ಮನೆ Latest News ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿ ಕೆ ಶಿವಕುಮಾರ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿ ಕೆ ಶಿವಕುಮಾರ್

0

ಬೆಂಗಳೂರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿ ಕೆ ಶಿವಕುಮಾರ್ ಸದಾಶಿವ ನಗರದ ನಿವಾಸದಲ್ಲಿ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿಗೆ ಡಿಕೆ ಶಿವಕುಮಾರ್  ಮುಂದಾಗಿದ್ದರು. ಆದ್ರೆ ಕಾರಣಾಂತರಗಳಿಂದ ಹೈಕಮಾಂಡ್ ನಾಯಕರ ಭೇಟಿ ಆಗಿರಲಿಲ್ಲ. ಡಿ ಕೆ ಶಿವಕುಮಾರ್ ರಾಹುಲ್ ಗಾಂಧಿ ಭೇಟಿಗೆ ಪ್ರಯತ್ನ ಪಟ್ಟಿದ್ದರು. ಆದರೆ ಸಾಧ್ಯವಾಗದ ಹಿನ್ನೆಲೆ ಹೈಕಮಾಂಡ್ ನಾಯಕರ ಭೇಟಿಯಾಗದೇ ಬೆಂಗಳೂರಿಗೆ ಮರಳಿದ್ದರು.ಸದ್ಯ ಬೆಂಗಳೂರಲ್ಲೇ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಕೆಶಿ ಭೇಟಿಯಾಗಿದ್ದಾರೆ. ಖರ್ಗೆ-ಡಿಕೆ ಮಾತುಕತೆ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಎಂಟ್ರಿಯಾಗಿದ್ದಾರೆ.

ಭೇಟಿ ಬಳಿಕ ಮಾತನಾಡಿದ ಡಿ ಕೆ ಶಿವಕುಮಾರ್ ಸಿಡಬ್ಲುಸಿ ಗೆ ನನ್ನನ್ನು ಕರೆದಿಲ್ಲ ಕರೆದರೆ ಹೋಗುತ್ತೇನೆ.ಸಿಎಂ ರನ್ನ ಕರೆದಿದ್ದಾರೆ ಉಳಿದ ೨-೩ ಸಿಎಂ ರನ್ನು ಕರೆದಿದ್ದಾರೆ ಅಂತ ಗೊತ್ತಾಯಿತು . ನನ್ನನ್ನು ಕರೆದಿಲ್ಲ ಕರೆದರೆ ಹೋಗುತ್ತೇನೆ. ನಾನು ಕರೆದ್ರೆ ಹೋಗ್ತೇನೆ. ಸಿಎಂ ಅವರಿಗೆ ಕರೆದಿದ್ದಾರೆ , ಡಿಸಿಎಂ ಅವರಿಗೆ ಕರೆದಿಲ್ಲ. ನಾನು ಕರದ್ರೆ ಹೋಗ್ತೇನೆ. ನಾನು ಬೇರೆ ವಿಚಾರ ಚರ್ಚೆ ಮಾಡಿಲ್ಲ, ಅದರ ಅವಶ್ಯಕತೆ ಇಲ್ಲ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ನಾನು ಸಿಎಂ ಹೇಳಿದ್ದೇವೆ. ನಾವು ಲೈಫ್‌ಟೈಮ್ ವರ್ಕರ್. ನಾನು ಬಾವುಟ ಕಟ್ಟಿದ್ದೇನೆ, ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಮಾಡಿದ್ದೇವೆ. ನಾನು ಸುಮ್ನೆ ಭಾಷಣ ಮಾಡಿಲ್ಲ.