ಮನೆ Latest News ಜೈಲಿನಲ್ಲಿ ಬಿಂದಾಸ್ ಆಗಿರುವ ನಟ ದರ್ಶನ್ : ವಿಲ್ಸನ್ ಗಾರ್ಡನ್ ನಾಗ , ಮ್ಯಾನೇಜರ್ ನಾಗರಾಜ್...

ಜೈಲಿನಲ್ಲಿ ಬಿಂದಾಸ್ ಆಗಿರುವ ನಟ ದರ್ಶನ್ : ವಿಲ್ಸನ್ ಗಾರ್ಡನ್ ನಾಗ , ಮ್ಯಾನೇಜರ್ ನಾಗರಾಜ್ ಜೊತೆ ಹರಟೆ ಹೊಡೆಯುತ್ತಿರುವ ವೀಡಿಯೋ ವೈರಲ್

0

 

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು ಸೇರಿ ಬರೋಬ್ಬರಿ ಎರಡು ತಿಂಗಳಾಯ್ತು. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಾಗಿನಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಊಟ ಸೇರುತ್ತಿಲ್ಲ , ಅನಾರೋಗ್ಯ ಕಾಡುತ್ತಿದೆ ಎಂದೆಲ್ಲಾ ಸುದ್ದಿಯಾಗುತ್ತಲೇ ಇತ್ತು. ಆದ್ರೀಗ ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ ಎಂಬ ಫೋಟೋ ಒಂದು ವೈರಲ್. ಫೋಟೋ ನೋಡಿದವರು ಫುಲ್ ಶಾಕ್ ಆಗಿದ್ದಾರೆ.

ಹೌದು.. ಜೈಲಿನಲ್ಲಿ ನಟ ದರ್ಶನ್ ಅವರನ್ನು ಮೂರನೇ ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಆದರೆ ಇಷ್ಟು ದಿನ ಅವರು ಜೈಲಿನೊಳಗೆ ಸಾಕಷ್ಟು ನೋವಲ್ಲಿದ್ದಾರೆ. ಅವರಿಗೆ ಊಟ ಸೇರ್ತಿಲ್ಲ. ನಿದ್ದೆ ಮಾಡ್ತಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿತ್ತು.ಆದ್ರೀಗ ದರ್ಶನ್ ಹಾಗಿಲ್ಲ ಅನ್ನೋದು ಫೋಟೋ ನೋಡಿದ್ಮೇಲೆ ಗೊತ್ತಾಗಿದೆ. ತಮ್ಮ ಸ್ಪೆಷಲ್ ಬ್ಯಾರಕ್ ನಿಂದ ಹೊರಗೆ ಬಂದಿರುವ ನಟ ದರ್ಶನ್ ಹೊರಗೆ ಜೈಲಿನ ವರಾಂಡದಲ್ಲಿ ಡಾನ್ ವಿಲ್ಸನ್ ಗಾರ್ಡನ್ ನಾಗ ಹಾಗೂ ದರ್ಶನ್ ಅವರ ಮ್ಯಾನೇಜರ್ ನಾಗರಾಜ್ ಸೇರಿದಂತೆ ಮತ್ತೊಬ್ಬ ವ್ಯಕ್ತಿಯ ಜೊತೆ ದರ್ಶನ್ ಕುಳಿತುಕೊಂಡು ಆರಾಮವಾಗಿ ನಗ್ತಾ ಸಿಗರೇಟ್ ಸೇದ್ತಾ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದೆ. ವಿಗ್ ಇಲ್ಲದೇ ದರ್ಶನ್ ಜೈಲಿನಲ್ಲಿದ್ದಾರೆ ಅನ್ನೋದು ಫೋಟೋ ನೋಡಿದ್ರೆ ಕ್ಲಿಯರ್ ಆಗುತ್ತೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ವೇಲು ಅನ್ನೋರು ಈ ಫೋಟೋವನ್ನು ತೆಗ್ದಿದ್ದಾರೆ. ಅಲ್ಲದೇ ಆ ಫೋಟೋವನ್ನು ತನ್ನ ಪತ್ನಿಗೆ ಕಳುಹಿಸಿದ್ದಾರೆ.ಅದೀಗ ವೈರಲ್ ಆಗಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಜೈಲಿನ ಒಳಗೆ ಕೈದಿಗಳಿಗೆ ಯಾವ ರೀತಿ ಆತಿಥ್ಯ ನೀಡಲಾಗುತ್ತಿದೆ ಅನ್ನೋದು ಬಯಲಾಗಿದೆ. ಅಲ್ಲದೇ ದರ್ಶನ್ ಬಗ್ಗೆ ಹರಿದಾಡುತ್ತಿದ್ದ ಸುದ್ದಿ ಎಷ್ಟರಮಟ್ಟಿಗೆ ನಿಜ ಅಂತಾ ಜನ ಪ್ರಶ್ನೆ ಮಾಡುವಂತಾಗಿದೆ.

