ಬೆಂಗಳೂರು; ಗ್ರೇಟರ್ ಬೆಂಗಳೂರು ಆಡಳಿತ ಕುರಿತು ಸಭೆ ಆಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಟ್ರಾಫಿಕ್ ಸಮಸ್ಯೆ ಆಗದಂತೆ ಸಭೆ ಮಾಡಿದ್ದೀನಿ. ವಿಧಾನಸೌಧದ ಸುತ್ತಮುತ್ತ ಟ್ರಾಫಿಕ್ ಆಗಬಾರದು ಎಂದು ಹೇಳಿದ್ದೀನಿ. ಗ್ರೇಟರ್ ಬೆಂಗಳೂರು ಆಡಳಿತ ಕುರಿತು ಸಭೆ ಆಗಿದೆ. ೧೧೪ ಕಿಮೀ ಎಲಿವೆಟೆಡ್ ಕಾರಿಡಾರ ಕುರಿತು ಚರ್ಚೆಯಾಗಿದೆ. ಅದಕ್ಕೂ ಟ್ರಾಫಿಕ್ ಕುರಿತು ಸಭೆ ಮಾಡಿದ್ದೀನಿ. ಕಸದ ಸಮಸ್ಯೆಯಾಗಿದೆ, ೩೩ ಪ್ಯಾಕೇಜ್ ಮಾಡಿದ್ದೀವಿ.ಕ್ಯಾಬಿನೆಟ್ ನಲ್ಲಿ ಅಪ್ರೋವಲ್ ಆಗಿದೆ, ಅದಕ್ಕೂ ಏಳು ವರ್ಷಕ್ಕೆ ಟೆಂಡರ್ ಕರೀತಾ ಇದ್ದೇವೆ. ಹೊಸ ಸ್ಕಿಮ್ ನಲ್ಲಿ ಕ್ಲಿನ್ ಅಪ್ ಬೆಂಗಳೂರು ಮಾಡೋಕೆ ಸೂಚನೆ ಕೊಟ್ಟಿದ್ದೇವೆ.ಕಸ ಎಲ್ಲಿದೆ ಅಂತ ದೂರ ಕೊಟ್ಟರೆ ಇಮೀಡೆಟ್ ಆಗಿ ಕ್ಲೀನ್ ಮಾಡ್ತಾರೆ ಎಂದಿದ್ದಾರೆ.
ಟನಲ್ ರಸ್ತೆ ನಿರ್ಮಾಣ ಬಗ್ಗೆ ಸಭೆ ಮಾಡಿದ್ವಿ.ಎರಡು ಫೇಸ್ ಪೈಕಿ ಒಂದು ಪೇಸ್ ಬಗ್ಗೆ ಟೆಂಡರ್ ಕರೀತಾ ಇದ್ದೀನಿ.ಇಂದು ಟನಲ್ ವಿಚಾರವಾಗಿ ಪೊಲೀಸ್ ಅಧಿಕಾರಿಗಳ ಕರೆಸಿ ಚರ್ಚೆ ಮಾಡಲಾಗಿದೆ. ನಿನ್ನೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ.ಒಂದು ಟನಲ್ ಟೆಂಡರ್ ಕರೆಯಲು ನಿರ್ಧಾರವಾಗಿದೆ.ಎಂಟ್ರಿ, ಎಗ್ಸಿಟ್ ಬಗ್ಗೆ ಚರ್ಚೆ ಮಾಡಲು ನಿರ್ಧಾರವಾಗಿದೆ. ವಿಧಾನಸೌಧದ ಸುತ್ತಮುತ್ತ ಬರಬಾರದು ಅಂತ ನನ್ನ ಅನಿಸಿಕೆ.ಹಾಗಾಗಿ ಮತ್ತೊಂದು ಚರ್ಚೆಯಾಗಿದೆ.114 ಕಿ.ಮೀ ಎಲಿವೇಟೆಡ್ ಕಾರಿಡಾರ್ ಮಾಡಲಾಗ್ತಿದೆ.ಜಾರ್ಜ್ ಅವರ ಕ್ಷೇತ್ರದಿಂದ ಏರ್ಪೋರ್ಟ್ ಹೋಗೋಕೆ ಮಾಡಲಾಗಿದೆ. ಬೆಂಗಳೂರಲ್ಲಿ ಕಸದ ಸಮಸ್ಯೆ ಇದೆ.ದೊಡ್ಡ ಕ್ಷೇತ್ರಗಳಲ್ಲಿ ಸಮಸ್ಯೆ ಆಗಿದೆ.33 ಪ್ಯಾಕೇಜ್ ಮಾಡಲಾಗಿದೆ.4,150 ಕೋಟಿ ಆಗಿದೆ. ಏಳು ವರ್ಷಗಳಿಗೆ ಟೆಂಡರ್ ಕರೆಯಲಾಗ್ತಿದೆ.ಏಳು ವರ್ಷ ಲೈಫ್ ಇರಲಿದೆ ಎಂದರು.
