ಬೆಂಗಳೂರು; ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಸುದೀರ್ಘ 40 ವರ್ಷ ರಾಜಕೀಯ ಜೀವನದಲ್ಲಿ ತನಗೆ ತಾನೇ ಶಹಬ್ಬಾಸ್ ಗಿರಿ ಕೊಟ್ಟುಕೊಳ್ಳುವವರು ಸಿದ್ದರಾಮಯ್ಯ.ವಾಲ್ಮೀಕಿ ನಿಗಮದ ಹಗರಣ ರಾಜ್ಯದ ಇತಿಹಾಸದಲ್ಲಿ ಯಾರೂ ಮರೆಯದ ಹಗರಣ.ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಸಿದ್ದರಾಮಯ್ಯ ತಾವೇ ಒಪ್ಪಿಕೊಂಡಿದ್ದಾರೆ.ಮೊನ್ನೆ ಯಲ್ಲಮ್ಮ ದೇವಿ ಗುಡಿಯಲ್ಲಿ ಹೆಂಡತಿಯ ಹೆಸರಿನಲ್ಲಿ ಅರ್ಚನೆ ಮಾಡಿದ್ದಾರೆ.ದಸರಾ ವೇಳೆ ಚಾಮುಂಡೇಶ್ವರಿ ತಾಯಿ ಎದುರು ತಾನೇ ದೀನನಾಗಿ ಕುಂಕುಮ ಹಚ್ಚಿಕೊಂಡಿದ್ದಾರೆ.ಇಂದು ವಾಲ್ಮೀಕಿ ಜಯಂತಿ, ಇವತ್ತು ರಾಜೀನಾಮೆ ಕೊಡಲು ಸಿದ್ದರಾಮಯ್ಯನವರಿಗೆ ಒಳ್ಳೆಯ ದಿನ.ಸಿದ್ಧರಾಮಯ್ಯನವರೇ ಪ್ರಾಯಶ್ಚಿತ್ತವಾಗಿ ಇಂದು ಗಟ್ಟಿ ಮನಸ್ಸು ಮಾಡಿ ರಾಜೀನಾಮೆ ಕೊಡಿ ಎಂದರು.
ಎಲ್ಲಾ ಪಾಪದ ಪರಿಹಾರವಾಗಿ ರಾಜೀನಾಮೆ ಕೊಡಿ.ನಿಮ್ಮ ಮಿತ್ರನಾಗಿ ಹೇಳುತ್ತಿದ್ದೇನೆ.ಸಂಜೆಯೊಳಗೆ ಕೆಳಗಿಳಿದರೆ ವಾಲ್ಮೀಕಿ ಮಹರ್ಷಿ ಕೂಡಾ ನಿಮಗೆ ಆಶೀರ್ವಾದ ಮಾಡುತ್ತಾರೆ. ವಾಲ್ಮೀಕಿ ಹಗರಣದ ಚಾರ್ಜ್ ಶೀಟ್ ನಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ.ಮೂವರು ಕಾಂಗ್ರೆಸ್ ಶಾಸಕರ ಮೂಲಕ ಹಣ ವಿತರಣೆ ಮಾಡಿದ್ದಾರೆ ಅಂತಾ ಹೇಳಲಾಗಿದೆ.ಎಲ್ಲವನ್ನೂ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.ಸಿದ್ದರಾಮಯ್ಯನವರಿಗೆ ಜ್ಞಾನೋದಯ ಆಗಲು ಇದೊಂದು ಡಾಕ್ಯುಮೆಂಟ್. ಸಿದ್ದರಾಮಯ್ಯನವರೇ ಮಧ್ಯಾಹ್ನದವರೆಗೆ ಚಾರ್ಜ್ ಶೀಟ್ ಕಾಪಿ ಓದಿ ಸಂಜೆಯೊಳಗೆ ರಾಜೀನಾಮೆ ಕೊಡಿ ಎಂದು ಡಿ ವಿ ಸದಾನಂದ ಗೌಡ ಹೇಳಿದ್ರು.
