ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅವರು ಬೆನ್ನುನೋವಿನ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿಸೆಂಬರ್ 13 ರಂದು ನಟ ದರ್ಶನ್ ಅವರಿಗೆ ಹೈಕೋರ್ಟ್ ನಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿತ್ತು. ಅದರ ಬೆನ್ನಲ್ಲೇ 5 ದಿನಗಳ ಬಳಿಕ ಅಂದ್ರೆ ಇಂದು ಬೆಳಗ್ಗೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಅವರ ಪುತ್ರ ವಿನೀಶ್, ಅಕ್ಕನ ಮಗ ಚಂದನ್ ಆಸ್ಪತ್ರೆಯಿಂದ ದರ್ಶನ್ ಅವರನ್ನು ಮನೆಗೆ ಕರೆದೊಯ್ದರು.
ಇನ್ನು ನಟ ದರ್ಶನ್ ಅವರಿಗೆ ತೀವ್ರವಾದ ಬೆನ್ನು ನೋವಿದೆ. ಅವರಿಗೆ ಸರ್ಜರಿ ಆಗ್ಬೇಕು ಎಂದು ಹೈಕೋರ್ಟ್ ನಿಂದ ಮಧ್ಯಂತರ ಬೇಲ್ ಅನ್ನು ಪಡೆದುಕೊಂಡಿದ್ದರು. ಅದರಂತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ 6 ವಾರಗಳ ಕಾಲ ಆಸ್ಪತ್ರೆಯಲ್ಲಿದ್ದರೂ ದರ್ಶನ್ ಸರ್ಜರಿ ಮಾಡಿಸಿಕೊಂಡಿಲ್ಲ. ಹಾಗಾದ್ರೆ ಇಷ್ಟು ದಿನ ದರ್ಶನ್ ಮಾಡಿದ್ದು ನಾಟಕನಾ ಅನ್ನೋ ಅನುಮಾನ ವ್ಯಕ್ತವಾಗ್ತಿದೆ. ಸರ್ಜರಿ ಇಲ್ಲದೇ ಇವತ್ತು ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಜಸ್ಟ್ ಬೇಲ್ ಗೋಸ್ಕರ ದರ್ಶನ್ ಇಷ್ಟೆಲ್ಲಾ ಹಾಗಾದ್ರೆ ಮಾಡಿದ್ರಾ ಅನ್ನೋ ಪ್ರಶಅನೆ ಜನರನ್ನು ಕಾಡ್ತಿದೆ.
ಇನ್ನು ನಿನ್ನೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 6 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ಜೈಲಿನಿಂದ ರಿಲೀಸ್ ಆದ್ರು. ಡಿಸೆಂಬರ್ 13 ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಶುಕ್ರವಾರ ಜಾಮೀನು ಮಂಜೂರಾಗಿದ್ರು ಪವಿತ್ರಗೌಡ ಇಂದು ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಜಾಮೀನು ಸಿಕ್ರೂ ಕ ನಾಲ್ಕು ದಿನಗಳಿಂದ ಪವಿತ್ರ ಗೌಡ ಜೈಲಿನಲ್ಲೇ ಕಳೆಯುವಂತಾಗಿತ್ತು.
ಅಂದ್ಹಾಗೆ ಡಿಸೆಂಬರ್ 16 ರಂದು ಪವಿತ್ರ ಗೌಡ ಅವರಿಗೆ ಷ್ಯೂರಿಟಿ ಸಿಕ್ಕಿತ್ತು. ಆದರೆ ಕೋರ್ಡ್ ಆರ್ಡರ್ ಕಾಪಿ ಜೈಲಾಧಿಕಾರಿಗಳಿಗೆ ತಡವಾಗಿ ಸಿಕ್ಕಿದ್ರಿಂದ ಪವಿತ್ರ ಮೊನ್ನೆ ರಿಲೀಸ್ ಆಗಿರಲಿಲ್ಲ. ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಜೈಲಿಂದ ರಿಲೀಸ್ ಆದ್ರು.
ಜೈಲಿನಿಂದ ಹೊರಗೆ ಬರುತ್ತಲೇ ಪವಿತ್ರ ಗೌಡ ಕ್ಯಾಮರಾ ನೋಡಿ ಸ್ಮೈಲ್ ಮಾಡಿದ್ರು. ಯಾವುದೇ ಪಶ್ಚಾತಾಪವಿಲ್ಲದೇ ಪವಿತ್ರ ಗೌಡ ಆರಾಮಾವಾಗೇ ಸ್ಟೈಲ್ ಆಗಿ ಹೊರ ಬಂದ್ರು. ಅಲ್ಲಿಂದ ನೇರವಾಗಿ ತಲಘಟ್ಟಪುರದಲ್ಲಿರುವ ವಜ್ರ ಮುನೇಶ್ವರ ದೇಗುಲಕ್ಕೆ ತೆರಳಿದ ಪವಿತ್ರ ಅಲ್ಲಿ ಪುಣ್ಯ ಸ್ನಾನ ಮಾಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಈ ವೇಳೆ ಪವಿತ್ರ ತಾಯಿ ಭಾಗ್ಯಮ್ಮ ದರ್ಶನ್ ಅವರ ಹೆಸರಲ್ಲಿ ಅರ್ಚನೆ ಮಾಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.