ಇಡೀ ಬೆಂಗಳೂರು ಕ್ಲೀನ್ ಮಾಡಲು ನಿರ್ಧಾರ ಮಾಡಿರುವ ಬಗ್ಗೆ ಮಾತನಾಡಿದ ಅವರು ಸಾರ್ವಜನಿಕರು ಕೂಡ ಎಲ್ಲೆಲ್ಲಿ ಕಸ ಇದೆ ಅಂತ ದೂರು ನೀಡಬಹುದು.ಸಾರ್ವಜನಿಕರು ಕೂಡ ಆಪ್ ನಲ್ಲಿ ದೂರು ಕೊಡಬಹುದು.ಬೆಂಗಳೂರನ್ನ ಸಂಪೂರ್ಣ ಸ್ವಚ್ಚವಾಗಿಡಲು ನಿರ್ಧಾರ.ಆಟೋ, ಟಿಪ್ಪರ್‌ಗಳನ್ನ ಕೂಡ ಖರೀದಿ ಮಾಡಲಾಗ್ತಿದೆ.ಕಸ ವಿಂಗಡಿಸಲು 26 ಜಾಗದಲ್ಲಿ ಫೈನಲೈಸ್ ಮಾಡಲಾಗ್ತಿದೆ.ಕಲೆಕ್ಷನ್, ವೆಟ್ ವೇಸ್ಟ್ ಟೆಂಡರ್ ಕೂಡ ಕರೆಯಲಾಗ್ತಿದೆ. ಕ್ಯಾಬಿನೆಟ್ ಅಪ್ರೂವಲ್ ಕೂಡ ಸಿಕ್ಕಿದ್ದು, ಒಂದು ವಾರದಲ್ಲಿ ಟೆಂಡರ್ ಕರೆಯಲಾಗುವುದು. ಯಾವ ಆಪ್ ಅಂತ ಅಪ್ ಲೋಡ್ ಮಾಡ್ತೀವಿ ಎಂದರು.
