ಮನೆ Latest News ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋಬರ್ 8 ಕ್ಕೆ ಮುಂದೂಡಿಕೆ

ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋಬರ್ 8 ಕ್ಕೆ ಮುಂದೂಡಿಕೆ

0
darshan bail

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿರುವ ನಟ ದರ್ಶನ್ ಅವರು ಇಂದು ತಮಗೆ ಜಾಮೀನು ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇಂದೂ ನಟ ಡಿ ಬಾಸ್ ಗೆ ನಿರಾಸೆಯಾಗಿದೆ.

ಇಂದು ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದೆ , ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಅಕ್ಟೋಬರ್ 8ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.ಇಂದು ಎ2 ಆರೋಪಿ ದರ್ಶನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್ ಜೂನ್ 9ರಂದೇ ಪೊಲೀಸರಿಗೆ ಕೊಲೆಯ ಸಂಪೂರ್ಣ ಮಾಹಿತಿ ಇತ್ತು. ಹೀಗಿದ್ರೂ ಅವರು ದರ್ಶನ್ ಹೇಳಿಕೆ ನೀಡುವವರೆಗೆ ಏಕೆ ಸುಮ್ಮನಿದ್ದರು? ದರ್ಶನ್ ಹೇಳಿಕೆ‌ ಬಳಿಕವೇ ಯಾಕೆ ವಸ್ತುಗಳನ್ನು ಸೀಝ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ರು. ಇನ್ನು ಸೆಕ್ಯೂರಿಟಿ ಗಾರ್ಡ್  ರೂಮ್​ನ ಎರಡು ಸಿಸಿಟಿವಿಯ ಫೂಟೇಜ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಪಿಎಸ್‌ಐ ವಿನಯ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದ ಎಂದು ನಾಗೇಶ್ ವಾದಿಸಿದ್ದಾರೆ.

ಇನ್ನು ಜೂನ್ 18ರಂದು ದರ್ಶನ್ ಅವರ ಮನೆಯಲ್ಲಿದ್ದ 37.5 ಲಕ್ಷ  ರೂಪಾಯಿಯನ್ನು ಪಡೆಯಲಾಗಿದೆ. ಸಾಕ್ಷಿಗಳಿಗೆ ಕೊಡಲೆಂದು ಈ ಹಣ ಇಟ್ಟಿದ್ದಾಗಿ ಹೇಳಿಕೆಗಳನ್ನು ಪಡೆದಿದ್ದಾರೆ. ಮೋಹನ ರಾಜ್ ಎಂಬವರು ಈ ಹಣವನ್ನು ದರ್ಶನ್ ಗೆ ನೀಡಿದ್ದರು. ಮೇ 2ರಂದೆ ದರ್ಶನಿಗೆ ನೀಡಬೇಕಿದ್ದ ಸಾಲವನ್ನು ವಾಪಸ್ ಮಾಡಿದ್ದರು.ಆಗ ರೇಣುಕಾ ಸ್ವಾಮಿ ಯಾರೆಂಬುವುದು ಜಗತ್ತಿಗೆ ಗೊತ್ತಿರಲಿಲ್ಲ ಎಂದು ವಾದಿಸಿದರು. ಎ14 ಮೊಬೈಲ್​ನಲ್ಲಿ ಮೃತನ ಫೋಟೋ ಇತ್ತೆಂದು ಹೇಳಲಾಗಿದೆ. ಆ ಫೋಟೋವನ್ನು ರಿಟ್ರೀವ್ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಆದರೆ ಪಿಎಸ್‌ಐ ವಿನಯ್ ಹೇಳಿಕೆಯಲ್ಲಿ ಅಂದು ತಾನು ಕೇರಳದಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೃತನ ಫೋಟೋವನ್ನು ಕಳುಹಿಸಿದ್ದೇ ಪಿಎಸ್‌ಐ ವಿನಯ್. ಆದರೆ ವಿನಯ್ ಮೊಬೈಲ್​ನ ಸೀಜ್ ಮಾಡಿ ಫೋಟೋ ರಿಟ್ರೀವ್ ಮಾಡಿಲ್ಲ. ಹೀಗಿದ್ದಾಗ ಇದೊಂದು ಸರಿಯಾದ ತನಿಖೆ ಎಂದು ಹೇಳಲು ಹೇಗೆ ಸಾಧ್ಯ ಎಂದು ವಕೀಲ ಸಿ ವಿ ನಾಗೇಶ್ ಪ್ರಶ್ನೆ ಮಾಡಿದ್ದಾರೆ.

