ಬೆಂಗಳೂರು; ಬಿಜೆಪಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ತೆಡೆ ಕೋರಿ ಹೈಕೋರ್ಟ್ ಗೆ ಅರ್ಜಿ ವಿಚಾರದ ಬಗ್ಗೆ ಮಾತನಾಡಿದ ಅವರು ಪಾಪ ಅವರದ್ದು ರಾಜಕೀಯ. ಬಿಜೆಪಿಯವರು ಅವನನ್ನ ಕಿತ್ತು ಬಿಸಾಕಿದ್ದಾರೆ. ನಾನು ಬದುಕಿದ್ದೀನಿ ಅಂತಾ ತೋರಿಸಿಕೊಳ್ಳಬೇಕು. ಅದಕ್ಕೆ ಪಾಪ ಪ್ರಯತ್ನ ಪಡ್ತಿದ್ದಾನೆ. ಬಿಜೆಪಿವರಿಗೆ ಬೇರೆ ಏನೂ ವಿಚಾರ ಇಲ್ಲ. ಮಹದಾಯಿ, ಮೇಕೆದಾಟಿಗೆ ಪರ್ಮಿಷನ್ ಕೊಡಿಸಲಿ. ಕೃಷ್ಣ ಯೋಜನೆಗೆ ಪರ್ಮಿಶನ್ ಕೊಡಿಸಲಿ.ದೆಹಲಿಗೆ ಹೋಗಿ ಅನುದಾನ ಕೊಡಿಸಲಿ. ಕೇವಲ ಪ್ರಚಾರಕ್ಕೋಸ್ಕರ ಮಾಡ್ತಿದ್ದಾರೆ. ಬಾಯಿ ಮುಚ್ಕೊಂಡು ಇರಬೇಕು ಎಂದು ಪ್ರತಾಪ್ ಸಿಂಹ ವಿರುದ್ದ ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆ ಎಲೆಕ್ಷನ್ ನಲ್ಲಿ ಬ್ಯಾಲೆಟ್ ವಿಚಾರದ ಬಗ್ಗೆ ಮಾತನಾಡಿದ ಅವರು ನಾಳೆ, ನಾಡಿದ್ದೋ ನಾನು ಕಾನೂನು ತಂದು ತೋರಿಸ್ತೀನಿ. ಅವ್ರೇ ಮಾಡಿರೋ ಕಾನೂನು ತಂದು ತೋರಿಸ್ತೀನಿ. ಇವಿಎಂ ಅಥವಾ ಬ್ಯಾಲೆಟ್ ಅಂತ ಅವ್ರೇ ಮಾಡಿರೋದು ಎಂದಿದ್ದಾರೆ.
ಇನ್ನು ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕರ ವೇದಿಕೆಯ ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು. ಸಂಸ್ಥೆಯ ಈಜುಕೊಳ, ವ್ಯಾಯಾಮ ಶಾಲೆ ಹಾಗೂ ಮಕ್ಕಳ ಆಟದ ಸ್ಥಳಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಜಾಗ ಕೊಡಿ ಶಾಸಕ ಸಿ.