ಮನೆ Latest News ಬಳ್ಳಾರಿ ಜೈಲಿನಲ್ಲಿ ನೋಡೋಕೆ ಆಗುತ್ತಿಲ್ಲ ಡಿ ಬಾಸ್ ಕಷ್ಟ; ಬೆನ್ನು ನೋವಿನಿಂದಾಗಿ ನಡೆಯೋದಕ್ಕೆ ಆಗದೇ ಪರದಾಡುತ್ತಿದ್ದಾರೆ...

ಬಳ್ಳಾರಿ ಜೈಲಿನಲ್ಲಿ ನೋಡೋಕೆ ಆಗುತ್ತಿಲ್ಲ ಡಿ ಬಾಸ್ ಕಷ್ಟ; ಬೆನ್ನು ನೋವಿನಿಂದಾಗಿ ನಡೆಯೋದಕ್ಕೆ ಆಗದೇ ಪರದಾಡುತ್ತಿದ್ದಾರೆ ದರ್ಶನ್

0
darshan bail

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ಡಿ ಬಾಸ್ ದರ್ಶನ್ ಅವರ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ಕೋರ್ಟ್ ವಜಾ ಮಾಡಿದೆ. ಸದ್ಯ ಬೇಲ್ ಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಒಂದು ಕಡೆ ಬೇಲ್ ಚಿಂತೆಯಾದರೆ ಮತ್ತೊಂದು ಕಡೆ ಡಿ ಬಾಸ್ ದರ್ಶನ್ ಅತೀವವಾದ ಬೆನ್ನು ನೋವಿನಿಂದ ಬಳಲಿ ಬೆಂಡಾಗಿ ಹೋಗಿದ್ದಾರೆ.

ಈಗಾಗಲೇ ದರ್ಶನ್ ಅವರ ಬೆನ್ನುನೋವಿಗಾಗಿ ಮೆಡಿಕಲ್ ಬೆಡ್ ಹಾಗೂ ಪಿಲ್ಲೋ ನೀಡಲಾಗಿದೆ. ಹೀಗಿದ್ರೂ ಅವರಿಗೆ ಬೆನ್ನು ನೋವು ಕಮ್ಮಿಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಬೆನ್ನು ನೋವು ಸಮಸ್ಯೆ ಉಲ್ಬಣಿಸುತ್ತಿದೆ.ದರ್ಶನ್ ನಿನ್ನೆ ಹೈಸೆಕ್ಯೂರಿಟಿ ಸೆಲ್ ನಿಂದ ವಕೀಲರನ್ನು ಭೇಟಿಯಾಗಲು ಬಂದಾಗ ಅವರು ಬೆನ್ನುನೋವಿನಿಂದಾಗಿ ಎಷ್ಟು ಕಂಗಾಲಾಗಿದ್ದಾರೆ ಅನ್ನೋದು ಗೊತ್ತಾಯ್ತು.ನಡೆಯುತ್ತಿದ್ದಂತೆ ದರ್ಶನ್ ಅವರು ನಡು ಮತ್ತು ಬೆನ್ನನ್ನು ಹಿಡಿದುಕೊಂಡು ನಡೆದಿದ್ದಾರೆ. ಪ್ರತಿ ಬಾರಿ ವಿಜಿಟಿಂಗ್ ರೂಮ್ ಗೆ ನಡೆದುಕೊಂಡು ಬರುವಾಗ ನಡೆಯಲ್ಲಿ ನಿಖರತೆ ಇತ್ತು.ಆದರೆ ಶನಿವಾರ ವಕೀಲರನ್ನು ಭೇಟಿಯಾಗಲು ಬಂದಾಗ ದರ್ಶನ್ ಅವರು ನಡೆಯುತ್ತಿದ್ದು ನೋಡುತ್ತಿದ್ದಾಗ ಅವರಿಗೆ ಎಷ್ಟು ನೋವಿದೆ ಅನ್ನೋದು ಗೊತ್ತಾಯ್ತು.

ಇದೀಗ ಇದೇ ದರ್ಶನ್ ಅವರ ಬೇಲಿಗೆ ಪ್ರಮುಖ ಅಂಶ ಆಗೋ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ವೈದ್ಯರ ವರದಿಯನ್ನು ಜೈಲ್ ಅಧಿಕಾರಿಗಳು ದರ್ಶನ್ ವಕೀಲರಿಗೆ ನೀಡಿದ್ದಾರೆ. ಪ್ರತಿದಿನವು ಬೆನ್ನುನೋವಿನಿಂದ ಮುಕ್ತಿ ಪಡೆಯಲು ದರ್ಶನ್ ವ್ಯಾಯಾಮ ಮಾಡುತ್ತಿದ್ದಾರೆ. ಬೆನ್ನು ನೋವಿನಿಂದ ಮುಕ್ತಿ ಪಡೆಯಲು ಫಿಜಿಯೋ ಥೆರಫಿಸ್ಟ್ ಕಲಿಸಿದ ವ್ಯಾಯಾಮ ಮಾಡುತ್ತಿದ್ದಾರೆ.

ಜಾಮೀನು ನಿರೀಕ್ಷೆಯಲ್ಲಿದ್ದ ಡಿ ಬಾಸ್ ಗೆ ಭಾರೀ ನಿರಾಸೆ; ದರ್ಶನ್ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

ಬೆಂಗಳೂರು;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ತೀರ್ಪು ಇಂದು ಹೊರ ಬಿದ್ದಿದೆ. ದರ್ಶನ್ ಅವರ ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ಪರ ವಿರೋಧದ ವಾದ ಆಲಿಸಿದ ಕೋರ್ಟ್ ಇಂದು ತೀರ್ಪು ನೀಡಿದೆ. ದರ್ಶನ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ತೀರ್ಪು ನೀಡಿದ್ದು, ಜಾಮೀನು ಸಿಕ್ಕೇ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ಭಾರೀ ನಿರಾಸೆಯಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಜಾಮೀನು ಕೋರಿ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಟ್ಟಂತೆ ಸರ್ಕಾರದ ಪರವಾದ ವಕೀಲರಾಗಿ  ಎಸ್ ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರವಾಗಿ ಹಿರಿಯ ಕ್ರಿಮಿನಲ್ ಲಾಯರ್ ಸಿ.ನಾಗೇಶ್ ವಾದ ಮಂಡಿಸಿದ್ದರು. ಪದೇ ಪದೇ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆಯಾಗುತ್ತಲೇ ಇತ್ತು. ಅಲ್ಲದೇ ಕೋರ್ಟ್ ಇಂದಿಗೆ ಜಾಮೀನು ಅರ್ಜಿಯ ತೀರ್ಪು ಕಾಯ್ದರಿಸಿತ್ತು. ಅದರಂತೆ ಇಂದು ತೀರ್ಪು ಹೊರ ಬಿದ್ದಿದೆ. ದರ್ಶನ್ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಹಾಗಾಗಿ ಇಂದು ಜಾಮು ಸಿಕ್ಕೇ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಡಿ ಬಾಸ್ ಗೆ ನಿರಾಸೆಯಾಗಿದೆ. ಸದ್ಯಕ್ಕಂತೂ ಜೈಲೇ ಗತಿ ಅನ್ನೋ ಹಾಗಾಗಿದೆ.