ಬೆಂಗಳೂರು; ಡಿ ಬಾಸ್ ಅಭಿಮಾನಿ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ನಿನ್ನೆಯಿಂದಲೇ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇನ್ನು ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇನ್ನು ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಾಯ್ತು. ಕೊಲೆಯಾದ ಜಾಗ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಕಾರ್ ಶೆಡ್ ಬಳಿಗೆ ಕರೆದುಕೊಂಡು ಹೋಗಲಾಯ್ತು. ಪ್ರಕಪರಣದ ಎ2 ಆರೋಪಿ ಆಗಿರುವ ದರ್ಶನ್ ಅವರನ್ನು ಕಾರ್ ಶೆಡ್ ಬಳಿ ಕರೆ ತಂದು ಮಾಹಿತಿ ಕಲೆ ಹಾಕಲಾಯ್ತು. ಅನ್ನಪೂರ್ಣೇಶ್ವರಿ ನಗರದ ಪೊಲೀಸರು ದರ್ಶನ್ ರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.ದರ್ಶನ್ ಅವರನ್ನು ಒಬ್ಬರನ್ನೇ ಕರೆ ತಂದು ಸ್ಥಳ ಮಹಜರು ನಡೆಸಿದ್ರೆ ಉಳಿದ ಆರೋಪಿಗಳನ್ನು ಒಟ್ಟಿಗೆ ಕರೆತಂದು ದರ್ಶನ್ ಗೂ ಮುನ್ನ ಸ್ಥಳ ಮಹಜರು ನಡೆಸಲಾಯ್ತು.
ಇನ್ನು ಆರೋಪಿಗಳು ವಿಚಾರಣೆ ವೇಳೆ ಮಾತನಾಡಿಕೊಂಡು ಪ್ಲ್ಯಾನ್ ಮಾಡಿಕೊಂಡು ಉತ್ತರ ನೀಡುವ ಸಾಧ್ಯತೆಯಿರೋ ಕಾರಣ ಪೊಲೀಸರು ಕೂಡ ಭರ್ಜರಿಯಾಗಿಯೇ ಪ್ಲ್ಯಾನ್ ಮಾಡಿದ್ದಾರೆ. 13 ಆರೋಪಿಗಳನ್ನು ಮೂರು ತಂಡಗಳಾಗಿ ಮಾಡಿಕೊಂಡು ವಿಚಾರಣೆ ಮಾಡೋದಕ್ಕೆ ನಿರ್ಧರಿಸಿದ್ದಾರೆ.ಅದರಂತೆ ಮೂರು ತಂಡಗಳಾಗಿ ಮಾಡಿಕೊಂಡು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ದರ್ಶನ್ ಆಂಡ್ ಗ್ಯಾಂಗ್ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದು ಹೇಗೆ?
ತಮ್ಮ ಅಭಿಮಾನಿಯನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್, ಅವರ ಸ್ನೇಹಿತೆ ಪವಿತ್ರ ಗೌಡ ಸೇರಿ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಇನ್ನು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಶಾಕಿಂಗ್ ಸುದ್ದಿಗಳು ಹೊರ ಬಿದ್ದಿವೆ. ಆರೋಪಿಗಳು ದರ್ಶನ್ ಅವರು ತಮ್ಮಿಂದ ಯಾವ ರೀತಿ ಈ ಕೆಲಸ ಮಾಡಿಸಿದ್ರು ಅನ್ನೋದನ್ನು ಬಾಯ್ಬಿಟ್ಟಿದ್ದಾರೆ.
ಅಂದ್ಹಾಗೆ ಈ ಕೊಲೆಯಾದ ಬಳಿಕ ವಾಟ್ಸಾಪ್ ಕಾಲ್ ಮೂಲಕ ಹೇಗೆ ಮೃತದೇಹವನ್ನು ಸಾಗಿಸೋದು ಅನ್ನೋ ಬಗ್ಗೆ ಪ್ಲ್ಯಾನ್ ಮಾಡಲಾಗಿತ್ತಂತೆ.ದರ್ಶನ್ ಗೆ ವಾಟ್ಸಾಪ್ ಕಾಲ್ ಮಾಡಿ ಮೃತದೇಹ ಸಾಗಿಸೋ ಬಗ್ಗೆ ಮಾತುಕತೆ ನಡೆದಿದೆ. ಇದೇ ವೇಳೆ ಡೆಡ್ ಬಾಡಿಯನ್ನು ಕೊಲೆಯಾದ ಜಾಗದಿಂದ ತೆಗೆದುಕೊಂಡು ಹೋಗಿ ಬೇರೆ ಕಡೆ ಹಾಕಲು ಈ ಡಿ ಗ್ಯಾಂಗ್ ನ ಇತರೆ ಆರೋಪಿಗಳು ಬರೋಬ್ಬರಿ 30 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರಿಂದ 30 ಲಕ್ಷ ರೂಪಾಯಿ ನೀಡೋದಾಗಿ ಭರವಸೆ ಸಿಕ್ಕಿದ ಬಳಿಕ ಆರೋಪಿಗಳು ಮೃತದೇಹವನ್ನು ರಾಜ ರಾಜೇಶ್ವರಿ ನಗರದ ಪಟ್ಟಣಗೆರೆಯ ಕಾರ್ ಶೆಡ್ ನಿಂದ ಸ್ಕಾರ್ಫಿಯೋ ಕಾರ್ ಮೂಲಕ ತೆಗೆದುಕೊಂಡು ಬಂದು ಸುಮನಹಳ್ಳಿ ಬ್ರಿಡ್ಜ್ ಬಳಿ ರಾಜ ಕಾಲುವೆಗೆ ಎಸೆದಿದ್ದಾರೆ.
