ಮನೆ Latest News ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ ಹೇಗೆ?; ವಿರೋಧಿಗಳಿಗೆ...

ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ ಹೇಗೆ?; ವಿರೋಧಿಗಳಿಗೆ ಬಹುದೊಡ್ಡ ಸಂದೇಶ ರವಾನಿಸಿದ ಡಿ ಕೆ ಶಿವಕುಮಾರ್

0

ಬೆಂಗಳೂರು: ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ ಹೇಗೆ? ಎಂದು ವಿರೋಧಿಗಳಿಗೆ ಡಿ ಕೆ ಶಿವಕುಮಾರ್ ಬಹುದೊಡ್ಡ ಸಂದೇಶ ರವಾನಿಸಿದ್ದಾರೆ.

ಹೈಕಮಾಂಡ್ ಭೇಟಿ ಬಳಿಕ  ನನ್ನ ನಾಯಕತ್ವದಲ್ಲೇ ಚುನಾವಣೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಹೌದ್ರೀ, ನಾನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ.ನನ್ನ ಡೆಪ್ಯುಟಿ ಸಿಎಂ ಮಾಡಿದೆ, ೮೯ ಇಸ್ವಿಯಿಂದ ಮಂತ್ರಿ ಮಾಡಿ ಬೆಳೆಸಿದೆ. ಇಷ್ಟೆಲ್ಲ ಬೆಳೆಸಿ ನನ್ನ ಮುಖ ತೋರಿಸಿ ನನಗೆ ಲೀಡರ್ ಶಿಪ್ ಕೊಡಲಿಲ್ಲ ಅಂದ್ರೆ, ನಾನು ಮನೆಯಲ್ಲಿ ಕೂರುವುದಕ್ಕಾ? ಕಾಂಗ್ರೆಸ್ ಶಕ್ತಿ ಕೊಟ್ಟಿರುವುದು. ಏನೇ ಸ್ಥಾನದಲ್ಲಿ ನಾನು ಇದ್ದರೂ ನಾಯಕತ್ವ ವಹಿಸುತ್ತೇನೆ. ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ ಕ್ಯಾಂಪೇನ್ ಕಮಿಟಿ ಅಧ್ಯಕ್ಷ ಆಗಿದ್ದೆ ನಾನು. ಈಗ ಡಿಸಿಎಂ ಆಗಿದ್ದೇನೆ. ಪಕ್ಷ ನನಗೆ ಹಲವು ಜವಾಬ್ದಾರಿ ಕೊಟ್ಟು ನಾಯಕನಾಗಿ ಮಾಡಿದೆ. ನನಗೆ ಫೇಸ್ ಇದೆ ವೈಬ್ರೇಷನ್ ಇದೆ. ನನ್ನನ್ನು ದೆಹಲಿಗೂ ಕರಿತಾರೆ ಬಿಹಾರಕ್ಕೆ ಕರಿತಾರೆ ಕೇರಳಕ್ಕೂ ಕರಿತಾರೆ ತಮಿಳುನಾಡು ಆಂಧ್ರ ತೆಲಂಗಾಣಕ್ಕೂ ಕರಿತಾರೆ. ನನಗೆ ಲೀಡರ್ ಶಿಪ್ ಇದೆ ಅಂತ ಬೇರೆ ಬೇರೆ ರಾಜ್ಯಕ್ಕೆ ಕರಿತಾರೆ,. ನಿಮ್ಮನ್ನ ಕರಿತಾರಾ? ಬೇರೆಯವ್ರನ್ನ ಕರಿತಾರಾ? ಎಂದು ಪ್ರಶ್ನಿಸಿದ್ದಾರೆ.

ನನಗೆ ಇರುವ ಅನುಭವ ಶಕ್ತಿ ವೈಬ್ರೇಷನ್ ಪಾರ್ಟಿಗೆ ಬಳಸಬೇಕು. ಎಲ್ಲರನ್ನೂ ಬಳಸಿಕೊಳ್ಳಬೇಕು. ಪಕ್ಷ ಇಷ್ಟೆಲ್ಲ ನಾಯಕತ್ವ ಕೊಟ್ಟಾಗ ನನ್ನ ಲೀಡರ್ ಶಿಪ್ ನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡ್ತೇವೆ.ಸಿದ್ದರಾಮಯ್ಯ ನವರ ನಾಯಕತ್ವ ಕೂಡ ಇರುತ್ತದೆ. ಸಿದ್ದರಾಮಯ್ಯ ಕೂಡ ಇರುತ್ತಾರೆ ಸಾಮೂಹಿಕ ನಾಯಕತ್ವ ಇರುತ್ತದೆ. ದೆಹಲಿಗೆ ಹೋದಾಗ ಹೈಕಮಾಂಡ್ ‌ಭೇಟಿ ಮಾಡಲೇಬೇಕು. ನಾನು ಪಕ್ಷದ ಅಧ್ಯಕ್ಷ. ನಮ್ಮ ಪಕ್ಷದ ಕಚೇರಿಗೆ ಹೋಗದೆ ಬಿಜೆಪಿ ಕಚೇರಿಗೆ ಹೋಗಬೇಕಾ?. ಕೇಶವಕೃಪಾಗೆ ಹೋಗಲು ಆಗುತ್ತಾ?. ಕಾಂಗ್ರೆಸ್ ಕಚೇರಿ ನಮಗೆ ದೇವಸ್ಥಾನ ಇದ್ದಂತೆ. ನಾನು ಅಲ್ಲಿಗೆ ಹೋಗಿ ಪ್ರಾರ್ಥನೆ ‌ಮಾಡುವ ಅವಶ್ಯಕತೆ ಇಲ್ಲ. ನಾನು ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ.ಪ್ರಯತ್ನ ವಿಫಲ ಆಗಬಹುದು, ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂದಿದ್ದಾರೆ.

