ಮನೆ Latest News ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್ ಕ್ಲಿಯರ್ ಮಾಡಿದೆ: ಡಿ ಕೆ ಶಿವಕುಮಾರ್ ಹೇಳಿಕೆ

ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್ ಕ್ಲಿಯರ್ ಮಾಡಿದೆ: ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ದಾವಣಗೆರೆ ದಕ್ಷಿಣ, ಬಾಗಲಕೋಟೆ ಕೇತ್ರದ ಉಪಚುನಾವಣೆಗೆ ಟಿಕೆಟ್ ಕ್ಲಿಯರ್ ಮಾಡಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಈಗ ೧೨ ಗಂಟೆಗೆ ನಮಗೆ ಆದೇಶ ಬಂದಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಟಿಕೆಟ್ ಕ್ಲಿಯರ್ ಮಾಡಿದೆ.ಉಮೇಶ್ ಮೇಟಿ ಅವರಿಗೆ ಬಾಗಲಕೋಟೆ ಟಿಕೆಟ್ ನೀಡಲಾಗಿದೆ .ನಾವು ಶಿಫಾರಸು ಮಾಡಿದಂತೆ ಟಿಕೆಟ್ ನೀಡಲಾಗಿದೆ. ಅಲ್ಪಸಂಖ್ಯಾತ ನಾಯಕರು, ಸಿಎಂ, ನಾನು ಸೇರಿ ಎಲ್ಲಾರು ಚರ್ಚೆ ಮಾಡಿದ್ವಿ.ಎಲ್ಲರೂ ಮಾತಾಡಿ ಒಮ್ಮತದ ತೀರ್ಮಾನ ಮಾಡಿದ್ವಿ. ಪಕ್ಷದ ಸಂಪ್ರದಾಯ ದಿಂದ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ.ಒಮ್ಮತದಿಂದ ಚುನಾವಣೆ ಮಾಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದಾರೆ.

ನಾನು, ಸಿಎಂ ಅವರು ನಾಳೆ ಹೋಗ್ತಿದ್ದೇವೆ. ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸ್ತಾರೆ.ಸಿಎಂ ಬಜೆಟ್ ಉತ್ತರ ನೀಡ್ತಾರೆ. ಬುಧವಾರ ಸಂಜೆ ಸಿಎಲ್ಪಿ ಸಭೆ ಇದೆ. ಎಐಸಿಸಿ ಜನರಲ್ ಸೆಕ್ರೆಟರಿ ಕೂಡ ಇರ್ತಾರೆ. ಈ ಚುನಾವಣೆ ಟಿಕೆಟ್ ವಿಚಾರದಲ್ಲಿ ಚರ್ಚೆ ಆಗಿದೆ, ಅದಕ್ಕೆ ತೆರೆ ಆಗಿದೆ. ಮುಸ್ಲಿಮರು ಕೇಳೋದು ತಪ್ಪಿಲ್ಲ. ಜನಸಂಖ್ಯೆ ಆಧಾರದ ಮೇಲೆ ಕೇಳಿದ್ದಾರೆ. ಆದ್ರೆ ಮಲ್ಲಿಕಾರ್ಜುನ ಅವರು ಮುಹೂರ್ತ ಚನ್ನಾಗಿದೆ ಅಂತ ನಾಮಿನೇಷನ್ ಮಾಡಿದರು. ಆದ್ರೆ ಪಕ್ಷ ಏನು ಹೇಳುತ್ತದೆ ,ಅದನ್ನ ಕೇಳುತ್ತೇವೆ ಎಂದಿದ್ದರು. ಪ್ರಭಾ ಅವರಿಗೆ ನಾವೇ ನಿಲ್ಲಿಸಿದ್ದು. ಅವರು ನಮ್ಮ ಪಕ್ಷಕ್ಕೆ ಆಸ್ತಿ. ಪಕ್ಷದ ಆದೇಶಕ್ಕೆ ನಾವು ಬದ್ಧರಾಗಿದ್ದೇವೆ. ಎಲ್ಲಾ ಆಸೆ ಪಡೋದು ಸಹಜ. ಮೇಟಿ ಮಕ್ಕಳಲ್ಲೇ ಸ್ಪರ್ಧೆ ಇತ್ತು. ನಾನು ದೊಡ್ಡ ಅವನಿಗೆ ಟಿಕೆಟ್ ಕೊಡಬೇಕು ಅಂತ ಇದ್ದೆ. ಮೇಟಿ ಪುತ್ರಿ ಕೂಡ ಇದ್ದರು. ಹೀಗಾಗಿ ಚರ್ಚೆ ಮಾಡಿ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಅವರಲ್ಲಿ ಒಮ್ಮತ ಇದ್ಯಾ? ಎಂಬ ಬಗ್ಗೆ ಮಾತನಾಡಿದ ಅವರು ಅವರ ಪಾರ್ಟಿ ಡಿಸಿಷನ್ , ಅವರ ಪಾರ್ಟಿ ಬಗ್ಗೆ ಚರ್ಚೆ ಮಾಡಲ್ಲ. ನಮ್ಮದು ನಮ್ಮದು ಅವರದ್ದು ಅವರದ್ದು. ದಾವಣಗೆರೆ ದಕ್ಷಿಣ ಬೆಳೆದಿದೆ, ಆ ನಗರ ಬೆಂಗಳೂರಿಗಿಂತ ಚೆನ್ನಾಗಿದೆ. ೪೦ ವರ್ಷ ದಿಂದ ಅವರ ತ್ಯಾಗ ದೊಡ್ಡದು.ಕಾಂಗ್ರೆಸ್ ಪಕ್ಷಕ್ಕೆ ಆ ಕುಟುಂಬ ಆಸ್ತಿ, ಶಿಸ್ತು ಕಾಪಾಡಿಕೊಂಡು ಬಂದಿದೆ. ಅಸಮಾಧಾನ ನಿಮ್ಮ ಬಳಿ ಹೇಳಿರಬಹುದು, ನಮ್ಮ ಬಳಿ ಇಲ್ಲ.. ಹಿಂದೆ ಜಬ್ಬಾರ್ ಗೆ ಎಂಎಲ್ಸಿ ಮಾಡಿದರು.

ಮಾನೆ ಬದಲಿಗೆ ಸಲೀಂ ಗೆ ಟಿಕೆಟ್ ನೀಡಿತ್ತು ಅಲ್ವೇ. ಯಾವ ಎಲೆಕ್ಷನ್ ಬಿಜೆಪಿ ಅವರು ಗೆದ್ದಿದ್ದಾರೆ.ಅವರ ಸೀಟು ಕೂಡ ನಾವು ಗೆದ್ದಿದ್ದೇವೆ. ಬೊಮ್ಮಾಯಿ, ಕುಮಾರಸ್ವಾಮಿ ಸೀಟು ನಾವು ಗೆದ್ದಿದೆ ಎಂದಿದ್ದಾರೆ.