ಇನ್ನು ಜೂನ್ 8 ರಂದು ರಾತ್ರಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದ್ದು ಜೂನ್ 9 ರಂದು ಮುಂಜಾನೆ 3 ಗಂಟೆ ಸುಮಾರಿಗೆ ಮೃತದೇಹವನ್ನು ಕೊಲೆಯಾದ ಜಾಗದಿಂದ ತಂದು ರಾಜಕಾಲುವೆಗೆ ಆರೋಪಿಗಳು ಎಸೆದಿದ್ದಾರೆ. ಶವವನ್ನು ರಾಜಕಾಲುವೆ ಮಧ್ಯೆ ಎಸೆಯೋದಕ್ಕೆ ಆರೋಪಿಗಳು ಪ್ಲ್ಯಾನ್ ಮಾಡಿದ್ರು. ಆದ್ರೆ ಶವ ರಾಜಕಾಲುವೆಯ ತುದಿಯಲ್ಲೇ ಸಿಕ್ಕಿ ಹಾಕಿಕೊಂಡಿತ್ತು. ಹಾಗಾಗಿ ಬೀದಿನಾಯಿಗಳು ಅವುಗಳನ್ನು ತಿನ್ನಲು ಶುರುಮಾಡಿವೆ. ಇದನ್ನು ಪಕ್ಕದ ಅಪಾರ್ಟೆ ಮೆಂಟ್ ಸಿಕ್ಯೂರಿಟಿ ಗಾರ್ಡ್ ನೋಡಿದ್ದಾರೆ. ಬಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದಾರೆ.
ಅನುಮಾನಸ್ಪದ ವ್ಯಕ್ತಿಗಳಿಗೆ ಪೊಲೀಸರಿಂದ ಕರೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಸುದ್ದಿ ಸಿಗುತ್ತಿದ್ದಂತೆ ನಟ ದರ್ಶನ್ ಅಲರ್ಟ್ ಆಗಿದ್ದಾರೆ. ಈ ಕೇಸಿನಲ್ಲಿ ನಾನು ಬಚಾವ್ ಆಗ್ಬೇಕು ಅಂತ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.ಮೂವರಿಗೂ ಕರೆ ಮಾಡಿ ನೀವು ಮೂವರು ಕೂಡ ಪೊಲೀಸರಿಗೆ ಶರಣಾಗಿ ಎಂದಿದ್ದಾರೆ. ಅಲ್ಲದೇ 30 ಲಕ್ಷ ರೂಪಾಯಿಯ ಆಫರ್ ಕೊಟ್ಟಿದ್ದಾರೆ. ಅದರಂತೆ ತಾವೇ ಕೊಲೆ ಮಾಡಿದ್ದೆಂದು ಠಾಣೆಗೆ ಹೋಗಿ ಮೂವರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆದರೆ ಮೂವರನ್ನ ಪ್ರತ್ಯೇಕವಾಗಿ ವಿಚಾರಣೆ ಮಾಡುವಾಗ ವಿಭಿನ್ನ ಹೇಳಿಕೆ ಕೊಟ್ಟಿದ್ದಾರೆ. ಇವರ ಹೇಳಿಕೆಗಳ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ.ಆರಂಭದಲ್ಲಿ ಹಣಕಾಸು ವಿಚಾರಕ್ಕೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ.ಆದರೆ ಪೊಲೀಸರು ತಮ್ಮದೇ ಭಾಷೆಯಲ್ಲಿ ಆರೋಪಿಗಳ ಬಾಯಿ ಬಿಡಿಸಿದಾಗ ಅವರು ನಿಜಾಂಶ ಹೇಳಿದ್ದಾರೆ. ದರ್ಶನ್ ಹಾಗೂ ಪವಿತ್ರ ಗೌಡ ಹೆಸರು ಹೇಳಿದ್ದಾರೆ.ಆರೋಪಿಗಳ ಹೇಳಿಕೆಯಂತೆ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಭಾಗಿಯ ಬಗ್ಗೆ ಟೆಕ್ನಿಕಲ್ ಅವಿಡೆನ್ಸ್ ಸಂಗ್ರಹಿಸಿ ದರ್ಶನ್ ಹಾಗೂ ಪವಿತ್ರ ಅವರನವ್ನು ಬಂಧಿಸಿದ್ದಾರೆ.