ಬಿಬಿಎಂಪಿ ವಿಭಜನೆಗೆ ಹೆಚ್ಡಿಕೆ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು  ಹೆಚ್ಡಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ ಬರಿ ರಾಜಕಾರಣ ಮಾಡ್ತಾರೆ‌. ಅವರು ಏನು ಮಾಡಿದ್ದಾರೆ..ನಾನು ಎಸ್.ಎಂಕೆ ಸರ್ಕಾರದಲ್ಲಿ ಅರ್ಬನ್ ಡೆವಲಪ್ಮೆಂಟ್ ಸಚಿವನಾಗಿದ್ದೆ‌.. ಆಗ ಬೆಂಗಳೂರು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬೆಂಗಳೂರು ಬೆಳೆದು ಬಿಟ್ಟಿದೆ.. ಮಾರ್ಚ್ ನಲ್ಲಿ ಕುಮಾರಸ್ವಾಮಿ ಒಂದು ನೋಟಿಫಿಕೇಷನ್ ಮಾಡಿದ್ದಾರೆ. ಅವರ ಸರ್ಕಾರ ಹೋಗುವ ಸಂದರ್ಭದಲ್ಲಿ ನೋಟಿಫಿಕೇಷನ್ ಮಾಡಿದ್ದಾರೆ.90 ಮೀಟರ್ ರೋಡ್ ಮಾಡಬೇಕು ಎಂದು ನೋಟಿಫಿಕೇಷನ್ ಮಾಡಿದ್ದಾರೆ. ಯಾರಿಗಾಗಿ ಮಾಡಿದ್ದಾರೋ ಗೊತ್ತಿಲ್ಲ. ನಾನು ವೈಯಕ್ತಿಕವಾಗಿ ಹೋಗಿ ನೋಡಿದ್ದೇನೆ. ಅದನ್ನು ಜಾರಿ‌ಮಾಡಬೇಕಾದರೆ 25 ಸಾವಿರ ಕೋಟಿ ಭೂಮಿ ಒತ್ತುವರಿಗೆ ಕೊಡಬೇಕು. ಎಲ್ಲಿದೆ ಬೆಂಗಳೂರಿನಲ್ಲಿ 90 ಮೀಟರ್ ರೋಡ್‌. ಕುಮಾರಸ್ವಾಮಿ ಅವರ ಹೋಗಿ ಭೇಟಿ‌ ಮಾಡ್ದೆ ನೋಟಿಫಿಕೇಷನ್ ಮಾಡಿದ್ದಾರೆ. ಟೀಕೆ ಮಾಡೋರು ಮಾಡಲಿ, ನಾನು ಮಾತ್ರ ಪ್ರಗತಿದಾರಿಯಲ್ಲಿ ಹೋಗುತ್ತೇನೆ. ಬೆಂಗಳೂರು ದಕ್ಷಿಣ ಜಿಲ್ಲೆ ಆಗಬೇಕು ಎಂದು ಶಿಫಾರಸು ಮಾಡಿದ್ದಾರೆ. ಲಾಂಡ್ ಆರ್ಡರ್ ಸಮಸ್ಯೆ ಆಗುತ್ತದಂತೆ ಎಂದು ಹೋಮ್ ಮಿನಿಸ್ಟರ್ ಗೆ ಹೇಳಿದ್ದಾರೆ. ಅವರು ಟೆಕ್ನಿಕಲ್ ಆಗಿ ಈಟ್ ನಾಟ್ ಫಿಜಿಬಲ್ ಎಂದು ಕೊಟ್ಟಿದ್ದಾರೆ. ನನಗೆ ಗೊತ್ತು ನಮ್ಮ‌ ಊರು ಹೆಸರು ಹೇಗೆ ಇಟ್ಟುಕೊಳ್ಳಬೇಕು ಎಂದು. ಕುಮಾರಸ್ವಾಮಿ ಮಾತಿಗೆ ಕಿಮ್ಮತ್ ಕೊಡುವ ಅವಶ್ಯಕತೆಯಿಲ್ಲ. ಏನಾದರೂ ಇದ್ರೆ ಅವರ ಪಾರ್ಟಿಯವರು ಇದ್ದಾರೆ, ಅಸೆಂಬ್ಲಿ ಇದೆ, ದೊಡ್ಡ ಜ್ಞಾನದ ಅನುಭವ ಭಂಡಾರದಲ್ಲಿ ಚರ್ಚೆ ಮಾಡಲಿ ಎಂದು ಡಿಕೆಶಿ ಹೆಚ್ಡಿಕೆ ಹಾಗೂ ಜೆಡಿಎಸ್ ನಾಯಕರಿಗೆ ವ್ಯಂಗ್ಯ ಮಾಡಿದ್ದಾರೆ.

