ಮನೆ Latest News ತೇಜಸ್ವಿ ಸೂರ್ಯನಿಗೆ ಪಾಪ.. ಅವನಿಗೆ ಇನ್ನೂ ಅನುಭವ ಇಲ್ಲ, ಬರೀ ಟ್ವೀಟ್, ಸ್ಟೇಟ್ ಮೆಂಟ್...

ತೇಜಸ್ವಿ ಸೂರ್ಯನಿಗೆ ಪಾಪ.. ಅವನಿಗೆ ಇನ್ನೂ ಅನುಭವ ಇಲ್ಲ, ಬರೀ ಟ್ವೀಟ್, ಸ್ಟೇಟ್ ಮೆಂಟ್ ಅಷ್ಟೇ; : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ತೇಜಸ್ವಿ ಸೂರ್ಯನಿಗೆ  ಪಾಪ.. ಅವನಿಗೆ ಇನ್ನೂ ಅನುಭವ ಇಲ್ಲ, ಬರೀ ಟ್ವೀಟ್, ಸ್ಟೇಟ್ ಮೆಂಟ್ ಅಷ್ಟೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮೆಟ್ರೋ ದರ ಏರಿಕೆಗೆ ವಿಚಾರದ ಬಗ್ಗೆ ಮಾತನಾಡಿದ ಅವರು ತೇಜಸ್ವಿ ಸೂರ್ಯನಿಗೆ  ಪಾಪಾ.. ಇನ್ನೂ ಅನುಭವ ಇಲ್ಲ. ಬರೀ ಟ್ವೀಟ್, ಸ್ಟೇಟ್ ಮೆಂಟ್ ಅಷ್ಟೇ. ಒಂದಿನ ರಾಜ್ಯಕ್ಕೆ ಹಣ ತಂದಿದ್ದು ಏನಾದರೂ ಇದ್ದರೆ ಅದರ ಬಗ್ಗೆ ಮಾತಾಡಲಿ ಮೊದಲು. ಬರೀ ಖಾಲಿ ಮಾತಾಡೋದು ಬೇಡ, ಖಾಲಿ ಟ್ರಂಕ್ ಮಾತಾಡೋದು ಬೇಡ ಎಂದಿದ್ದಾರೆ. ಇದೇ ವೇಳೆ ಅವರ  ಮದರ ಏರಿಕೆ ಫೈಲ್ ಗೆ ನಾನು ಸಹಿ ಹಾಕಿಲ್ಲ, ಇದಕ್ಕೆ ರಾಜ್ಯ ಸರ್ಕಾರ ಹೇಗೆ ಕಾರಣ?. ಬಿಜೆಪಿಯವರು ಕರ್ನಾಟಕಕ್ಕೆ ಮಾಡಿರುವ ಸಹಾಯವೇನು? ಸಂಸದ ತೇಜಸ್ವಿ ಸೂರ್ಯ ಖಾಲಿ ಮಾತನಾಡುವುದು ಬೇಡ. ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ವಿಚಾರದ ಬಗ್ಗೆ ಮಾತನಾಡಿ ನಾವು ಹೇಗೆ ಕಾರಣ? . ದರ ನಿಗದಿ ಮಾಡುವ ಸಮಿತಿಗೆ ಕೇಂದ್ರ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ.  ನನ್ನ ಬಳಿ ದರ ಏರಿಕೆ ಫೈಲ್ ಬಂದಿದ್ದರೆ, ನಾನು ಅದಕ್ಕೆ ಸಹಿ ಹಾಕಿದ್ದರೆ, ನಾನು ಕಾರಣ ಎಂದು ಹೇಳಬಹುದು.. ನನ್ನ ಬಳಿಗೆ ಯಾವ ಫೈಲ್ ಕೂಡ ಬಂದಿಲ್ಲ.  ನಾನು ಸೋಮವಾರ ಬಿಎಂಆರ್ ಸಿಎಲ್ ಅಧಿಕಾರಿಗಳ ಜೊತೆ ಚರ್ಚೆ ಮಾಡುವೆ ಎಂದಿದ್ದಾರೆ. ರಾಜ್ಯ ಸರ್ಕಾರ ಮೆಟ್ರೋಗೆ ಆರ್ಥಿಕ ಸಹಕಾರ ನೀಡದಿರುವುದಕ್ಕೆ ದರ ಏರಿಕೆಯಾಗುತ್ತಿದೆ ಎಂಬ ಬಿಜೆಪಿಗರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯವರು ಕರ್ನಾಟಕ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಹೇಳಲಿ. ನಮ್ಮ ರಾಜ್ಯಕ್ಕೆ ಯಾವ ಸಹಾಯ ಮಾಡಿದ್ದಾರೆ ಹೇಳಲಿ ಎಂದಿದ್ದಾರೆ.