ಎಲ್ಲಾ ಮಾಡಿದ್ದೇವೆ. ನೀವು ಬಾಯಲ್ಲೇ ಹೇಳಿದ್ರೆ ಉತ್ತರ ಕೊಡಲ್ಲ. ಹಿರಿಯರು ಹೇಳ್ತಾರೆ, ಮಾರ್ಗದರ್ಶನ ಕೊಡ್ತಾರೆ. ನಾನು ಯಾವ ವಿಚಾರವೂ ಚರ್ಚೆ ಮಾಡಿಲ್ಲ. ಅದರ ಅವಶ್ಯಕತೆ ಯೂ ನನಗೆ ಇಲ್ಲ. ಮಾಡೋದು ಇಲ್ಲ,ಸದ್ಯಕ್ಕೆ ಇಲ್ಲ. ನಾನು ಸಿದ್ದರಾಮಯ್ಯ ಹೇಳಿದ್ದೇವೆ. ಹೈಕಮಾಂಡ್ ಹೇಳಿದ್ದನ್ನ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದಿದ್ದೇವೆ. ಅವರೇನು ಹೇಳ್ತಾರೆ, ಅದನ್ನ ಮಾಡುತ್ತೇವೆ. ನಾವು ಲೈಫ್ ಟೈಮ್ ವರ್ಕರ್ ರೀ. ನನಗೆ ಪೋಸ್ಟ್ ಇದ್ದರೂ ನಾನು ಪಾರ್ಟಿ ವರ್ಕರೇ. ಪಕ್ಷದ ಅಧ್ಯಕ್ಷ, ಕಾರ್ಯಕರ್ತ ಆದಾಗಲೂ ಬಾವುಟ ಕಟ್ಟಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಮಾಡಿದ್ದೇನೆ ಎಂದಿದ್ದಾರೆ.

ಬಂದು ಬಂದಾಗ ನಾನು ಕೇವಲ ಭಾಷಣ ಮಾಡಿಕೊಂಡು ಹೋಗೋ ಕೆಲಸ ಮಾಡಿಲ್ಲ. ನಾನು ಎಲ್ಲಾ ಕೆಲಸ ಮಾಡಿದ್ದೇನೆ. ನೀವು ಹೇಳಿದ್ದಂತೆ ನಾನು ಮಾತಾಡೋದಿಲ್ಲ .ನಾನು ಎಷ್ಟು ಹೇಳುತ್ತೇನೆ ಅಷ್ಟೇ ಕೇಳಬೇಕು. ಎಲ್ಲದ್ದಕ್ಕೂ ಉತ್ತರ ಕೊಡಲ್ಲ.ಹಿರಿಯರು ಏನು ಹೇಳ್ತಾರೆ, ಮಾರ್ಗದರ್ಶನ ಕೊಡ್ತಾರೆ‌ ಅದನ್ನ ಕೇಳುತ್ತೇವೆ.ನಾಳೆದ್ದು ವರ್ಕಿಂಗ್ ಕಮಿಟಿ ಸಭೆ ಇದೆ. ನರೇಗಾ ಯೋಜನೆಯದ್ದು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ನರೇಗಾ ದಿಂದ ಪಂಚಾಯತ್ ಸದಸ್ಯರಿಗೆ ಅನುಕೂಲ ಆಗ್ತಿತ್ತು. ಕೆಲಸ ಕಾರ್ಯ ಮಾಡೋದಕ್ಕೆ ಅವಕಾಶ ಇತ್ತು. ಬೇರೆ ರೂಪ ತಂದು ರೈತರಿಗೆ ಮಾರಕವಾಗಿ ಆ್ಯಕ್ಟ್ ತಂದಿದ್ದಾರೆ. ಇದನ್ನ ಇಡೀ ದೇಶಕ್ಕೆ ತಿಳಿಸಬೇಕಾಗಿದೆ, ಅಷ್ಟೇ ಅವರ ಜೊತೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ನಾಳೆ ನಮ್ಮ ವರ್ಕಿಂಗ್ ಕಮಿಟಿ ಮೀಟಿಂಗ್ ಇದೆ. ನರೇಗಾ ವಿಚಾರದಲ್ಲಿ ಕೇಂದ್ರದ ನಿರ್ಧಾರ ಮಾಡಿದೆ. 