ಮನೆ Latest News ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಇರ್ತಾರೆ; ಮಾಜಿ ಸಂಸದ ಡಿ ಕೆ ಸುರೇಶ್...

ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಇರ್ತಾರೆ; ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿಕೆ

0

 

ಬೆಂಗಳೂರು; ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಇರ್ತಾರೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿಕೆ ನೀಡಿದ್ದಾರೆ.

ವಿಪಕ್ಷಗಳು ಮುಡಾ ಹಗರಣದಲ್ಲಿ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರು ಅವರೇ ಸಿಎಂ ಆಗಿ ಐದು ವರ್ಷ ಇರ್ತಾರೆ.ಅವರ ಮೇಲೆ ಚಾಮುಂಡೇಶ್ವರಿ ತಾಯಿಯ ಅಶೀರ್ವಾದವಿದೆ.ಅವರು ಎಲ್ಲ ಸಮಸ್ಯೆಯಿಂದ ಬೇಗ ಹೊರ ಬರ್ತಾರೆ. ಅವರೇ ನಮ್ಮ ನಾಯಕರು. ಸಿದ್ದರಾಮಯ್ಯ ಅವರು ಐದು ವರ್ಷ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದಿದ್ದಾರೆ.

ಜಾತಿಗಣತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನಡೆ ಅನುಸರಿಸಬೇಕು.ಕೇಂದ್ರ ಸರ್ಕಾರ ಕೂಡ ಜಾತಿಗಣತಿ ಮಾಡಿಸುತ್ತಿದೆ. ಅವರ ವರದಿ ಬರುವರಗೆ ಸರ್ಕಾರ ಕಾಯಬೇಕು.ಕೇಂದ್ರದಿಂದ ವರದಿ ಬಂದ್ರೆ ಯಾವುದೇ ಗೊಂದಲ ಆಗುವುದಿಲ್ಲ.ಜನಗಣತಿ ಮಾಡಿಸಲು ಇನ್ನೂ ಒಂದು ವರ್ಷ ಆಗಬಹುದು. ಅಲ್ಲಿಯವರೆಗೆ ಸಿಎಂ ತಾಳ್ಮೆಯಿಂದ ಕಾಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಂಸದ ಡಿ ಕೆ ಸುರೇಶ್ ಸಲಹೆ ನೀಡಿದ್ದಾರೆ.

ರಾಜೀನಾಮೆ ಕೇಳುವವರು ಮೊದಲು‌ ರಾಜೀನಾಮೆ ನೀಡಲಿ ; ಮೈಸೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ಹೇಳಿಕೆ

ಮೈಸೂರು;ನಿನ್ನೆ ಮೈಸೂರಿನಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮದ ವೇಳೆ  ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಶಾಸಕ ಜಿ ಟಿ ದೇವೇಗೌಡ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದ್ರು. ಇಂದು ಸಚಿವ ಕೃಷ್ಣಭೈರೇಗೌಡ ಸಿಎಂ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಇಂದು ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ರಾಜೀನಾಮೆ ಕೇಳುವವರು ಮೊದಲು‌ ರಾಜೀನಾಮೆ ನೀಡಲಿ. ಎಫ್‌ಐಆರ್ ಆಗಿರುವವರು ಎಲ್ಲಾ ರಾಜೀನಾಮೆ ಕೊಡಲಿ.ರಾಜಕೀಯದಲ್ಲಿ ಒಂದು ಮೇಲ್ಪಂಕ್ತಿಯನ್ನು ಹಾಕೋಣಾ.ಆ ದಿಕ್ಕಿನಲ್ಲಿ ಎಲ್ಲಾ ಹೆಜ್ಜೆ ಇಡೋಣಾ ಎಂದಿದ್ದಾರೆ.ಯಾರು ರಾಜೀನಾಮೆ ಕೇಳ್ತಾ ಇದ್ದಾರೆ, ಎಫ್‌ಐಆರ್ ಆಗಿರುವವರು ಕೊಡಲಿ.ಡಿನೋಟಿಫಿಕೇಶನ್‌ನಲ್ಲಿ ಭಾಗಿಯಾಗಿದ್ದಾರೆ ಅವರೆಲ್ಲರು ರಾಜೀನಾಮೆ ಕೊಡಲಿ ಎಂದಿದ್ದಾರೆ.ಈ ಮೂಲಕ ರಾಜಕೀಯದಲ್ಲಿ ಮೇಲ್ಪಂಕ್ತಿ ಹಾಕಲಿ ಎಂದು ಸವಾಲು ಹಾಕಿದ್ದಾರೆ.

ನಾನು ಆಗ ಏನು ಕ್ರಮ ಬೇಕು ಅದನ್ನು ತಗೋತೀವಿ.ಎಫ್‌ಐಆರ್ ಆದ ಕೂಡಲೇ ರಾಜೀನಾಮೆ ಕೊಡಬೇಕು ಅಂತಾರೆ.ಹಾಗಿದ್ರೆ ಎಫ್‌ಐಆರ್ ಆಗಿರುವವರು ಎಲ್ಲಾ ರಾಜೀನಾಮೆ ಕೊಡಲಿ.ನಾವು ಸಹ ಮುಂದೆ ಅದೇ ಅನುಸರಿಸುತ್ತೇವೆ‌.ಒಂದು ಬೆರಳು ತೋರಿಸುವಾಗ, ನಾಲ್ಕು ಬೆರಳು ಅವರ ಕಡೆ ತೋರಿಸುತ್ತಿರುತ್ತೆ.ನಿಮಗೊಂದು ಕಾನೂನು ನಮಗೊಂದು ಕಾನೂನು ಬೇಡಾ.ಇನ್ನೊಬ್ಬರಿಗೆ ಬೋಧನೆ ಮಾಡುವ ಮುನ್ನ ತಾವು ಅನುಸರಿಬೇಕು.ಆ ಮೇಲೆ ಇನ್ನೋಬ್ಬರಿಗೆ ಪಾಠ ಹೇಳಬೇಕು. ಮಾಡೋದೇಲ್ಲಾ ಅನಾಚಾರ ಹೇಳೋದು ಆಚಾರ ಅಂದ್ರೆ ಹೇಗೆ.ಅವರ ಮಾತಿಗೆ ಅವರೇ ಬದ್ಧರಾಗಿಲಿ.ಅವರು ಮೊದಲು ರಾಜೀನಾಮೆ ಕೊಡಲಿ ಎಂದಿದ್ದಾರೆ.