ಬೆಂಗಳೂರು; ಅಭಯ ಆಂಜನೇಯ ಸ್ವಾಮಿ, ಪ್ರಸನ್ನ ಗಣಪತಿ ಮತ್ತು ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಮಹಾಲಕ್ಷ್ಮಿ ಲೇಔಟ್ ನಲ್ಲಿರೋ ಆದಿಚುಂಚನಗಿರಿ ಮಠದ ಆವರಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಸ್ವಾಮೀಜಿ ನಿರ್ಮಲಾನಂದ ಶ್ರೀಗಳು, ಡಿಸಿಎಂ ಡಿಕಶಿ, ಮಾಜಿ ಸಿಎಂ ಸದಾನಂದಗೌಡ ಕಾಂಗ್ರೆಸ್ ನಾಯಕಿ ಕುಸುಮ, ಶಾಸಕ ಕೆ ಗೋಪಾಲಯ್ಯ ಭಾಗಿಯಾಗಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಭಕ್ತನದ್ದು, ದೇವರದ್ದು ವ್ಯವಹಾರ ನಡೆಯೋದೇ ದೇವಸ್ಥಾನ. ನಾನು ಮಹಾಲಕ್ಷ್ಮಿ ಲೇಔಟ್ ನ ಗಲ್ಲಿ ಗಲ್ಲಿಗಳಲ್ಲಿ ತಿರುಗಿದ್ದೇನೆ.ಮೂರು ದೇವಾಲಯದ ಕುಂಭಾಭೀಷೇಕ ಮಹೋತ್ಸವ ದಲ್ಲಿ ಭಾಗಿಯಾಗಿದ್ದೇವೆ. ಯಾವ ರೀತಿ ದೇವಸ್ಥಾನ ಕಟ್ಟಿದ್ದಾರೆ ಅನ್ನೋದನ್ನ ಗಮಿನಿಸಿದ್ದೇವೆ.ರಾಜ್ಯದಲ್ಲಿ ಸಾವಿರಾರು ವರ್ಷಗಳ ಇತಿಹಾಸದ ದೇವಸ್ಥಾನ ಗಳು ಇವೆ .ಬಹಳ ವಿಚಿತ್ರ ಕೆತ್ತನೆ ಗಳನ್ನು ಗಮನಿಸಿದ್ದೇವೆ.ವಾಸ್ತುಶಿಲ್ಪ ಗಳಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ.ನಮ್ಕ ಸಂಸ್ಕೃತಿ ಯಲ್ಲಿ ಭೂಮಿಗೆ ಭೂತಾಯಿ ಅಂತೇವಿ ಎಂದರು.
ಮಹಾಲಕ್ಷ್ಮಿ ಲೇಔಟ್ ಗೆ ದೊಡ್ಡ ಆಕರ್ಷಣೆ ಇದೆ.ವಿವಿಧ ರೀತಿಯ ದೇವರುಗಳು ಇದ್ದಾವೆ, ನಾವು ಲೆಕ್ಕ ಹಾಕೋದಿಲ್ಲ.ಧರ್ಮ ಯಾವುದಾದರೂ, ತತ್ವ ಒಂದೇ, ದೇವನೊಬ್ಬ,.ನಾಮ ಹಲವುದೇವರನ್ನ ಹಲವು ರೀತಿಯಲ್ಲಿಣ ಕಾಣುತ್ತೇವೆ.ಮಹಾಲಕ್ಷ್ಮಿ ಲೇಔಟ್ ನಲ್ಲಿ ಹಲವು ಆಂಜನೇಯ ದೇವಸ್ಥಾನ ಇವೆ.ರಾಮನ ಭಂಟನ ದೇವಸ್ಥಾನ ಬಹಳ ಇದೆ.ಯಾಕಂದ್ರೆ ಆಂಜನೇಯ ಸಮಾಜ ಸೇವಕ. ಸರ್ಕಾರದ ಓರ್ವ ಪ್ರತಿನಿಧಿ ಯಾಗಿ ನಾನು ಈ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದೇನೆ. ಅಕ್ಕಿ,ಅರಿಶಿಣ ಒಂದೇ ಕಡೆ ಇದೆ, ಅದೇ ರೀತಿ ನಿಮ್ಕ ಭಕ್ತಿ ಭಗವಂತನಿಗೆ ಸೇರಲಿ.ಮನಸಿಗೆ ದುಃಖ ಆದಾಗ ದೇವಸ್ಥಾನಕ್ಕೆ ಹೋಗ್ತಾರೆ.ನಮ್ಮ ಮಠಗಳನ್ನು ನಾವೆಲ್ಲಾ ಕಾಪಾಡಿಕೊಳ್ಳಬೇಕು.ಇವತ್ತು ಪ್ರಯತ್ನ ನಾವೆಲ್ಲಾ ಮಾಡುತ್ತಿದ್ದೇವೆ, ಆದ್ರೆ ಪ್ರಾರ್ಥನೆ ಕೊನೆಯಾಗಲ್ಲ ಎಂದಿದ್ದಾರೆ.
