ಮನೆ Latest News ಚುನಾವಣಾ ಆಯೋಗ ತನ್ನ ತಪ್ಪು ಮುಚ್ಚಿಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ಚುನಾವಣಾ ಆಯೋಗ ತನ್ನ ತಪ್ಪು ಮುಚ್ಚಿಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು : ಚುನಾವಣಾ ಆಯೋಗ ತನ್ನ ತಪ್ಪು ಮುಚ್ಚಿಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ರಾಹುಲ್ ಗಾಂಧಿ ಮತಗಳ್ಳತನ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಮತಗಳ್ಳತನ ದೊಡ್ಡ ವಿವಾದ. ಚುನಾವಣೆ ಆಯೋಗ ತನ್ನ ತಪ್ಪು ಮುಚ್ಚಿಹಾಕಿಕೊಳ್ಳೋ ಪ್ರಯತ್ನ. ಇದು ಪೂರ್ವ ನಿಯೋಜಿತ. ಇದನ್ನ ಸರಿ ಪಡಿಸೋದು ಅವರ ಜವಾಬ್ದಾರಿ ಎಂದರು. ಸರಿ ಮಾಡೋಕೆ ಆಗದಿದ್ರೆ ಅದು ಅವರ ವೈಫಲ್ಯ. ಇದು ಗಂಭೀರ ವಿಚಾರ, ರಾಹುಲ್ ಎತ್ತಿರೋ ವಿಚಾರ ದೊಡ್ಡದು ಎಂದು ಹೇಳಿದರು.

ಜವಾಬ್ದಾರಿ ನಿರ್ವಹಣೆ ಮಾಡೋಕೆ ಆಗ್ದೇ ಚುನಾವಣೆ ಆಯೋಗ ಆರೋಪ ಮಾಡೋದು ಸರಿಯಿಲ್ಲ. ಚುನಾವಣೆ ಆಯುಕ್ತನ್ನ ಇದುವರೆಗೂ ನೋಡಿರಲಿಲ್ಲ. ಇದು ದೇಶದ ದುರ್ದೈವ ಎಂದಿದ್ದಾರೆ.

ರಾಹುಲ್ ಗಾಂಧಿ ಮಾತಾಡಿದ್ದು ಸಂಪೂರ್ಣವಾಗಿ ಮಾಹಿತಿ ತೆಗೆದುಕೊಂಡಿದ್ದಾರೆ. ಆಳಂದ ಮಾತ್ರವಲ್ಲ ಬೇರೆ ಕ್ಷೇತ್ರಗಳಲ್ಲೂ ಹೀಗೇ ಆಗಿದೆ. ಆಳಂದ ಶಾಸಕರು ಹಿಂದೆ ದೂರು ಕೊಟ್ಟಿದ್ದರು, ಕೇಸ್ ರಿಜಿಸ್ಟರ್ ಆಗಿದೆ.ಚಿಲುಮೆ ವಿಚಾರದಲ್ಲೂ ನಾವು ಹೋರಾಟ ಮಾಡಿದ್ದೆವು. ಸಿಐಡಿ ತನಿಖೆಗೆ ನೀಡಲಾಗಿತ್ತು. ಸಿಐಡಿಗೆ ಚುನಾವಣೆ ಆಯೀಗದವರು ಡೇಟಾ ಕೊಡಬೇಕು. ಫೋನ್ ನಂಬರ್ ಯಾರದ್ದು ಯಾರಿಂದ ಬಂದಿದೆ ಎಲ್ಲ ಮಾಹಿತಿ ಬರಬೇಕು. ನಮಗೆ ಇರುವ ಮಾಹಿತಿ ಪ್ರಕಾರ ಹೊರ ರಾಜ್ಯದ ಫೋನ್ ನಂಬರ್ ಗಳು ಇದರಲ್ಲಿವೆ. ಸಿಐಡಿಯವರಿಗೆ ಚುನಾವಣೆ ಆಯೋಗದವರು ಮಾಹಿತಿ ಕೊಡ್ತಾ ಇಲ್ಲ. ಚುನಾವಣಾ ಆಯೋಗ ಸಹಕಾರ‌ ಕೊಡ್ತಾ ಇಲ್ಲಅವರೂ ಇದರಲ್ಲಿ ಭಾಗಿಯಾಗಿದ್ದಾರಾ ಎನ್ನೋ ಡೌಟ್ ನಮಗಿದೆ ಎಂದರು.

ರಾಹುಲ್‌ ಮಾತಲ್ಲಿ ಸತ್ಯವಿದೆ. ಚುನಾವಣಾ ಆಯೋಗ ರಿಪ್ಲೈ ಮಾಡದೇ ಇರುವುದು ಸತ್ಯ. ನಾವು ಕೇಳಿದ ಮಾಹಿತಿ ಕೊಡದೇ ಇರುವುದು ಸತ್ಯ. ಯಾರು ಓಟು ಎಲ್ಲಿ ಹಾಕ್ತಾನೆ ಗೊತ್ತಾಗುತ್ತೆ.ಡಿಲೀಟ್ ಮಾಡುವಾಗ ಓಟಿಪಿ ಹೋಗುತ್ತದೆ. ಡಿಲೀಟ್ ಮಾಡುವುದಕ್ಕೆ ಯಾರು ಕೊಟ್ಟರು ಇದೆಲ್ಲ ಪ್ರೊಸೆಸ್ ಆಗಬೇಕಲ್ವಾ?. ರಾಜಕೀಯ ಪಕ್ಷಗಳು ಆಕ್ಷೇಪ ಎತ್ತುತ್ತಾರೋ ಬಿಡ್ತಾರೋ ಚುನಾವಣಾ ಆಯೋಗ ಇದನ್ನು ಮಾಡಬೇಕಲ್ವಾ?. ಇದರಲ್ಲಿ ನ್ಯಾಯಾಲಯ ಯಾಕ್ರಿ ಹೋಗಬೇಕು? ಎಂದು ಹೇಳಿದರು.

ಸರ್ಕಾರವೇ ಕೋರ್ಟ್ ಗೆ ಹೋಗಲು ಆಗುತ್ತದಾ?.
ಸಿಐಡಿ ಲೆಟರ್ ಬರೆದಿರೋದು ನಿಜ ತಾನೇ?. ಸಿಐಡಿ ಲೆಟರ್ ಬಹಿರಂಗವಾಗಿ ಇದೆಯಲ್ಲ. ಇಲೆಕ್ಷನ್ ಕಮಿಷನ್ ಡೇಟಾ ಕೊಡಬೇಕು. ಎಲ್ಲದಕ್ಕೂ ಮಾಧ್ಯಮ ಟ್ರೈಯಲ್ ನಡೆಸುತ್ತೀರಲ್ಲ ಇದಕ್ಕೂ ಟ್ರೈಯಲ್ ನಡೆಸಿ ಎಂದರು.