ಮನೆ Latest News ದರ್ಶನ್ ರನ್ನು ಕೋರ್ಟ್ ಆದೇಶದ ಮೇಲೆ ಶಿಫ್ಟ್ ಮಾಡ್ತೇವೆ; ಸಿಎಂ ಸಿದ್ದರಾಮಯ್ಯ ಹೇಳಿಕೆ

ದರ್ಶನ್ ರನ್ನು ಕೋರ್ಟ್ ಆದೇಶದ ಮೇಲೆ ಶಿಫ್ಟ್ ಮಾಡ್ತೇವೆ; ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು; ನಟ ದರ್ಶನ್ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಇಂದು ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತರ ಮಾಡೋ ವಿಚಾರಕ್ಕೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರಿಪೋರ್ಟ್ ಕೊಟ್ಟ ಮೇಲೆ ವಿಚಾರಣೆ ಮಾಡೋಕೆ‌ ಹೇಳಿದ್ದೀನಿ. ಈಗಾಗಲೇ 9 ಜನರನ್ನ‌ ಸಸ್ಪೆಂಟ್ ಮಾಡಿದ್ದೀವಿ .ಸೀನಿಯರ್ ಸೂಪರಿಡೆಂಟ್ ವರದಿ ನೀಡಲು ಹೇಳಿದ್ದೇನೆ.ಇನ್ನೂ‌ ಯಾರನ್ನಾದ್ರೂ ಸಸ್ಪೆಂಡ್ ಮಾಡಬೇಕಾದ್ರೆ ಮಾಡ್ತೀವಿ.ಯಾವ ಜೈಲಿಗೆ ಸ್ಥಳಾತಂರ ಮಾಡ್ಬೇಕು ಅನ್ನೋದನ್ನು ನಾವು ಹೇಳೋಕೆ ಆಗಲ್ಲ ಅದನ್ನು ಪೊಲೀಸರು ತೀರ್ಮಾನ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಇನ್ನು ದರ್ಶನ್ ಅವರನ್ನು ಕೋರ್ಟ್ ಆದೇಶದ ಮೇಲೆ ಶಿಫ್ಟ್ ಮಾಡುತ್ತೇವೆ.ಅದನ್ನು ನಾವು ತೀರ್ಮಾನ ಮಾಡಲು ಆಗೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ದರ್ಶನ್ ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಾವು ತೀರ್ಮಾನ ಮಾಡಕ್ಕಾಗಲ್ಲ; ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ

ಬೆಂಗಳೂರು; ದರ್ಶನ್ ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ನಾವು ತೀರ್ಮಾನ ಮಾಡಕ್ಕಾಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡಕ್ಕಾಗಲ್ಲ.ಜೈಲು ಪ್ರಾಧಿಕಾರವು ಕೋರ್ಟಿನ ನಿರ್ದೇಶನ ಮೇರೆಗೆ ಸ್ಥಳಾಂತರ ಮಾಡಲಿದೆ. ವಿಚಾರಣಾ ಕೈದಿ ಆಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳಡಿ ಸ್ಥಳಾಂತರ ಮಾಡ ಬೇಕಾಗುತ್ತದೆ.ಇನ್ನು ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಕ್ಲಾರಿಟಿ ಸಿಗಲಿದೆ ಎಂದಿದ್ದಾರೆ.

ಇನ್ನು  ಜೈಲಿನಲ್ಲಿ ಮೂರು ವಿಭಾಗ ಮಾಡೋ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಭದ್ರತೆ ಧೃಷ್ಟಿಯಿಂದ ಆಂತರಿಕಾ ಆಡಳಿತ ವಿಭಾಗ ಮಾಡಬಹುದು.ಮೂರು ಜೈಲು‌ ಮಾಡೋಕೆ ಆಗಲ್ಲ.ಒಳಗಡೆ ಮೂರು ಬ್ಲಾಕ್ ಇದೆ. ಬೇರೆ ಬ್ಯಾರಕ್ ಇದೆ.ಜೈಲಿನಲ್ಲಿ ತನಿಖಾ ಹಂತದ ಕೈದಿಗಳು,ಲೈಪ್ ಪ್ರಿಸನರ್ಸ್ ಅವರನ್ನೆಲ್ಲ ಬೇರೆ ಇಟ್ಟಿರ್ತಾರೆ.ಅದನ್ನ ಜೈಲಿನ ಅಧಿಕಾರಿಗಳಿಗೆ ಬಿಟ್ಟಿದ್ದೇವೆ ಎಂದರು.

ಇದೇ ವೇಳೆ ಪರಮೇಶ್ವರ್ ಅವರು ಜೈಲಿಗೆ ಭೇಟಿ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬ್ಯಾರಕನಿಂದ ಮತ್ತೊಂದು ಬ್ಯಾರಕ್ ಗೆ ಹೋಗೋಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈಗಾಗಲೇ 9 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಬೇರೆ ಯಾರು ದರ್ಶನ್ ಗುಂಪಿಗೆ ಸಹಾಯ ಮಾಡಿದ್ದಾರೆ. ಸಿಗರೇಟ್, ಚೇರ್, ಕಾಫಿ ತಂದುಕೊಟ್ಟಿದ್ದು ಎಲ್ಲದನ್ನ ಸಿಸಿಟಿವಿ ಆಧರಿಸಿ ಕ್ರಮ ಆಗಿದೆ.ಐಪಿಎಸ್ ಅಧಿಕಾರಿಯನ್ನು ತನಿಖೆಗೆ ನಿಯೋಜಿಸಲಾಗುತ್ತಿದೆ ಎಂದರು.

ಇನ್ನು ಜೈಲಿನ ಸುಧಾರಣೆಗೆ ವರದಿ ಅನುಷ್ಠಾನ ವಿಚಾರಕ್ಕೆ  ಪ್ರತಿಕ್ರಿಯಿಸಿದ ಅವರು ಎಚ್ ಕೆ ಪಾಟೀಲ್ ವರದಿ ಕೊಟ್ಟಿದ್ದು ಗಮನಕ್ಕೆ ಬಂದಿರಲಿಲ್ಲ.ಅದನ್ನ ತರಿಸಿಕೊಳ್ಳುತ್ತೇನೆ.ಈಗಿರೋ ವ್ಯವಸ್ಥೆ ಬದಲಾವಣೆ ಅಗತ್ಯವಿದೆ.ಇದನ್ನ ಮಾಡುತ್ತೆವೇವೆ.ಈಗಾಗಲೇ 9 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ.ಚೀಫ್ ಸೂಪರಿಂಟೆಂಡೆಂಟ್ ಅವರನ್ನೂ ಸಸ್ಪೆಂಡ್ ಮಾಡಿದ್ದೇವೆ.ಇನ್ನೊಬ್ರು ಸೂಪರಿಂಟೆಂಡೆಂಟ್ ರನ್ನೂ ಸಸ್ಪೆಂಡ್ ಮಾಡಿದ್ದೇವೆ.ಇನ್ಯಾರ್ಯಾರು ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಸಸ್ಪೆಂಡ್ ಮಾಡಲಾಗಿದೆ.ತನಿಖೆ ಇನ್ನೂ ಮುಂದುವರೆದಿದೆ.ಮುಂದಿನ ತನಿಖೆಗಾಗಿ ಇಂದು ಒಬ್ಬರು ಐಪಿಎಸ್ ಅಧಿಕಾರಿ ನೇಮಕ ಮಾಡ್ತೇವೆ.ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ತೇವೆ ಎಂದಿದ್ದಾರೆ.