ಮನೆ Latest News ಸೋನಿಯಾ ಗಾಂಧಿ ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ: ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್...

ಸೋನಿಯಾ ಗಾಂಧಿ ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ: ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ

0

ಸೋನಿಯಾ ಗಾಂಧಿ ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಯಂಗ್ ಇಂಡಿಯಾ ಟ್ರಸ್ಟ್ ಗೆ ಹಣ ಕೊಟ್ಟಿದ್ದೇವೆ. ಎರಡು, ಎರಡೂವರೆ ಕೋಟಿ ರೂ. ಹಣ ಕೊಟ್ಟಿದ್ದೇವೆ. ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ನಾವು ಕೊಟ್ಟಿಲ್ಲ ಅಂತ ಹೇಳ್ತಿಲ್ಲ. ದುರುದ್ದೇಶ ಪೂರ್ವಕವಾಗಿ ಆರೋಪ. ನಮ್ಮ‌ ಕಾಂಗ್ರೆಸ್ ನಾಯಕರ‌ ಮೇಲೆ‌ ಹೊರಿಸುವ ಪ್ರಯತ್ನ. ಚಾರ್ಜ್‌ಶೀಟ್ ನಲ್ಲಿ ಪ್ರಯತ್ನ ಮಾಡಿದ್ದಾರೆ. ನಾವು ಕಾನೂನಾತ್ಮಕವಾಗಿ‌ ಹೋರಾಟ ಮಾಡ್ತೇವೆ. ಇದು ರಾಜಕೀಯ ಪೂರಿತವಾದ ಪ್ರಕರಣ. ಸೋನಿಯಾ ಗಾಂಧಿಯವರ ಟ್ರಸ್ಟ್ ಅಲ್ಲ. ಯಂಗ್ ಇಂಡಿಯಾ ಸಂಸ್ಥೆಗೆ ಕೊಟ್ಟಿರೋದು. ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ. ಅದು‌ ಟ್ರಸ್ಟ್ ಗೆ ಬಳಕೆಯಾಗಿದೆ ಇಲ್ಲಿದೆ. ಇಡಿಯವರಿಗೂ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಇದರಲ್ಲಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ರಾಮನಗರ ಹೆಸರು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ರಾಮನಗರ, ಕನಕಪುರ, ಮಾಗಡಿ ಬೆಂಗಳೂರು ಜಿಲ್ಲೆ ಭಾಗ. ಶಿವಕುಮಾರ ಸ್ವಾಮೀಜಿ‌ ಮಾಗಡಿಯಲ್ಲಿ ಹುಟ್ಟಿದವರು. ಬಾಲಗಂಗಾಧರ ಶ್ರೀ ರಾಮನಗರದಲ್ಲಿ ಹುಟ್ಟಿದವರು. ಬೆಂಗಳೂರು ಕಟ್ಟಿದ ಕೆಂಪೇಗೌಡರು ಮಾಗಡಿಯವರು. ಕೆಂಗಲ್ ಹನುಮಂತಯ್ಯ ಕೂಡ ಅಲ್ಲಿಯವರೇ. ದೇವೇಗೌಡರು ಆರಿಸಿ ಬಂದಿದ್ದು ಗ್ರಾಮಾಂತರದಲ್ಲೇ. ಕುಮಾರಸ್ವಾಮಿ ಶಾಸಕರಾದಾಗ ಬೆಂಗಳೂರು ಗ್ರಾಮಾಂತರ. ಅವರು ಸಿಎಂ ಆದಾಗಲೂ‌ ಗ್ರಾಮಾಂತರವೇ ಆಗಿತ್ತು. ಈಗ ಬೆಂಗಳೂರು ದಕ್ಚಿಣ ಅಂತ ಮಾಡಲಾಗಿದೆ. ಇದರಿಂದ ಯಾವ ಲೂಟಿಯು ಇಲ್ಲ. ಲೂಟಿ ಆಗಿದೆ ಅಂದ್ರೆ ಅವರು‌ಮಾಡಿರಬೇಕು. ರಾಮನಗರ ಮಾಡಿದಾಗ ಕುಮಾರಸ್ವಾಮಿ ಹೊಡೆದಿರಬಹುದು. ನಾವು ಮೂಲತಃ ಬೆಂಗಳೂರು ಜಿಲ್ಲೆಯವರು. ಈಗಲೂ ಬೆಂಗಳೂರಿನಲ್ಲೇ ಇದ್ದೇವೆ. ರಾಮನಗರ ಮಾಡಿದಾಗ ಅಭಿವೃದ್ಧಿ ಆಗಿದ್ಯಾ. ನಾಲ್ಲು ಬಿಲ್ಡಿಂಗ್ ಬಿಟ್ಟರೆ ಏನೂ ಆಗಿಲ್ಲ. ಕಾಂಗ್ರೆಸ್ ಸರ್ಕಾರವೇ ಅಭಿವೃದ್ಧಿ ಕೊಟ್ಟಿದ್ದು. ಉತ್ತಮ ಸಂಪರ್ಕ‌ ವ್ಯವಸ್ಥೆ ಮಾಡಿದ್ದು. ಈಗ ಸಿದ್ದರಾಮಯ್ಯ ಸರ್ಕಾರವಿದೆ. ಮೂರು‌ ವರ್ಷ ಮತ್ತಷ್ಟು ಅಭಿವೃದ್ಧಿಯಾಗಿದೆ.
ಯಾರು ಜಮೀನು ನುಂಗಿದ್ದು ಯಾರು ಅಲ್ಲಿ‌ಕೇಳಿ ದಲಿತರ ಜಮೀನು‌ ನುಂಗಿದ್ದು ಯಾರು. ಅದನ್ನ ಹೋಗಿ ಕೇತಗಾನಹಳ್ಳಿಯಲ್ಲಿ‌ ಕೇಳಿ ಎಂದು ಹೆಚ್ಡಿಕೆಗೆ ಡಿ.ಕೆ.ಸುರೇಶ್ ಟಾಂಗ್ ನೀಡಿದ್ದಾರೆ.