ಬಿಜಿಎಸ್ ಎಂದರೆ ಭಕ್ತಿಯ ಜ್ಞಾನದ ಸಂಗಮ.ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಹುಟ್ಟು ಸಾವಿನ ಮಧ್ಯೆ ನಾವು ಒಳ್ಳೆಯ ಕೆಲಸ ಮಾಡೋಣ.ನಾವು ಎಷ್ಟು ಸಂಪಾದನೆ ಮಾಡಿದರೆ ಏನು, ನಾವು ತಿಂಗಳಿಗೆ ಹತ್ತು ಸಾವಿರ ಊಟ ಮಾಡಬಹುದು, ಅದಕ್ಕಿಂತ ಹೆಚ್ಚು ಮಾಡೋಕೆ ಆಗಲ್ಲ.. ಹಾಗೇ ಯಾರಿಗೆ ಆಗಲಿ ಸಹಾಯ ಮಾಡೋದನ್ನು ಕಲಿಯೋಣ.ನಿಮ್ಮ ದುಃಖ ವನ್ನು ಹೇಳಿಕೊಳ್ಳಲು ದೇವಾಲಯ ಕೊಟ್ಟಿದ್ದಾರೆ.ನಾವು ಇದನ್ನೆಲ್ಲ ಬೆಳೆಸಿ ಉಳಿಸಿಕೊಂಡು ಹೋಗೋಣ.ನಾನು ನಿಮ್ಮ ಪ್ರತಿನಿಧಿಯಾಗಿ, ಬೆಂಗಳೂರಿನ ಮಂತ್ರಿ ಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ನಿಮ್ಮ ಯಾವುದೇ ದುಡ್ಡು ಕಾಸು ಬೇಡ. ಈ ನಿಮ್ಮ ತಮ್ಮ ಅಣ್ಣನಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ.ಇನ್ನೊಂದು ಬಾರಿ ಬಂದು ಬೇರೊಂದು ವಿಷಯಗಳ ಬಗ್ಗೆ ಹಂಚಿಕೊಳ್ತೀನಿ ಎಂದಿದ್ದಾರೆ,
ಡಿಕೆಶಿ ಅಧಿಕಾರಕ್ಕೆ ಯೋಗ್ಯರು ಎಂಬ ಶ್ರೀಗಳ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಈಗ ನಾನು ಆ ವಿಚಾರ ಚರ್ಚೆ ಮಾಡಲು ಹೋಗಲ್ಲ. ಶ್ರೀಗಳು ಇದೇ ಮೊದಲು ಇದನ್ನ ಹೇಳಿಲ್ಲ. ನೀವೂ ನನಗೆ ಆಶೀರ್ವಾದ ಮಾಡಿ ಎಂದ ಅವರು ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿ ಹೆಚ್ಡಿಕೆ ಬಹಳ ದೊಡ್ಡವರು. ದೊಡ್ಡ ದೊಡ್ಡ ಮಾತಾಡ್ತಾರೆ ಅವ್ರು.ಹೆಚ್ಡಿಕೆ ಅವರ ಅನುಕೂಲಕ್ಕೆ ತಕ್ಕಂತೆ ಮಾತಾಡ್ತಾರೆ.ನಮ್ಮ ಪಕ್ಷದಲ್ಲಿ ಅನೇಕ ತತ್ವ ಸಿದ್ಧಾಂತಗಳಿವೆ.ಸರ್ವರಿಗೂ ಸಮಪಾಲು, ಸಮಬಾಳು ಅನ್ನೋದು ನಮ್ಮ ನಿಲುವು. ಸಂವಿಧಾನದಲ್ಲಿ ನಮಗೆ ನಂಬಿಕೆ ಇದೆ.ಅನೇಕ ತೀರ್ಮಾನ ಮಾಡ್ತೇವೆ, ಯಾರ್ಯಾರಿಗೆ ನ್ಯಾಯ ಒದಗಿಸಬೇಕೋ ಒದಗಿಸ್ತೇವೆ.