ಮನೆ Latest News ಡಿಸಿಎಂ ಡಿ ಕೆ ಶಿವಕುಮಾರ್ ನಿವಾಸಕ್ಕೆ ದರ್ಶನ ಪತ್ನಿ ಹಾಗೂ ಸಹೋದರ ಭೇಟಿ

ಡಿಸಿಎಂ ಡಿ ಕೆ ಶಿವಕುಮಾರ್ ನಿವಾಸಕ್ಕೆ ದರ್ಶನ ಪತ್ನಿ ಹಾಗೂ ಸಹೋದರ ಭೇಟಿ

0

ಬೆಂಗಳೂರು : ನಿನ್ನೆ ರಾಮನಗರದಲ್ಲಿ ನಡೆದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅರು ವೇದಿಕೆಯಲ್ಲಿದ್ದ  ವೇಳೆ ಅಲ್ಲಿದ್ದ ದರ್ಶನ್ ಅಭಿಮಾನಿಗಳು ಡಿ ಬಾಸ್ ಡಿ ಬಾಸ್ ಎಂದು ಘೋಷಣೆ ಕೂಗಿದ್ರು. ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್ ಅವರು ದರ್ಶನ್ ಪತ್ನಿ ನಾಳೆ ನನ್ನನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ. ಅಲ್ಲದೇ ಒಂದು ವೇಳೆ ಪ್ರಕರಣದಲ್ಲಿ ದರ್ಶನ್ ಅವರಿಗೆ ಅನ್ಯಾಯ ಆಗಿದ್ದರೆ ಸರಿಪಡಿಸಲು ಪ್ರಯತ್ನ ಪಡ್ತೀನಿ. ಆದರೆ, ನಾವು ಕಾನೂನನ್ನು ಗೌರವಿಸಬೇಕು ಎಂದಿದ್ದರು.  ಅನ್ಯಾಯ ಆಗಿದ್ದವರಿಗೆ ನಾವೆಲ್ಲ ಸೇರಿ ನ್ಯಾಯ ಕೊಡಿಸುವ ಕೆಲಸ ಮಾಡೋಣ. ನೋವು ಉಂಡವರಿಗೆ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದಿದ್ದರು.

ಇದಾದ ಬೆನ್ನಲ್ಲೇ ಇಂದು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್‌ ತೂಗುದೀಪ ಡಿಸಿಎಂ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿಎಂ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ದರ್ಶನ್‌ ಪ್ರಕರಣದ ಕುರಿತು ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ದರ್ಶನ್ ಅವರು ಅರೆಸ್ಟ್ ಆದಾಗಿನಿಂದ ಅವರನ್ನು ಹೊರಗೆ ತರಲು ವಿಜಯಲಕ್ಷ್ಮೀ ಅವರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಈಗಾಗಲೇ ಹಿರಿಯ ವಕೀಲ ಸಿ ವಿ ನಾಗೇಶ್ ಅವರನ್ನು ದರ್ಶನ್ ಪರ ವಕಾಲತ್ತು ವಹಿಸಲು ವಿಜಯಲಕ್ಷ್ಮೀ ನೇಮಿಸಿಕೊಂಡಿದ್ದಾರೆ. ಸದ್ಯ ಡಿಕೆಶಿ ಅವರನ್ನು ಭೇಟಿ ಮಾಡಿರೋದು ಕುತೂಹಲ ಮೂಡಿಸಿದೆ.