ಬೆಂಗಳೂರು; ಸತೀಶ್ ಜಾರಕಿಹೊಳಿ ನಾನು ಆಕಾಂಕ್ಷಿ ಅಂತ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
2028 ಕ್ಕೆ ನಾನು ಸಿಎಂ ಎಂಬ ಸತೀಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅವರು ಒಬ್ಬರೇ ಅಂತ ಹೇಳಿಲ್ಲ. ನಾನು ಆಕಾಂಕ್ಷಿ ಅಂತ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.140 ಶಾಸಕರು ಸೇರಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಸರ್ಕಾರ ಎಷ್ಟು ಕಷ್ಟ ಪಟ್ಟು ಬಂದಿದೆ ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಹೆಚ್ಡಿಕೆ 60% ಕಮೀಷನ್ ಆರೋಪದ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ದೇಶದ ಜನರಿಗೆ ಸೇವೆ ಮಾಡೋಕೆ ಸಿಕ್ಕಿದೆ. 60, 40 ಎಲ್ಲವನ್ನ ಬಿಡಲಿ. ಕುಮಾರಸ್ವಾಮಿಗೆ ಕೇಂದ್ರದಲ್ಲಿ ಉನ್ನತ ಸ್ಥಾನವಿದೆ. ರಾಜ್ಯಕ್ಕೆ ಏನು ಕೊಡುಗೆ ಕೊಡಬೇಕು ಕೊಡಲಿ. ರಾಜ್ಯಕ್ಕೆ ಸಿಗಬೇಕಾದ ಪಾಲಿನ ಬಗ್ಗೆ ಯೋಚಿಸಲಿ. ರಾಜ್ಯಕ್ಕೆ ಒಳಿತನ್ನ ಮಾಡಲಿ ಎಂದಿದ್ದಾರೆ. ಶನಿವಾರ,ಭಾನುವಾರ ಬರೋದು ಆರೋಪ ಮಾಡೋದು. ಇದೆಲ್ಲವನ್ನ ಅವರು ಬಿಡಲಿ. ಅಭಿವೃದ್ಧಿಯ ಚಿಂತನೆಯನ್ನ ಬಿಡಲಿ ಎಂದು ಕುಮಾರಸ್ವಾಮಿ ಆರೋಪಕ್ಕೆ ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ.
ಡಿ ಕೆ ಸುರೇಶ್ ಗೆ ಪಕ್ಷದ ಸಾರಥ್ಯ ವಿಚಾರದ ಬಗ್ಗೆ ಮಾತನಾಡಿ ನಾನು ಆಕಾಂಕ್ಷಿ ಅಲ್ಲ ಅಂತ ಹೇಳಿದ್ದೇನೆ. ಅದು ನಾವು ನೀವು ತೀರ್ಮಾನಿಸೋದು ಅಲ್ಲ. ಅದನ್ನ ಖರ್ಗೆ,ಎಐಸಿಸಿಯವರು ತೀರ್ಮಾನ ಮಾಡಬೇಕು. ಯಾರು ಆಗಬಾರದು ಅಂತ ಇಲ್ಲ..ಪರಮೇಶ್ವರ್, ರಾಜಣ್ಣ, ಯಾರೇ ಆಗಲಿ. ಸಿದ್ದರಾಮಯ್ಯನವರು ಆಗಬಾರದಾ? ಪಕ್ಷವನ್ನ ಎಲ್ಲರು ಮುನ್ನಡೆಸಿಕೊಂಡು ಹೋಗಬೇಕು. ರಾಜ್ಯದ ಜನರ ಸಂಕಷ್ಟ ಪರಿಹರಿಸುವವರು, ಪಕ್ಷವನ್ನ ಸಮರ್ಥವಾಗಿ ನಡೆಸುವವರು, ಇಂತವರು ಯಾರು ಬೇಕಾದ್ರೂ ಬರಲಿ, ಹೈಕಮಾಂಡ್ ನಾಯಕರನ್ನೇ ಪ್ರಶ್ನಿಸಿದಂತಾಗುತ್ತದೆ ಎಂದಿದ್ದಾರೆ.
