ಮನೆ Latest News ಚನ್ನಪಟ್ಟಣ ಚುನಾವಣೆ ಸ್ಪರ್ಧೆಗೆ ಮಾಜಿ ಸಂಸದ ಡಿಕೆ ಸುರೇಶ್ ಪರೋಕ್ಷವಾಗಿ ಒಪ್ಪಿದ್ದಾರೆ ಎಂಬ ವಿಚಾರ; ಮಾಜಿ...

ಚನ್ನಪಟ್ಟಣ ಚುನಾವಣೆ ಸ್ಪರ್ಧೆಗೆ ಮಾಜಿ ಸಂಸದ ಡಿಕೆ ಸುರೇಶ್ ಪರೋಕ್ಷವಾಗಿ ಒಪ್ಪಿದ್ದಾರೆ ಎಂಬ ವಿಚಾರ; ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದ್ದೇನು?

0

ಬೆಂಗಳೂರು; ಚೆನ್ನಪಟ್ಟಣ ಚುನಾವಣೆ ಸ್ಪರ್ಧೆಗೆ ಮಾಜಿ ಸಂಸದ ಡಿಕೆ ಸುರೇಶ್ ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ

ನಿನ್ನೆ ಸುದೀರ್ಘವಾದ ಸಭೆ ಮಾಡಿದ್ದೇವೆ.ಚನ್ನಪಟ್ಟಣ ತಾಲೂಕಿನ ಮುಖಂಡರು ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಿದ್ದೇವೆ. ಅವರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ.ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಎಂದು ಮುಖಂಡರು ಹೇಳಿದ್ದಾರೆ.ನನ್ನ ಮೇಲೂ ಒತ್ತಡವಿದೆ.ಪಕ್ಷದ ವರಿಷ್ಟರ ತೀರ್ಮಾನ, ಎಐಸಿಸಿ ಅಧ್ಯಕ್ಷರ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ.ಪಕ್ಷ ಏನೂ ತೀರ್ಮಾನ ಮಾಡುತ್ತದೆ ಅದಕ್ಕೆ ಬದ್ದ. ನಾನು ಪಕ್ಷದ ಶಿಸ್ತಿನ ಸಿಪಾಯಿ.ಎಲ್ಲ ವಿಚಾರಗಳನ್ನು ಮುಖಂಡರ ಗಮನಕ್ಕೆ ತರುತ್ತೇನೆ. ಅಧಿಕಾರಕ್ಕೋಸ್ಕರ ಚುನಾವಣೆ ಮಾಡಬೇಕು ಎಂಬ ದೃಷ್ಟಿಯಲ್ಲಿ ನಾನು ಇಲ್ಲ ಎಂದಿದ್ದಾರೆ.

ಸಿಎಂ ಜೊತೆ ಕೂಡ ಚರ್ಚೆ ಮಾಡ್ತೇನೆ.ಪಕ್ಷಕ್ಕೆ ನನ್ನ ಅನಿವಾರ್ಯತೆ ಇಲ್ಲ, ನನಗೆ ಪಕ್ಷ ಅನಿವಾರ್ಯ.ಕಾರ್ಯಕರ್ತರು ಅವರ ಅಭಿಪ್ರಾಯ ಅನಿಸಿಕೆ ತಿಳಿಸಿದ್ದಾರೆ.ಅವರ ಪ್ರೀತಿ ಗೌರವಕ್ಕೆ ಋಣಿ ಆಗಿದ್ದೇನೆ.ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಿದ್ದಾರೆ ಕಾರ್ಯಕರ್ತರು. ಮುಂದಿನ ದಿನಗಳಲ್ಲಿ ಕೈ ಜೋಡಿಸಿ ನಾನು ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಗೆ ಕೆಲಸ ಮಾಡ್ತೇನೆ ಎಂದು ತಿಳಿಸಿದ್ದೇನೆ.ಪಕ್ಷಕ್ಕೆ ನನ್ನ ವಿಚಾರ ತಿಳಿಸುತ್ತೇನೆ, ಇನ್ನೂ ಐದು ದಿನ ಇದೆ. ಬಿಜೆಪಿ ಜೆಡಿಎಸ್ ಕೂಡ ಅಭ್ಯರ್ಥಿ ಘೋಷಣೆ ಮಾಡಬೇಕು.ಎಲ್ಲರೂ ಚುನಾವಣೆಗೆ ಸಜ್ಜಾಗಿದ್ದಾರೆ ಎಂದರು.

