ಮನೆ Latest News ನಮ್ಮ ಮೇಲೆ ಮಾಧ್ಯಮಗಳಿಗೆ ಕೋಪ ಅಂತಾ ನನ್ಗೆ ಅನ್ನಿಸ್ತಿದೆ; ಮಾಧ್ಯಮಗಳ ವಿರುದ್ದವೇ ಡಿಕೆ ಸುರೇಶ್...

ನಮ್ಮ ಮೇಲೆ ಮಾಧ್ಯಮಗಳಿಗೆ ಕೋಪ ಅಂತಾ ನನ್ಗೆ ಅನ್ನಿಸ್ತಿದೆ; ಮಾಧ್ಯಮಗಳ ವಿರುದ್ದವೇ ಡಿಕೆ ಸುರೇಶ್ ಗರಂ

0

ಬೆಂಗಳೂರು: ನಮ್ಮ ಮೇಲೆ  ಮಾಧ್ಯಮಗಳಿಗೆ ಕೋಪ ಅಂತಾ ನನ್ಗೆ ಅನ್ನಿಸ್ತಿದೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್  ಮಾಧ್ಯಮಗಳ ವಿರುದ್ದವೇ ಗರಂ ಆಗಿದ್ದಾರೆ.

ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು ಯೋಗೇಶ್ವರ್ ಸಾಕಷ್ಟು ಚುನಾವಣೆ ಮಾಡಿದ್ದಾರೆ. ಫಲಿತಾಂಶ ಅವರ ಪರವಾಗಿರುತ್ತದೆ ಎಂದು ಹೇಳಿದ್ದಾರೆ.ಚುನಾವಣೆಯಲ್ಲಿ ತಂತ್ರಗಾರಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಚುನಾವಣೆ ಮಾಡಿರುವ ನಮ್ಮೆಲ್ಲ ಕಾರ್ಯಕರ್ತರು, ಮುಖಂಡರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಯೋಗೇಶ್ವರ್ ಯಾವ ಆಯಾಮ ಇಟ್ಟುಕೊಂಡು ಹೇಳಿದ್ದಾರೆ ಗೊತ್ತಿಲ್ಲ.ಫಲಿತಾಂಶ ಕಾಂಗ್ರೆಸ್ ಪಕ್ಷದ ಪರವಾಗಿ ಇರುತ್ತದೆ ಎಂಬ ನಂಬಿಕೆ ಇದೆ.ಜಮೀರ್ ಅಹಮದ್ ಕುಮಾರಸ್ವಾಮಿಯವರ ಆತ್ಮೀಯ ಸ್ನೇಹಿತರು. ಅವರ ಹೇಳಿಕೆ ಹೊಸದೇನೂ ಅಲ್ಲ. ಆದರೆ ಚುನಾವಣೆಗೆ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆ ಮೇಲೆ ಪ್ರಚಾರ ಬೀರಬೇಕು ಎಂಬ ಕಾರಣಕ್ಕೇ . ಮಾಧ್ಯಮಗಳು ಯಾಕೆ ಅಷ್ಟೊಂದು ಅವರ ಹಳೆಯ ಹೇಳಿಕೆಯನ್ನು ಪ್ರಚಾರ ಮಾಡಿದರು? ಇವತ್ತೊಂದೇ ಸಲ ಜಮೀರ್ ಮಾತಾಡಿಲ್ಲ. ನಮ್ಮ ಮೇಲೆ ಮಾಧ್ಯಮಗಳಿಗೆ ಕೋಪ ಎಂದು ನನಗಂತೂ ಅನಿಸುತ್ತಿದೆ ಎಂದಿದ್ದಾರೆ.

