ಮನೆ Latest News ಮುನಿರತ್ನ ಎಂಥಾ ಚೆಂಗ್ಲು ಅಂತ ದಾಖಲೆ ಸಮೇತ ಬಿಡುಗಡೆ ಮಾಡ್ತೀನಿ; ಮಾಜಿ ಸಂಸದ ಡಿ‌.ಕೆ....

ಮುನಿರತ್ನ ಎಂಥಾ ಚೆಂಗ್ಲು ಅಂತ ದಾಖಲೆ ಸಮೇತ ಬಿಡುಗಡೆ ಮಾಡ್ತೀನಿ; ಮಾಜಿ ಸಂಸದ ಡಿ‌.ಕೆ. ಸುರೇಶ್ ಹೇಳಿಕೆ

0

ಬೆಂಗಳೂರು; ಮುನಿರತ್ನ  ಎಂಥಾ ಚೆಂಗ್ಲು ಅಂತ ದಾಖಲೆ ಸಮೇತ ಬಿಡುಗಡೆ ಮಾಡ್ತೀನಿ ಎಂದು ಮಾಜಿ ಸಂಸದ ಡಿ‌.ಕೆ. ಸುರೇಶ್ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಮತ್ತು ಮುನಿರತ್ನ ನಡುವೆ ಚೆಂಗ್ಲು ಪದದ ಸಮರದ ಬಗ್ಗೆ ಮಾತನಾಡಿದ ಅವರು ಅವನು ಎಂಥಾ ಚೆಂಗ್ಲು ಅಂತ ದಾಖಲೆ ಸಮೇತ ಬಿಡುಗಡೆ ಮಾಡ್ತೀನಿ .ಮಂಗಳವಾರ ದಾಖಲೆ ಸಮೇತ ಎಲ್ಲ ಬಿಡುಗಡೆ ಮಾಡ್ತೀನಿ. ಆಸಿಡ್ ಮೊಟ್ಟೆ ತಲೆಗೆ ಬಿದ್ದು ಮೆಂಟಲ್ ಆಗಿದ್ದಾನೆ. ಏನೇನೊ ಮಾತನಾಡುತ್ತಿದ್ದಾರೆ. ಡಾಕ್ಟರೇ ಅವತ್ತು ಹೇಳಿದ್ರಲ್ಲ ಸಿನಿಮಾ ಆಸಿಡ್ ಮೊಟ್ಟೆ ಅವರ ತಲೆ ಮೇಲೆ ಬಿದ್ದಿದೆ  ಎಂದು ಸಂಸದ ಡಾ. ಮಂಜುನಾಥ್ ಹೆಸರು ಹೇಳದೆಯೇ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.

ರಾಜ್ಯದ ಹುಚ್ಚು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಿಸಿದ್ರೆ ಸರಿ ಹೋಗಲ್ಲ. ಕೇಂದ್ರದ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ರಾಜ್ಯಪಾಲರು, ರಾಷ್ಟ್ರಪತಿ ಎಲ್ಲರಿಗೂ ದೂರು ಕೊಡ್ತಾರಲ್ಲ. ಪ್ರಧಾನಿ ಸಾಮಾನ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರಾ, ಇಲ್ಲ. ಮುನಿರತ್ನಗೆ ಪ್ರಧಾನಿ ಚಿಕಿತ್ಸೆ ಪಡೆಯುವ ಆಸ್ಪತ್ರೆಯಲ್ಲಿ‌ ಟ್ರೀಟ್ಮೆಂಟ್ ಕೊಡಿಸಬೇಕು ಎಂದು ಲೇವಡಿ ಮಾಡಿದ್ರು.