ಕಾವೇರಿ ಆರತಿ ಕುರಿತು ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾವೇರಿ ಆರತಿ ಕೂಡ ಸಭೆ ಆಗಿದೆ. ಇದು ನಮ್ಮ ಹೆಮ್ಮೆ.ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ಅನೇಕ ಮಠಗಳನ್ನ ಸೇರಿಸಿಕೊಂಡು ಪ್ಲಾನ್ ಮಾಡಲಾಗ್ತಿದೆ.ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನ ಇರಬೇಕು ಅಂತ ನನ್ನ ಆಶಯ. ಇದಕ್ಕಾಗಿ 90 ಕೋಟಿ ಮೀಸಲಿಡಲಾಗಿದೆ.ಎಲ್ಲಾ ಡಿಸೈನ್ ಆಗಿದೆ.ಭಾವೈಕ್ಯತೆ ಮೇಲೆ ಹಾಡು ಹೇಳಲು ಸಲಹೆ ಕೇಳಿದ್ದೇವೆ. ಕೆಲವು ಕಲಾವಿದರು ಬಂದಿದ್ರು.ಕರ್ನಾಟಕ, ಆಂಧ್ರ, ತಮಿಳುನಾಡು ಮೂರು ರಾಜ್ಯಗಳಿಗೆ ಕಾವೇರಿ ಹರಿಯುತ್ತೆ. ಹಾಗಾಗಿ ಅವರನ್ನೂ ಕರೆತಂದು ವೀಕ್ಷಿಸಲು ಅವಕಾಶ.ನೂರು ದಿನದಲ್ಲಿ ಆರತಿ ಶುರು ಮಾಡಲು ನಿರ್ಧಾರ.ಈ ಬಗ್ಗೆ ಟೆಂಡರ್ ಕೂಡ ಕರೆಯಲಾಗ್ತಿದೆ.ಇದಕ್ಕಾಗಿ ಕಮಿಟಿ ಫಾರ್ಮ್ ಕೂಡ ಮಾಡಲಾಗಿದೆ ಎಂದರು
ಕಾವೇರಿ ಆರತಿ ಕುರಿತು ಸಭೆ ವಿಚಾರದ ಬಗ್ಗೆ ಮಾತನಾಡಿ ಕಾವೇರಿ ಆರತಿ ಬಗ್ಗೆ ಸಭೆ ಮಾಡಿದ್ದೇವೆ.ಕನ್ನಡ ಸಂಸ್ಕೃತಿ ಬಗ್ಗೆ ಮಾಡುತ್ತಿದ್ದೇವೆ.ಎಲ್ಲಾ ಮಠಗಳನ್ನು ಸೇರಿ ಒಂದು ದೊಡ್ಡ ಕಾರ್ಯಕ್ರಮ ಮಾಡಿದ್ದೇವೆ. ಮೂರು ದಿನ ದೊಡ್ಡ ಕಾರ್ಯಕ್ರಮ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ.ಬಜೆಟ್ ನಲ್ಲಿ ೧೦೦ ಕೋಟಿ ಇಟ್ಟಿದ್ದೇವೆ. ಒಂದು ಗ್ಯಾಲರಿ ಕೂಡ ಮಾಡೋಕೆ ತೀರ್ಮಾನಿಸುತ್ತೇವೆ.ಹಾಡು ರಚಿಸೋಕೆ ಸಂಗೀತ ನಿರ್ದೇಶಕರಿಗೆ ಹೇಳಿದ್ದೀವಿ.ದಕ್ಷಿಣ ಭಾರತದ ರಾಜ್ಯಗಳು ಸೇರಿ ಮಾಡಬೇಕು.ಕಾವೇರಿ ಆರತಿ ನೋಡೋಕೆ ಅವಕಾಶ ಮಾಡುತ್ತೇವೆ.ಗಂಗಾರತಿ ರೀತಿಯಲ್ಲಿ ಕಾವೇರಿ ಆರತಿ ಮಾಡುತ್ತೇವೆ.ಫೈನಲ್ ಬ್ಲೂ ಪ್ರಿಂಟ್ ಬಂದಿದೆ, ಆದಷ್ಟು ಬೇಗ ಫೈನಲ್ ಆಗುತ್ತದೆ ಎಂದ ಅವರು ಬೆಂಗಳೂರು ಕ್ಲೀನ್ ಮಾಡೋಕೆ ಯತ್ನಿಸುತ್ತಿದ್ದೇವೆ.೩೧ ಟ್ರಾನ್ಸ್ ಪೋರ್ಟ್ ಸ್ಟೇಷನ್ ಮಾಡೋಕೆ ಹೇಳಿದ್ದೀನಿ. ಆ್ಯಪ್ ಕೂಡ ಮಾಡಿದ್ದೀವಿ, ಕ್ಲೀನ್ ಮಾಡೋಕೆ ಆ್ಯಪ್ ಮಾಡಿದ್ದೇವೆ.ಮುಂದೆ ಏನು ಪ್ಲಾನ್ ಹಾಕಿದ್ದೀವಿ ಎಂದು ಸಭೆ ಮಾಡಿದ್ದೀವಿ ಎಂದು ತಿಳಿಸಿದ್ರು.