ಕ್ಯಾಬಿನೆಟ್ ವಿಸ್ತರಣೆ ಪುನರ್ರಚನೆ ವಿಚಾರ ಯಾವುದೂ ಚರ್ಚೆ ಆಗಲಿಲ್ಲ: ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಸಚಿವ ಡಾ.ಎಚ್ ಸಿ ಮಹದೇವಪ್ಪ ಹೇಳಿಕೆ
ಬೆಂಗಳೂರು; ಕ್ಯಾಬಿನೆಟ್ ವಿಸ್ತರಣೆ ಪುನರ್ರಚನೆ ವಿಚಾರ ಯಾವುದೂ ಚರ್ಚೆ ಆಗಲಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಸಚಿವ ಡಾ.ಎಚ್ ಸಿ ಮಹದೇವಪ್ಪ ಹೇಳಿಕೆ ನೀಡಿದ್ದಾರೆ.
ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು ಸತೀಶ್ ಜಾರಕಿಹೊಳಿ ಊಟಕ್ಕೆ ಕರೆದಿದ್ದರು.ಯಾವ ಪ್ಲ್ಯಾನೂ ಇರಲಿಲ್ಲ, ಅಜೆಂಡಾವೂ ಇರಲಿಲ್ಲ. ಒಬ್ಬರೇ ಒಬ್ಬ ಶಾಸಕರೂ ಕೂಡ ಇರಲಿಲ್ಲ. ನಾವೇನೂ ರಾಜಕೀಯವೇ ಮಾತಾಡಲಿಲ್ಲ. ಒಂಭತ್ತನೇ ವಿಶ್ವದ ಅದ್ಭುತವೇ ಹೌದು ಇದು. ಸರ್ಕಾರ ಪರಿಣಾಮಕಾರಿಯಾಗಿ ಉತ್ತರ ಕೊಡಬೇಕು ಎಂಬ ಬಗ್ಗೆ ಮಾತ್ರ ಮಾತಾಡಿದ್ದೇವೆ. ಕ್ಯಾಬಿನೆಟ್ ವಿಸ್ತರಣೆ ಪುನರ್ರಚನೆ ವಿಚಾರ ಯಾವುದೂ ಚರ್ಚೆ ಆಗಲಿಲ್ಲ. ಅದು ನಮ್ಮ ಕೈಯ್ಯಲ್ಲೂ ಇಲ್ಲ. ಪುಷ್ ಆ್ಯಂಡ್ ಪುಲ್ ಎಲ್ಲವೂ ಕೂಡ ಹೈಕಮಾಂಡ್ ಕೈಯಲ್ಲಿ ಇದೆ. ನೀವು ಹೇಳುತ್ತಿರುವ ಯಾವ ವಿಚಾರವೂ ಕೂಡ ಚರ್ಚೆಯಾಗಿಲ್ಲ ಎಂದು ಮಾಧ್ಯಮವರ ಪ್ರಶ್ನೆಗೆ ತಿರುಗೇಟು ಕೊಟ್ಟಿದ್ದಾರೆ.
ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ.ಮುಂದೆಯೂ ಅವರೇ ಮುಂದುವರಿಯುತ್ತಾರೆ. ಯಾಕೆ ಈ ವಿಚಾರದಲ್ಲಿ ಪದೇ ಪದೇ ಪ್ರಶ್ನೆ ಎಂದು ಮಹದೇವಪ್ಪ ಅವರು ಮಾಧ್ಯಮದವರಿಗೇ ಮರುಪ್ರಶ್ನೆ ಹಾಕಿದ್ದಾರೆ.ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು ಇಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಹೆಸರಿಡೋದು ಏನು ದೊಡ್ಡ ವಿಚಾರನಾ..? ಅದರಲ್ಲಿ ವಿವಾದ ಯಾಕೆ..? ಸಿದ್ದರಾಮಯ್ಯ ಅವರೇನು ಅರ್ಜಿ ಹಾಕಿದ್ದಾರಾ ನನ್ನ ಹೆಸರು ಇಡಿ ಅಂತ..? ಸ್ಥಳಿಯವಾಗಿ ಒತ್ತಾಯ ಮಾಡಿದ್ದಾರೆ ಸಿದ್ದರಾಮಯ್ಯ ಹೆಸರಿಡಿ ಅಂತ. ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರು ಹೆಸರು ಇಡದಿದ್ದರು ಜನರ ಮನಸ್ಸಿಲ್ಲಿ ಸಿದ್ದರಾಮಯ್ಯ ಇದ್ದೆ ಇದಾರೆ. . ರಸ್ತೆಗೆ ಹೆಸರಿಡುವ ವಿಚಾರ ಸ್ಥಳೀಯ ಆಡಳಿತ ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ; ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಂಗಳೂರು; ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಚಿವ ಸಂಪುಟ ಪುನರ್ ರಚನೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಬಳಿಯೇ ನೀವು ಕೇಳಬೇಕು. ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ನಮ್ಮ ಬಳಿ ರಿಪೋರ್ಟ್ ಕೇಳಿತ್ತು ಕೊಟ್ಟಿದ್ದೀವಿ. ಇಲಾಖೆಯ ಕೆಲಸ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೇಳಿದ್ರು. ಸಚಿವರೆಲ್ಲ ಅವರರವ ಕಾರ್ಯ ವೈಖರಿ ಬಗೆ ರಿಪೋರ್ಟ್ ನೀಡಿದ್ದಾರೆ.ನಾವೆಲ್ಲ ನಮ್ಮ ಇಲಾಖೆಯ ವರದಿಯನ್ನ ಹೈಕಮಾಂಡ್ ಗೆ ಕೊಟ್ಟಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇದೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಒಂದೊಂದು ಪತ್ರಿಕೆ, ಒಂದೊಂದು ಮಾಧ್ಯಮಗಳಲ್ಲಿ ಒಂದೊಂದು ರೀತಿ ಬರ್ತಿದೆ. ಈಗ ಏನಾದ್ರೂ ಹೇಳಿದ್ರೆ ಮತ್ತೆ ಸ್ಪಷ್ಟನೆ ಕೊಡಬೇಕು.ನಾನು ಆಕಾಂಕ್ಷಿ ಅಲ್ಲ ಎಂದಿದ್ದಾರೆ. ಬೆಳಗಾವಿ ಡಿಸಿಸಿ ಅಧ್ಯಕ್ಷ ನೇಮಕ ಗೊಂದಲ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಏನು ಗೊಂದಲ ಇಲ್ಲ.ಇಡೀ ಜಿಲ್ಲೆಯಿಂದ ಒಬ್ಬರ ಹೆಸರು ಕಳುಹಿಸದ್ದೇವೆ. ಚಿಕ್ಕೋಡಿ ಮತ್ತು ಬೆಳಗಾವಿ ಜಿಲ್ಲೆಯಿಂದ ಒಂದೇ ಹೆಸರು ಕಳುಹಿಸಿದ್ದೇವೆ. ಗುಂಪುಗಾರಿಗೆ ಆಗೋಕೆ ಅವಕಾಶ, ಆಸ್ಪದ ಇಲ್ಲ. ದೆಹಲಿಯಿಂದ ಅಪ್ರೂವ್ ಆಗಬೇಕು, ಇನ್ನು ಕಳಿಸಿಲ್ಲ.ನಾವೂ ಕಾಣಯುತ್ತಿದ್ದೇವೆ, ರಾಜ್ಯದಲ್ಲಿ 20 ಜನ ಬದಲಾವಣೆ ಇರಬಹುದು ಎಂದಿದ್ದಾರೆ.
