ಮನೆ Latest News ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ನಿರಾಸೆ; ಜಾಮೀನು ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ

ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ನಿರಾಸೆ; ಜಾಮೀನು ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರು ಇಂದಾದರೂ ತನಗೆ ಜಾಮೀನು ಸಿಗುತ್ತೋ ಏನೋ ಅಂತಾ ನಿರೀಕ್ಷೆಯಲ್ಲಿದ್ದರು. ಆದರೆ ಡಿ ಬಾಸ್ ಗೆ ಇಂದು ನಿರಾಸೆಯಾಗಿದೆ. ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ ಬಾಸ್ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ.

ಇನ್ನು ಇಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಪರವಾದ ವಕೀಲರಾದ ಎಸ್ ಪಿಪಿ ಪ್ರಸನ್ನಕುಮಾರ್ ಅವರು ತಮ್ಮ ವಾದವನ್ನು ಮಂಡಿಸಿದರು. ಈ ವೇಳೆ ಅವರು ಕೊಲೆಯಾದ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ

ಫೆಬ್ರವರಿ 27, 2024ರಂದು ಮೆಸೇಜ್ ಮಾಡಿದ್ದ. ಆದರೆ ಆತ ಫೆಬ್ರವರಿಯಲ್ಲಿ ಮೆಸೇಜ್ ಮಾಡಿದ್ದಕ್ಕೆ ಜೂನ್ ನಲ್ಲಿ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದು ಯಾಕೆ? ಫೆಬ್ರವರಿಯಲ್ಲೇ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಬಹುದಿತ್ತಲ್ವಾ?ಬದಲಾಗಿ ಪವನ್, ಪವಿತ್ರ ಗೌಡ ಹೆಸರಲ್ಲಿ ರೇಣುಕಾಸ್ವಾಮಿ ಜೊತೆ ಚ್ಯಾಟ್ ಮಾಡಿದ್ದಾನೆ. ಬಳಿಕ ಪ್ಲ್ಯಾನ್ ಮಾಡಿ ಆತನನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ಗೆ ಕರೆ ತಂದಿದ್ದಾರೆ.ಅಲ್ಲಿ ಮೊದಲೇ ಒಂದಷ್ಟು ಆರೋಪಿಗಳಿದ್ದರು. ಹೀಗಾಗಿ ಎಲ್ಲವನ್ನು ಪ್ರಿ ಪ್ಲ್ಯಾನ್ ಮಾಡಿನೇ ಮಾಡಲಾಗಿದೆ ಎಂದು ಎಸ್ ಪಿಪಿ ಪ್ರಸನ್ನಕುಮಾರ್ ಅವರು ವಾದವನ್ನು ಮಂಡಿಸಿದರು.

ಇನ್ನು ಸರ್ಕಾರದ ಪರವಾದ ಅಭಿಯೋಜಕರಾದ ಪ್ರಸನ್ನ ಕುಮಾರ್ ಅವರ ವಾದವನ್ನು ಆಲಿಸಿದ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ವಿಚಾರಣೆಯನ್ನು ನಾಳೆ ಮಧ್ಯಾಹ್ನ 12.30ಕ್ಕೆ ಮುಂದೂಡಿದೆ. ಹಾಗಾಗಿ ಜಾಮೀನಿನ ನಿರೀಕ್ಷೆಯಲ್ಲಿದ್ದ ಡಿ ಬಾಸ್ ಗೆ ನಿರಾಸೆಯಾಗಿದೆ.

ಬಳ್ಳಾರಿ; 8ನೇ ಬಾರಿಗೆ ಪತಿಯನ್ನು ಭೇಟಿಯಾಗಿ ಧೈರ್ಯ ತುಂಬಿದ ವಿಜಯಲಕ್ಷ್ಮೀ ದರ್ಶನ್

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ದರ್ಶನ್ 8ನೇ ಬಾರಿಗ ಭೇಟಿಯಾದರು. ಪತ್ನಿ ವಿಜಯಲಕ್ಷ್ಮಿ, ಆಪ್ತರಾದ ಅನುಷಾ ಶೆಟ್ಟಿ, ಸುಶಾಂತ್ ನಾಯ್ಡು ಸೇರಿ ಒಟ್ಟು 5 ಜನ ಭೇಟಿಯಾಗಿ ಮಾತುಕತೆ ನಡೆಸಿದರು.