ಮೆಟ್ರೋ ದರ ಏರಿಕೆಗೆ ನೀವೇ ಕಾರಣ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು  ನೋಡಿ.. ನನ್ನದು ಹೇಗೆ ಕಾರಣ ಆಗೋಕೆ ಸಾಧ್ಯ? ಮೆಟ್ರೋ ಕೇಂದ್ರ ಸರ್ಕಾರದ ಕಾರ್ಯದರ್ಶಿ ಚೇರ್ಮನ್ ಆಗಿದ್ದಾರೆ. ನನ್ನತ್ರ ಫೈಲ್ ಬಂದಿದ್ದರೆ, ಸಹಿ ಹಾಕಿದ್ರೆ ನಾನು ಅದಕ್ಕೆ ಕಾರಣ. ನನ್ನತ್ರ ಯಾವ ಫೈಲ್ ಬಂದಿಲ್ಲ. ಅವರಿಗೆ ಇರೋ ೧೨% ಮತ್ತು ಹಿಂದೆ ಇರೋ ೫೦-೫೦% ಅಂತ ಹೇಳಿತ್ತು. ಕೊಟ್ಟಿರೋದು ೧೨%.. ಅದು ಅವರು ತೀರ್ಮಾನ ಮಾಡಿದ್ದಾರೆ. ನಾನು ಸೋಮವಾರ ಅಧಿಕಾರಿಗಳನ್ನ ಕರೆದು ಸಭೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ,

ಮೆಟ್ರೋ ಗೆ ಸಪೋರ್ಟೀವ್ ಫಂಡ್ ಸಿಗ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಅವರು ಏನು ಕೊಟ್ಟಿದ್ದಾರೆ ಅನ್ನೋದನ್ನ ಹೇಳೋಕೆ ಹೇಳಿ ಮೊದಲು. ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಅವರು ಏನು ಸಹಾಯ ಮಾಡಿದ್ದಾರೆ ಅನ್ನೋದನ್ನ ಹೇಳಲಿ.ಆ ಮೇಲೆ ಮಿಕ್ಕಿದ್ದು ಮಾತಾಡುತ್ತೇನೆ ಎಂದಿದ್ದಾರೆ. ನಾಯಕತ್ವದ ಬಗ್ಗೆ ಪದೇ ಪದೇ ಯತೀಂದ್ರ ಹೇಳಿಕೆ ವಿಚಾರದ ಬಗ್ಗೆ ಯತೀಂದ್ರ ಗೆ ನೋಟಿಸ್ ಕೊಡ್ತೀರಾ ಎಂಬ ಪ್ರಶ್ನೆಗೆ ಡಿಕೆ ಮೌನ ವಹಿಸಿದ್ದಾರೆ.ಯತೀಂದ್ರ ಬಗ್ಗೆ ಕೇಳುತ್ತಿದ್ದಂತೆ ಡಿಸಿಎಂ ಡಿಕೆ ಮೌನವಾಗಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆ ಡಿಕೆ ಹೊರಟು ಹೋಗಿದ್ದಾರೆ.