ಬೆಂಗಳೂರು: ಗೊಬ್ಬರದ ವಿಚಾರವಾಗಿ ಕೇಂದ್ರ ರಾಜ್ಯದ ಕಾದಾಟ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಕೇಂದ್ರ ಸರ್ಕಾರ , ಎಂಪಿಗಳು ಈಗ್ಲೇ ಒಪ್ಪಿಕೊಂಡಿದ್ದಾರೆ. ಗೊಬ್ಬರ ಕೊಡಬೇಕು ಎಂದಿದ್ದಾರೆ. ಹೆಚ್ಚು ಮಳೆಯಾಗಿದೆ, ಬೇಡಿಕೆ ಕೂಡ ಹೆಚ್ಚಾಗಿದೆ. ಗೊಬ್ಬರ ಕೊಡುತ್ತೇವೆ, ಒತ್ತಡ ಇದೆ, ಅದರಂತೆ ನಾವು ಗೊಬ್ಬರ ಕೊಡಬೇಕು ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು ಬಿಜೆಪಿಯವರು ಅವರೇ ಪ್ರತಿಭಟನೆ ಮಾಡಬೇಕು. ಕೇಂದ್ರದ ಕೃಷಿ ಸಚಿವರ ವಿರುದ್ದ ಪ್ರತಿಭಟನೆ ಮಾಡಬೇಕು. ನಮ್ಮ ಮೇಲೆ ಯಾಕೆ ಪ್ರತಿಭಟನೆ ಮಾಡ್ತಾರೆ?. ಗೊಬ್ಬರದ ಫ್ಯಾಕ್ಟರಿ ಅವರ ಕಡೆ ಇದೆ, ನಮ ಕಡೆ ಇದ್ಯಾ?. ಗೊಬ್ಬರ ಹಂಚೋದು ಅಷ್ಟೇ ನಾವು, ಎಲ್ಲಾ ದಾಖಲೆ ಪರಿಶೀಲನೆ ಮಾಡುತ್ತೇವೆ.ಹಿಂದೆ ಅವರ ಸರ್ಕಾರದಲ್ಲಿ ಗುಂಡು ಹಾರಿಸಿದ್ದರು, ಆದ್ರೆ ನಾವು ಹಾಗೇ ಮಾಡಿದ್ವಾ? ಎಂದು ಪ್ರಶ್ನಿಸಿದ್ದಾರೆ.
ಶಾಸಕರ ಜೊತೆ ಸಿಎಂ ಸಭೆ ವಿಚಾರದ ಬಗ್ಗೆ ಮಾತನಾಡಿ ಚರ್ಚೆ ಏನು ಇಲ್ಲ, ಅವಶ್ಯಕತೆ ಇಲ್ಲ. ಅವರ ಅಧಿಕಾರ ಇದೆ, ಅದರ ಅನ್ವಯ ಸಭೆ ಮಾಡ್ತಾರೆ. ಸುರ್ಜೇವಾಲಾ ಹೇಳಿದ್ದಾರೆ, ಅದಕ್ಕೆ ಸಭೆ ಮಾಡುತ್ತಿದ್ದಾರೆ ಎಂದ ಅವರು ಡಿಕೆಶಿ ಗೆ ಅಹ್ವಾನ ಕೊಟ್ಟಿಲ್ಲ ಎಂಬ ಪ್ರಶ್ನೆಗೆ ನಮಗೆ ಕಷ್ಟ ಇಲ್ಲ, ಯಾಕೆ ನಿಮಗೆ ಕಷ್ಟ? ಎಂದು ಗರಂ ಆಗಿದ್ದಾರೆ. ಶಾಸಕರ ಜೊತೆ ಸಭೆ ಮಾಡ್ತಿದ್ದಾರೆ. ಸುರ್ಜೇವಾಲಾ ಅವರು ಸಭೆ ಮಾಡಿದ್ದಾರೆ, ಈಗ ಸಿಎಂ ಚರ್ಚೆ ಮಾಡುತ್ತಿದ್ದಾರೆ. ಬೆಂಗಳೂರಿಗೆ ಸಂಬಂಧಿಸಿದಂತೆ ಬೇರೆ ಅಜೆಂಡಾ ಇದೆ. ಸಿಎಂ ಜೊತೆ ನಾವು ಮಾತನಾಡುತ್ತೇವೆ. ಇಲ್ಲೂ ಶಾಸಕರು ಬೇಡಿಕೆ ಇಟ್ಟಿದ್ದಾರೆ, ನಾನೂ ಸಭೆ ಮಾಡ್ತೇನೆ.ಮಳೆ ನಿಂತಿದೆ, ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಬಿಜೆಪಿಯವರು ತಮ್ಮ ಪಕ್ಷದ ಬಗ್ಗೆ ಯೋಜನೆ ಮಾಡಲಿ. ಅವರದ್ದು ಪಕ್ಷದಲ್ಲಿ ತುಂಬಾ ನಡೀತಿದೆ ಅದರ ಬಗ್ಗೆ ಮಾತನಾಡಲಿ .ಇಲ್ಲೂ ಸ್ಥಳೀಯ ಎಲೆಕ್ಷನ್ ಬಗ್ಗೆ ಸಿದ್ದತೆ ನಡೀತಿದೆ. ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಆದ್ರೆ ಎಲ್ಲವನ್ನೂ ನೋಡಬೇಕು ಅಲ್ಲವೇ ಎಂದಿದ್ದಾರೆ.