ಕೆ ರಾಮಮೂರ್ತಿ ಅರ್ಜಿ ಕೊಟ್ಟಿದ್ದಾರೆ. ಬೆಂಗಳೂರು ದಕ್ಷಿಣ ದೊಡ್ಡದಾಗಿ ಬೆಳೆಯುತ್ತಿದೆ. ಏನೂ ಮಾಡೋಕೆ ಆಗಲ್ಲ, ಇದಕ್ಕೆ 5 ಪಾಲಿಕೆ ಮಾಡಿದ್ದು. ಬಿಡಿಎ ಸಿಎ ಸೈಟ್ ಗೆ ಎರಡನೇ ಬಾರಿ ಅರ್ಜಿ ಆಹ್ವಾನ ಮಾಡ್ತೀವಿ. ಆಗ ನೋಂದಣಿ ಮಾಡಿಕೊಳ್ಳಿ, ಆದ್ಯತೆ ಮೇರೆಗೆ ನಿಮಗೆ ವಿಸ್ತರಣೆ ಮಾಡೋಕೆ ಅವಕಾಶ ಕೊಡ್ತೀನಿ. ನಾನು ಪುನಃ ಬಂದಾಗ ನಾನು ಹೇಳಿದ ಹಾಗೆ ವೋಟ್ ಹಾಕ್ಬೇಕು. ರಾಮಮೂರ್ತಿ ಹೇಳಿದಾಗಲ್ಲ ಎಂದು ನಕ್ಕಿ ಕಿಚ್ಚಾಯಿಸಿದ್ರು. ನಮಗೂ ಏನಾದ್ರೂ ಲಾಭ ಬೇಕು ಅಲ್ವಾ ?. ಈಗಾಗಲೇ 180 ಅರ್ಜಿಗಳನ್ನ ಕರೆದಿದ್ದೇನೆ. ಗ್ರೇಟರ್ ಬೆಂಗಳೂರು ಮಾಡಿ ಐದು ಆಯುಕ್ತರನ್ನ ಮಾಡಿದ್ದೇವೆ. ರಸ್ತೆ ಗುಂಡಿ ಏನೇ ದೂರಿದ್ದರು ವಾಟ್ಸಪ್, ಮೊಬೈಲ್ ಮೂಲಕ ದೂರ ಕೊಡಬಹುದು. ಕಾರ್ಯಕ್ರಮದಲ್ಲಿ ದೀಪ ಹಚ್ಚಿದ್ದೇವೆ, ಉರಿಯುತ್ತಿದೆ. ನಿಮಗೆ ಬತ್ತಿ ಮಾತ್ರ ಕಾಣುತ್ತೆ, ಎಣ್ಣೆ ಕಾಣುವುದಿಲ್ಲ. ಬೆಳಕಿನ ಹಿಂದೆ ಎಷ್ಟು ಶ್ರಮ ಇರುತ್ತೆ. ಬೆಳಕಿನ ಹಿಂದೆ ಕತ್ತಲಿನ ಪರಿಶ್ರಮ ಇರುತ್ತಲ್ಲ ಎಂದಿದ್ದಾರೆ.
ಲೆಜಿಸ್ಟ್ರೇಟಿವ್ ಕಮಿಟಿ ಕ್ಲಬ್ ಗಳ ಬಗ್ಗೆ ಮೊನ್ನೆ ರಿಪೋರ್ಟ್ ಕೊಟ್ಟಿದೆ. ಕ್ಲಬ್ ಗಳು ಆಕ್ಯುಫೆನ್ಸ್ ಸರ್ಟಿಫಿಕೇಟನ್ನೇ ತೆಗೆದುಕೊಂಡಿಲ್ಲ. ಅಧಿಕಾರಿಗಳಿಗೆ ಮಾಹಿತಿ ನೀಡಲು ಸೂಚಿಸಿದ್ದೇನೆ. ಜಯನಗರದ ಸುತ್ತ ಮುತ್ತ ಪಾರ್ಕಿಂಗ್ ಸಮಸ್ಯೆ ಬಗ್ಗೆ ಇನ್ಫೋಸಿಸ್ ನಾರಾಯಣಪೂರ್ತಿ ಹೇಳಿದ್ರು. ರಸ್ತೆ ಅಕ್ಕಪಕ್ಕ ಪಾರ್ಕಿಂಗ್ ಮಾಡ್ತಾರೆ ನೋಡ್ಬೇಕು ಡಿಕೆ ಅಂದಿದ್ದಾರೆ. ಕಾಂಪ್ಲೆಕ್ಸ್ ಸಂಬಂಧ ಬಿಡಿಎ ಕಮಿಷನರ್ ಕಳುಹಿಸುತ್ತೇನೆ ಎಂದಿದ್ದಾರೆ.