ಸಿದ್ದರಾಮಯ್ಯನವರು ರಾಜೀನಾಮೆ ಕೊಡದೇ ಇದ್ದರೆ ಬಹಳ ಕಷ್ಟ ಆಗಬಹುದು.ಯಾಕೆಂದರೆ ದಿನನಿತ್ಯ ಒಂದೊಂದು ಡಝನ್ ಜನ ರಾಜ್ಯಪಾಲರ ಬಳಿ ಹೋಗುತ್ತಿದ್ದಾರೆ.ಈಗ ಸಿದ್ದರಾಮಯ್ಯನವರಿಗೆ ಕಂಬಳಿ ಗುದ್ದು ಬೀಳಲು ಪ್ರಾರಂಭವಾಗಿದೆ.ಅವರು ಎಷ್ಟು ಬಿಳಿ ಬಟ್ಟೆ ಹಾಕಿದರೂ ಪ್ರಯೋಜನ ಇಲ್ಲ, ಅದು ಕಾಗೆಯಾಗಿ ಪರಿವರ್ತನೆ ಆಗುತ್ತದೆ ಎಂದ್ರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ;ಜೈಲು ಸೇರಿದ್ದ ಮಾಜಿ ಸಚಿವ ಬಿ ನಾಗೇಂದ್ರ ರಿಲೀಸ್
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಸಚಿವ ಬಿ ನಾಗೇಂದ್ರ ರಿಲೀಸ್ ಆಗಿದ್ದಾರೆ.
ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ನಿನ್ನೆ ಬೆಂಗಳೂರಿನ 82ನೇ ಸಿಟಿ ಸಿವಿಲ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಅದರ ಬೆನ್ನಲ್ಲೇ ಇಂದು ಪರಪ್ಪನ ಅಗ್ರಹಾರ ರಿಲೀಸ್ ಆಗಿದ್ದಾರೆ.
ಇನ್ನು ಜೈಲಿನಿಂದ ರಿಲೀಸ್ ಆದ ಬೆನ್ನಲ್ಲೇ ನಾಗೇಂದ್ರ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಮಾಜಿ ಸಚಿವ ನಾಗೇಂದ್ರ ಮೂರು ತಿಂಗಳಿನಿಂದ ದುಷ್ಟ ರಾಜಕೀಯ ಮಾಡಿಕೊಂಡು ಬಿಜೆಪಿಯವರು ಬರ್ತಿದ್ದಾರೆ. ಬಿಜೆಪಿ ಇಡಿಯನ್ನ ಕೈ ಗೊಂಬೆ ಮಾಡಿಕೊಂಡಿದೆ.ಕಾಂಗ್ರೆಸ್ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸುತ್ತಿದೆ.ವಾಲ್ಮೀಕಿ ಹಗರಣದಲ್ಲಿ ಸಿಎಂ,ಡಿಸಿಎಂ ಹೆಸರು ಹೇಳುವಂತೆ ನನ್ನ ಮೇಲೆ ಇಡಿ ಅಧಿಕಾರಿಗಳು ಒತ್ತಡ ಹಾಕಿದ್ರು.ಬಿಜೆಪಿಯೇತರ ಸರ್ಕಾರವನ್ನ ಟಾರ್ಗೆಟ್ ಮಾಡಲಾಗ್ತಿದೆ.ಇವತ್ತು ಬಿಜೆಪಿಯಲ್ಲಿ 66 ಜನ ಶಾಸಕರಿದ್ದಾರೆ.ಮುಂದೆ ಅದು ಇನ್ನು ಕಡಿಮೆ ಆಗುತ್ತೆ ಎಂದರು.
ನ್ಯಾಯ ಇರುತ್ತೆ ಹಗರಣದಲ್ಲಿ ನಮ್ಮ ಪಾತ್ರ ಏನು ಇಲ್ಲ.ಮುಡಾದಲ್ಲೂ ಸಹ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಇಡಿ ಬಗ್ಗೆ ದೇಶದಲ್ಲಿ ನಂಬಿಕೆ ಇದೆ.ಮುಂದಿನ ದಿನಗಳಲ್ಲಿ ನೀವೆಲ್ಲರೂ ಸಾಕ್ಷಿ ಆಗ್ತೀರಾ.ಈ ಕೇಸ್ ಬಿದ್ದು ಹೋಗುತ್ತೆ ಎಂದರು.