ಳಿಗ್ಗೆ ಖಾಸಗಿ ಹೋಟಲ್ ನಲ್ಲಿ ವಿಶ್ರಾಂತಿ‌ ಪಡೆದ ವಿಜಯಲಕ್ಷ್ಮಿ ಬಳಿಕ ಜೈಲಿಗ ಭೇಟಿ ನೀಡಿದರು. ಇನ್ನು ಪತ್ನಿಯನ್ನು ಭೇಟಿಯಾಗಲು ವಿಶೇಷ ಭದ್ರತಾ ಕೊಠಡಿಯಿಂದ ದರ್ಶನ್ ಸಂದರ್ಶಕರ ಕೊಠಡಿಗೆ ಬಂದರು. ಈ ವೇಳೆ ದರ್ಶನ್ ಅಭಿಮಾನಿಗಳು ಜೈ ಡಿಬಾಸ್ ಅಂತಾ ಘೋಷಣೆ ಕೂಗಿದ್ರು. ಅಭಿಮಾನಿಗಳ ಜೈಕಾರ ಕೇಳುತ್ತಲೆ ದರ್ಶನ್ ಸಣ್ಣದೊಂದು ನಗೆ ಬೀರಿದ್ರು.

ಬಳಿಕ ಸಂದರ್ಶಕರ ಕೊಠಡಿಯಲ್ಲಿ ಪತ್ನಿ ಹಾಗೂ ಸ್ನೇಹಿತರೊಂದಿಗೆ ದರ್ಶನ್ ಮಾತುಕತೆ ನಡೆಸಿದ್ರು. ಈ ವೇಳೆ ದರ್ಶನ್  ಆರೋಗ್ಯದ ಬಗ್ಗೆ ಪತ್ನಿ ಹಾಗೂ ಸ್ನೇಹಿತರು ವಿಚಾರಿಸಿದ್ರು.ವಿಜಯಲಕ್ಷ್ಮಿ, ಅನುಷಾ ಶೆಟ್ಟಿ, ಗ್ರೇಸ್ ಮರ್ಸಿ, ರೋಹಿತ್ ಮತ್ತು‌ ಸುಶಾಂತ್ ನಾಯ್ಡು ಅವರು ದರ್ಶನ್ ಅವರನ್ನು ಭೇಟಿ ಮಾಡಿದ್ರು.ಇನ್ನು ಜಾಮೀನು ವಿಚಾರಕ್ಕ ಸಂಬಂಧಝಪಟ್ಟಂತೆ ಚರ್ಚೆ ನಡೆಸಿದ್ರು ಎನ್ನಲಾಗಿದೆ.

ಇನ್ನು ನಟ ದರ್ಶನ್ ಗೆ 20 ದಿನಗಳಿಂದ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಈ ಹಿಂದೆ ಅವರ ಪರ ವಕೀಲ ಈ ಕುರಿತು ಮಾಹಿತಿ ನೀಡಿದ್ರು. ಬೆನ್ನುನೋವಿಗೆ ಬಳಲಿ ಬೆಂಡಾದ ಕಾಟೇರ ಮೆಡಿಕಲ್ ಬೇಡ್ ಗೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ವೈದ್ಯರು MRI ಸ್ಕ್ಯಾನ್ ಗೆ ಸೂಚಿಸಿದ್ರೂ ದರ್ಶನ್ ಡೋಂಟ್ ಕೇರ್ ಎಂದಿದ್ದಾರೆ. ಪತಿಗೆ ಬೆನ್ನುನೋವು ಹೆಚ್ಚಳ ಹಿನ್ನಲೆಯಲ್ಲಿ ವಿಜಯಲಕ್ಷ್ಮೀ ಪತಿಯ ಆರೋಗ್ಯ ವಿಚಾರಿಸಿದ್ದಾರೆ.

ತಿಳಿಸಿದ್ದಾರೆ. ಅಲ್ಲದೇ ಜೈಲಿನಲ್ಲಿ ನಮಗೆ ಯಾವುದೇ ತೊಂದರೆ ಆಗಿಲ್ಲ. ಆರಾಮವಾಗಿ ಇದ್ದೆವು ಎಂದು ತಿಳಿಸಿದ್ದಾರೆ.