ಮನೆ ಪ್ರಸ್ತುತ ವಿದ್ಯಮಾನ ಸದ್ಗುರು ಜಗ್ಗಿ ವಾಸುದೇವ್ ಕುರಿತು ಹಾಡಿ ಹೊಗಳಿದ ಡಿಸಿಎಂ ಡಿ ಕೆ ಶಿವಕುಮಾರ್

ಸದ್ಗುರು ಜಗ್ಗಿ ವಾಸುದೇವ್ ಕುರಿತು ಹಾಡಿ ಹೊಗಳಿದ ಡಿಸಿಎಂ ಡಿ ಕೆ ಶಿವಕುಮಾರ್

0

ಬೆಂಗಳೂರು; ಈಶಾ ಫೌಂಡೇಶನ್ ನ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾದ ಬೆನ್ನಲ್ಲೇ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಹಾಡಿ ಹೊಗಳಿದ್ದಾರೆ.

ಬದುಕು, ಆಧ್ಯಾತ್ಮದ ಕುರಿತು ಜಗ್ಗಿ ವಾಸುದೇವ್ ಅವರೊಂದಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇಲ್ಲಿ ಜ್ಞಾನವು ನದಿಯಂತೆ ಹರಿಯಿತು, ಅವರ ಪ್ರತೀ ಮಾತುಗಳೂ ತಾರ್ಕಿತ ಸತ್ಯ ಎನಿಸಿದವು. ಜೀವನ, ಆಧ್ಯಾತ್ಮಿಕತೆ ಮತ್ತು ಅದರಾಚೆಗಿನ ನನ್ನ ಸಂದೇಹಗಳು, ಸದ್ಗುರುವಿನ ಸಮ್ಮುಖದಲ್ಲಿ ಅನಾವರಣಗೊಂಡವು, ಅವಕ್ಕೆ ಸೂಕ್ತ ಉತ್ತರಗಳೂ ಸಿಕ್ಕವು. ಸದ್ಗುರು ಅವರ ಮಾತುಗಳಲ್ಲಿ ಆಳವಾದ ತತ್ವಗಳ ಜೊತೆ ಸೌಮ್ಯವಾದ ಹಾಸ್ಯದ ಸಂಯೋಜನೆ ಇರುತ್ತದೆ. ಬದುಕಿನ ಒಳಹುಗಳ‌ ಬಗ್ಗೆ ಸುದೀರ್ಘವಾಗಿ ಮಾತನಾಡಿದೆವು. ಗಂಭೀರ ವಿಚಾರಗಳ ಮಧ್ಯೆ, ಹಾಸ್ಯದ ಝಲಕ್ ಗಳು ಮನಸ್ಸಿಗೆ ಹಿತ ನೀಡಿದವು. ಜೀವನವೆಂದರೆ ಅನಂತ ಯಾತ್ರೆ.ಪ್ರತಿ ಕ್ಷಣವೂ ಒಂದು ಅಧ್ಯಾಯ, ಪ್ರತಿ ನಗುವೂ ಮತ್ತು ಆಲೋಚನೆಯೂ ನಮ್ಮ ಆಂತರಿಕ ಬೆಳಕಿಗೆ ಪೂರಕ.  ನಿಜವಾದ ಸಂಪತ್ತು ಅಂದರೆ, ಆಂತರಿಕ ಶಾಂತಿ, ಆತ್ಮ-ಸಾಕ್ಷಾತ್ಕಾರ ಮತ್ತು ಆ ಭಾವನೆ, ಬದುಕಿನ ಪ್ರತಿಯೊಂದು ಕ್ಷಣದಲ್ಲಿ ಜೀವಂತವಾಗಿರುವ ಸತ್ಯ ಎಂದು ಎಕ್ಸ್ ನಲ್ಲಿ ಡಿಕೆಶಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೇ ತಮಗೆ ಶಿವಕುಮಾರ್ ಎಂದು ಹೆಸರು ಯಾಕೆ ಇಟ್ಟರು ಎಂಬುವುದನ್ನ ಡಿಕೆ ಶಿವಕುಮಾರ್ ಬಿಚ್ಚಿಟ್ಟಿದ್ದಾರೆ.ಸ್ವಾರಸ್ಯಕರ ಸಂಗತಿಯನ್ನು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಶಿವನ ಅಪ್ಪಟ ದೈವ ಭಕ್ತನಾಗಿದ್ದಾರೆ ಡಿ ಕೆ ಶಿವಕುಮಾರ್. ಶಿವಭಕ್ತಿಯ ಶಿಖರ.. ಕೊಯಮತ್ತೂರಿನ ಇಶಾ‌ ಯೋಗ ಕೇಂದ್ರದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಸದ್ಗುರು ಅವರು ಪ್ರತಿ ಶಿವರಾತ್ರಿಯಂದು ನಡೆಸಿಕೊಡುವ ಈ ಕಾರ್ಯಕ್ರಮದ ಬಗ್ಗೆ ಕೇಳಿದ್ದೆ. ಕಣ್ಣಾರೆ ನೋಡಿ ಇದು ಶಿವಭಕ್ತಿಯ ಶಿಖರ ಅನಿಸಿತು. ನನ್ನ ಹೆಸರಲ್ಲೇ ಶಿವನಿದ್ದಾನೆ. ಅದರ ಹಿಂದೆ ಸ್ವಾರಸ್ಯಕರ ಸಂಗತಿ ಇದೆ. ದೊಡ್ಡ ಆಲಹಳ್ಳಿಯಲ್ಲಿ ಶಿವಾಲ್ದಪ್ಪನ ಬೆಟ್ಟ ಇದೆ. ನಮ್ಮ ಮನೆಯಲ್ಲಿ ಯಾರೇ ಹುಟ್ಟಿದರೂ ಮೊದಲು ಹೆಣ್ಮಕ್ಕಳಿಗೆ ಕೆಂಪಮ್ಮ ಅಂತ ಹೆಸರಿಡುತ್ತಾರೆ. ಗಂಡು ಮಕ್ಕಳಿಗೆ ಕೆಂಪೇಗೌಡ ಅಂತ ಹೆಸರಿಡುತ್ತಾರೆ. ಅದು ಪದ್ದತಿ. ಶಿವಾಲ್ದಪ್ಪನಿಗೆ ನನ್ನ ತಾಯಿ ಹರಕೆ ಮಾಡಿಕೊಂಡಿದ್ದರು. ನಾನು ಹುಟ್ಟಿದ್ದಕ್ಕೆ ನನಗೆ ಮೊದಲು ಕೆಂಪರಾಜ್ ಅಂತ ಹೆಸರಿಟ್ಟು, ಆನಂತರ ಶಿವಾಲ್ದಪ್ಪನಿಗಾಗಿ ಶಿವಕುಮಾರ್ ಅಂತ ಹೆಸರಿಟ್ಟರು ಎಂದು ಡಿಕೆ ಪೋಸ್ಟ್ ಮಾಡಿದ್ದಾರೆ.