲಿರುವ ಜಮೀನನ್ನು ವೀಕ್ಷಿಸಿದರು. ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕ ಎಸ್.ಟಿ ಸೋಮಶೇಖರ್, ಬಿಡಿಎ ಪ್ರಭಾರ ಆಯುಕ್ತ ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೇರಿ ಹಲವರು ಉಪಸ್ಥಿತಿರಿದ್ದರು.