ಮನೆ Latest News ವಿಶ್ವವಿಖ್ಯಾತ ಮೈಸೂರು ದಸರಾಗೆ ಸಾಹಿತಿ ಹಂಪಾ ನಾಗರಾಜಯ್ಯ ಚಾಲನೆ; ಐದು ವರ್ಷ ಕಾಲ ಅಭಿವೃದ್ಧಿ ಮಾಡೇ...

ವಿಶ್ವವಿಖ್ಯಾತ ಮೈಸೂರು ದಸರಾಗೆ ಸಾಹಿತಿ ಹಂಪಾ ನಾಗರಾಜಯ್ಯ ಚಾಲನೆ; ಐದು ವರ್ಷ ಕಾಲ ಅಭಿವೃದ್ಧಿ ಮಾಡೇ ಮಾಡ್ತೀವಿ ಎಂದ ಸಿಎಂ ಸಿದ್ದರಾಮಯ್ಯ

0

ಮೈಸೂರು; ವಿಶ್ವವಿಖ್ಯಾತ ಮೈಸೂರು ದಸರಾಗೆ ಇಂದು ಚಾಲನೆ ಸಿಕ್ಕಿದೆ. ಹಿರಿಯ ಸಾಹಿತಿ ನಾಡೋ ಹಂಪನಾ ನಾಗರಾಜ್ ಅವರು ದಸರಾಗೆ ಚಾಲನೆ ನೀಡಿದರು. ಬೆಳಗ್ಗೆ 9-15ಕ್ಕೆ ವೃಶ್ಚಿಕ ಲಗ್ನದಲ್ಲಿ ಮೈಸೂರು ದಸರಾಗೆ ಚಾಲನೆ ನೀಡಲಾಯಿತು.

ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರು ತಾಯಿ ಚಾಮುಂಡಿ ದರ್ಶನ ಪಡೆದ್ರು. ಬಳಿಕ ನಾಡ ಅದಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ವೇದಿಕೆ ಬಳಿ ಬಂದು ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯಗೆ ಸಚಿವ ಮಹದೇವಪ್ಪ, ಕೆ.ವೆಂಕಟೇಶ್ ಶಾಸಕ ತನ್ವೀರ್ ಸೇಠ್ ಸಾಥ್ ನೀಡಿದರು.

ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ದಸರಾಗೆ ಚಾಲನೆ ನೀಡಲಾಯಿತು. ಉದ್ಘಾಟಕ ಹಂಪಾ ನಾಗರಾಜಯ್ಯ ಸಿಎಂ ಸಿದ್ದರಾಮಯ್ಯಗಿಂತ ಮುಂಚಿತವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಪುಷ್ಪಾರ್ಚನೆ ಮಾಡಿದ್ರು.ನಂತರ ಸಿಎಂ ಸಿದ್ದರಾಮಯ್ಯ ಜೊತೆ ಮತ್ತೆ ಡಿ ಕೆ ಶಿವಕುಮಾರ್ ಪುಷ್ಪಾರ್ಚನೆ ಮಾಡಿದರು.

ಬಳಿಕ ಜಿಲ್ಲಾಡಳಿತದಿಂದ ಗಣ್ಯರಿಗೆ ಸನ್ಮಾನ ಮಾಡಲಾಯಿತು.ಈ ವೇಳೆ ಸಿಎಂ ಸಿದ್ದರಾಮಯ್ಯ ಮೈಸೂರು ಪೇಟ ನಿರಾಕರಿಸಿದ್ದಾರೆ.ಪೇಟ ಹಾಕುವಾಗ ಬೇಡ ಎಂದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕೇವಲ ಹಾರ, ಶಾಲು ಹಾಕಿಸಿಕೊಂಡು ಸನ್ಮಾನ ಸ್ವೀಕರಿಸಿದ್ದಾರೆ.ಚಾಮುಂಡೇಶ್ವರಿ ಮೂರ್ತಿ ನೀಡಿ ಸನ್ಮಾನ ಮಾಡಲಾಯಿತು. ಇನ್ನು ಉದ್ಘಾಟಕ ಹಂಪನಾ ಅವರಿಗೆ ಮಹಾವೀರ ಮೂರ್ತಿ ನೀಡಿ ಸನ್ಮಾನಿಸಲಾಯಿತುಯ ಡಿಕೆ.ಶಿವಕುಮಾರ್ ಸೇರಿ ವೇದಿಕೆ ಗಣ್ಯರಿಗೆ ಚಾಮುಂಡೇಶ್ವರಿ ಮೂರ್ತಿ ನೀಡಿ ಸನ್ಮಾನ ಗೌರವ ಸಲ್ಲಿಸಲಾಯಿತು.

