ಮನೆ Latest News ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್; ದಾಸ ಈಗ ಕೈದಿ ಸಂಖ್ಯೆ 511

ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್; ದಾಸ ಈಗ ಕೈದಿ ಸಂಖ್ಯೆ 511

0

 

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಫೋಟೋ ವೀಡಿಯೋ ವೈರಲ್ ಆದ ಬೆನ್ನಲ್ಲೇ ಕೋರ್ಟ್ ಅನುಮತಿ ಮೇರೆಗೆ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಬೆಳಗ್ಗೆ 4 ಗಂಟೆಗೆ ವೇಳೆಗೆ ನಟ ದರ್ಶನ್ ಅವರನ್ನು ಕರೆದುಕೊಂಡು ಪೊಲೀಸರು ಹೊರಟಿದ್ದಾರೆ.

ನಸುಕಿನ ಜಾವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ದರ್ಶನ್ ಅವರನ್ನು ಕರೆದುಕೊಂಡು ಹೊರಟ ಪೋಲಿಸರು ಆಂಧ್ರ ಮಾರ್ಗವಾಗಿ ಬಳ್ಳಾರಿಗೆ ಸೇರಿದ್ದಾರೆ. ಪರಪ್ಪನ ಅಗ್ರಹಾರದಿಂದ ಸಿಲ್ಕ್ ಬೋರ್ಡ್, ಹೆಬ್ಬಾಳ, ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಪೆನಗೊಂಡ, ಅನಂತಪುರ ಮಾರ್ಗವಾಗಿ ಬಳ್ಳಾರಿ ಜೈಲಿಗೆ ನಟ ದರ್ಶನ್ ಅವರನ್ನು ಸೇರಿಸಿದ್ದಾರೆ. ಇನ್ನು ಬೆಂಗಳೂರು ಜೈಲಿನಿಂದ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಪೊಲೀಸರು ಸ್ಥಳಾಂತರ ಮಾಡಲು ಮುಂದಾದಾಗ ನಟ ದರ್ಶನ್ ಮಂಕಾಗಿದ್ದರು ಎನ್ನಲಾಗಿದೆ. ಅಧಿಕಾರಿಗಳ ಬಳಿ ನಾನು ಇಲ್ಲೇ ಇರುತ್ತೇನೆ ಎಂದು ನಟ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ಒಲ್ಲದ ಮನಸ್ಸಿನಿಂದ ಪೊಲೀಸ್ ವಾಹನ ಹತ್ತಿದ್ದಾರೆ ದರ್ಶನ್. ಇನ್ನು ಬಳ್ಳಾರಿ ಜೈಲು ಬಳಿ ಬರುತ್ತಿದ್ದಂತೆ ದರ್ಶನ್ ಬ್ಯಾಗ್ ನ್ನು ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಅವರ ಹೆಸರು, ತಂದೆಯ ಹೆಸರನ್ನು ಡೈರಿಯಲ್ಲಿ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ದರ್ಶನ್ ಕತ್ತಿನಲ್ಲಿದ್ದ ಸರ ಹಾಗೂ ಕೈಯಲ್ಲಿದ್ದ ಕಡಗವನ್ನು ಜೈಲಾಧಿಕಾರಿಗಳು ತೆಗೆಸಿದ್ದಾರೆ.

ಬಳ್ಳಾರಿ ಜೈಲು ರಾಜ್ಯದ ಹಳೆಯ ಜೈಲುಗಳಲ್ಲಿ ಒಂದಾಗಿದ್ದು ಬ್ರಿಟಿಷರ ಕಾಲದಲ್ಲಿ ಇದನ್ನು ನಿರ್ಮಿಸಲಾಗಿದೆ. ಹಿಂದೆ ಕಠೋರ ಶಿಕ್ಷೆಗಳಿಗಾಗಿ ಈ ಜೈಲು ಕುಖ್ಯಾತಿಯನ್ನು ಪಡೆದಿತ್ತು. 16 ಎಕರೆ ವಿಸ್ತೀರ್ಣದಲ್ಲಿರುವ ಈ ಜೈಲಿನಲ್ಲಿ 15 ವಿಶೇಷ ಭದ್ರತಾ ಸೆಲ್ ಗಳಲ್ಲಿದ್ದು ಈ 15 ವಿಶೇಷ ಭದ್ರತಾ ಸೆಲ್ ಗಳಲ್ಲಿ 15ನೇ ಸೆಲ್ ನಲ್ಲಿ ನಟ ದರ್ಶನ್ ಅವರು ಇರಿಸಲಾಗಿದೆ. ಅವರಿಗಾಗಿ ಮೂವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಸಿಸಿಟಿವಿ ಕಣ್ಗಾವಲಿನಲ್ಲೇ ನಟ ದರ್ಶನ್ ಅವರು ಇರಲಿದ್ದಾರೆ.

