ಬೆಂಗಳೂರು; ದರ್ಶನ್ ವಿಚಾರ ಪ್ರಸ್ತಾಪಿಸಿ ಇಶ್ಯೂ ಡೈವರ್ಟ್ ಮಾಡುತ್ತಿದ್ದಾರೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.ನೋಡಿ.. ಕೇಂದ್ರ ಮಂತ್ರಿಯವರಿಗೆ ಹೇಳುತ್ತೇನೆ.ಇವೆಲ್ಲಾ ಬಿಡಿ.. ದರ್ಶನಗ ವಿಚಾರ ಹಾಗೂ ಮುಡಾ ವಿಚಾರ ಬಿಡಿ.ಈಗ ಮಹಾದಾಯಿ ವಿಚಾರದಲ್ಲಿ ಏನು ತೊಂದ್ರೆಯಾಗಿದೆ.ಅದಕ್ಕೊಂದು ಪರ್ಮಿಷನ್ ಕೊಡಿಸ್ರಪ್ಪ.ಕೈಮುಗಿದು ಪರ್ಮಿಷನ್ ಕೊಡಿಸಿ ಎಂದ ಡಿಸಿಎಂ ಡಿ ಕೆ ಶಿವಕುಮಾರ್ ಬೇಡಿಕೊಂಡಿದ್ದಾರೆ.
ಮಹದಾಯಿ ಮಾಡೋಕೆ ದುಡ್ಡು ಕೊಡಿಸ್ರಪ್ಪ.ಗಣೇಶ ಚತುರ್ಥಿ ಹಬ್ಬ ದಿನವೇ ವಿಘ್ನ ನಿವಾರಣೆ ಆಗಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಹಾಕುತ್ತೇನೆ ಜೋಷಿಗೆ ಎಂದು ವ್ಯಂಗ್ಯ ಮಾಡಿದ್ದಾರೆ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ವ್ಯಂಗ್ಯ ವಾಡಿದದ್ದಾರೆ ಡಿಸಿಎಂ ಡಿಕೆ ಶಿವಕುಮಾರ್.
ಇನ್ನು ಮುಡಾ ಕೇಸ್ ಡೈವರ್ಟ್ ಮಾಡಲು ದರ್ಶನ್ ಫೋಟೋ ರಿಲೀಸ್ ಎಂಬ ಜೋಷಿ ಆರೋಪ ವಿಚಾರಕ್ಕೆ ಎಂ ಬಿ ಪಾಟೀಲ್ ಕೂಡ ತಿರುಗೇಟು ಕೊಟ್ಟಿದ್ದಾರೆ.ಪ್ರಹ್ಲಾದ್ ಜೋಶಿ ತಿಳಿದವರು.ಅವರು ಈ ರೀತಿ ಮಾತನಾಡೋದು ಸರಿಯಲ್ಲ.ದರ್ಶನ್ ರಾಜಾತೀಥ್ಯ ಗಂಭೀರವಾದುದು.ನಾನು ಹೋಮ್ ಮಿನಿಸ್ಟರ್ ಆಗಿದ್ದೆ.ಆಗಲೂ ಜೈಲಿನಲ್ಲಿ ಇಂತ ವ್ಯವಸ್ಥೆ ನೋಡಿದ್ದೇನೆ. ಘಟನೆಯನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.ಅದಕ್ಕಾಗಿ ದರ್ಶನ್ ಅಂಡ್ ಟೀಮ್ ಚದುರಿಸಲಾಗಿದೆ.ಚದುರಿಸಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.ಫೋಟೋ ಲೀಕ್, ಎಲ್ಲರದರ ತನಿಖೆ ಆಗಲಿದೆ.ಮುಡಾ ಡೈವರ್ಟ್ ಮಾಡೋಕೆ ಅದರಲ್ಲಿ ಏನಾಗಿದೆ?ಸುಮ್ಮನೆ ಮಾತನಾಡೋದು ಸರಿಯಲ್ಲ ಎಂದಿದ್ದಾರೆ.