ಜೆಡಿಎಸ್ ನಿಂದ ಯಾರು ನಿಲ್ಲಬೇಕು ಎಂದು ಘೋಷಣೆ ಆಗಬೇಕಷ್ಟೇ.ಯಾರಿಗೆ ಟಿಕೇಟ್ ಕೊಡ್ತಾರೆ ಯಾರು ನಿಲ್ತಾರೆ ಅವರಿಗೆ ಬಿಟ್ಟಿದ್ದು. ಮೈತ್ರಿ ಪಕ್ಷಗಳ ಆಂತರಿಕ ವಿಚಾರ ಅದು. ಎರಡು ಸೀಟು ಬಿಜೆಪಿ ಘೋಷಣೆ ಮಾಡಿದೆ.ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿರುವುದು.ನಮ್ಮ ಪಕ್ಷ ಸದೃಢವಾಗಿದೆ, ಕಾರ್ಯಕರ್ತರು ಮುಖಂಡರು ಉತ್ಸಾಹದಿಂದ ಇದ್ದಾರೆ. ನಾವೂ ಕೂಡ ಮುಕ್ತ ಮನಸ್ಸಿನಿಂದ ಕೆಲಸ ಮಾಡ್ತಿದ್ದಾರೆ.ಹಲವರು ಜೆಡಿಎಸ್ ಬಿಜೆಪಿ ತೊರೆದು ಬಂದಿದ್ದಾರೆ.ಯಾರೇ ನಮ್ಮ ಪಕ್ಷಕ್ಕೆ ಬಂದರೂ ನಾವು ಸ್ವಾಗತ ಮಾಡ್ತೇವೆ. ಕುಮಾರಸ್ವಾಮಿ ಯವರು ಬೆಳಗ್ಗೆ ಒಂದು ಹೇಳ್ತಾರೆ, ಸಂಜೆ ಒಂದು ಹೇಳ್ತಾರೆ.ಜನರೂ ಕೂಡ ಅದನ್ನು ಎಂಟರ್ಟೈನ್ಮೆಂಟ್ ಆಗಿ ತೆಗೆದುಕೊಂಡಿದ್ದಾರೆ.ಅವರು ಯಾವತ್ತೂ ಸೀರಿಯಸ್ ಅಲ್ಲ, ಶಿವಕುಮಾರ್ ನ ಬಯ್ಯೋವಾಗ ಮಾತ್ರ ಸೀರಿಯಸ್ ಅವರು.ಕಾದು ನೋಡೋಣ ಎಲ್ಲವನ್ನೂ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣ ಮಾಡಲ್ಲ ಎಂಬ ಎಚ್ಡಿಕೆ ಆರೋಪ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಕುಮಾರಸ್ವಾಮಿ ವಿರುದ್ದ ಡಿಕೆ ಸುರೇಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಕುಮಾರಸ್ವಾಮಿ ನೂ ಮಂತ್ರಿಯಾಗಿ ಇರಲ್ಲ. ಅವನೂ ಮಂತ್ರಿಯಾಗಿ ಇರಲ್ಲಾರೀ. ಇನ್ನೊಂದು ಆರು ತಿಂಗಳೋ ವರ್ಷಕ್ಕೋ ಅವನೂ ಮನೆಗೆ ಹೋಗ್ತಾನೆ.ಏನ್ ಮಾಡೋದಕ್ಕಾಗುತ್ತದೆ.ಅವನು ಯಾವ ಕಾರಣದಲ್ಲಿ ಹೇಳ್ದ ನಮ್ಮ ಸರ್ಕಾರ ಇರಲ್ಲ ಅಂತ? ಆ ಪಾರ್ಟಿ ಯಾವ ಕಾರಣ ಕೊಟ್ಟು ನಮ್ಮ ಸರ್ಕಾರ ಇರಲ್ಲ ಅಂತ ಹೇಳಿದ್ನೋ ಅದೇ ಕಾರಣ ನಾನೂ ಹೇಳ್ತಿರೋದು.ಅವರ ಸರ್ಕಾರನೂ ಇರೋದಿಲ್ಲ, ಅವನೂ ಇರೋದಿಲ್ಲ.ಏನು ಬೇಕಾದರೂ ಮಾತಾಡ್ತೀನಿ ಅಂದ್ರೆ ಅದಕ್ಕೊಂದು ಲೆಕ್ಕ ಇಲ್ವಾ. ಕೇಂದ್ರದ ಮಂತ್ರಿ ಆದವರು ಸ್ವಲ್ಪ ತೂಕ ಇಟ್ಟಿಕೊಂಡು ಮಾತನಾಡಲಿ.ಎಲ್ಲ ಭಾಷೆನೂ ಬರತ್ತೆ ನನಗೂ, ಇದು ಟ್ರೈಲ್ ಕೊಟ್ಟಿದ್ದೀನಿ ಅಷ್ಟೇ ಎಂದಿದ್ದಾರೆ.