ಅತ್ತ ಜೈಲೂಟ ಸೇರ್ತಿಲ್ಲ, ಇತ್ತ ನಿದ್ದೆನೂ ಬರ್ತಿಲ್ಲ; ಮನೆಯೂಟಕ್ಕೆ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ ಡಿ ಬಾಸ್ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿ ಒಂದು ತಿಂಗಳಾಯ್ತು. ಕಳೆದ 18 ದಿನಗಳಿಂದ ವಿಚಾರಣಾಧೀನ ಕೈದಿ 6106 ಆಗಿ  ನಟ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನ ಮೂರನೇ ವಿಶೇಷ ಬ್ಯಾರಕ್ ನಲ್ಲಿದ್ದಾರೆ.

ಇನ್ನು ಜೈಲು ಸೇರಿದಾಗಿನಿಂದ ಡಿ ಬಾಸ್ ಫುಲ್ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ. ಯಾರ ಜೊತೆನೂ ದರ್ಶನ್ ಮಾತನಾಡುತ್ತಿಲ್ಲ. ಮಾಡಿದ ತಪ್ಪಿಗೆ ಅವರು ಪಶ್ಚಾತ್ತಾಪ ಪಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ದರ್ಶನ್ ಪರದಾಡುತ್ತಿದ್ದಾರಂತೆ. ಬ್ಯಾರಕ್ ನಾಲ್ಕು ಗೋಡೆಗಳ ಮಧ್ಯೆ ಸಮಯ ಕಳೆಯೋದು ದರ್ಶನ್ ಗೆ ಕಷ್ಟವಾಗಿದ್ದು ಕೆಲ ಹೊತ್ತು ಟಿವಿ ನೋಡಿ ಸಮಯ ಕಳೆಯುತ್ತಿದ್ದಾರಂತೆ.ಅದರಲ್ಲೂ ನ್ಯೂಸ್ ಚಾನೆಲ್ ಗಳಿಂದ ದೂರವಿರುವ ಡಿ ಬಾಸ್ ಹಿಂದಿ ಸಿನಿಮಾ, ಸ್ಫೋರ್ಟ್ಸ್ ಚಾನೆಲ್ ಗಳನ್ನು ನೋಡಿ ಸಮಯ ಕಳೆಯುತ್ತಿದ್ದಾರಂತೆ.