ಕೊರೋನಾ ಹಗರಣದ ತನಿಖೆ ವಿಚಾರಕ್ಕೆ ಜೋಷಿ ಹೇಳಿಕೆಗೆ ಎಂಬಿ ಪಾಟೀಲ್ ತಿರುಗೇಟು
ಬೆಂಗಳೂರು; ಕೊರೋನಾ ಹಗರಣದ ತನಿಖೆ ವಿಚಾರಕ್ಕೆ ಜೋಷಿ ಹೇಳಿಕೆಗೆ ಎಂಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.ಮುಡಾ ವಿಷಯ ಸುಳ್ಳು ಆಪಾದನೆ.ಅದು ಕೋರ್ಟ್ ನಲ್ಲಿ ಎಲ್ಲಾ ಗೊತ್ತಾಗುತ್ತೆ. ಅದರಲ್ಲಿ ಮೂಡ ತಪ್ಪು ಮಾಡಿದೆ.ಕೋವಿಡ್ ಹರಗರಣ ನಿಮಗೆ ಗೊತ್ತಿದೆ.ಜನ ಸಾವು ಬದುಕಿನ ಹೋರಾಟ ಮಾಡಿದ್ರು.ಆ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದಿದ್ದಾರೆ.
ಪಿಪಿಇ ಕಿಟ್, ಬೆಡ್ ಹಗರಣ ಇರಬಹುದು ಹೀಗೆ ಹಲವು ಹಗರಣ ನಡೆದಿದೆ. ನನ್ನದೇ ಸಂಸ್ಥೆ 500 ಬೆಡ್ ನಿರ್ಮಿಸಿ ಸೇವೆ ಮಾಡಿದ್ವಿ.ಅದು ನಮ್ಮ ಕರ್ತವ್ಯ.ಅಂತಹ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ.ಪಿಪಿಇ ಕಿಟ್ ರೆಮಿಡಿಸ್ವಿರ್ ನಲ್ಲಿ ಹಣ ಹೊಡೆದಿದ್ದಾರೆ.ಸಾವಿರಾರು ಕೋಟಿ ಲೂಟಿ ಮಾಡಿರೋ ಬಗ್ಗೆ ಪ್ರಶ್ನೆ ಮಾಡಬಾರದಾ? ತನಿಖೆ ಮಾಡಬಾರದಾ?ಪ್ರಹ್ಲಾದ್ ಜೋಷಿಯವರು ಇದರ ಬಗ್ಗೆ ಹೇಳ ಬೇಕು ಹಾಗಾದರೆ ಎಂದಿದ್ದಾರೆ.
ಸಾವಿರಾರು ಕೋಟಿ ಬಹುಶ: ಬಿಜೆಪಿ ಎಲೆಕ್ಷನ್ ಫಂಡ್ ಗೆ ಹೋಗಿರಬೇಕು.ಅದೇ ಹಣದಲ್ಲಿ ಎಲೆಕ್ಷನ್ ಮಾಡಿದ್ರಾ?ಲೋಕಸಭಾ ಎಲೆಕ್ಷನ್ ರಾಜ್ಯದ ಎಲೆಕ್ಷನ್ ಮಾಡಿರಬೇಕು.ಅದನ್ನಾದರು ಒಪ್ಪಿಕೊಳ್ಳಿ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ಇದು ಅತ್ಯಂತ ಗಂಭೀರ ಪ್ರಕರಣ.ಇದು ಅತ್ಯಂತ ಕ್ರೂರ ಕೃತ್ಯ ಕೂಡ.ಸಾವಿನ ಸಂದರ್ಭದಲ್ಲಿ ದುಡ್ಡು ಮಾಡೋದನ್ನ ಯಾರು ಕ್ಷಮಿಸೋದಿಲ್ಲ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.