ಇತ್ತ ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ದರ್ಶನ್ ಅವರ ಅಭಿಮಾನಿಗಳು ಜೈಲಿನ ಬಳಿ ಜಮಾಯಿಸಿದ್ದರು. ಅವರನ್ನು ನಿಯಂತ್ರಿಸೋದೇ ಪೊಲೀಸರಿಗೆ ಬಹು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಜೈಲಿನ ಹೊರಗೂ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಸದ್ಯ ಬಳ್ಳಾರಿ ಜೈಲಿನಲ್ಲಿ 385 ಕೈದಿಗಳಲ್ಲಿದ್ದು ದರ್ಶನ್ ಅವರಿಗೆ ಕೈದಿ ಸಂಖ್ಯೆ 511 ನ್ನು ನೀಡಲಾಗಿದೆ.

ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯದಿಂದ ಅನುಮತಿ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ , ವೀಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ದರ್ಶನ್ ಅವರಿಗೆ ರಾಜ ಮರ್ಯಾದೆ ನೀಡಲು ಸಹಕರಿಸಿದ 7 ಮಂದಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಗೃಹ ಸಚಿವ ಡಾ  ಜಿ ಪರಮೇಶ್ವರ್ ಅವರು ಆದೇಶವನ್ನು ನೀಡಿದ್ದರು.

ಇದರ ಬೆನ್ನಲ್ಲೇ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ವರದಿ ನೀಡುವಂತೆ ಕಾರಾಗೃಹ ಇಲಾಖೆ ಡಿಜಿ ಮಾಲಿನಿ ಕೃಷ್ಣ ಮೂರ್ತಿ ಅವರಿಗೆ ಗೃಹ ಸಚಿವ ಜಿ ಪರಮೇಶ್ವರ್ ಆದೇಶಿಸಿದ್ದರು. ಇದೇ ವೇಳೆ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ರೆ ತೊಂದ್ರೆ ತಪ್ಪಿದ್ದಲ್ಲ ಎಂದು ಅಲರ್ಟ್ ಆದ ಅಧಿಕಾರಿಗಳು  ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಚಿಂತಿಸಿ, ಅದರಂತೆ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಇದೀಗ ಬೆಂಗಳೂರಿನ 24ನೇ ಎಸಿಎಂಎಂ ದರ್ಶನ್ ಅವರನ್ನು ಶಿಫ್ಟ್ ಮಾಡಲು ಒಪ್ಪಿಗೆ ನೀಡಿದೆ.

ದರ್ಶನ್ ಮಾತ್ರವಲ್ಲದೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇತರೆ ಆರೋಪಿಗಳನ್ನು ಕೂಡಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಅನುಮತಿ ಕೊಟ್ಟಿದೆ. ಅದರಂತೆ ಪವನ್ , ರಾಘವೇಂದ್ರ , ನಂದೀಶ್ ಹಾಗೂ  ಜಗದೀಶ್ ಮೈಸೂರು ಜೈಲಿಗೆ, ಲಕ್ಷ್ಮಣ, ಧನರಾಜ ಶಿವಮೊಗ್ಗ ಜೈಲಿಗೆ,ವಿನಯ್ ವಿಜಯಪುರದ ಜೈಲಿಗೆ, ನಾಗರಾಜ್ ಕಲಬುರ್ಗಿ ಜೈಲಿಗೆ, ಪ್ರದೂಶ್ ಬೆಳಗಾವಿ ಜಿಲ್ಲೆಗೆ ಜೈಲಿಗೆ ಶಿಫ್ಟ್ ಆಗಲಿದ್ದಾರೆ.