ಬೆಂಗಳೂರು: ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರನ್ನು ಇಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದಾರೆ. ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ನಿವಾಸದಲ್ಲಿ ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ.
ಇನ್ನು ಎತ್ತಿನಹೊಳೆ ಯೋಜನೆ ವಿಚಾರಕ್ಕೆ ಸಂಬಂಧಪಟ್ಟಂತೆ ಡಾ ಜಿ ಪರಮೇಶ್ವರ್ ಅವರನ್ನು ಡಿಸಿಎಂ ಡಿ ಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಇಬ್ಬರ ಇಬ್ಬರು ಸಿಎಂ ಆಕಾಂಕ್ಷಿಗಳ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ನಿಜವಾಗಿಯೂ ಎತ್ತಿನಹೊಳೆ ಯೋಜನೆ ವಿಚಾರಕ್ಕೆ ಭೇಟಿಯಾದ್ರ ಇಲ್ಲ ಎತ್ತಿನಹೊಳೆ ಯೋಜನೆ ಕೇವಲ ನೆಪ ಮಾತ್ರನಾ ಅನ್ನೋ ಪ್ರಶ್ನೆ ಇದೀಗ ಮೂಡಿದೆ.
ಇನ್ನು ಮುಂದಿನ ರಾಜಕೀಯ ನಡೆ ಕುರಿತು ಇಬ್ಬರು ನಾಯಕರು ಚರ್ಚೆ ನಡೆಸಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಡಿ ಕೆ ಶಿವಕುಮಾರ್, ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಪರಸ್ಪರ ಭೇಟಿಯಾಗಿದ್ದಾರೆ.ಸಿಎಂ ರೇಸ್‌ನಲ್ಲಿರುವ ನಾಯಕರೇ ಪದೇ ಪದೇ ಭೇಟಿಯಾಗುತ್ತಿರೋದು ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಪದೇ ಪದೇ ಭೇಟಿಯಿಂದ ಪರ್ಯಾಯ ವೇದಿಕೆ ಸೃಷ್ಟಿಯಾಗ್ತಿದ್ಯಾ ಎಂಬ ಲೆಕ್ಕಾಚಾರ ಶುರುವಾಗಿದೆ.ಮೂಡಾ ಪ್ರಕರಣದಲ್ಲಿ ಸಿಎಂ ತಲೆದಂಡವಾಗಬಹುದು ಎಂಬ ಲೆಕ್ಕಾಚಾರದಲ್ಲೇ ಭೇಟಿಗಳು ನಡೆಯುತ್ತಿವೆ ಎನ್ನಲಾಗಿದೆ.ಕಾಂಗ್ರೆಸ್ ಪಾಳಯದಲ್ಲೇ ಇಬ್ಬರು ನಾಯಕರ ಭೇಟಿ ಚರ್ಚೆ ಹುಟ್ಟು ಹಾಕಿದೆ.
ಇನ್ನು ಈ ವೇಳೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ನಾನು ಪರಮೇಶ್ವರ್, ಎತ್ತಿನಹೊಳೆ ಏರಿಯಲ್ ವೀವ್ಹ್ ಮಾಡಬೇಕು ಅಂತ ತೀರ್ಮಾನಿಸಿದ್ದೇವೆ.ಸ್ಪಾಟ್ ವಿಸಿಟ್ ಮಾಡಬೇಕು.ದಸರಾ ನಂತ್ರ ಹೋಗಬೇಕು ಅಂದುಕೊಂಡಿದ್ದೇವೆ.ಎತ್ತಿನಹೊಳೆ ಬಗ್ಗೆ ಏನ್ ಮಾತು ಕೊಟ್ಟಿವೆ ಅದನ್ನ ಮಾಡಬೇಕು ಎಂದರು.
ಗೃಹ ಸಚಿವ ಪರಮೇಶ್ವರ್ ಮಾತನಾಡಿ ಡಿಸಿಎಂ ಅವರು ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ.ಕಾನೂನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಇನ್ನು ಎಡಿಜಿಪಿ ಚಂದ್ರಶೇಖರ್ ಪತ್ರ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಆದ್ರೆ ಕೆಲಸಕ್ಕೆ ಅಡ್ಡಿ ಪಡಿಸಿದ್ರೆ ಅವರೇ ಕ್ರಮ ತೆಗೆದುಕೊಳ್ಳುತ್ತಾರೆ. ಬರ್ನಾಡ್ ಶಾ ಹೇಳಿದ್ದಾರೆ ಅಂತ ಮೆನ್ಷನ್ ಮಾಡಿದ್ದಾರೆ.ಓದೋಕೆ ಅರ್ಥ ಮಾಡಿಕೊಳ್ಳೋ ಬಂದ್ರೆ ಈ ಪ್ರಶ್ನೆ ಕೇಳಲ್ಲ.ಗಾದೆ ಹೇಳಿದ್ರೆ ಅದು ನನಗೆ ಅಪ್ಲೈ ಆಗುತ್ತಾವಾ? ಎಂದು ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.