40% ರಾಜ್ಯ ಸರ್ಕಾರ  60%‌ ಕೇಂದ್ರ ಕೊಡಬೇಕು ಅಂತ ಇತ್ತು. ಮಿಕ್ಕಿದ್ದು 75% ಹಾಗೂ 25% ಇದೆಲ್ಲವೂ ಇದೆ .ಫೆಡರಲ್ ಸ್ಟ್ರಕ್ಟರ್ ಅಲ್ಲಿ ಅರ್ಟಿಕಲ್ ಇದೆ. ನಮ್ಮ ಸಂವಿಧಾನದಲ್ಲಿ ಅವಕಾಶ ಇದೆ. ಇಷ್ಟು ದಿನ ನರೇಗಾದಿಂದ ಪಂಚಾಯಿಗಳಿಗೆ ಬಹಳ ದೊಡ್ಡ ಅನುಕೂಲ ಆಗುತ್ತಿತ್ತು.ಪ್ರತಿ ಕೂಲಿಗಾರನ ಅಕೌಂಟಿಗೆ ಹಣ ಹೋಗುತ್ತಿತ್ತು. ಪ್ರತಿ ಊರಿನವರು ಪಂಚಾಯ್ತಿ ಅವರು ಏನು ಕೆಲಸ ತೆಗೆದುಕೊಳ್ಳಬೇಕೆಂಬ ಅವಕಾಶವಿತ್ತು.ಆದರೆ ಇವಾಗ ಅವರು ತೀರ್ಮಾನ ಮಾಡಿದ್ದಾರೆ.ಯಾವ ರೀತಿ ಕೆಲಸ ಮಾಡಬೇಕು. ಯಾವ ಜಿಲ್ಲೆಯಲ್ಲಿ ಮಾಡಬೇಕು ಅಂತ ಅವರೇ ತೀರ್ಮಾನ ಮಾಡ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಮ್ಮ ಸ್ವಂತ ಭೂಮಿಯಲ್ಲೇ ಮಠ ಮಾಡಿಕೊಳ್ಳುವುದಕ್ಕೆ, ಆಶ್ರಯ ಮನೆ ಮಾಡಿಕೊಳ್ಳುವುದಕ್ಕೆ, ಇಂಗು ಗುಂಡಿ ಮತ್ತು ನೇರಳೆ ಗಿಡ ಹಾಕುವುದಕ್ಕೆ, ಕೂಲಿ ಮಾಡಿಕೊಂಡು ವ್ಯವಸಾಯ ಮಾಡಿದರೂ ದುಡ್ಡು ಕೊಡುವುದಕ್ಕೆ ಅವಕಾಶ ಇತ್ತು.ಇದೆಲ್ಲ ಶಕ್ತಿ ಇದ್ದಂತಹ ಅವಕಾಶಕ್ಕೆ ಬೇರೆ ರೂಪ ತಂದಿದ್ದಾರೆ. ಕೂಲಿಗಾರರಿಗೆ, ರೈತರಿಗೆ ಮಾರಕವಾಗೋ ಹೊಸ ಆ್ಯಕ್ಟ್ ಕೇಂದ್ರ ಸರ್ಕಾರದವರು ತಂದಿದ್ದಾರೆ. ನಾವು ಇದನ್ನ ಇಡೀ ರಾಜ್ಯಕ್ಕೆ ತೋರಿಸಬೇಕಿದೆ. ಆ ವಿಚಾರದಲ್ಲಿ ನನ್ನ ಅಭಿಪ್ರಾಯಗಳನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ನಾನು ತಿಳಿಸಿದ್ದೇನೆ .ಬೇರೆ ಯಾವ ವಿಚಾರವೂ ಇಲ್ಲ ಎಂದು ತಿಳಿಸಿದ್ದಾರೆ.