ಇಡಿ ದಾಳಿ‌ ವಿಚಾರದಲ್ಲಿ ಪ್ರಹ್ಲಾದ್‌ ಜೋಶಿ ಆರೋಪ ವಿಚಾರದ ಬಗ್ಗೆ ಮಾತನಾಡಿ ಪ್ರಹ್ಲಾದ್ ಜೋಶಿ ಎತ್ತಿಕಟ್ಟುವ ಗಿರಾಕಿ. ಆಂಧ್ರಕ್ಕೆ ಕೊಟ್ಟಿದ್ದನ್ನ ಕರ್ನಾಟಕಕ್ಕೆ ಕೊಟ್ಟಿದ್ದೇವೆ ಅಂತಾರೆ.
ನಿಮ್ಮ ಸರ್ಕಾರ ಕೇಂದ್ರದಲ್ಲಿದೆ. ಐಟಿ, ಇಡಿ ಎಲ್ಲವೂನಿಮ್ಮ ಕೈಯಲ್ಲಿದೆ. ನೀವು ಯಾರ್ಯಾರ ಮೇಲೆ ಇಡಿ ಬಿಡ್ತಿರೋ ಬಿಡಿ ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಯಂಗ್ ಇಂಡಿಯಾ ಸಂಸ್ಥೆಗೆ 2.5 ಕೋಟಿ ಗಣಿಗೆ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಅನೇಕ ಬಾರಿ ಯಂಗ್ ಇಂಡಿಯಾಗೆ ಸಂಬಂಧಪಟ್ಟಂತೆ ಹೇಳಿದ್ದೇನೆ.ನಮ್ಮ ಟ್ರಸ್ಟ್ ನಿಂದ ಮತ್ತೊಂದು ಟ್ರಸ್ಟಿಗೆ ಹಣ ಕೊಟ್ಟಿದ್ದೇವೆ. ಎರಡೂವರೆ ಕೋಟಿಯಷ್ಟು ಹಣ ಕೊಟ್ಟಿದ್ದೇವೆ. ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇವೆ. ಕೊಟ್ಟಿಲ್ಲ ಅಂತ ನಾವು ಹೇಳಲ್ಲ ಕೊಟ್ಟಿರುವ ಬಗ್ಗೆ ತಪ್ಪು ಅನ್ನುವ ಮಾಹಿತಿಯು ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರ ಆರೋಪ ಹೊರಿಸಲಿಕ್ಕೆ ಚಾರ್ಜ್ ಶೀಟ್ ಮಾಡಿದ್ದಾರೆ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಕೆಲಸ ನಮ್ಮ ನಾಯಕರಾದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮಾಡ್ತಾರೆ. ಇದು ರಾಜಕೀಯ ಪಿತೂರಿಯ ಕೆಲಸ. ಇದು ಸೋನಿಯಾ ಗಾಂಧಿಯವರ ಟ್ರಸ್ಟ್ ಅಲ್ಲ. ಅದು ಯಂಗ್ ಇಂಡಿಯಾ ಸಂಸ್ಥೆ ಆ ಸಂಸ್ಥೆಗೆ ನಾವು ಕೊಟ್ಟಿದ್ದೇವೆ. ಸಂಸ್ಥೆಗೆ ಕೊಟ್ಟಿರುವುದರಿಂದ ಅವರಿಗೆ ವೈಯಕ್ತಿಕ ಲಾಭ ಆಗುವ ಪ್ರಶ್ನೆ ಇಲ್ಲ. ಜೊತೆಗೆ ವೈಯಕ್ತಿಕವಾಗಿ ಅದನ್ನು ಬಳಕೆ ಕೂಡ ಮಾಡಿಲ್ಲ.ಇದರಲ್ಲಿ ಲಾಭದ ಪ್ರಶ್ನೆ ಉದ್ಭವ ಆಗೋದಿಲ್ಲ. ನಾವು ಎಲ್ಲಾ ಹಂತದಲ್ಲೂ ದೇಣಿಗೆ ಕೊಟ್ಟಿರುವುದನ್ನ ಘೋಷಣೆ ಮಾಡಿದ್ದೇವೆ. ಪ್ರತಿ ವರ್ಷ ನಮ್ಮ ಬುಕ್ಸ್ ಆಫ್ ಅಕೌಂಟ್ಸ್ ನಲ್ಲಿ ಹಾಗೂ ಐಟಿ ರಿಟರ್ನ್ಸ್ ಅಲ್ಲೂ ಕೂಡ ದಾಖಲೆಗಳನ್ನು ಕೊಟ್ಟಿದ್ದೇವೆ. ಅಧಿಕಾರಿಗಳು ಕೇಳಿದಾಗಲೂ ಅದಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನು ಡಿಕ್ಲೇರ್ ಮಾಡಿದ್ದೇವೆ. ಅದರಲ್ಲಿ ಮುಚ್ಚಿಡುವಂತೆ ಯಾವುದೇ ಪ್ರಶ್ನೆ ಇಲ್ಲ. ಸಂಪೂರ್ಣವಾಗಿ ಎಲ್ಲವೂ ಪಾರದರ್ಶಕವಾಗಿ ಆಗಿದೆ ಎಲ್ಲವೂ ಚೆಕ್ ಮುಖಾಂತರವೇ ನೀಡಿರುವುದು ಎಂದಿದ್ದಾರೆ.