ಇನ್ನು ದಸರಾ ಉದ್ಘಾಟನಾ ಭಾಷಣ ಮಾಡಿದ  ನಾಡೋಜ ಹಂಪನಾ, ದಸರಾ ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ ಜನರ ಆರಿಸಿದ ಸರಕಾರ ನಡೆಸುವ ಜನರ ಹಬ್ಬ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಎಷ್ಟೇ ಅಡ್ಡಿ ಆತಂಕ ಎದುರಾಗುತ್ತಿದ್ದರು ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ.ಜೀವನವೇ ದೊಡ್ಡ ಅಖಾಡ ಅದರಲ್ಲಿ ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ ಸೌಮ್ಯತೆ ದೌರ್ಬಲ್ಯವಲ್ಲ.ಪ್ರತಿಕೂಲ ಪ್ರವಾಹವನ್ನು ಎದುರಿಸುವ ಧೀಶಕ್ತಿ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಸಾಹಿತಿ ಹಂಪನಾ ಧೈರ್ಯ ತುಂಬಿದರು.

ಇನ್ನು ಸಿಎಂ ಸಿದ್ದರಾಮಯ್ಯ ಮಾತನಾಡಿ ಇದು ಅಧಿಕಾರಿಗಳ ಹಬ್ಬ ಆಗಬಾರದು.ಅದ್ದೂರಿಯಾಗಿ ಹೆಚ್ಚು ಜನ ಭಾಗವಹಿಸಬೇಕು ಎಂದು ಸರ್ಕಾರ ಅಸ್ಥಿರದ ಬಗ್ಗೆ ಹೇಳಿದ ಮಾತಿಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ರು. ಹಂಪನಾ ಮಾತಿಗೆ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ರು.ದಸರಾ ಎಂದರೆ ಮೈಸೂರು ಜನರಿಗೆ ಹರ್ಷ, ಉಲ್ಲಾಸ.ಹಂಪನಾ ಮತ್ತು ಕಮಲಾ ಹಂಪನಾ ಜೋಡಿ ಮಾದರಿಯಾದ ಜೋಡಿ. ಕನ್ನಡ ಸಾರಸ್ವತ ಲೋಕಕ್ಕೆ ಹಂಪನಾ ಕೊಡುಗೆ ಅಪಾರ.ಕರ್ನಾಟಕ ಕಂಡ ಅಪರೂಪದ ಸಾಹಿತಿ ಹಂಪನಾ.ಚುನಾಯಿತ ಸರ್ಕಾರಗಳನ್ನು ವಾಮಮಾರ್ಗದಿಂದ ಕೆಲಸ ತಪ್ಪು ಎಂದು ಹಂಪನಾ ಹೇಳಿರುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹಳ ಮಹತ್ವ ಪೂರ್ಣವಾದದ್ದು.ಐದು ವರ್ಷ ಕಾಲ ಅಭಿವೃದ್ಧಿ ಮಾಡೇ ಮಾಡುತ್ತೇವೆ.ದೇವರಾಜ ಅರಸು ಬಿಟ್ಟರೆ ಐದು ವರ್ಷ ಪೂರ್ಣ ಮಾಡಿದ್ದು ಬಿಟ್ಟರೆ ನಂತರ ಐದು ವರ್ಷ ಸರ್ಕಾರ ಮಾಡಿದ್ದು ಈ  ಸಿದ್ದರಾಮಯ್ಯ ಮಾತ್ರ. ತಾಯಿ ಚಾಮುಂಡಿ ಆಶೀರ್ವಾದ ನನ್ನ ಮೇಲೆ ಇದೆ. ಜಿಟಿಡಿ ಬೇರೆ ಪಕ್ಷದಲ್ಲಿ ಇದ್ದರು ಸತ್ಯದ ಮಾತು ಹೇಳಿದ್ದಾರೆ ಸತ್ಯ ಮೇವಾ ಜಯತೇ ಸತ್ಯಕ್ಕೆ ಯಾವಾಗಲೂ- ಜನರ ಆಶೀರ್ವಾದ ಸರ್ಕಾರದ ಮೇಲೆ ನನ್ನ ಮೇಲೆ ಇರುವವರೆಗೂ ನನ್ನ ಯಾರು ಏನೂ ಮಾಡಲು ಆಗಲ್ಲ. ಜಿಟಿಡಿಯೆ ನನ್ನ ಈ ಕ್ಷೇತ್ರದಲ್ಲಿ ಸೋಲಿಸಿದ್ದು. ಅದು ನನ್ನ ಕೈಯಾರೆ ಮಾಡಿಕೊಂಡ ಸೋಲು.ನಾನು ಒಂಭತ್ತು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ.ಚಾಮುಂಡೇಶ್ವರಿ ಕೃಪೆಯಿಂದ ಇಲ್ಲಿವರೆಗೆ ಇದ್ದೇನೆ.ನಾನು ಯಾವ ತಪ್ಪು ಮಾಡಿಲ್ಲ ತಪ್ಪು ಮಾಡಿದ್ದರೆ ಇಷ್ಟು ಸುಧೀರ್ಘ ರಾಜಕಾರಣ ಮಾಡಲು‌ ಆಗುತ್ತಿರಲಿಲ್ಲ. ಜಿಟಿಡಿ ಮಾತಿನಿಂದ ನನಗೆ ಹೆಚ್ಚು ಬಲ ಬಂದಿದೆ: ಜಿಟಿಡಿ ಗೆ ನನ್ನ ಧನ್ಯವಾದ.ಚಾಮುಂಡಿ ದೇವಿ ಕೊಟ್ಟ ಶಕ್ತಿಯಿಂದ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.