ಬೆಂಗಳೂರು; ಈ ಬಾರಿ ಬಜೆಟ್ ಎಲ್ಲರೂ ಸಂತೋಷ ಪಡಿಸುವ ಬಜೆಟ್ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಎಲ್ಲರೂ ಸಂತೋಷ ಪಡಿಸುವ ಬಜೆಟ್ ಇದು. ಬೆಂಗಳೂರಿಗೆ ಕೊಡುಗೆ,ನೀರಾವರಿಗೆ ಕೊಡುಗೆ ಇದೆ. ಸಾಲ ಮಾಡಿದ್ದೇವೆ ಎಂದರೆ ಕೇಂದ್ರ ಸರ್ಕಾರವೂ ಸಾಲ ಮಾಡಿದೆ.ಇದೊಂದು ಐತಿಹಾಸಿಕ ಬಜೆಟ್. ಎಲ್ಲರಿಗೂ ಒಲೈಕೆ ಮಾಡಬೇಕಲ್ವಾ. ಕನಸಿನ ಕೂಸು ನಂದೊಂದೇ ಅಲ್ಲ .ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಅನುದಾನ .ಇದು ನನ್ನೊಬ್ಬನ ಕನಸಲ್ಲ ಎಂದಿದ್ದಾರೆ.
ನಮ್ಮ ಬಜೆಟ್ ಎಲ್ಲರಿಗೂ ಸಂತೋಷ ಪಡಿಸೋ ಗಿಫ್ಟ್ ಇದು. ಅತೀ ಹೆಚ್ಚು ಯೋಜನೆಗಳಿಗೆ ಸಹಾಯ ಮಾಡೋ ಬಜೆಟ್. ಬೆಂಗಳೂರು ನಗರಕ್ಕೆ ಅತೀ ಹೆಚ್ಚು ಯೋಜನೆಗಳಿಗೆ ಸಹಾಯ ಮಾಡುತ್ತೇವೆ . ಈಗಾಗಲೇ ಕಾಮಗಾರಿ ಮಾಡೋಕೆ ಸಿದ್ದತೆ ನಡೆಸಿದ್ದೇವೆ. ನೀರಾವರಿ ಯೋಜನೆ ಹಾಗೂ ಎಲ್ಲಾ ಶಾಸಕರಿಗೆ ಅನುದಾನ ನೀಡಲಾಗಿದೆ. ನಾಲ್ಕು ಲಕ್ಷ ಕೋಟಿಗೂ ಹೆಚ್ಚು ಬಜೆಟ್ ಮೀರಿದೆ. ಸಾಲ ಕೇಂದ್ರ ಸರ್ಕಾರವೂ ಕೂಡ ಮಾಡಿದೆ, ನಾವೂ ಮಾಡಿದ್ದೀವಿ. ಕೊಟ್ಟ ಮಾತು ಉಳಿಸಿಕೊಳ್ಳೋ ಬಜೆಟ್. ಇದೊಂದು ಜನಪರ ಬಜೆಟ್. ನಾನು ರಾಜಕೀಯದಲ್ಲಿ ೩೫-೩೭ ವರ್ಷವಾಯ್ತು. ನಾನು ಕಂಡ ಐತಿಹಾಸಿಕ ಬಜೆಟ್ ಇದು.ಎಲ್ಲ ವರ್ಗಕ್ಕೂ ನ್ಯಾಯ ಒದಗಿಸೋ ಬಜೆಟ್. ಎಲ್ಲರಿಗೂ ಓಲೈಕೆ ಮಾಡಬೇಕು.ಸಮಾಜದಲ್ಲಿ ಇರೋ ಎಲ್ಲ ವರ್ಗದವರಿಗೂ ಸಮಾನತೆಯಿಂದ ನೋಡಬೇಕು. ಇದು ನನ್ನ ಕನಸು ಮಾತ್ರವಲ್ಲ.. ರಾಜ್ಯದ ಕನಸು ಇದು.ಇದಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಲ್ಲ, ಹೀಗಾಗಿ ನಾವು ನೀಡುತ್ತಿದ್ದೇವೆ ಎಂದರು.
ಭಾರತ ಬೀಫ್ ರಫ್ತು ವಿನಲ್ಲಿ ಎರಡನೇ ದೊಡ್ಡ ದೇಶ, ಯಾವುದು ಹಲಾಲ್?; ಸಚಿವ ಸಂತೋಷ್ ಲಾಡ್ ಪ್ರಶ್ನೆ
ಬೆಂಗಳೂರು: ರಾಜ್ಯ ಬಜೆಟ್ ನ್ನು ಹಲಾಲ್ ಬಜೆಟ್ ಅಂತ ಬಿಜೆಪಿ ಟೀಕಿಸುತ್ತಿರೋದಕ್ಕೆ ಸಚಿವ ಸಂತೋಷ್ ಲಾಡ್ ತಿರುಗೇಟು ಕೊಟ್ಟಿದ್ದಾರೆ.
