ಮನೆ Latest News ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ಕುಮಾರಸ್ವಾಮಿಗೆ ನೆಮ್ಮದಿ ಇರಲ್ಲ: ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ಕುಮಾರಸ್ವಾಮಿಗೆ ನೆಮ್ಮದಿ ಇರಲ್ಲ: ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು: ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ಕುಮಾರಸ್ವಾಮಿಗೆ ನೆಮ್ಮದಿ ಇರಲ್ಲ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ

ಬಿಗ್ ಬಾಸ್ ನೆಟ್ಟು ಬೋಲ್ಟ್ ಟೈಟ್ ಮಾಡಿದ್ದಾರೆ ಎಂಬ ಜೆಡಿಎಸ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಆದ್ರು ಮಾಡಲಿ ಮೇಲೆ ಅವರನ್ನ ಕರೆದುಕೊಂಡು ಬಂದು ಆದ್ರು ಮಾಡಲಿ ಬಿಡಿ. ನಾನು ಅದ್ರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾನು ವಿಚಾರಣೆ ಮಾಡಿದೆ. ಅವ್ರು ಯಾರೋ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾಡಿದ್ದಾರೆ.ಡಿಸಿಗೆ ಹೇಳಿದ್ದೇನೆ, ಉದ್ಯೋಗ ಮುಖ್ಯ, ಏನೇ ಇದ್ರ ಅವರಿಗೊಂದು ಅವಕಾಶ ಕೊಡಿ. ಅವರು ಸಮಸ್ಯೆ ಬಗೆಹರಿಸಿಕೊಳ್ಳಲಿ.

ನಮ್ಮಲ್ಲಿ ಮನೋರಂಜನೆ ಕೂಡ ಮುಖ್ಯ. ನಾನೇ ಹೋಗಿ ಉದ್ಘಾಟನೆ ಮಾಡಿದ್ದೆ. ನನ್ನ ಬಗ್ಗೆ ಮಾತಾಡಿಲ್ಲ ಅಂದ್ರೆ ನೆಮ್ಮದಿ ಇರಲ್ಲ. ಅವರಿಗೆ ಶಕ್ತಿ ಬರಲ್ಲ.ನನ್ನ ಸುದ್ದಿ ಮಾತಾಡಿಲ್ಲ ಅಂದ್ರೆ ನಿದ್ರೆನೂ ಬರಲ್ಲ, ಯಾವುದಕ್ಕೂ ಅವರಿಗೆ ಶಕ್ತಿ ಬರಲ್ಲ.ನಮ್ಮ ಸರ್ಕಾರದವರು ಕೆಲಸ ಮಾಡಿದ್ದಾರೆ.

ನಾನೇ ಪೋನ್ ಮಾಡಿ ಡಿಸಿ ಮತ್ತು ಎಸ್ ಪಿಗೆ ಹೇಳಿದ್ದೇನೆ.ಕಾನೂನನ್ನ ನೋಡಿ ಸಮಸ್ಯೆ ಆಗಿದ್ರೆ ಬಗೆಹರಿಸಿಕೊಡಲು ಅವಕಾಶ ಕೊಡಬೇಕು ಅಂತ ಹೇಳಿದ್ದೇನೆ.ನನಗೆ ಇಷ್ಟು ಮಾತ್ರ ಗೊತ್ತು.ಟಿವಿಯಲ್ಲಿ ನೋಡಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ನಿನ್ನೆ ರಾತ್ರಿ ಪೋನ್ ಮಾಡಿ ಮಾತನಾಡಿದೆ ಎಂದಿದ್ದಾರೆ.

ಬಿಗ್ ಬಾಸ್ ಆಗಲಿ, ಯಾವುದೇ ಆಗಲಿ ಮನರಂಜನೆ ಇರಬೇಕು. ಖಾಸಗಿಯವರು ಹೂಡಿಕೆ ಮಾಡಿ ಏನೋ ತಪ್ಪು ಮಾಡಿರ್ತಾರೆ.ಅದನ್ನು ಸರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಇದು ನನ್ನ ಸಲಹೆ. ಅನುಮತಿ ನೀಡುವಂತೆ ಡಿಸಿ, ಎಸ್ಪಿಗೆ ಡಿಸಿಎಂ ಡಿಕೆಶಿ ಸೂಚನೆ ಕೊಟ್ಟಿದ್ದಾರೆ