ಮನೆ ಪ್ರಸ್ತುತ ವಿದ್ಯಮಾನ ಎಲ್ಲವನ್ನೂ ಮ್ಯಾನೇಜ್ ಮಾಡೋ ಕಲೆ ಬಿಜೆಪಿಯದ್ದು; ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ

ಎಲ್ಲವನ್ನೂ ಮ್ಯಾನೇಜ್ ಮಾಡೋ ಕಲೆ ಬಿಜೆಪಿಯದ್ದು; ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ

0

 

ಬೆಂಗಳೂರು; ಜನಸಂಖ್ಯೆ ಆಧಾರದ ಮೇಲೆ ತರಿಗೆ ಹಣ ವಿಭಜನೆ ಆಗ್ತಿದೆ. ಮಹಿಳಾ ಮೀಸಲಾತಿ ಅನುಮೋದನೆ ಆಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಜಾತಿ ಜನಗಣತಿ ಆಗೋ ಸಾಧ್ಯತೆ ಇದೆ. ಕ್ಷೇತ್ರಗಳನ್ನ ಜಾಸ್ತಿ ಮಾಡಿದ್ರೆ, ಸಂಪೂರ್ಣವಾಗಿ ಉತ್ತರ ಭಾರತದ ಹಿಡಿತಕ್ಕೆ ಹೋಗುತ್ತೆ. ಬಿಜೆಪಿ ನಾಯಕರು ಮಲತಾಯಿ ಧೋರಣೆ ಮಾಡ್ತಿದ್ದಾರೆ. ನಮಗೂ ಕೂಡ ಸಮಾನಾಂತರ ಅವಕಾಶ ಸಿಗಬೇಕು. ಅದನ್ನ ಕಸಿದುಕೊಳ್ಳುತ್ತಿದ್ದಾರೆ. ರಾಜಕೀಯ ಒಂದು ಕಡೆ ಇಡಿ, ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕು. ಇಂಥ ಕಾನೂನು ಮಾಡಿ ನಮ್ಮನ್ನ ಸೆದೆಬಡಿಯೋದು. ಎಲ್ಲವನ್ನೂ ಮ್ಯಾನೇಜ್ ಮಾಡೋ ಕಲೆ ಬಿಜೆಪಿಯದ್ದು ಎಂದಿದ್ದಾರೆ.

ಡಿ ಕೆ ರವಿ ಪ್ರತಿಮೆ ನಿರ್ಮಾಣಕ್ಕೆ ಮುನಿರತ್ನ ಮನವಿ ವಿಚಾರದ ಬಗ್ಗೆ ಮಾತನಾಡಿದ ಅವರು ಕೊರಂಗು ಮುನಿರತ್ನ ಪ್ರತಿಮೆ ಮನವಿ ಬಂದಿದೆ. ಕಬ್ಬಿಣದ ಪ್ರತಿಮೆ ಮಾಡಿ ಅಂತಾ . ಇವರಿಬ್ಬರೂ ಡಾನ್ ಅಲ್ವಾ. ರೇಪಿಸ್ಟ್ ಗಳ ಬಗ್ಗೆ ನಾನ್ಯಾಕೆ ಮಾತಾಡಲಿ. ವಿಧಾನಸೌಧದಲ್ಲಿ ರೇಪ್ ಮಾಡಿದ್ದಾನೆ. ನಾನು ಹೇಳ್ತಿಲ್ಲ, ದೂರು ಕೊಟ್ಟಿರೋರು ಹೇಳಿದ್ದಾರೆ. ವಿಧಾನಸೌಧದಿಂದ ಆತನನ್ನ ನಿಷೇಧ ಮಾಡಬೇಕು. ವಿಧಾನಸೌಧ ದೇವಾಲಯ, ಅಲ್ಲಿ ಅತ್ಯಾಚಾರ ಮಾಡಿದ್ದಾರೆ. ವಿಧಾನಸೌಧ ಏನು ರೇಪಿಸ್ಟ್ ಸೆಂಟ್ರಾ..? ಯಾವ್ಯಾವ ಅವ್ಯಾಚ್ಯ ಪದಗಳನ್ನ ಬಳಸಿದ್ದಾನೆ. ನಿರ್ದೋಷಿ ಅಂತಾ ಪ್ರೂವ್ ಮಾಡಿಕೊಂಡು ಬರಲಿ ಎಂದಿದ್ದಾರೆ.

