ಬೆಂಗಳೂರು: ಕರ್ನಾಟಕ ಬಸ್ ಗಳ ಮೇಲೆ ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡಾಟಿಕೆ ಹಿನ್ನೆಲೆ ಗಡಿನಾಡು ಕನ್ನಡಿಗರಿಗೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಬಹಿರಂಗ ಪತ್ರ ಬರೆದಿದ್ದಾರೆ.
ನಾನು ಸಹ ಗಡಿನಾಡಿನವನೇ.ಇಂದು ಗಡಿನಾಡಿನಲ್ಲಿ ಕನ್ನಡಿಗರ ಆತ್ಮಗೌರವಕ್ಕೆ ದೊಡ್ಡ ಸವಾಲು ಎದುರಾಗಿದೆ.ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಕರ್ನಾಟಕದ ಗೌರವಕ್ಕೆ ಕಪ್ಪು ಚುಕ್ಕೆ.
ಈ ಘಟನೆಯ ಮೂಲ ಕಾರಣವೇ ಸರ್ಕಾರದ ಉಚಿತ ಸವಲತ್ತುಗಳ ತಪ್ಪು ನಿರ್ವಹಣೆ
ಕಂಡಕ್ಟರ್ ಮೇಲೆ ಹಲ್ಲೆ, ಫೋಕ್ಸೋ ಕೇಸ್ ದಾಖಲು ಇದು ಸರ್ಕಾರದ ಅಸಹಾಯಕತೆ ಮತ್ತು ಆಡಳಿತ ವೈಫಲ್ಯದ ಸ್ಪಷ್ಟ ಉದಾಹರಣೆ. ಸರ್ಕಾರ ಗಡಿನಾಡಿನ ಕನ್ನಡಿಗರ ಹಿತಾಸಕ್ತಿಗೆ ಬೆಂಬಲಿಸುವ ಬದಲು ಮರಾಠಿ ಸಮುದಾಯಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ
ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಮರಾಠಿ ಜನಾಂಗದ ಮುಂದೆ ಮರಾಠಿ ಭಾಷಣ ಮಾಡುವುದರಿಂದ ಅವರ ನಿಜ ಸ್ವರೂಪ ಬೆಳಕಿಗೆ ಬಂದಿದೆ. ಗಡಿನಾಡು ಕನ್ನಡಿಗರ ಸಮಸ್ಯೆ ಕೇಳುವ ಬದಲು ಮರಾಠಿ ಸಮುದಾಯವನ್ನು ಶಾಂತಿಗೊಳಿಸಲು ಮಾತ್ರ ಯತ್ನಿಸುತ್ತಿದ್ದಾರೆ
ಸರ್ಕಾರ ಕೂಡಲೇ ಗಡಿನಾಡು ಕನ್ನಡಿಗರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು.ಅಕ್ರಮ ಗೂಂಡಾಗಿರಿ ನಿಲ್ಲಿಸಬೇಕು. ಉಚಿತ ಸವಲತ್ತುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ನಾವು ಕನ್ನಡಿಗರ ಶಕ್ತಿ, ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳೋಣ
ಗಡಿನಾಡು ಕನ್ನಡಿಗರು ಎಂದಿಗೂ ಹಿಂದುಳಿಯಬಾರದು. ನಮ್ಮ ಕರ್ನಾಟಕ, ನಮ್ಮ ಹಕ್ಕು, ನಮ್ಮ ಹೋರಾಟ ಮುಂದೆ ಸಾಗಲಿ.