ಡಿಕೆಶಿ ವಿರುದ್ಧ ಮುನಿರತ್ನ ರಾಜ್ಯಪಾಲರಿಗೆ ದೂರು ನೀಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯದ ಆಸ್ಪತ್ರೆಯಲ್ಲಿ ಅಲ್ಲ, ಏಮ್ಸ್ ನಲ್ಲಿಯೇ ಮುನಿರತ್ನ ಟ್ರೀಟ್ಮೆಂಟ್ ಕೊಡಿಸಬೇಕು.ಇಲ್ಲಿ ಆದ್ರೆ ಇನ್ಫುಯೆನ್ಸ್ ಬಳಸುತ್ತಾರೆ ಎಂದರು. ಮುನಿರತ್ನ ಆಣೆ ಪ್ರಮಾಣ ವಿಚಾರದ ಬಗ್ಗೆ ಮಾತನಾಡಿದ ಅವರು ಇವನು ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ನನ್ನ ಮೇಲೆ ಎಷ್ಟು ಜನರ ಮೇಲೆ ಆಣೆ ಇಟ್ಟುದ್ದಾರೆ ಯಾವ ನನ್ ಮಗನಿಗೆ ಗೊತ್ತು? ಎಂದ್ರು.

ಆರ್.ಆರ್. ನಗರದಲ್ಲಿ ಶೋಲೆ ಸಿನಿಮಾದ ರೀತಿ ಫ್ಲೆಕ್ಸ್ ಕುರಿತು ಗಬ್ಬರ್ ಸಿಂಗ್, ಅಮಿತಾಬ್ ಬಚ್ಚನ್, ಹೇಮ ಮಾಲಿನಿ ಎಂದು ಮುನಿರತ್ನ ವ್ಯಂಗ್ಯ ವಿಚಾರದ ಬಗ್ಗೆ ಮಾತನಾಡಿ  ಗಬ್ಬರ್ ಸಿಂಗ್ ಬಗ್ಗೆ ಮಂಗಳವಾರ ಮಾತಾಡ್ತೀನಿ. ಅವನಿಗೆ ಏನೇನು ಹೇಳಬೇಕು ಮಂಗಳವಾರ ಹೇಳ್ತೀನಿ. ಆ ಗಬ್ಬರ್ ಸಿಂಗ್ ಹೇಳಿದಕ್ಕೇ ಮಾಧ್ಯಮದವರು ಇಷ್ಟು ಎಕ್ಸೈಟ್ ಆದ್ರೆ ಹೇಗೆ?. ಆ ಚಾರ್ಜ್ ಶೀಟ್ ನಲ್ಲಿರುವ ರಿಪೋರ್ಟ್ ತಂದು ಓದಬಾರದಾ?. ಇಷ್ಟು ದಿನ ಓದಿರಲಿಲ್ಲ, ಇವತ್ತು ಅಥವಾ ನಾಳೆ ತರಿಸುತ್ತೇನೆ. ಅರ್ಧ ಗಂಟೆ ಓದಿದ್ಮೇಲೆ ಹೇಳ್ತೀನಿ.ದಾಖಲೆ ಇಷ್ಟು ಮಾತಾಡುತ್ತೇನೆ, ಖಾಲಿ ಮಾತು ಆಡಲ್ಲ ಎಂದ್ರು.

ಮುನಿರತ್ನ ಹೇಳಲಿ ಅಂತ ಕಾಯ್ತಾ ಇದ್ದೆ, ಹೇಳಿದ್ದಾನೆ. ಇಷ್ಟು ದಿನ ನಾನು ಬಾಯಿ ಓಪನ್ ಮಾಡಿರಲಿಲ್ಲ, ಈಗ ಓಪನ್ ಮಾಡ್ತೀನಿ.ನಾನು ಏನಾದ್ರೂ ಮಾತಾಡಿದ್ನಾ?. ಮುನಿರತ್ನ ಕಲಾವಿದ, ಕಲಾವಿದ ಸಂಘದ ಅಧ್ಯಕ್ಷ, ಡೈರೆಕ್ಟರ್, ನಿರ್ಮಾಪಕ ಎಂದ್ರು. ಜಾತಿಗಣತಿ ಬಗ್ಗೆ ಮಾತನಾಜಿ ಜಾತಿಗಣತಿಗೆ ಸದ್ಯ ವಿರಾಮ ಕೊಟ್ಟಿದ್ದಾರಲ್ಲ. ನೋಡಿ ನಂತರ ಮಾತನಾಡುತ್ತೇನೆ. ಜಾತಿಗಣತಿ ಅಂತ ಆಗೋಗಿದೆ. ಆದರೆ ಇದು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ.56 ಅಂಶಗಳ ಮೇಲೆ ಸಮೀಕ್ಷೆ ಮಾಡಿದ್ದಾರೆ ಎಂದ್ರು.