ZP-TP ಚುನಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಪ್ರಕರಣ ನ್ಯಾಯಾಲಯದಲ್ಲಿ ಇದೆ.ಏನೂ ಮಾಡೋಕೆ ಆಗಲ್ಲ, ಆದೇಶ ಬಂದರೆ ಮಾಡ್ತೀವಿ. ಮೇಲ್ಮನೆಗೆ ಚುನಾವಣೆ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಸಮಾಜ, ಪ್ರಾಂತ್ಯಾವಾರು ಕೊಡಬೇಕು. ಸಿಎಂ ಜೊತೆ ಚರ್ಚೆ ಮಾಡ್ಬೇಕು. ಪಕ್ಷಕ್ಕೆ ಅನುಕೂಲ ಆಗುವವರಿಗೆ ಸಿಗಬೇಕು.ಸಿಎಂಗೆ ಅಧಿಕಾರ ಕೊಟ್ಟಿದ್ದೇವೆ. ಯಾವಾಗ ಮಾಡ್ತಾರೊ ಅವರಿಗೆ ಬಿಟ್ಟದ್ದು ಎಂದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವುದೋ ಒಂದಲ್ಲ, ಒಂದು ವಿಚಾರದಲ್ಲಿ ಬಿಜೆಪಿ ರಾಜೀನಾಮೆ ಕೇಳುತ್ತೆ.ಎಲ್ಲರೂ ರಾಜೀನಾಮೆ ಕೊಡ್ತಾ ಹೋದ್ರೆ ಮಂತ್ರಿ ಮಂಡಲ ಖಾಲಿ ಆಗುತ್ತೆ. ತನಿಖಾ ಹಂತದಲ್ಲಿಬೇಕು, ಆರೋಪ ನಿಜ ಇರಬೇಕು. ಆಗ ಒತ್ತಡ ಹಾಕಿದ್ರೆ ಸರಿ ಎನ್ನಬಹುದು. ರಾಜೀನಾಮೆ ಕೇಳೋದು ಎಷ್ಟು ಸರಿ ಅನ್ನೋದು ಅವರೇ ಯೋಚಿಸಬೇಕು.ಈಶ್ವರಪ್ಪ ಪ್ರಕರಣವನ್ನ ಸ್ವತಃ ಗುತ್ತಿಗೆದಾರ ಸಂತೋಷ್ ಅವರೇ ಹೇಳಿದ್ದು. ಕೆಲಸ ಮಾಡಿದ್ದೀನಿ, ಬಿಲ್ ಕೊಡಿ ಅಂತ ನೂರಾರು ಬಾರೀ ಭೇಟಿ ಮಾಡಿದ್ರು. ಅವರ ಹೆಸರನ್ನ ಬರೆದು ಆತ್ಮಹತ್ಯೆ ಮಾಡಿಕೊಂಡರು.ಆ ಪ್ರಕರಣಕ್ಕೂ ಇದಕ್ಕೂ ವ್ಯತ್ಯಾಸ ಇದೆ, ಲಿಂಕ್ ಮಾಡೋಕೆ ಆಗೊಲ್ಲ.ತನಿಖೆ ಆಗ್ತಾ ಇದೆ ಆಗಲಿ, ಸಿಎಂ ಇದ್ದಾರೆ, ಸರ್ಕಾರ ಇದೆ ಎಂದು ಹೇಳಿದ್ದಾರೆ.
ಸಿಬಿಐಗೆ ಪ್ರಕರಣ ವಹಿಸುವಂತೆ ಬಿಜೆಪಿ ಒತ್ತಾಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಎಲ್ಲವನ್ನೂ ಸಿಬಿಐಗೆ ಕೊಡೊಕೆ ಆಗೊಲ್ಲ.ನಮ್ಮಲ್ಲೂ ಇದೆಯಲ್ಲ ಅವರು ಕೇಳಿದ್ದಕ್ಕೆಲ್ಲ ಉತ್ತರ ಕೊಡೋಕೆ ಆಗೊಲ್ಲ.ಸತ್ಯಾಸತ್ಯತೆ ಹೊರಗೆ ಬರಲಿ, ತನಿಖೆ ಆಗಲಿ ಎಂದು ತಿಳಿಸಿದ್ದಾರೆ.