ಜಮೀರ್ ಅಹಮದ್ ಮಾತು ವೈಯಕ್ತಿಕ ಹೇಳಿಕೆ. ಇವತ್ತು ಕೂಡ ಚರ್ಚೆ ಮಾಡಿ ಈ ಹೇಳಿಕೆಯನ್ನು. ಪ್ರತಿಪಕ್ಷ ಗಳಲ್ಲ ಇದು, ಮಾಧ್ಯಮಗಳು ಮಾಡಿದ ಸೃಷ್ಟಿ. ಡಿ ಕೆ ಶಿವಕುಮಾರ್ ರನ್ನು ಕಳ್ಳ ಅಂತ ಕುಮಾರಸ್ವಾಮಿ ಕರೆದಾಗ ಮಾಧ್ಯಮಗಳು ಇದನ್ನು ಚರ್ಚೆ ಮಾಡಲಿಲ್ಲ. ನೂರು ರೂಪಾಯಿಗೆ ಕೂಲಿಗೆ ಇದ್ದ ಎಂಬುದನ್ನು ತೋರಿಸಲಿಲ್ಲ ಮಾಧ್ಯಮಗಳು. ನಿಮ್ಮ ಮೌಲ್ಯಗಳನ್ನೂ ಕೂಡ ಪ್ರಶ್ನೆ ಮಾಡಬೇಕಾದ ಸಮಯ ಬಂದಿದೆ ಎಂದು ಮಾಧ್ಯಮಗಳ ವಿರುದ್ದವೇ ಡಿಕೆ ಸುರೇಶ್ ಗರಂ ಆಗಿದ್ದಾರೆ.

ಜಮೀರ್ ಹೇಳಿದ್ದು ಮೊದಲ ಬಾರಿಯಲ್ಲ. ಹಿಂದೆಯೇ ಜಮೀರ್ ಹೇಳಿದಾಗ ಪ್ರಶ್ನೆ ಮಾಡಬೇಕಿತ್ತು ಕುಮಾರಸ್ವಾಮಿ. ಯೋಗೇಶ್ವರ್ ಹೇಳಿಕೆ ಬೇರೆಯದೇ ದೃಷ್ಟಿಕೋನದಿಂದ‌ ನೋಡಬೇಕು. ಯಾರೋ ಗ್ರಾಮೀಣ ಭಾಗದ ಯುವಕರು ಬೆಟ್ಟಿಂಗ್ ಕಟ್ಟಿ ಹಾಳು ಮಾಡಿಕೊಳ್ಳುವುದು ಬೇಡ ಎಂದು ಎಚ್ಚರಿಕೆ ಕಾರಣಕ್ಕೆ ಯೋಗೇಶ್ವರ್ ಹೇಳಿರಬಹುದು ಎಂದಿದ್ದಾರೆ. ಮಾತನಾಡುವಾಗ ಕೆಲವೊಂದು ತಪ್ಪುಗಳು ಬರುತ್ತವೆ.ಜಮೀರ್ ಹೇಳಿಕೆಯನ್ನು ಸ್ವಲ್ಪ ಮಟ್ಟಿಗೆ ತಿರುಚಲಾಗಿದೆ. ಇಲ್ಲಿ ಕೆಲಸಕ್ಕೆ ಬೆಲೆ ಇಲ್ಲ. ಜನಕ್ಕೆ ಹಣ ಮತ್ತು ಧರ್ಮ ಎರಡೇ ಬೇಕಾಗಿರುವುದು. ಇದು ಸತ್ಯವಾದ ಮಾತು. ಕೆಲಸ ಮಾಡಿದ್ದೀವಿ ಓಟು ಹಾಕಿ ಅಂತ ಕೇಳೋ ಪರಿಸ್ಥಿತಿಯಲ್ಲಿ ರಾಜಕಾರಣಿಗಳಿಲ್ಲ. ಒಂದೋ‌ ಸುಳ್ಳು ಹೇಳೋದನ್ನು ಕಲಿತುಕೊಳ್ಳಬೇಕು. ಬೆಳಗ್ಗೆ ಒಂದು ಸುಳ್ಳು ಮಧ್ಯಾಹ್ನ ಒಂದು ಸುಳ್ಳು. ಇದು ನನ್ನ ಹೇಳಿಕೆಯಲ್ಲ, ಜನರ ಅಭಿಪ್ರಾಯ, ನನ್ನ ನೋವಿನ ನುಡಿ. ಜಾತಿ ಹೇಳಬೇಕು, ಸುಳ್ಳು ಹೇಳಬೇಕು ಇಷ್ಟೇ ಎಂದು ಡಿ ಕೆ ಸುರೇಶ್ ಬೇಸರ ಹೊರ ಹಾಕಿದ್ದಾರೆ.