ರಸ್ತೆ ಬದಿಯಲ್ಲಿ ರೇಣುಕಾಸ್ವಾಮಿ ಶವವನ್ನು ಎಸೆಯಲಾಗಿತ್ತು. ಜೂ.9ರ ಬೆಳಿಗ್ಗ 10 ಗಂಟೆಗೆ ದೂರನ್ನು ದಾಖಲು ಮಾಡಲಾಗಿದೆ. ಕೂಡಲೇ ದೇಹದ ಮಹಜರು, ಪಂಚನಾಮೆ ಮಾಡ್ಬೇಕಿತ್ತು. ಆದರೆ ಜೂ. 11ರ ಮಧ್ಯಾಹ್ನ ದೇಹದ ಮಹಜರು ಮಾಡಲಾಗಿದೆ. ಯಾಕೆ ಹಾಗೇ ಮಾಡಿದರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ ಎಂದಿದ್ದಾರೆ.  ಹೀಗೆ ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿರುವ ಎಲ್ಲಾ ಪಾಯಿಂಟ್ ಗಳನ್ನು ಆಧರಿಸಿಯೇ ಸಿ ವಿ ನಾಗೇಶ್ ಮಾವ ಮಂಡಿಸಿದ್ದಾರೆ. ಕೊನೆಗೂ ನ್ಯಾಯಾಧೀಶರು ವಿಚಾರಣೆಯನ್ನು ಅಕ್ಟೋಬರ್ 8 ಮುಂದೂಡಿಕೆ ಮಾಡಿ ಆದೇಶಿಸಿದ್ದಾರೆ.

ಅಪ್ಪನನ್ನು ಭೇಟಿಯಾದ ವಿನೀಶ್ ದರ್ಶನ್ ; ತಂದೆಯನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಮಗ

ಬಳ್ಳಾರಿ;  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇಂದು ಮಗ ವಿನೀಶ್, ಪತ್ನಿ ವಿಜಯಲಕ್ಷ್ಮೀ ಹಾಗೂ ವಿಜಯಲಕ್ಷ್ಮೀ ಅವರ ತಂಗಿಯ ಗಂಡ ಸುಶಾಂತ್ ಭೇಟಿಯಾಗಿದ್ದಾರೆ.

ಇನ್ನು ದಸರಾ ರಜೆ ಹಿನ್ನೆಲೆ ಈ ಬಾರಿ ತಾಯಿಯೊಂದಿಗೆ ಅಪ್ಪನನ್ನು ಭೇಟಿಯಾಗಲು ವಿನೀಶ್ ಕೂಡ ಬಂದಿದ್ದಾನೆ. ಮಗ ಹಾಗೂ ಪತ್ನಿಯನ್ನು ನೋಡಲು ತಮ್ಮ ಸೆಲ್ ನಿಂದ ಸಂದರ್ಶಕರ ಕೋಣೆಗೆ ಬರುವಾಗ ನಟ ದರ್ಶನ್ ಖುಷಿಯಿಂದಲೇ ಬಂದಿದ್ದಾರೆ. ಇನ್ನು ಮಗನನ್ನು ನೋಡುತ್ತಲೇ ದರ್ಶನ್ ಭಾವುಕರಾಗಿದ್ದಾರೆ ಎನ್ನಲಾಗಿದೆ. ಮಗ ಅಪ್ಪನನ್ನು ನೋಡುತ್ತಿದ್ದಂತೆ ಕಣ್ಣೀರು ಹಾಕಿದ್ದಾನೆ.

ವಿನೀಶ್ ತಂದೆಯನ್ನು ನೋಡುತ್ತಲೇ ಭಾವುಕನಾಗಿ ಅಪ್ಪ ನಾನು ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದಾನಂತೆ. ಈ ವೇಳೆ ಧೈರ್ಯವಾಗಿರು ನಾನು ಆದಷ್ಟು ಬೇಗ ಹೊರಗಡೆ ಬರುತ್ತೇನೆ ಎಂದು ದರ್ಶನ್ ಮಗನಿಗೆ ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಮಗ ಕಣ್ಣೀರು ಹಾಕುತ್ತಲೇ ದರ್ಶನ್ ಹಾಗೂ ವಿಜಯಲಕ್ಷ್ಮೀ ಇಬ್ಬರೂ ಕೂಡ ಭಾವುಕರಾಗಿದ್ದಾರೆ ಎನ್ನಲಾಗಿದೆ. ಸುಮಾರು 45 ನಿಮಿಷಗಳ ಕಾಲ ಪತ್ನಿ ಹಾಗೂ ಮಗನ ಜೊತೆ ಮಾತನಾಡಿ ದರ್ಶನ್ ತಮ್ಮ ಸೆಲ್ ಗೆ ತೆರಳಿದ್ದಾರೆ. ಅಪ್ಪನನ್ನು ಭೇಟಿಯಾದ ಬಳಿಕ ವಿನೀಶ್ ಕಣ್ಣೀರು ಹಾಕುತ್ತಲೇ ವಾಪಾಸ್ಸಾಗಿದ್ದಾನೆ ಎನ್ನಲಾಗಿದೆ.