ಡಿಕೆಶಿ ದೆಹಲಿ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದ ಅವರು ಪಕ್ಷದ ಅಧ್ಯಕ್ಷರು ದೆಹಲಿಗೆ ಹೋಗ್ತಾ ಇರ್ತಾರೆ. ಹೈಕಮಾಂಡ್ ಜೊತೆ ಸಂಪರ್ಕ ಇಟ್ಟುಕೊಂಡಿರ್ತಾರೆ. ಹೈಕಮಾಂಡ್ ಬೇಟಿ ಮಾಡಿ ಬರೋದು ಪ್ರೌವೃತ್ತಿ. ಡಿಕೆಶಿ ಮುಂದೆ ಯಾವುದೇ ಅಜೆಂಡಾ ಇಲ್ಲ. ಬೇರೆ ಯಾವುದೇ ಚಿಂತನೆಗಳು ಡಿಕೆಶಿ ಮುಂದೆ ಇಲ್ಲ. ಹಕ್ಕು ಅನ್ನೋ ಪ್ರಶ್ನೆ ಇಲ್ಲ ಎಂದ್ರು. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಕಡಿತ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ತೆರಿಗೆ ನೀತಿ ಬಗ್ಗೆ ವದಂತಗಳು ಕೇಂದ್ರ ಸರ್ಕಾರದಿಂದ ಬರ್ತಾ ಇದೆ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆ ದುರ್ಬಲ ಮಾಡುತ್ತಿದೆ. ಬಲಿಷ್ಠ ರಾಷ್ಟ್ರ ಬೇಕು ಅಂದ್ರೆ ರಾಜ್ಯಗಳಿಗೆ ಶಕ್ತಿ ತುಂಬಬೇಕು. ರಾಜ್ಯಗಳ ಮೇಲೆ ಬಲವಂತವಾದ ಕಾನೂನು ನಿಯಮ ಹೇರುತ್ತಿದೆ. ಹಿಂದೆಯೇ ನಾನು ಅನ್ಯಾಯದ ಬಗ್ಗೆ ಹೇಳಿದ್ದೆ.ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಹಿಂದಿ ಹೇರಿಕೆ ಕೂಡ ದುರ್ಬಲ ಮಾಡುವ ಪ್ರಯತ್ನ.. ೧% ತೆರಿಗೆ ಕಡಿಮೆ ಪ್ರಯತ್ನ ನಡಿಯುತ್ತಿದೆ. ಜನರು ತಿರುಗಿ ಬಿದ್ರೆ ಕಷ್ಟವಾಗುತ್ತೆ. ನಮ್ಮ ಪಾಲು ನಮಗೆ ಕೊಡಿ. ಕೇವಲ ಗುಜರಾತ್ ಗೆ ಮಾತ್ರ ದೇಶ ಸಿಮೀತವಾಗಿಲ್ಲ.ಪ್ರತಿ ರಾಜ್ಯಕ್ಕೂ ನ್ಯಾಯ ಕೊಡಬೇಕು.ದಕ್ಷಿಣ ಭಾರತದ ಕಡಗಣನೆ ಬೇಡ ಎಂದು ಡಿ ‌ಕೆ ಸುರೇಶ್ ಎಚ್ಚರಿಕೆ ಕೊಟ್ಟಿದ್ದಾರೆ.

ದಕ್ಷಿಣ ಭಾರತದಲ್ಲಿ ಕ್ಷೇತ್ರ ಕಡಿಮೆಯಾಗುವ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಬಾರಿ‌ ಮಹಿಳಾ ಮೀಸಲಾತಿಯಾಗಬೇಕು. ಈ ಬಾರಿ ಸೀಟ್ ಕಡಿಮೇಯಾಗುತ್ತೋ, ಅಷ್ಟೆ ಇರುತ್ತೋ ನೋಡಬೇಕು. ದಕ್ಷಿಣ ಭಾರತ ಹಿಡಿತದಲ್ಲಿ ಇಡಲು‌ ಕೇಂದ್ರ ಪ್ರಯತ್ನ ಮಾಡುತ್ತಿದೆ. ದಕ್ಷಿಣ ಭಾರತ ಒಂದಾಗಬೇಕು. ಒಗ್ಗಟ್ಟಿನ ಹೋರಾಟ ಮಾಡಬೇಕು. ಸಂಘಟಿತ ಹೋರಾಟ ಮಾಡಬೇಕು. ರಾಜಕೀಯ ಬಿಟ್ಟು ಹೋರಾಟ ಮಾಡಬೇಕು. ಕಾನೂನು ಮೂಲಕ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತೆ. ಸುಲಭವಾಗಿ ಕಾನೂನು ಮ್ಯಾನೇಜ್ ಮಾಡುತ್ತಾರೆ ಎಂದು ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.