ಸಿಎಂ ಆಗಲಿಲ್ಲ ಎಂಬ ಖರ್ಗೆ ಬೇಸರ ವಿಚಾರಕ್ಕೆ ಪ್ರತಿಕ್ರಿಯಿಸಿ ಖರ್ಗೆಯವರು ಹೇಳಿರೋದ್ರಲ್ಲಿ ತಪ್ಪೇನಿದೆ.ಅವ್ರ ನೋವು, ಅವರ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಅವರು ಹೇಳೋದರಲ್ಲಿ ಏನೂ ತಪ್ಪು ಇಲ್ಲ ಎಂದು ಅವರ ಪರ ಬ್ಯಾಟ್ ಬೀಸಿದ್ದಾರೆ. ರಾಜ್ಯ ರಾಜಕಾರಣಕ್ಕೆ ಖರ್ಗೆ ಅವರು ಬರಬಹುದು ಎಂದು ಚರ್ಚೆ ಆಗ್ತಾಯಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ ಚರ್ಚೆ ಆಗಲಿ ಹೇಳಿಕೆ ಕೊಡಲಿ . ಆದರೆ ಬಹಿರಂಗವಾಗಿ ಹೇಳಬಾರದು ಅಷ್ಟೇ. ಅವರ ಅಭಿಪ್ರಾಯ ಅಷ್ಟೇ ಹೇಳಲಿ ಎಂದಿದ್ದಾರೆ.
ಸಿಎಂ ಸಭೆಗೆ ಆಹ್ವಾನ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಿ ಇಂಥ ಚರ್ಚೆ ಅವಶ್ಯಕತೆ ಇಲ್ಲ. ಸಿಎಂಗೆ ಇರೋ ಅಧಿಕಾರ ಪ್ರಯೋಗ ಮಾಡಿಕೊಂಡು ಸಭೆ ಮಾಡ್ತಿದ್ದಾರೆ. ಎಂಎಲ್ ಗಳ ಸಮಸ್ಯೆ ಕೇಳಲಿದ್ದಾರೆ. ಸುರ್ಜೇವಾಲಾ ಅವ್ರು ಶಾಸಕರ ಸಭೆ ಮಾಡಿ ಸಮಸ್ಯೆ ನಮಗೆ ತಿಳಿಸಿದ್ರು. ಇದು ಒಳ್ಳೆ ಕಥೆ ಆಯ್ತಲ್ಲಾ. ನಮಗೆ ಕಷ್ಟ ಇಲ್ಲ.. ನಿಮಗೆ ಯಾಕೆ ಕಷ್ಟ?. ಬೆಂಗಳೂರು ಶಾಸಕರ ಜೊತೆ ಪ್ರತ್ಯೇಕ ಸಭೆ ಮಾಡ್ತೀವಿ. ಬೆಂಗಳೂರಿಗೆ ಹೆಚ್ಚು ಅನುದಾನ ಬೇಕಾಗಿದೆ ಎಂದದು ಗರಂ ಆಗಿದ್ದಾರೆ.