 

ದೇವರು ಬಂದರೂ ಬೆಂಗಳೂರು ಟ್ರಾಫಿಕ್ ಕಂಟ್ರೋಲ್ ಮಾಡಲು ಆಗಲ್ಲ ಎಂದ ಡಿಸಿಎಂ ರಾಜೀನಾಮೆ ನೀಡಲಿ ಎಂಬ ಬಿಜೆಪಿ ಒತ್ತಾಯದ ವಿಚಾರದ ಬಗ್ಗೆ ಮಾತನಾಡಿದ ಅವರು  ನನ್ನ ರಾಜೀನಾಮೆಗೆ ಅವರು ಕಾಯಲಿ ಎಂದಿದ್ದಾರೆ. ಮೋಹನ್ ದಾಸ್ ಪೈ ಟೀಕೆ ವಿಚಾರದ ಬಗ್ಗೆ ಮಾತನಾಡಿ ಮೋಹನ್ ದಾಸ್ ಹಿರಿಯರು, ದೊಡ್ಡ ಮನುಷ್ಯ, ಗೌರವ ಇದೆ ನನಗೆ . ಅವರು ಕೂಡ ರಾಜಕೀಯಕ್ಕೆ ಬರಲಿ. ಅವರು ಪೊಲಿಟಿಕಲ್ ಪಾರ್ಟ್ ಪೋರ್ಸ್ ಆಗಿದ್ದಾರೆ. ಸಲಹೆ ಕೊಡುವವರು ಬಹಳ ಜನ ಇದ್ದಾರೆ..ಅವರು ಚುನಾವಣೆಗೆ ಬರಲಿ, ಏನು ಎಂದು ಗೊತ್ತಾಗುತ್ತದೆ. ಒಳ್ಳೆಯ ಕೆಲಸ ‌ಮಾಡುವಾಗ ವಿರೋಧ ಇದ್ದೆ ಇರುತ್ತದೆ ಎಂದರು.

ಡಿಕೆಶಿ ಬಿಜೆಪಿ ನಾಯಕರಿಗೆ ಹತ್ರ ಆಗುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಬರ್ತಾ ಇದೆ. ನಾನು ಬಿಜೆಪಿ ನಾಯಕರಿಗೆ ಹತ್ರ ಆಗುತ್ತಿದ್ದೇನೆ ಎಂದು. ನಾನು ಇನ್ನೂ ಅಮಿತ್ ಶಾ ಅವರನ್ನು ಭೇಟಿ‌ ಮಾಡಿಯೇ . ನಾನು ಹಿಂದು ಧರ್ಮದಲ್ಲಿ ಹುಟ್ಟಿದ್ದೇನೆ, ಹಿಂದು ಆಗಿ ಸಾಯುತ್ತೇನೆ. ಆದರೆ ನಾನು ಎಲ್ಲಾ ಧರ್ಮಗಳನ್ನ ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಜೈಲಿನಲ್ಲಿ ಇದ್ದಾಗ ಸಿಖ್ ಧರ್ಮದ ಬಗ್ಗೆ ಕಲಿತಿದ್ದೇನೆ, ದರ್ಗಾಕ್ಕೆ ಹೋಗುತ್ತೇನೆ, ಜೈನ್ ಧರ್ಮ, ಚರ್ಚ್ ಗೂ ಹೋಗುತ್ತೇನೆ.ಅವರೆಲ್ಲ ಆಶೀರ್ವಾದ ಮಾಡ್ತಾರೆ ‌.ಎಲ್ಲಾ ಸಮುದಾಯದವರು ನನ್ನ‌ ಪ್ರೀತಿಸುತ್ತಾರೆ, ಗೌರವಿಸುತ್ತಾರೆ.ಕುಂಬಮೇಳ ಉತ್ತಮವಾಗಿ ಸಂಘಟಿಸಿದ್ದರು ಕೆಲವರು ನೇರವಾಗಿ ಪ್ರಾರ್ಥನೆ ಮಾಡ್ತಾರೆ, ಕೆಲವರು ಅರ್ಚಕರ‌ ಮೂಲಕ ಪ್ರಾರ್ಥನೆ ‌ಮಾಡ್ತಾರೆ ಎಂದರು.