ಹಲಾಲ್ ಬಜೆಟ್ ಅಂತ ಬಿಜೆಪಿ ಹೇಳ್ತಿದೆ. ನಾನು ಪ್ರಶ್ನೆ ಕೇಳ್ತಿನಿ ಭಾರತ ಬೀಫ್ ರಫ್ತು ವಿನಲ್ಲಿ ಎರಡನೇ ದೊಡ್ಡ ದೇಶ, ಯಾವುದು ಹಲಾಲ್? ಎಂದಿದ್ದಾರೆ. ಸಾಲ ಮಾಡಿರೋದು ನಿಜ ಇದೆ, ಆದ್ರೆ ಜಿಎಸ್‌ಡಿಪಿಗೆ ಅನುಸಾರ ಸಾಲ ಮಾಡಲಾಗಿದೆ.ಧರ್ಮದ ಆಧಾರದಲ್ಲೇ ಬಿಜೆಪಿಯವ್ರು ಮತ ಕೇಳ್ತಾ ಬಂದಿದ್ದಾರೆ. ಮಂಗಳಸೂತ್ರ, ತಾಳಿ ಮೇಲೆಯೇ ಮತ ಕೇಳಿರೋದು.ಬಿಜೆಪಿಯವ್ರಿಗೆ ಇದೇ ಬೇಕಿರೋದು, ಮುಸ್ಲಿಂ ಗುತ್ತಿಗೆ ಮೀಸಲನ್ನೂ ಹೀಗಾಗಿಯೇ ವಿರೋಧಿಸ್ತಿದ್ದಾರೆ. ಕೇಂದ್ರದ ಸಾಲ ಬಗ್ಗೆ ಯಾಕೆ ಮಾತಾಡಲ್ಲ ಯಾರೂ. ಬಿಜೆಪಿಯವ್ರೂ ಮಾತಾಡಲ್ಲ.ನಾವು ಸಾಲ ಮಾಡಿದೀವಿ, ಅದನ್ನ ಡಿಬಿಟಿ ಮೂಲಕ ಜನರಿಗೆ ಕೊಡ್ತೀವಿ ಎಂದಿದ್ದಾರೆ.
ಬೀಫ್ ಎಕ್ಸ್ ಪೋರ್ಟ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ. ಇದರಲ್ಲಿ ಯಾರು ಹಲಾಲ್ ಎಂದು ಕೇಳಬೇಕು ಅಲ್ಲವೇ .ಇವರು ಮಾಡಿದ್ರೆ ಪಾಕಿಸ್ತಾನ ಅಂತಾರೆ. ಇವರು ಮಾಡಿದ್ರೆ ಬೇರೆ ನಾವು ಮಾಡಿದ್ದರೆ ಮುಸ್ಲಿಂ ಪರ ಅಂತಾರೆ. ಮೋದಿ ಅವರು ಹೇಳಿದಂತೆ ನಾವು ಮಾಡಿದ್ದೇವೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡುತ್ತೇವೆ. ಬಡ ಕುಟುಂಬಕ್ಕೆ ಹೋಗುತ್ತಿದೆ
ಎಲ್ಲ ಇಲಾಖೆಗೆ ಹಣ ಸಿಕ್ಕಿದೆ, ನಮ್ಮ ಇಲಾಖೆಗೆ ಹೆಚ್ಚು ಸಿಕ್ಕಿಲ್ಲ ಆದ್ರೂ ತೃಪ್ತಿದಾಯಕ ಬಜೆಟ್ ಇದೆ.ಸಾಲ ಹೆಚ್ಚಾದರೂ ಒಳ್ಳೆಯ ಬಜೆಟ್ ಇದೆ. ಕರ್ನಾಟಕ ನಂಬರ್ ಮೂರು ಸ್ಥಾನದಲ್ಲಿವೆ. ಅವರ ನೀತಿ ಆಯೋಗದ ರಿಪೋರ್ಟ್ ಕೊಟ್ಟಿದೆ. ದೇಶದ ಸಾಲ ಎಷ್ಟು ಇದೆ, ಸಾಲ ಇರೋದು ಸಹಜ. ಸಾಲದ ಮಿತಿ ಒಳಗೆ ನಾವು ಇದ್ದೇವೆ ಎಂದಿದ್ದಾರೆ.