ಮನೆ Latest News ಡಿ.ಕೆ ಶಿವಕುಮಾರ್ ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಹೋರಾಟ ಮಾಡಿದ್ದಾರೆ,ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು;...

ಡಿ.ಕೆ ಶಿವಕುಮಾರ್ ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಹೋರಾಟ ಮಾಡಿದ್ದಾರೆ,ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು; ಶಾಸಕ ಇಕ್ಬಾಲ್ ಹುಸೇನ್‌ ಹೇಳಿಕೆ

0

ರಾಮನಗರ: ಡಿ.ಕೆ ಶಿವಕುಮಾರ್ ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಹೋರಾಟ ಮಾಡಿದ್ದಾರೆ, ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್‌ ಹೇಳಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರುವ ಸತೀಶ್ ಜಾರಕಿಹೊಳಿ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರದ ಬಗ್ಗೆ ಮಾತನಾಡಿ ಎಲ್ಲರ ಬೇಡಿಕೆ ಅದೇ. ಶಾಸಕರು, ಸಚಿವರುಗಳು ಎಲ್ಲರೂ ಗೊಂದಲಗಳಿಗೆ ತೆರೆ ಎಳಿಯಿರಿ ಅನ್ನುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಹಿರಿಯ ಸಚಿವರು .ಅವರು ಕೂಡ ಧ್ವನಿಗೂಡಿಸಿದ್ದಾರೆ.ಆದಷ್ಟು ಬೇಗ ಈ ಗೊಂದಲಗಳನ್ನ ನಿವಾರಣೆ ಮಾಡಬೇಕು ಎಂದಿದ್ದಾರೆ.

ಇನ್ನು ಡಿ.ಕೆ ಶಿವಕುಮಾರ್ ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಹೋರಾಟ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡಬೇಕು. ಪಕ್ಷ ಸಂಘಟನೆ‌‌ ಮಾಡಲು ಅನುಕೂಲವಾಗಲಿದೆ. ಹೀಗಾಗಿ ಎರಡೂವರೆ ವರ್ಷ ಅಧಿಕಾರ ನೀಡುವಂತೆ ಮನವಿ‌ ಮಾಡಿದ್ದಾರೆ. ಅದೇ ರೀತಿ‌ ನಾನು ಕೂಡ ಒಬ್ಬ ಎಂದ ಅವರು ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿ  ಸಿಎಂ ಸಿದ್ದರಾಮಯ್ಯಗೆ ಶಾಸಕ ಇಕ್ಬಾಲ್ ಟಾಂಗ್ ಕೊಟ್ಟಿದ್ದಾರೆ. 140 ಶಾಸಕರು ಕೂಡ ಬದಲಾವಣೆ ಬೇಕು ಅಂತ ಕೇಳುತ್ತಿದ್ದೇವೆ. ನಾವೆಲ್ಲಾ ಮನವಿ ಮಾಡಿಕೊಳ್ಳುತ್ತಿದ್ದೇವೆ. ಪಟ್ಟಭದ್ರ ಹಿತಾಸಕ್ತಿ ಏನು ಇಲ್ಲ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ‌ ಇಲ್ಲ. ನಮ್ಮಲ್ಲಿ ಯಾವುದೇ ಪಟ್ಟಭದ್ರ ಗುಂಪುಗಳಿಲ್ಲ ಎಂದಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿ ಫೆಬ್ರವರಿ 26ರಂದು ಹೈಕಮಾಂಡ್ ಬರಲು ಸೂಚನೆ‌ ನೀಡಿದೆ. ದಿನಾಂಕದಂದು ಡಿ.ಕೆ ಶಿವಕುಮಾರ್ ಅವರಿಗೆ ಒಳ್ಳೆದಾಗುತ್ತೆ.ಸಿಎಂ‌ ಬದಲಾವಣೆ ವಿಚಾರವಾಗಿ ಬರಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.