ಇನ್ನು ಕಳೆದ 18 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ದಿನೇ ದಿನೇ ಸೊರಗುತ್ತಿದ್ದಾರಂತೆ. ಮಾನಸಿಕವಾಗಿ ದರ್ಶನ್ ಕುಗ್ಗಿ ಹೋಗಿದ್ದಾರೆ. ತನ್ನನ್ನು ಭೇಟಿಯಾಗಲು ಬಂದವರ ಮುಂದೆ ದರ್ಶನ್ ಕಣ್ಣೀರು ಹಾಕ್ತಿದ್ದಾರೆ.  ಐಷಾರಾಮಿ ಜೀವನ ಮಾಡುತ್ತಿದ್ದ ನಟ ದರ್ಶನ್ ಇದೀಗ ದಿನಗಳನ್ನು ಕಳೆಯೋದಕ್ಕೆ ಪೇಚಾಡುತ್ತಿದ್ದಾರೆ. ಜೈಲಿನ ಉಪ್ಪು, ಹುಳಿ, ಖಾರವಿಲ್ಲದ ಊಟ ದರ್ಶನ್ ಅವರಿಗೆ ಸೇರುತ್ತಿಲ್ಲ. ಅದರಿಂದ ಅವರಿಗೆ ಭೇದಿ ಉಂಟಾಗಿದೆ ಎನ್ನಲಾಗಿದ್ದು, ಇದೀಗ ನನಗೆ ಜೈಲಿನ ಊಟ ಸೇರ್ತಿಲ್ಲ. ಮನೆ ಊಟ ಮಾಡೋದಕ್ಕೆ ಅವಕಾಶ ಕೊಡಿ ಅಂತಾ ದರ್ಶನ್  ತಮ್ಮ ವಕೀಲರ ಮೂಲಕ ನ್ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಜೈಲೂಟ ಸೇವಿಸಿ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಸರಿಯಾಗಿ ಊಟ, ನಿದ್ದೆ ಏನೂ ಮಾಡೋದಕ್ಕೂ ಆಗುತ್ತಿಲ್ಲ. ಹಾಗಾಗಿ ಅವರಿಗೆ ಮನೆ ಊಟ, ಹಾಸಿಗೆ ಹಾಗೂ ಓದಲು ಪುಸ್ತಕ ನೀಡುವಂತೆ ದರ್ಶನ್‌ ವಕೀಲರು  ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.ಇನ್ನು ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್ ಅವರಿಗೆ ಸರಿಯಾಗಿ ಜೀರ್ಣವಾಗುತ್ತಿಲ್ಲ. ಇದರಿಂದ ಭೇದಿ ಉಂಟಾಗುತ್ತಿದೆ. ಅಲ್ಲದೇ ಫುಡ್‌ ಪಾಯ್ಸನ್‌ ಕೂಡ ಆಗುತ್ತಿದೆ ಎಂದು ಜೈಲಿನ ವೈದ್ಯರೇ ಮಾಹಿತಿ ನೀಡಿದ್ದಾರೆಂದು, ಹೈಕೋರ್ಟ್ ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ದರ್ಶನ್‌ ಪರವಾದ ವಕೀಲರು ಉಲ್ಲೇಖ ಮಾಡಿದ್ದಾರೆ.

ದರ್ಶನ್ ಅವರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಮನೆ ಊಟ, ಮಲಗಲು ಹಾಸಿಗೆ, ಸಮಯ ಕಳೆಯಲು  ಓದಲು ಪುಸ್ತಕವನ್ನು ನೀಡಬೇಕು. ಈ ಸಂಬಂಧ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ರಿಟ್  ಅರ್ಜಿಯಲ್ಲಿ ದರ್ಶನ್ ಪರವಾದ ವಕೀಲರು ಮನವಿ ಮಾಡಿದ್ದಾರೆ.

ಇದರ ಮಧ್ಯೆ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪೊಲೀಸರು ಇದುವರೆಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟನ್ನು ಸಲ್ಲಿಸಿಲ್ಲ. ಹಾಗಾಗಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವುದನ್ನೇ ಕಾದು ಕೂತಿದ್ದಾರೆ ಆರೋಪಿಗಳ ಪರವಾದ ವಕೀಲರು. ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಅದರಲ್ಲಿರುವ ಅಂಶಗಳ ಆಧಾರದ ಮೇಲೆ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲು ಆರೋಪಿಗಳ ಪರವಾದ ವಕೀಲರು ಪ್ಲ್ಯಾನ್ ಮಾಡಿದ್ದು, ಅದರಂತೆ ಸದ್ಯಕ್ಕೆ ವಕೀಲರು ಕಾದ ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಚಾರ್ಜ್ ಶೀಟ್ ಪೊಲೀಸರು ಸಲ್ಲಿಸುತ್ತಿದ್ದಂತೆ ಆರೋಪಿಗಳ ಪರವಾದ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.