ಮನೆ Latest News ಜೈಲಿನಲ್ಲಿ ದರ್ಶನ್ ಜಾಲಿ ಲೈಫ್ ನ ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ವೀಡಿಯೋ ಕೂಡ...

ಜೈಲಿನಲ್ಲಿ ದರ್ಶನ್ ಜಾಲಿ ಲೈಫ್ ನ ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ವೀಡಿಯೋ ಕೂಡ ವೈರಲ್

0

ಬೆಂಗಳೂರು;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಬರೋಬ್ಬರಿ ಎರಡು ತಿಂಗಳಾಯ್ತು. ನಟ ದರ್ಶನ್ ಅವರು ಜೈಲು ಸೇರಿದಾಗಿನಿಂದಲೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ದರ್ಶನ್ ಅವರು ಜೈಲಿನಲ್ಲಿ ಎಷ್ಟೊಂದು ಆರಾಮಾವಾಗಿದ್ದಾರೆ ಎಂಬ ಫೋಟೋ ಒಂದು ವೈರಲ್ ಆಗಿದೆ.

ಸದ್ಯ ವೈರಲ್ ಆಗಿರೋ ಫೋಟೋ ರಾಜ್ಯದಲ್ಲಿ ಭಾರೀ ಚರ್ಚೆಗೆ , ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ದರ್ಶನ್ ಅವರ ವೀಡಿಯೋ ಒಂದು ವೈರಲ್ ಆಗಿದೆ. ಜೈಲಿನಲ್ಲಿರುವ ಕೈದಿಯೊಬ್ಬರು ಅವರ ಕಡೆಯವರಿಗೆ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಿರುವಾಗ ಆ ವ್ಯಕ್ತಿಯ ಜೊತೆ ದರ್ಶನ್ ಅವರು ಕೂಡ ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೆಲ್ಲಾ ನೋಡಿದ್ರೆ ದರ್ಶನ್ ಅವರು ಜೈಲಿನಲ್ಲಿ ಎಷ್ಟೊಂದು ಆರಾಮವಾಗಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಇದೀಗ ಫೋಟೋ ಹಾಗೂ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಇಷ್ಟು ದಿನ ದರ್ಶನ್ ಅವರಿಗೆ ಊಟ ಸೇರ್ತಿಲ್ಲ. ನಿದ್ದೆ ಬರ್ತಿಲ್ಲ. ಅವರು ಸೋರಗಿದ್ದಾರೆ. ಕಣ್ಣೀರು ಹಾಕ್ತಿದ್ದಾರೆ ಅಂತೆಲ್ಲಾ ಹೇಳ್ತಿದ್ದದ್ದು ಸುಳ್ಳಾ ಎಂದು ಅಭಿಮಾನಿಗಳು ತಲೆ ಚಚ್ಚಿಕೊಳ್ಳುತ್ತಿದ್ದಾರೆ.

ಜೈಲಿನಲ್ಲಿ ಬಿಂದಾಸ್ ಆಗಿರುವ ನಟ ದರ್ಶನ್ : ವಿಲ್ಸನ್ ಗಾರ್ಡನ್ ನಾಗ , ಮ್ಯಾನೇಜರ್ ನಾಗರಾಜ್ ಜೊತೆ ಹರಟೆ ಹೊಡೆಯುತ್ತಿರುವ ವೀಡಿಯೋ ವೈರಲ್

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು ಸೇರಿ ಬರೋಬ್ಬರಿ ಎರಡು ತಿಂಗಳಾಯ್ತು. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಾಗಿನಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಊಟ ಸೇರುತ್ತಿಲ್ಲ , ಅನಾರೋಗ್ಯ ಕಾಡುತ್ತಿದೆ ಎಂದೆಲ್ಲಾ ಸುದ್ದಿಯಾಗುತ್ತಲೇ ಇತ್ತು. ಆದ್ರೀಗ ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ ಎಂಬ ಫೋಟೋ ಒಂದು ವೈರಲ್. ಫೋಟೋ ನೋಡಿದವರು ಫುಲ್ ಶಾಕ್ ಆಗಿದ್ದಾರೆ.

ಹೌದು.. ಜೈಲಿನಲ್ಲಿ ನಟ ದರ್ಶನ್ ಅವರನ್ನು ಮೂರನೇ ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಆದರೆ ಇಷ್ಟು ದಿನ ಅವರು ಜೈಲಿನೊಳಗೆ ಸಾಕಷ್ಟು ನೋವಲ್ಲಿದ್ದಾರೆ. ಅವರಿಗೆ ಊಟ ಸೇರ್ತಿಲ್ಲ. ನಿದ್ದೆ ಮಾಡ್ತಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿತ್ತು.ಆದ್ರೀಗ ದರ್ಶನ್ ಹಾಗಿಲ್ಲ ಅನ್ನೋದು ಫೋಟೋ ನೋಡಿದ್ಮೇಲೆ ಗೊತ್ತಾಗಿದೆ. ತಮ್ಮ ಸ್ಪೆಷಲ್ ಬ್ಯಾರಕ್ ನಿಂದ ಹೊರಗೆ ಬಂದಿರುವ ನಟ ದರ್ಶನ್ ಹೊರಗೆ ಜೈಲಿನ ವರಾಂಡದಲ್ಲಿ ಡಾನ್ ವಿಲ್ಸನ್ ಗಾರ್ಡನ್ ನಾಗ ಹಾಗೂ ದರ್ಶನ್ ಅವರ ಮ್ಯಾನೇಜರ್ ನಾಗರಾಜ್ ಸೇರಿದಂತೆ ಮತ್ತೊಬ್ಬ ವ್ಯಕ್ತಿಯ ಜೊತೆ ದರ್ಶನ್ ಕುಳಿತುಕೊಂಡು ಆರಾಮವಾಗಿ ನಗ್ತಾ ಸಿಗರೇಟ್ ಸೇದ್ತಾ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದೆ. ವಿಗ್ ಇಲ್ಲದೇ ದರ್ಶನ್ ಜೈಲಿನಲ್ಲಿದ್ದಾರೆ ಅನ್ನೋದು ಫೋಟೋ ನೋಡಿದ್ರೆ ಕ್ಲಿಯರ್ ಆಗುತ್ತೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ವೇಲು ಅನ್ನೋರು ಈ ಫೋಟೋವನ್ನು ತೆಗ್ದಿದ್ದಾರೆ. ಅಲ್ಲದೇ ಆ ಫೋಟೋವನ್ನು ತನ್ನ ಪತ್ನಿಗೆ ಕಳುಹಿಸಿದ್ದಾರೆ.ಅದೀಗ ವೈರಲ್ ಆಗಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಜೈಲಿನ ಒಳಗೆ ಕೈದಿಗಳಿಗೆ ಯಾವ ರೀತಿ ಆತಿಥ್ಯ ನೀಡಲಾಗುತ್ತಿದೆ ಅನ್ನೋದು ಬಯಲಾಗಿದೆ. ಅಲ್ಲದೇ ದರ್ಶನ್ ಬಗ್ಗೆ ಹರಿದಾಡುತ್ತಿದ್ದ ಸುದ್ದಿ ಎಷ್ಟರಮಟ್ಟಿಗೆ ನಿಜ ಅಂತಾ ಜನ ಪ್ರಶ್ನೆ ಮಾಡುವಂತಾಗಿದೆ.