ನಮ್ಮ ಸರ್ಕಾರ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ತೀರ್ಮಾನ ಮಾಡುತ್ತೆ.ನಾನು ಈ ಸಮಯದಾಯದ ಪ್ರತಿನಿಧಿಯಾಗಿ ಸಂಪುಟ ಸಭೆಯಲ್ಲಿ ಏನು ಸಲಹೆ ಕೊಡಬೇಕೋ ಅದನ್ನ ಕೊಡಬೇಕಲ್ಲ.ನಾನು ಸರ್ವಜ್ಞ ಅಲ್ಲ, ಪಂಡಿತ ಅಲ್ಲ, ಹಳ್ಳಿಪಳ್ಳಿಯಿಂದ ಬಂದು ಇಲ್ಲಿ ಸೇರಿಕೊಂಡವನು ಎಂದ ಅವರು ಸಂಜೆ ಸಮುದಾಯದ ಶಾಸಕರ ಜೊತೆ ಸಭೆ ವಿಚಾರದ ಬಗ್ಗೆ ಮಾತನಾಡಿ ನಮ್ಮ ಶಾಸಕರು, ಹಿರಿಯರು, ಅವರವರ ಅಭಿಪ್ರಾಯ ಏನು ಅನ್ನೋದು ಗೊತ್ತಾಗಬೇಕು ಅಲ್ಲವೇ. ಎಲ್ಲ ಅವಲೋಕನ ಮಾಡಿ, ಎಲ್ಲ ತಿಳ್ಕೊಂಡು ಸಭೆಯಲ್ಲಿ ಮಾತಾಡ್ತೇನೆ. ನಾನು ಮಾಧ್ಯಮಗಳಲ್ಲಿ ಇದನ್ನೆಲ್ಲ ಮಾತಾಡಲ್ಲ ಎಂದಿದ್ದಾರೆ.
ನಿರ್ಮಲಾನಂದ ನಾಥ ಶ್ರೀಗಳು ಮಾತನಾಡಿ ಡಿಕೆ ಶಿವಕುಮಾರ್ ಕೇವಲ ಉಪ ಮುಖ್ಯಮಂತ್ರಿ ಅಲ್ಲ. ತಮ್ಮನ್ನ ತಾವು ಸಮರ್ಪಿಸಿಕೊಂಡ ವ್ಯಕ್ತಿ. ವಿಗ್ರಹ ಕೆತ್ತೋಕು ಮುಂಚೆ ಯಾವ ರೀತಿ ಇರುತ್ತದೆ ಎಂದು ನೋಡಿದ್ದೀರಾ?.ಹಲವು ಏಟುಗಳನ್ನು ತಿಂದು ಸಹಿಸಿಕೊಂಡ ಕಲ್ಲು ಒಂದು ಪೂಜೆಗೆ ಅರ್ಹವಾಗಿ ಕೈ ಮುಗಿಸಿ ಕೊಳ್ತದೆ. ಹಾಗೇ ಬದುಕಿನಲ್ಲಿ ಬರುವಂತ ಬವಣೆಗಳು, ನೋವುಗಳು, ಕಷ್ಟ ಗಳು,ತಿರಸ್ಕಾರಗಳು, ಹಿಂಸೆಗಳನ್ನು ಸಹಿಸಿಕೊಂಡು ವಿಗ್ರಹ ಆಗುವ ಹಾಗೇ.ವ್ಯಕ್ತಿಯು ಕೂಡ ಪೂಜೆಗೆ, ಅಧಿಕಾರಕ್ಕೆ ಸೇರಿ ಎಲ್ಲ ರೀತಿಯಲ್ಲೂ ಅರ್ಹನಾಗುತ್ತಾನೆ. ಅಂತಹದ್ದಕ್ಕೆ ಸೇರಿದವರು ಡಿಸಿಎಂ ಡಿಕೆ ಶಿವಕುಮಾರ್. ಹಲವಾರು ನೋವು,ಕಷ್ಟ ಗಳನ್ನು ಸಹಿಸಿ ಇವತ್ತು ಮೂರ್ತಿಯಾಗಿ, ಶಿಲೆಯಾಗಿ ವ್ಯಕ್ತಿ ಯಾಗಿ ನಿಂತಿದ್ದಾರೆ. ಸಾಕಷ್ಟು ನೋವುಗಳನ್ನು ಡಿಕೆ ಶಿವಕುಮಾರ್ ತಿಂದಿದ್ದಾರೆ.ಅವರು ಇಲ್ಲಿ ಬಂದು ಮಾತಾಡಿದ್ದು ಬಹಳ ಸಂತೋಷ ವಾಗಿದೆ ಎಂದರು.